ನಾನು ದಿನಾಂಕ 6 ಮೇ 2010 ರಂದು ಚೆನ್ನೈ ಗೆ ನನ್ನ ಪಯಣ ಆರಂಭಿಸಿದೆ. ದಿ 7 ರಂದು ನನ್ನ ಅಮೇರಿಕಾದ ವೀಸಾ ಸಂದರ್ಶನ ಬೆಳಿಗ್ಗೆ 9ಕ್ಕೆ ಇದ್ದುದರಿಂದ, ಹಿಂದಿನ ದಿನವೇ ನನ್ನ ಪಯಣ ಆರಂಭಿಸಿದೆ. ಮದ್ಯಾನ್ಹ 12 ಕ್ಕೆ ಕೆಂಪೇಗೌಡ ವಾಹನ ನಿಲ್ದಾಣದಿಂದ ಹೊರಟ ಬಸ್ಸು ಓಲ್ಡ್ ಮದ್ರಾಸ್ ರಸ್ತೆ ಮಾರ್ಗವಾಗಿ ಚೆನ್ನೈ ನ ಕಡೆ ಪ್ರಯಾಣ ಬೆಳೆಸಿತು. ಕೆ.ಅರ್.ಪುರ ಬಸ್ ನಿಲ್ದಾಣ ದಲ್ಲಿ ಕೆಲವರನ್ನು ಹತ್ತಿಸಿಕೊಳ್ಳಲು ಸ್ವಲ್ಪ ಸಮಯ ನಿಲ್ಲಿಸಲಾಗಿತ್ತು. ಇಲ್ಲಿಂದ ಮುಂದೆ ಹೊರಟ ಬಸ್ ಸಂಚಾರ ಮುಂದೆ ನಿಲ್ಲಿಸಿದ್ದು ಪಲಮನೆರುನ ಬಳಿ. ಇದಕ್ಕೂ ಮುಂಚೆ ರಿಯಲ್ ಸ್ಟಾರ್ ಉಪೇಂದ್ರ ಅವರ "ಬುದ್ಧಿವಂತ" ಚಲನಚಿತ್ರವನ್ನು ಪ್ರಸಾರ ಮಾಡಿದ್ದರು. ಇಲ್ಲಿ ೩ ಗಂಟೆಗೆ ನಿಲ್ಲಿಸಿದ ಬಸ್, ಎಲ್ಲರು ಊಟ ಮಾಡಿದ ಮೇಲೆ ೩.೩೦ ಕ್ಕೆ ಮತ್ತೆ ತನ್ನ ಸಂಚಾರ ಆರಂಬಿಸಿತು. ಈಗ ಮತ್ತೆ ಬೇರೆ ಚಲನಚಿತ್ರ ಪ್ರಸಾರ ಮಾಡಿದರು. ಅದು ಬಾಲಿವುಡ್ ನ "DOSTANA" . ಇದು ಸಲಿಂಗಗಳ ಚಲನಚಿತ್ರ ಆಗಿತ್ತು. ಆದರು ಚಿತ್ರ ಪೂರ್ತಿ ಹಾಸ್ಯ ಬರಿತವಾಗಿತ್ತು. ವಿಶಾಲ್-ಶೇಖರ್ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ತುಂಬಾ ಚೆನ್ನಾಗಿತ್ತು. ಜಾನ್ ಅಬ್ರಹಂ, ಅಭಿಷೇಕ್ ಬಚನ್, ಹಾಗು ಪ್ರಿಯಾಂಕ ಚೋಪ್ರ ಅವರ ನಟನೆ ಯು ಕೂಡ ಚೆನ್ನಾಗಿತ್ತು. ಈ ಚಲನಚಿತ್ರ ಮುಗಿಯುವ ಹೊತ್ತಿಗೆ ನಾವು ಚೆನ್ನೈ ಹತ್ತಿರ ಬಂದಿದ್ದೆವು. ಸಮಯ 7ಗಂಟೆ ಹೊಡೆದಾಗ ನಮ್ಮ ಬಸ್ಸು ಚೆನ್ನೈ ನ ಕೊಯಂ ಬೀಡು ಬಸ್ ಸ್ಟ್ಯಾಂಡ್ ಬಳಿ ನಿಲ್ಲಿಸಿತು. ಇದೆ ಕೊನೆಯ ಬಸ್ ನಿಲ್ದಾನವಾದ್ದರಿಂದ ಇಲ್ಲಿಯೇ ಎಲ್ಲರೂ ಇಳಿದುಕೊಂಡರು. ನನಗೆ ಬರುತ್ತಿದ್ದ ಅರೆ-ಬರೆ ತಮಿಳು ಭಾಷೆಯಲ್ಲಿ ಆಟೋನವನನ್ನು ನಮ್ಮ ಕಂಪನಿಯ ಅತಿಥಿ ಗೃಹ ದ ಬಳಿ ಕರೆದೊಯ್ಯಲು ಕೇಳಿದೆನು. ಅವನು 250 ರೂ ಎಂದು ಹೇಳಿದಾಗ ನನ್ನ ತಲೆ ಜುಮ್ ಎಂದಿತು. ಇಲ್ಲಿ ಆಟೋ ಗಳಿಗೆ ಮೀಟರ್ ಇಲ್ಲ ಎಂದು ಆಗಲೇ ನನಗೆ ತಿಳಿದಿದ್ದು. ಅವನನ್ನು ಬಿಟ್ಟು, ಮುಂದೆ ಮತ್ತೊಬ್ಬನನ್ನು ವಿಚಾರಿಸಿದಾಗ ಅವನು ೨೦೦ ರೂ ಕೇಳಿದನು. ಅವನಿಗೂ ಇಲ್ಲ ಎಂದು ಹೇಳಿ ಹಾಗೆ ಮುಂದೆ ಸಿಟಿ ಬಸ್ ನಿಲ್ದಾಣದ ಕಡೆ ಹೆಜ್ಜೆ ಹಾಕಿದೆನು. ಇಲ್ಲಿಂದ ೨೯ ನೆ ನಂಬರ್ ಬಸ್ಸು ಹತ್ತಿ ಮಂದವಳಿ ಗೆ ಟಿಕೆಟ್ ತೆಗೆದು ಕೊಂಡೆನು. ಟಿಕೆಟ್ ಬೆಲೆ ಕೇಳ್ತಿರಾ ಕೇವಲ 5ರೂ ಗಳು ಮಾತ್ರ. ಇದನ್ನೇ ಚೆನ್ನೈ ಅನ್ನೋದು. ಇಲ್ಲಿ ಬಸ್ ರೇಟ್ ಕಡಿಮೆ ಆಟೋ ರೇಟ್ ಜಾಸ್ತಿ. ಸುಮಾರು 8ಗಂಟೆಗೆ ಮಂದವಳಿ (ಕೊನೆಯ ನಿಲ್ದಾಣ) ನ ಬಳಿ ಬಸ್ಸು ನಿಂತಿತು. ಇಲ್ಲಿಂದ ನಮ್ಮ ಕಂಪನಿಯ ಅತಿಥಿ ಗೃಹ ದ ಬಳಿ ತಲುಪಲು 5ನಿಮಿಷ ಹಿಡಿಯಿತು. ಇಲ್ಲಿಗೆ ತಲುಪಿದಾಗ ನನ್ನ ಮೈಯೆಲ್ಲಾ ಬೆವೆತು ಬೆಂದು ಹೋಗಿತ್ತು. ಇಲ್ಲಿ ನಾನು ಸ್ನಾನ ಮಾಡಿ ಸ್ವಲ್ಪ ವಿಶ್ರಾಂತಿ ತೆಗೆದು ಕೊಂಡೆನು. ಇಲ್ಲಿನ sಹಾಯನ ಗೃಹದಲ್ಲಿ ಮಾತ್ರ A.C ಇತ್ತು. ಇಲ್ಲಿಂದ ಹೊರಗಡೆ ಹೋಗಲು ಮನಸ್ಸೇ ಬರುತ್ತಿರಲಿಲ್ಲ. ಹೊರಗಡೆ ಬಹಳ ಸೆಖೆ ಇತ್ತು. ಪಂಕ ಓಡಿದರೂ ಕೂಡ ತಣ್ಣನೆಯ ಗಾಳಿ ಬರುತ್ತಿರಲಿಲ್ಲ. ಹೇಗೋ ಸ್ವಲ್ಪ ಊಟ ಮಾಡಿ ಮಲಗಲು ಅಣಿಯಾದರೆ ಪವರ್ ಕಟ್. ಕಥೆ ಮುಗಿಯಿತು. ಕೆಲವು ನಿಮಿಷಗಳ ನಂತರ ಮತ್ತೆ ಕರೆಂಟ್ ಬಂತು. ಮತ್ತೆ ಹೋಯಿತು. ಹೀಗೆ ಕರೆಂಟ್ ನ ಚೆಲ್ಲಾಟ ನಡೆಯುತ್ತಿತ್ತು. ಇಷ್ಟರಲ್ಲೇ ಮತ್ತೊಬ್ಬ TCS'er ನ ಆಗಮನ. ಶ್ರೀನಿವಾಸ ಕೂಡ ತನ್ನ ವೀಸಾ ಸಂದರ್ಶನಕ್ಕೆ ಬಂದಿದ್ದ. ಕತ್ತಲಲ್ಲೇ ಊಟ ಮಾಡಿದ. ಇಷ್ಟರಲ್ಲೇ ನನಗೆ ತಲೆ ನೋವು ಪ್ರಾರಂಭ ಆಯಿತು. ನಿದ್ರೇನೆ ಬರಲಿಲ್ಲ. ಹಾಗು ಹೀಗೂ ಉರುಳಾಡಿ ದಿನ ಕಳೆದೆನು. ಶ್ರೀನಿವಾಸನು ಕೂಡ ಹೇಗೋ ಮಲಗಿದ್ದ.
ಬೆಳಗ್ಗೆ ೬ ಕ್ಕೆ ಎದ್ದೆವು. ಸಾಬೂನು ಮತ್ತು ಕೊಬ್ಬರಿ ಎಣ್ಣೆ ಕೊಳ್ಳಲು ಹೊರಗೆ ಹೋದೆವು. ಅದನ್ನು ಕೊಂಡು, ಅತಿಥಿ ಗೃಹ ಕ್ಕೆ ವಾಪಸ್ಸಾಗಿ ಒಬ್ಬರ ನಂತರ ಮತ್ತೊಬ್ಬರು ಸ್ನಾನ ಮಾಡಿದೆವು. ನಾನು ಸ್ವಲ್ಪ ಓದಿ ಕೊಂಡು, ಶ್ರೀನಿವಾಸನ ಜೊತೆ ಗೂಡಿ ಅತಿಥಿ ಗೃಹ ದಲ್ಲೇ ತಿಂಡಿ ತಿಂದೆವು. ತಿಂಡಿ ಮಾತ್ರ superb. ಆ ಹಣ್ಣಿನ ಮಿಶ್ರಣ, ದೋಸೆ, ಹಣ್ಣಿನ ರಸ ತುಂಬಾ ಚೆನ್ನಾಗಿತ್ತು. ಇಲ್ಲಿರುವ ದೇವರಿಗೆ ಕೈ ಮುಗಿದು, ಅಮೆರಿಕ ದ ವೀಸಾ ಕಚೇರಿ ಬಳಿ ಹೊರಡಲು, ಆಟೋ ಹುಡುಕಾಡಿ ಕೊಂಡು ಹೊರಟೆವು. ಮತ್ತೆ ಆಟೋ ರೇಟ್ 150 ರಿಂದ ಹಿಡಿದು, ಕೊನೆಗೆ 80 ರೂಗೆ ಒಪ್ಪಿ ನಡೆದೆವು. ಇಲ್ಲಿ ಕಚೇರಿಯ ಒಳಗೆ ನಮಗೆ 9 ಗಂಟೆಗೆ ನೇಮಕಾತಿ ಇದ್ದರೂ, Q ನಲ್ಲಿ ನಿಲ್ಲಬೇಕಾಯಿತು. ಅಷ್ಟು ಹೊತ್ತಿಗೆ ಸೂರ್ಯ ನೆತ್ತಿಯ ಮೇಲೆ ಬಂದು ನಮ್ಮನ್ನೇ ಇಣುಕುತ್ತಿದ್ದ. ಹಾಗೂ ಹೀಗೂ 9 ಗಂಟೆಗೆ ಕಚೇರಿಯ ಒಳಗೆ ಹೋದೆವು. ಇಲ್ಲಿ ಕೌಂಟರ್ 8 ನಲ್ಲಿ ಮೊದಲು ನಮ್ಮ ಡಾಕ್ಯುಮೆಂಟ್ಸ್ ನ್ನು ಪರಿಶೀಲಿಸಿ , ಎರಡೂ ಕೈಗಳ ಬೆರಳಳುಗಳ ಗುರುತುಗಳನ್ನು ತೆಗೆದುಕೊಂಡರು. ನಂತರ ಕೌಂಟರ್ 1-7 ರಲ್ಲಿ ನಮ್ಮ ಸಂದರ್ಶನ ಇತ್ತು. ಯಾವುದಾದರು ಕೌಂಟರ್ ನಲ್ಲಿ ನಾವು ಹೋಗಬಹುದಿತ್ತು. ನನ್ನ ಅದೃಷ್ಟ ಕೌಂಟರ್ 5 ಗೆ ಹೋದೆ. ಇಲ್ಲಿ ಅಮೆರಿಕದ ನಿವಾಸಿಯೊಬ್ಬ ನನ್ನ ಸಂದರ್ಶನ ಮಾಡಿದನು. ಅದು ಕೇವಲ ಒಂದೇ ನಿಮಿಷ ಹಿಡಿಯಿತು. ನಂತರ ಆಟ ಹೇಳಿದ ನನ್ನ ವೀಸಾ ಅನುಮೊದನೆಯಾಗಿದೆ ಹಾಗೂ ನನ್ನ ಪಾಸ್ಪೋರ್ಟ್ ಮತ್ತು ಹಣ ಸಂದಾಯದ ರಶೀತಿ ಯನ್ನು ಅವರೇ ಉಳಿಸಿ ಕೊಂಡರು. ನನ್ನ ಆನಂದಕ್ಕೆ ಆಗ ಪರಿಮಿತಿಯೇ ಇಲ್ಲ . ಫೋನ್ ಮಾಡಿ ಮನೆಯಲ್ಲಿ ಮತ್ತು ಸ್ನೇಹಿತರಿಗೆ ಹೇಳೋಣ ಅಂದರೆ ನನ್ನ ಸಂಚಾರಿ ದೂರವಾಣಿ ಅತಿಥಿ ಗೃಹದಲ್ಲೇ ಉಳಿದಿತ್ತು. ತಕ್ಷಣ ಆಟೋ ಹಿಡಿದು ಮನೆಗೆ ವಾಪಾಸ್ ಬಂದು ಎಲ್ಲರಿಗೂ ಫೋನ್ ಮಾಡಿ ಹೇಳಿದೆ. ನಾನಾನ ಮತ್ತೊಬ್ಬ ಸ್ನೇಹಿತ ಗಿರೀಶ್ ಅವರ ಸಂದರ್ಶನ ಕೂಡ ಮುಗಿದಿತ್ತು ಹಾಗೂ ಅವರಿಗೂ ವೀಸಾ ದೊರೆತಿತ್ತು. ನನ್ನ ಜೊತೆ ಇದ್ದ ಶ್ರೀನಿವಾಸನ ಕಥೆ ಏ ಬೇರೆಯಾಗಿತ್ತು. ಅವನ ವೀಸಾ ತಿರಸ್ಕರಿಸಲಾಗಿತ್ತು. ಏಕೋ ಏನೋ ಕಾರಣ ನಮಗೆ ತಿಳಿದಿರಲಿಲ್ಲ. ಅವನಿಗೆ ಇದರಿಂದ ಬೇಸರವಾಗಿತ್ತು.