Saturday, October 23, 2010

ಅಮೆರಿಕದಲ್ಲಿ ಹೀಗೊಂದು ದೆವ್ವಗಳ ಹಬ್ಬ.. ಹ್ಯಾಲೋವೀನ್

ಅಮೇರಿಕಾದಲ್ಲಿ ಹ್ಯಾಲೋವೀನ್ (Halloween) ಅಂತ ಒಂದು ಹಬ್ಬವಿದೆ. ಎಲ್ಲರು ದೇವರುಗಳಿಗೆ ಹಬ್ಬ ಮಾಡಿದರೆ, ಇವರು ದೆವ್ವಗಳಿಗೆ ಈ ಹಬ್ಬ ಮಾಡ್ತಾರೆ. ನಮ್ಮ ಹಿಂದೂ ದೇಶದಲ್ಲಿ ಗಣಪತಿ, ದುರ್ಗಿ ಯ ಹಬ್ಬಗಳ ಸಮಯದಲ್ಲಿ, ದೇವರ ಆಕಾರವನ್ನು ಬೀದಿ ಬೀದಿ ಗಳಲ್ಲಿ, ಕೂಡಿಸುವ ಹಾಗೆ, ಇಲ್ಲಿ ದೆವ್ವಗಳನ್ನು ಕೂಡಿಸುತ್ತಾರೆ. ಮನೆಗಳಲ್ಲಿ, ಮಾಲುಗಳಲ್ಲಿ ದೆವ್ವಗಳ ಆಕಾರವನ್ನು ಮಾಡಿ ಕೆಲವು ಕಡೆ ಸ್ಪರ್ಧಾತ್ಮಕವಾಗಿ (ಭಾರತದಲ್ಲಿ ಗಣೇಶನನ್ನು ಕೂಡಿಸುವ ಹಾಗೆ, ವಿವಿಧ ಬಣ್ಣ, ಆಕಾರ, ಗಾತ್ರ ) ಅಲಂಕಾರ ಮಾಡಿ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ಪ್ರತಿ ವರುಷ ಅಕ್ಟೋಬರ್ ತಿಂಗಳಿನ ಕೊನೆಯ ದಿನದಂದು ಆಚರಿಸುತ್ತಾರೆ. ಇಂದಿನಿಂದಲೇ ಇಲ್ಲಿ ಚಳಿಗಾಲ ಪ್ರಾರಂಭವಾಗುತ್ತದೆ. ಹ್ಯಾಲೋವೀನ್ ಸಂದರ್ಭದಲ್ಲಿ ಭಯ ಹುಟ್ಟಿಸುವ (ದಿಗಿಲೆಬ್ಬಿಸುವ) ಮುಖವಾದ, ವೇಷಭೂಷಣ , ವಸ್ತ್ರ ಗಳ್ಳನ್ನು ಧರಿಸುವುದು ವಾಡಿಕೆಯಾಗಿದೆ. ಈ ದಿನದಂದು ಕುಂಬಳಕಾಯಿಯ(Pumpkin) ಒಳ ತಿರುಳನ್ನು ತೆರೆದು, ಒಂದು ಮಡಿಕೆಯ ಆಕೃತಿಯಲ್ಲಿ ಕಡಿದು, ಮುಖವಾಡ ಮಾಡಿ, ಅದರ ಒಳಗೆ ಮೇಣದ ಬತ್ತಿಯನ್ನು ಹೊತ್ತಿಸುತ್ತಾರೆ. ಈ ಮುಖವಾಡಕ್ಕೆ Jack-O-Lantern ಎಂದು ಹೆಸರು. ಇಡೀ ಆಚರಣೆಗೆ ಭಯದ ಲೆಪನವಿದ್ದರೂ, ಎಲ್ಲೋ ಒಂದು ಕಡೆ ನಮ್ಮ ಭಾರತದ ಹಬ್ಬಗಳಿಗೂ ಸಮವಾಗುತ್ತದೆ. ಇದನ್ನು ನಾವು ಸುಗ್ಗಿಯ ಸಂಕ್ರಾಂತಿ ಎಂತಲೂ ತಿಳಿಯಬಹುದು. ದುಷ್ಟ ದಹನ ಮಾಡುವುದರಿಂದ ಇದು ಹೋಳಿ ಹಬ್ಬಕೆ ಕೂಡ ಸಮ. ಇನ್ನು ಮನೆಗಳ ಮುಂದೆ ಮೇಣದ ಬತ್ತಿಗಳು ಕಂಗೊಲಿಸುವುದರಿಂದ ಮತ್ತು ನಮ್ಮ ದೀಪಗಳ ಹಬ್ಬಕ್ಕೆ ಹತ್ತಿರವಾದುದಕ್ಕೆ ದೀಪಾವಳಿ ಎಂತಲೂ ತಿಳಿಯಬಹುದು. ಇನ್ನು ಎಲ್ಲರು, ಅದರಲ್ಲಿ ಮಕ್ಕಳು ವಿವಿಧ ವೇಷ ಭೂಷಣ ಮಾಡುವುದರಿಂದ ಇದು ನಮ್ಮ ಕೃಷ್ಣ ಜನ್ಮಾಷ್ಟಮಿಗು ಕೂಡ ಸಮ. ಇಂದಿಗೆ ಫಾಲ್ ಋತು (ಎಲೆಗಳು ಉದುರುವುದು) ಕೂಡ ಮುಗಿಯುತ್ತದೆ, ಮತ್ತು ಎಲ್ಲರು ಓಕ್ ಎಲೆಗಳನ್ನು ತಂದು ತಮ್ಮ ಮನೆಗಳನ್ನು ಸಿನ್ಗರಿವುದರಿಂದ ಇದು ನಮ್ಮ ಬೇವು, ಮಾವು, ಬೆಲ್ಲದ ಯುಗಾದಿಗೆ ಕೂಡ ಹತ್ತಿರವಾದದ್ದು ಎನ್ನೋಣವೇ ? ನೀವೇ ನಿರ್ಧರಿಸಿ ತಿಳಿಸಿ.

ಇನ್ನು ಇಂದಿನ ರಾತ್ರಿ ಇಲ್ಲಿನ ಜನ ಒಂದು ಆಟ ಆಡುತ್ತಾರೆ. ಅದರ ಹೆಸರು Trick-Or-Treat. ಅಂದು ರಾತ್ರಿ ನಿಮ್ಮ ಮನೆಗೆ ಯಾರಾದರು ಬಂದು ಬಾಗಿಲು ತಟ್ಟಿದರೆ ಅದು ಹ್ಯಾಲೋವೀನ್ ಕಂಡಿತಾ. ನಾವು ಮನೆ ಬಾಗಿಲು ತೆಗೆದ ಕೂಡಲೇ ದೆವ್ವದ ದರ್ಶನ. ನಂತರ ಇವರು ಟ್ರಿಕ್ ಆರ್ ಟ್ರೀಟ್ ಅಂತ ಕೇಳ್ತಾರೆ. ನೀವು ಟ್ರಿಕ್ ಅಂತ ಒಪ್ಪಿಕೊಂಡರೆ ನೀವು ಒಂದು ಜಾದೂ ಮಾಡಿಸಿ ತೋರಿಸಬೇಕು. ಇಲ್ಲವಾದಲಿ ಟ್ರೀಟ್ ಕೊಡಬೇಕು. ಅದಕ್ಕೆ ನಿಮ್ಮ ಮನೆಯಲ್ಲಿ ಒಂದಷ್ಟು ಚಾಕಲೇಟ್ ಗಳನ್ನು ತಂದಿರಿಸಿ.
ಹ್ಯಾಪಿ ಹ್ಯಾಲೋವೀನ್ :)


Wednesday, October 20, 2010

ಇಷ್ಟ ಕಷ್ಟ ದ ಕೊಡುಗೆ

ಇಷ್ಟವೆಂದು ಎನಬೇಡ, ಕಷ್ಟವೆಂದು ಎನಬೇಡ
ಇಷ್ಟ, ಕಷ್ಟದ ಕೊಡುಗೆ ಅವನಿಂದ ನಿನಗೆ
ಇದು ಬೇಕು ನನಗೆ, ಇದು ಬೇಡವೆನಗೆ
ನಿನ್ನಿಚ್ಚೆಗಿಲ್ಲ ಬೆಲೆ !!!

"ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ" , ಎಂಬುದು ದಾಸವಾಣಿ. ಇದರಲ್ಲಿ ಇಷ್ಟ, ಕಷ್ಟ ದ ಪ್ರಶ್ನೆಯೇ ಇಲ್ಲ. ಏಕೆಂದರೆ ಅನ್ನ, ವಸ್ತ್ರ, ವಸತಿ, ಪ್ರತಿಯೊಬ್ಬ ಮನುಷ್ಯನು ಅನಿವಾರ್ಯವಾಗಿ ಅಪೇಕ್ಷಿಸುವ ಮೂಲಭೂತ ವಸ್ತುಗಳು. ಇವುಗಳಿಗಾಗಿ ಮಾತ್ರ ಆತನ ಹೋರಾಟ. ಅತಿಯಾಸೆಯ ಜನರು ಇಂದು ನಮ್ಮ ಮುಂದೆ ಕಂಡು ಬರುತ್ತಾರೆ. ಇಷ್ಟವೆಂದು, ಆಸೆಪಟ್ಟು, ನಂತರ ಅದನ್ನು ಅನುಭವಿಸಲು ಕಷ್ಟ ಪಡುತ್ತಾರೆ ಅವರು. ಏಕೆಂದರೆ ಅತಿ ಯಾವತ್ತೂ ಒಳ್ಳೆಯದಲ್ಲ.
ನನಗದು ಬೇಕು, ನನಗದು ಬೇಡ ಎಂದು ಹಠ ಮಾಡುವವರಿದ್ದಾರೆ. ನನಗಿದು ಇಷ್ಟ ಎನ್ನುವವರು ಇದ್ದಾರೆ. ಆದರೇ ನಮ್ಮ ಈ ರೀತಿ ನೀತಿಗಳಿಗೆ ಏನಾದರು ಅರ್ಥ ವಿದೆಯೇ ? ಎಲ್ಲವು ವಿಧಿಯು ಬರೆದ ಹಾಗೆಯೇ ನಡೆಯುತ್ತದೆ. ನಮ್ಮ ಹೋರಾಟ ಏನಿದ್ದರು ಬದುಕಿಗಾಗಿ ಮಾತ್ರ. ಆದರೇ ಆ ಬದುಕನ್ನು ಕೊಡುವವನೂ ಅವನೇ. ಅಂದರೆ ಹೋರಾಟಕ್ಕೆ ಏನು ಬೆಲೆ ? ಎಲ್ಲವನ್ನು ಅವನಿಗೆ ಒಪ್ಪಿಸಿ, ನೀನಾಡಿಸಿ ದಂತೆ ಆಡುವೆ ನಾನು, ಎಂದು ನಿರ್ಲಿಪ್ತತೆ ಯಿಂದ ಇರಬಹುದಲ್ಲವೇ ? ಆದರೇ, ಅಂತರಂಗದಲ್ಲಿ ಬೆಳಕೊಂದು ಇದ್ದಾರೆ ಅದು ನಮ್ಮನ್ನು ಸುಮ್ಮನೆ ಇರಗೂಡುವುದಿಲ್ಲ. ಫಲಿತಾಂಶ ನಮ್ಮ ಕೈಯಲ್ಲಿ ಇಲ್ಲ ಎಂಬುದನ್ನು ಅರಿತು ಪ್ರಯತ್ನಿಸಬೇಕು. ಅಲ್ಪಜ್ಞಾನಿ ಮಾನವನಿಗೆ, ಸರ್ವಜ್ನನಾದ ಭಗವಂತನನ್ನು ಕಲ್ಪಿಸಿಕೊಳ್ಳುವುದು ಅಸಾದ್ಯವಾಗಿರುವಾಗ ಇನ್ನು ಅರಿಯುವುದೆಂತು ? ಅರಿಯಲು ಸಾಧ್ಯವಾಗದಾಗ ಅವನನ್ನು ಮೀರುವುದೆಂತು? ಹಾಗಾಗಿ ಎಲ್ಲವನ್ನು ಅವನಿಗೊಪ್ಪಿಸಿ, ಫಲಾಪೇಕ್ಷೆ ಇರಿಸಿಕೊಳ್ಳದೆ ಬಂದಿದ್ದನ್ನು ಸ್ವೀಕರಿಸುವ ಭಾವ ರೂಢಿಸಿಕೊಂಡರೆ, ಅದು ಒಳಿತಿನ ದಾರಿ.
ಕಷ್ಟ - ಇಷ್ಟ, ಬೇಕು - ಬೇಡ, ಎಂಬ ಭಾವದಿಂದ ಬದುಕಿನ ಪರಿಪೂರ್ಣತೆಯನ್ನು ಅನುಭವಿಸಲು ಸಾದ್ಯವಿಲ್ಲ. ಕಷ್ಟದಲ್ಲಿಯೇ ಇಷ್ಟವಿದೆ. ಬೇಡದೊಡಲಿನಲ್ಲಿಯೇ ಬೇಕೆಂಬುದಿದೆ. ಅವನು ತಿರುಗಿಸುತ್ತಿರುವ ಬುಗುರಿಯಾಗಿರುವ ನಾವು ಅವನನ್ನು ಮೀರುವುದೆಂತು ? ನಾವು ಮಾಡುವ ಕೆಲ್ಸವೆಲ್ಲವನ್ನು ಅವನ ಪೂಜೆ ಎಂದೇ ತಿಳಿಯಬೇಕು. ಪೂಜೆ ಎಂದರೆ ನಮ್ಮನ್ನು ಅವನಿಗೊಪ್ಪಿಸುವ ರೀತಿ. ಸರ್ವಸ್ಥವನ್ನು ಅವನಿಗೆ ಸಮರ್ಪಿಸಿದಾಗ ಮಾತ್ರ ನಮ್ಮ ಬದುಕಿಗೆ ಒಂದರ್ಥ ಕಂಡು ಬರುತ್ತದೆ. ನಮ್ಮ ಇಷ್ಟವು ಅವನೇ, ಕಷ್ಟವು ಅವನೇ, ನಮ್ಮ ಬೇಕು ಅವನೇ, ನಮ್ಮ ಬೇಡವು ಅವನೇ, ಎಂದರಿತು ಮಾಡುವ ಕೆಲಸಕ್ಕೆ, ಅವನು ತನ್ನ ಸಮ್ಮತಿಯ ಮುದ್ರೆಯನ್ನು ಒಡ್ಡುತ್ತಾನೆ. ಬದುಕಿಗೊಂದು ಧನ್ಯತೆಯನ್ನು ಕರುಣಿಸುತ್ತಾನೆ.

Friday, October 8, 2010

ಭಗವದ್ಗೀತೆ ಯ ಒಂದು ಸಾಲಿನ ಅರ್ಥ ಹೀಗಿದೆ....

ಆದದ್ದೆಲ್ಲ ಒಳ್ಳೆಯದಕ್ಕೆ ಆಗುತ್ತಿದೆ.
ಆಗುವುದೆಲ್ಲ ಒಳ್ಳೆಯದಕ್ಕೆ ಆಗುತ್ತಿದೆ.
ಆಗಲಿರುವುದು, ಅದೂ ಒಳ್ಳೆಯದೇ ಆಗಲಿದೆ.
ರೋದಿಸಲು ನೀನೇನು ಕಳೆದು ಕೊಂಡಿರುವೆ.
ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು ?
ನಾಶವಾಗಲು ನೀನು ಮಾಡಿರುವುದಾದರು ಏನು ?
ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ.
ಏನನ್ನು ನೀಡಿದರು ಅದನ್ನು ಇಲ್ಲಿಗೆ ನೀಡಿರುವೆ.
ನಿನ್ನೇ ಬೇರೆ ಯಾರದ್ದೋ ಆಗಿದ್ದು, ಇಂದು ನಿನ್ನದಾಗಿದೆ ಮತ್ತು ನಾಳೆ ಅದು ಇನ್ನಾರದ್ದೋ ಆಗಲಿದೆ.
ಅದಕ್ಕೆ ಹೇಳುವುದು, ಪರಿವರ್ತನೆ ಜಗದ ನಿಯಮ.

Friday, October 1, 2010

ಜಾಕಿ ಚಿತ್ರದ - ಯೋಗರಾಜ ಭಟ್ಟರ ಬೆರಳಲ್ಲಿ ಹೆಣೆದಿರುವ ಹಾಡು...


ಪುನೀತ್ ರಾಜ್ ಕುಮಾರ್ ಅಭಿನಯದ ಮುಂದಿನ ಚಿತ್ರ, 'ಜಾಕಿ' ಚಿತ್ರದಹಾಡುಗಳಲ್ಲಿ ಈ ಹಾಡು ಈಗಾಗಲೆ ಜನಪ್ರಿಯವಾಗಿದೆ. ಎಫ್ ಎಂ ರೇಡಿಯೋಗಳಲ್ಲಿ ಈ ಹಾಡು ಮೇಲಿಂದ ಮೇಲೆ ಪ್ರಸಾರವಾಗುತ್ತಾ ಕೇಳುಗರ ಮನವನ್ನು ತಣಿಸುತ್ತಿದೆ. ಯೋಗರಾಜ್ ಭಟ್ಟರು ನೇರವಾಗಿ ಯುವಕರ ಹೃದಯಕ್ಕೆ ಲಗ್ಗೆ ಹಾಕಿ ಈ ಹಾಡಿನ ಮೂಲಕ ಅವರ ನರನಾಡಿಗಳನ್ನು ಮೀಟಿದ್ದಾರೆ. ಈ ಹಾಡನ್ನು ಅವರು ಬರೆದಷ್ಟೇ ಸೊಗಸಾಗಿ ಟಿಪ್ಪು ಹಾಡಿದ್ದಾರೆ, ವಿ ಹರಿಕೃಷ್ಣ ಹಾರ್ಮೋನಿಯಂ ನುಡಿಸಿದ್ದಾರೆ.


ಶಿವ ಅಂತ ಹೋಗುತಿದ್ದೆ ರೋಡಿನಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟಾಂಕು ಪೆಟ್ರೋಲ್ ಇತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ

ಕಂಡು ಕಂಡು ಬಿದ್ದಂಗಾಯಿತು ಹಳ್ಳದಲಿ
ಕಂಬ್ಳಿ ಹುಳ ಬಿಟ್ಟಾಂಗಾಯಿತು ಹಾರ್ಟಿನಲಿ
ಕಚಗುಳಿ ಇಟ್ಟಾಂಗಾಯಿತು ಬೆನ್ನಿನಲಿ
ನೀ ಕುಂತಾಗ ಬೈಕಿನಲಿ
ಬೈಕಿನಲಿ...ಬೈಕಿನಲಿ...ಬೈಕಿನಲಿ



ಟಾಪು ಗೇರು.. ಹಾಕಂಗಿಲ್ಲ
ಸುಮ್ನೆ ಬ್ರೇಕು.. ಹೊಡ್ಯಂಗಿಲ್ಲ
ಟಾಪು ಗೇರು ಹಾಕಂಗಿಲ್ಲ... ಸುಮ್ನೆ ಬ್ರೇಕು ಹೊಡ್ಯಂಗಿಲ್ಲ
ಅಯ್ಯೊ ಪಾಪ ಹುಡ್ಗಿ ಜೀವ ಹೆದರುವುದು
ತು ನಂಗೆ ಯಾಕೆ ಹಿಂಗೆ ಎಲ್ಲ ಅನಿಸುವುದು



ಒಂದು ಮಾತು.. ಕೇಳಲಿಲ್ಲ
ಒಂದು ಮಾತು ಕೇಳಲಿಲ್ಲ..ಹಿಂದೆ ಮುಂದೆ ನೋಡಲಿಲ್ಲ
ನನ್ನ ಎದೆ ಸೈಟನು ಕೊಂಡುಕೊಂಡು
ತಡ ಮಾಡದೆ ಪಾಯವ ತೋಡಿ ಬಿಟ್ಲು
ಹೂವಿನಂತ ಹುಡುಗ ನಾನು ತುಂಬ ಮೃದು
ಹೂವಿನಂತ ಹುಡುಗ ನಾನು ತುಂಬ ಮೃದು
ಹೆಣ್ ಮಕ್ಳೇ ಸ್ಟ್ರಾಂಗು ಗುರು
ರಾಂಗು ಗುರು.. ರಾಂಗು ಗುರು.. ರಾಂಗು ಗುರು..ರಾಂಗು ಗುರುಶಿವ



ಉಣ್ಣಲಿಲ್ಲ.. ತಿನ್ನಲಿಲ್ಲ.. ಮಟ ಮಟ.. ಮಧ್ಯಾನವೇ
ಉಣ್ಣಲಿಲ್ಲ ತಿನ್ನಲಿಲ್ಲ ಮಟ ಮಟ ಮಧ್ಯಾನ
ಕುಂತು ಬಿಟ್ಳು ಹಿಂದುಗಡೆ ಸೀಟಿನಲಿ
ನಾವ್ ಹೊಡ್ಕೋ ಬೇಕು ನಮ್ಮದೆ ಬೂಟಿನಲಿ



ಒಂದು ಕೇಜಿ.. ಅಕ್ಕಿ ರೇಟು
ಒಂದು ಕೇಜಿ ಅಕ್ಕಿ ರೇಟು ಮೂವತ್ ರೂಪಯ್ ಆಗಿ ಹೋಯ್ತು
ಇಜಿಯಾಗಿ ಹೇಗೆ ನಾನು ಪ್ರೀತಿಸಲಿ ಅದರಲ್ಲು ಮೊದಲನೆ ಭೇಟಿಯಲಿ
ರೇಷನ್ ಕಾರ್ಡು ಬೇಕೆ ಬೇಕು ಪ್ರೀತಿಸಲು
ರೇಷನ್ ಕಾರ್ಡು ಬೇಕೆ ಬೇಕು ಪ್ರೀತಿಸಲು
ಸಂಸಾರ ಬೇಕಾ ಗುರು
ಬೇಕು ಗುರು..ಬೇಕು ಗುರು..ಬೇಕು ಗುರು..ಬೇಕು ಗುರುಶಿವ

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು