ನಾನು ಮತ್ತು ನನ್ನ ಸ್ನೇಹಿತರು, ನಮ್ಮ ಮತ್ತೊಬ್ಬಸ್ನೇಹಿತನಾದ ಉಮೇಶ್ ಚಂದ್ರು ರಂಗಸ್ವಾಮಿ ಅವರ ಆರತಕ್ಷತೆಗೆ ದಿನಾಂಕ 24 ನೇ ಅಕ್ಟೋಬರ್ ನಂದು ಹೊರಟು ತಿರುಗಿ ಬಂದ ಒಂದು ಸಣ್ಣ ಲೇಖನ ನಿಮ್ಮ ಮುಂದೆ ಇಡುತ್ತ್ತಿದ್ದೇನೆ
ಉಮೇಶ್ ಮತ್ತು ಪಂಕಜ ಅವರ ಆರತಕ್ಷತೆ ದಿ:24 ರಂದು ಮತ್ತು ಮದುವೆ ದಿ:25 ರಂದು ನಿಶ್ಚಯವಾಗಿತ್ತು. ಅದರಂತೆ ಉಮೇಶನು ಮುಂಚೆಯೇ ನಮಗೆ ಇದರ ಬಗ್ಗೆ ತಿಳಿಸಿದ್ದನು. ಹಾಗೂ ಎರಡಕ್ಕೂ ಹಾಜರಾಗುವಂತೆ ನಮ್ಮನೆಲ್ಲಾ ಆಹ್ವಾನಿಸಿದ್ದನು. ಆದರೂ ನಾವು ಮದುವೆಗೆ / ಆರತಕ್ಷತೆಗೆ ಹೋಗಬೇಕಾ ಎನ್ನುವುದು ನಿಶ್ಚಯವಾಗಲು ಕೆಲವೇ ದಿನಗಳು ಬೇಕಾಯಿತು. ಕೊನೆಗೆ ಶುಕ್ರವಾರ (ಆರತಕ್ಷತೆಯ ಹಿಂದಿನ ದಿನ) ಮಧ್ಯಾನ್ಹ ಸರಿ ಸುಮಾರು 3 ಗಂಟೆಯ ಹೊತ್ತಿಗೆ ಹರಟೆಯ (CHAT) ಮೂಲಕ ಆರತಕ್ಷತೆ ಗೆ ಹೋಗುವುದು ಎಂದು ನಿಶ್ಚಯವಾಯಿತು. ಇಲ್ಲಿ ನಿಶ್ಚಯವಾದ ಪ್ರಕಾರ ನಾನು, ಕೃಷ್ಣ ಆಚಾರ್ಯ ಜನಾರ್ಧನ ಮತ್ತು ಚಂದನ್ ಒಂದು ಲಘು ಮೋಟಾರ್ ವಾಹನದ (CAR) ಮೂಲಕ, ಪ್ರಸನ್ನ, ಸುರೇಂದ್ರ, ಮಂಜುಳ ಮತ್ತು ಕೃಷ್ಣ ರಂಗಸ್ವಾಮಿ ಮತ್ತೊಂದು ಲಘು ಮೋಟಾರ್ ವಾಹನದ ಮೂಲಕ, ರಘುನಂಧನ್ ಮತ್ತು ನಮ್ಮ C.M.C ಸಂಸ್ಥೆಯ ಸ್ನೇಹಿತರು ಮತ್ತೊಂದು ಲಘು ಮೋಟಾರ್ ವಾಹನದ ಮೂಲಕ, ಒಟ್ಟು 3 ಲಘು ಮೋಟಾರ್ ವಾಹನದ ಮೂಲಕ, ನೆಲಮಂಗಲಕ್ಕೆ ಪಯಣ ಬೆಳೆಸುವುದು ಎಂದು ನಿರ್ಧರಿಸಿದೆವು.
ಶನಿವಾರ ಬೆಳಿಗ್ಗೆ ಚಂದನ್ ನನಗೆ ದೂರವಾಣಿ ಕರೆ ಮಾಡಿ, ತಾನು ಬರುವುದಿಲ್ಲವೆಂದು, ಹಾಗೂ ನೀವೇ ಆರತಕ್ಷೆತೆ ಗೆ ಹೋಗುವುದು ಎಂದು ತಿಳಿಸಿದನು. ಅದರಂತೆ ನಾನು ಕೂಡ ಕೃಷ್ಣ ಆಚಾರ್ಯ ಜನಾರ್ಧನ ಅವರಿಗೆ ಕರೆ ಮಾಡಿ ತಿಳಿಸಿದೆನು. ಮತ್ತು ನಾವಿಬ್ಬರೇ ಹೋಗೋಣ ಎಂದು ತಿಳಿಸಿದನು. ಅದರಂತೆ ಅವನು ಸಂಜೆ 6 ಗಂಟೆಗೆ ನಮ್ಮ ಮನೆ ಹತ್ತಿರ, ಹೊಸಕೆರೆಹಳ್ಳಿ ವರ್ತುಲ ರಸ್ತೆ ಬಳಿ ಬಂದನು. ಇನ್ನೇನು ಹೊರಡಬೇಕು ಎನ್ನುವಸ್ಟರಲ್ಲಿ, ಸುರೇಂದ್ರ ಅವರಿಂದ ಕರೆ ಬಂದಿತು. ನಾನು ಅವರಿಗೆ ನೆಲಮಂಗಲಕ್ಕೆ ಹೋಗುವ ರಸ್ತೆಯ ಬಗ್ಗೆ ತಿಳಿಸಿದೆನು. ಅವರು ಆಗಲೇ ರಾಜಾಜಿ ನಗರದಲ್ಲಿ ಇದ್ದರು. ನಾವು ಅಲ್ಲಿಗೆ ಸೇರುವುದು ಸ್ವಲ್ಪ ಸಮಯ ತೆಗೆದುಕೊಳ್ಳುವುದು. ಆದ್ದರಿಂದ ಅವರು ಆಗಲೇ ಮದುವೆ ಮನೆಯ ಕಡೆ ಹೊರಟರು. ಇತ್ತ ನಾವು ನಾಯಂದನ ಹಳ್ಳಿ ತಿರುವಿಗೆ ಬಂದ ಕೂಡಲೇ ನಮಗೆ ಬೆಂಗಳೂರಿನ ದೊಡ್ಡ ಸಮಸ್ಯೆ ಎದುರಾಯಿತು. ಅದೇ TRAFFIC JAM (ವಾಹನಗಳ ಸಂದಣಿಯಿಂದಾದ ತಡೆ), ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದರಿಂದ ವಾಹನ ಸಂಚಾರ ದಟ್ಟವಾಗಿತ್ತು. ಇಲ್ಲಿಂದ ನಾವು ರಾಜಾಜಿ ನಗರ ತಲುಪಲು 1 ಗಂಟೆ ಹಿಡಿಯಿತು. ಇಲ್ಲಿಂದ ಯಶವಂತಪುರ ಮಾರ್ಗವಾಗಿ ಹೊರಟ ನಾವು ಮತ್ತೆ ರಾಷ್ಟ್ರೀಯ ಹೆದ್ದಾರಿ4 ರನ್ನು ಸೇರಿದೆವು. ಇಲ್ಲಿಂದ ಮತ್ತೆ ಅದೇ ಸಮಸ್ಯೆ TRAFFIC JAM ಅನುಭವಿಸಿದೆವು. ರಾಷ್ಟ್ರೀಯ ಹೆದ್ದಾರಿ4 ಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದರಿಂದ ಇಲ್ಲಿ ವಾಹನ ದಟ್ಟನೆ ಹೆಚ್ಚಾಗಿತ್ತು. ಈಗಾಗಲೇ ನಮಗೆ ಬಹಳಷ್ಟು ಜನ ಕರೆ ಮಾಡಿ ಎಲ್ಲಿ ಇದ್ದಿರಾ? ಎಂದು ವಿಚಾರಿಸಿಕೊಳ್ಳುತ್ತಿದ್ದರು. ನಾವು ಅವರಿಗೆಲ್ಲ ಉತ್ತ್ತರಿಸುತ್ತಿದ್ದೇವು. ನಮ್ಮ ಜೊತೆ ಮದುವೆಗೆ ಮಿನಿ ಮತ್ತು ಶಿವಾಜಿ, ದೇಬ್ ಜಾನಿ, ಮತ್ತು ಅಣ್ಣಪ್ಪ & ಕೋ ಬರುತ್ತಿದ್ದರು. ಆದರೇ ದೇಬ್ ಜಾನಿ ಅವರು TRAFFIC JAM ಸಮಸ್ಯೆ ಇಂದ ಮನೆಗೆ ಹಿಂತಿರುಗಿದರು. ಇದನ್ನು ಅವರೇ ನಮಗೆ ಕರೆ ಮಾಡಿ ತಿಳಿಸಿದರು ಹಾಗೂ ನಮ್ಮ ವರನಿಗೂ ಇದನ್ನು ತಿಳಿಸಲು ಹೇಳಿದರು. ಅಂತು 7.30 ಕ್ಕೆ ಸುರೇಂದ್ರ & ಕೋ ಮಂಟಪದ ಬಳಿ ಇರುವುದಾಗಿ ತಿಳಿಸಿದರು. ಆದರೂ ನಾವು ಅವರನ್ನು ಸೇರಲು ಮತ್ತೊಂದು ಗಂಟೆ ಹಿಡಿಯಿತು. ಇಲ್ಲಿ ನಮ್ಮ ವರ ಉಮೇಶ & ವಧು ಪಂಕಜ ಅವರು ಆಗಲೇ ಛಾಯಾ ಚಿತ್ರ ತೆಗೆಸಿಕೊಳ್ಳುವುದರಲ್ಲಿ ನಿರತರಾಗಿದ್ದರು. ಅಷ್ಟೇನೂ ದೊಡ್ಡದಾಗಿ ಇರದ ಕಲ್ಯಾಣ ಮಂಟಪದಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಇವರ ಜೊತೆ ನಾವು ಸೇರಿಕೊಂಡೆವು. ಆಗಲೇ ಶೀಲ ಮೆಲೋಡೀಸ್, ಜಾಲಹಳ್ಳಿ ಅವರಿಂದ ಹಾಡುಗಳ ಸುರಿಮಳೆ ನಡೆಯುತ್ತಿತ್ತು. ನಮ್ಮನ್ನು ಕಂಡ ವರ ಹಸನ್ಮುಖಿಯಾದ. ನಾವು ನಮ್ಮೊಡನೆ ತಂದಿದ್ದ ಉಡುಗೊರೆ ರಶೀತಿಯನ್ನು ಅವನಿಗೆ(ವರ ) ಕೊಟ್ಟು ಛಾಯ ಚಿತ್ರ ತೆಗೆಸಿಕೊಂಡು, ತೆಗೆದು ಕೊಂಡು , ಊಟದ ಸಾಲಿನ ಕಡೆ ಹೆಜ್ಜೆ ಹಾಕಿದೆವು. ಊಟ ಇಲ್ಲಿ ಸ್ವಲ್ಪ ಭಿನ್ನವಾಗಿತ್ತು. ಎಲ್ಲರು ಮೊದಲು ಪೂರಿ & ಸಾಗು ಕೊಡುತ್ತಿದ್ದರು. ಆದರೇ ಇಲ್ಲಿ ಸೆಟ್ ದೋಸೆ ಕೊಟ್ಟರು. ಇದರ ಜೊತೆ ತೆಂಗಿನ ಕಾಯಿ ಚಟ್ನಿ ಕೂಡ ಚೆನ್ನಾಗಿತ್ತು. ನಂತರ ಘಮ ಘಮಿಸುವ ಪಲಾವ್ , ಅನ್ನ ನುಗ್ಗೆಕಾಯಿ ಸಾಂಬಾರ್ ಕೂಡ ಚೆನ್ನಾಗಿತ್ತು. ಆದರೇ ಮೆಣಸಿನ ಕಾಯಿ ಬಜ್ಜಿ ತಣ್ಣಗೆ ಇತ್ತು. ಊಟ ಮುಗಿಸಿ ಕೆಳಗೆ ಬಂದು, ಅಣ್ಣಪ್ಪ & ಕೋ ಅವರನ್ನು ಭೇಟಿ ಆದೆವು. ಅವರು ಟೆಂಪೋ ಟ್ರಾವೆಲ್ಲರ್ ವಾಹನದಲ್ಲಿ ಆಗಮಿಸಿದ್ದರು. ಇಲ್ಲಿ ಎಲ್ಲರೂ ಅದೇ ಕಷ್ಟದ (TRAFFIC JAM) ಬಗ್ಗೆ ಹರಟೆ ಆರಂಭಿಸಿದೆವು. ನಂತರ ಅಣ್ಣಪ್ಪ, ಪ್ರಶಾಂತ್ ಮುಂತಾದವರಿಂದ ಕೃಷ್ಣ ಜನಾರ್ಧನ ಅವರಿಗೆ ಒಂದು ಹಾಡನ್ನು ಹಾಡಲು ಮನವಿ. ಆದರೇ, ಅದನ್ನು ತಿರಸ್ಕರಿಸಿದ ಕೃಷ್ಣ ಜನಾರ್ಧನ. ಮೊದಲು ನಿಶ್ಚಯವಾದಂತೆ ಅಣ್ಣಪ್ಪ & ಕೋ ನ ನಾಲ್ವರು ಮದುವೆಗೆ ಉಳಿದು ಕೊಳ್ಳಬೇಕಾಗಿತ್ತು. ಆದರೇ ಅವರು ಮನೆ ಕಡೆ ಹೊರಡಲು ಮುಂದಾದರು. ಇಷ್ಟರಲ್ಲೇ ರಘುನಂಧನ್ & ಕೋ ಅವರ ಆಗಮನ. ಈಗ ಸಮಯ 9.15. ಅವರು ರಸ್ತೆ ತಿಳಿಯದೆ ಟೋಲ್ ಗೇಟ್ ಇಂದ 'U' ಟರ್ನ್ ತೆಗೆದು ಕೊಂಡು ಬರಲು ಸ್ವಲ್ಪ ಸಮಯ ಆಯಿತು ಎಂದು ತಿಳಿಸಿದರು. ಇವರು ವಧು ವರನನ್ನು ಆಶೀರ್ವದಿಸಲು ಒಳಗೆ ಹೋದರು. ನಾವು ನಮ್ಮ ಮನೆಗಳತ್ತ ಪಯಣ ಬೆಳೆಸಿದೆವು. ಇಲ್ಲಿಂದ 9.25 ಕ್ಕೆ ಹೊರಟ ನಾವು, ನಮ್ಮ ನಮ್ಮ ಮನೆಗಳನ್ನು ಬಹಳ ಬೇಗ ಅಂದರೆ 10.30 ಕ್ಕೆ ಸೇರಿದೆವು. ವಾಹನ ದಟ್ಟನೆ ಅಷ್ಟೊಂದು ಹೆಚ್ಚಾಗಿರದ ಕಾರಣ ನಾವು ಅತಿ ಬೇಗ ಹಿಂತುರಿಗಿದೆವು.
ಉಮೇಶ್ & ಪಂಕಜ ರವರಿಗೆ ಒಳ್ಳೆಯ ವಿವಾಹ ಜೀವನ ವನ್ನು ಹರಸೋಣ ಎನ್ನುತ್ತಾ, ನನ್ನ ಈ ಲೇಖನವನ್ನು ಮುಗಿಸುತ್ತಿದ್ದೇನೆ.