Monday, March 22, 2010

25 Years for .com -- .ಕಾಂ ಗೆ ೨೫ ವರ್ಷ

ನಲ್ಮೆಯ ಐ ಟಿ/ ಬಿ ಟಿ ಗೆಳೆಯ, ಗೆಳತಿಯರೆ ,
ಇಂಟರ್ನೆಟ್ ಗೆ ನಲವತ್ತು ವರ್ಷ ಆಯಿತು ಎಂದು ಈಗಾಗಲೇ ತಿಳಿಸಿದ್ದೆ, ಈಗ .ಕಾಂ ತನ್ನ ಬೆಳ್ಳಿ ಮಹೋತ್ಸವವನ್ನು ಆಚರಿಸಿ ಕೊಳ್ಳುತ್ತಿದೆ ಎಂಬ ವಿಷಯವನ್ನು ತಿಳಿಸಲು ಇಷ್ಟ ಪಡುತ್ತೇನೆ. ಈ .com ಅಂದರೆ ಏನು ಎಂದು ನಿಮಗೆಲ್ಲ ತಿಳಿದೇ ಇದೆ. Google.com ನಿಮಗೆ ಗೊತ್ತು. ಅದರಲ್ಲಿ ನಾನು ಬರೆಯುವ Blog ನಿಮಗೆ ಗೊತ್ತು. ಆದರೇ ಅದೇ .com ಗೆ ೨೫ ವರ್ಷ ವಯಸ್ಸು ಆಯಿತು ಎಂದರೆ ನೀವು ನಂಬ್ತೀರಾ ?
ಇಷ್ಟಕ್ಕೂ .com ಎಂದರೆ commercial ಅಂತ ನಿಮಗೆಲ್ಲ ಗೊತ್ತು. ಇದರ ಜೊತೆ .net,.org, .in. .co.in, .edu ಮುಂತಾದ domain ಇದೆ ಅನ್ಥಳು ನಿಮಗೆ ಗೊತ್ತು. ಆದರೂ, .com ಗೆ ಯಾಕೆ ಅಷ್ಟು ಪ್ರಖ್ಯಾತಿ ?
25 ವರ್ಷಗಳ ಹಿಂದ್ಎನ್, ಮಾರ್ಚ್ ೧೫ ರಂದು ಪ್ರಪಂಚದ ಮೊತ್ತ ಮೊದಲ .com, http://www.symbolics.com/ ಹುಟ್ಟಿತು. 1985 ರಲ್ಲಿ ನೋಂದಣಿ ಗೊಂಡ 6 .com ಗಳಲ್ಲಿ ಇದು ಮೊದಲನೆಯದು. ಉಳಿದ 5 .com ಗಳು ಹೀಗಿವೆ. http://www.bbn.com/, http://www.think.com/, http://www.mcc.com/, http://www.dec.com/ and http://www.nortrop.com/ .

2009 ರಲ್ಲಿ http://www.symbolics.com/ ನ್ನು XF.com Investments ಎಂಬ ಕಂಪನಿಗೆ ಮಾರಾಟ ಮಾಡಲಾಯಿತು. ಹಳೆಯ http://www.symbolics.com/ ನ್ನು ಈಗ ನೀವು http://www.symbolics-dks.com/ ನಲ್ಲಿ ಕಾಣಬಹುದು.
.com ನ್ನು ಮುಂಚೆ .cor ಎಂದು ಮಾಡಲು ಉದ್ದೇಶಿಸಲಾಗಿತ್ತು . ಏಕೆಂದರೆ, .cor short for Corporation ಅಲ್ವೇ ಅದಕ್ಕೆ.
.com ನ್ನು ಇಂದು Verisign ನೋಡಿಕೊಳ್ಳುತ್ತಿದೆ.
ನಿಮಗೆ ವಿಶ್ವದಲ್ಲಿರುವ ಇಂದಿನ .com ಗಳ ಸಂಖ್ಯೆ ಎಷ್ಟು ಎಂದು ತಿಳಿದಿದೆಯೇ ? 80 ದಶ ಲಕ್ಷ. ಅಬ್ಬಬ್ಬಾ!!!ಇಷ್ಟೊಂದು ಸಂಖ್ಯೆ ಹೇಗೆ ಬೆಳೆಯಿತು, ಎಂಬುದರ ಬಗ್ಗೆ ಒಂದು ನೋಟ ಹರಿಸೋಣವೇ ......
1985 - 2000 ದಲ್ಲಿ 20 ದಶ ಲಕ್ಷ ನೋಂದಣಿ ಗೊಂಡವು.
2000 - 2010 ರಲ್ಲಿ 60 ದಶ ಲಕ್ಷ ನೋಂದಣಿ ಗೊಂಡವು.
ನಿಮಗೆ ಇಂದಿಗೂ ಅತಿ ದೊಡ್ಡ .com ಯಾವುದು ಎಂದು ಬಹುಶ: ತಿಳಿದಿರಲಿಕ್ಕಿಲ್ಲ. Google ಮಾಡಲು ಪ್ರಯತ್ನ ಬೇಡ. ಇಲ್ಲೇ ಮುಂದೆ ಇದೆ. ಒಮ್ಮೆ ಕ್ಲಿಕ್ ಮಾಡಿ ನೋಡಿ.
http://www.llanfairpwllgwyngyllgogerychwyrndrobwyll-llantysiliogogogoch.com/
ಏನಿದು ತಮಾಷೆಯಾಗಿ ಕಾಣುತ್ತೆ ಅಲ್ವೇ ? ಆದರೂ ಇದು ಒಂದು ಅರ್ಥ ಗರ್ಭಿತ .ಕಂ, ಎಷ್ಟು ಅಕ್ಷರ ಇದೆ ಎಂದು ಎಣಿಸಿ ನೋಡೋಣ ?
haage ಪ್ರಪಂಚದ ದುಬಾರಿಯಾದ ಯಾವುದು ಗೊತ್ತೇ ? ನೀವು ಊಹಿಸಿದ ಹಾಗೆ ಅದು http://www.sex.com/ ಅಂತು ಅಲ್ವೇ ಅಲ್ಲಾ. ಅದು http://www.insure.com/. ಇದನ್ನು 2009 ರಲ್ಲಿ 16 ದಶ ಲಕ್ಷಗಳನ್ನು ಕೊಟ್ಟು Quinstreet ಎಂಬ ಕಂಪನಿ ಖರೀದಿಸಿತು. ಇದಕ್ಕೂ ಮುಂಚೆ ನೀವು ಊಹಿಸಿದ ಹಾಗೆ http://www.sex.com/ ನ್ನು 2006 ರಲ್ಲಿ 16 ದಶ ಲಕ್ಷಗಳಿಗೆ ಕೊಂಡುಕೊಳ್ಳ ಲಾಗಿತ್ತು.
ಇಷ್ಟಕ್ಕೂ .com ನಲ್ಲಿ ಬಹಳಷ್ಟು ಬಾರಿ ಬಳಕೆಯಾದ ಪದ ಅಂದ್ರೆ home. ಇದನ್ನು 1.2 ದಶ ಲಕ್ಷ ಬಾರಿ ಎಲ್ಲರು ತಮ್ಮ ತಮ್ಮ domain name ಗಳಲ್ಲಿ ಬಳಸಿದ್ದಾರೆ. ಪ್ರತಿ ದಿನ ಸರಿ ಸುಮಾರು 52 ದಶ ಕೋಟಿ ಬಾರಿ .com ನ್ನು ವಿನಂತಿಸುತ್ತಾರೆ (Request)
ಈ .com ಹೀಗೆ ಬೆಳೆಯುತ್ತ ಹೋದ್ರೆ 2020 ಕ್ಕೆ ನೀವು 950 ದಶ ಕೋಟಿ .com ಗಳನ್ನೂ ನಿರೀಕ್ಷಿಸಬಹುದು.
ಇಷ್ಟಕ್ಕೂ ಇಷ್ಟು ವಿಷ್ಯ ಸಿಕ್ಕಿದ್ದು hಈಗೆ ಕೆಲವು .com ಗಳಲ್ಲಿ.
http://www.25yearsof.com/ Click to Celberate the same here....

No comments:

Post a Comment

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು