ತಿಂಗಳ ಕೊನೆಯ ಡಾಲರಿಗಾಗಿ
ವಾರ ಪೂರ್ತಿ ಯಾರಿಗೋ ದುಡಿದು
ವೀಕೆಂಡ್ ಶಾಪಿಂಗ್ ವಾಶಿಂಗ್ ಮಾಡಿ
ಪಾರ್ಟಿ ಕ್ಲಬ್ಬಿನ ಲೋಕವ ಸೇರು
ಲೈಫು ಇಷ್ಟೇನೆ ...!
ವಾಲ್ಮಾರ್ಟ್ ಟಾರ್ಗೆಟ್ ಬೆಷ್ಟ್ ಬೈ ಸುತ್ತು
ಡಾಲರ್ ಜೊತೆಗೆ ರೂಪಾಯಿ ಗುಣಿಸು
ಆರ್ಕುಟ್ ಫೇಸ್ಬುಕ್ ಸ್ಕೈಪನೆ ಜಪಿಸಿ
ಲ್ಯಾಪ್-ಟಾಪ್ ಅಲ್ಲೇ ಜೀವನ ಮುಗಿಸು
ಲೈಫು ಇಷ್ಟೇನೆ ...!
ಮಸಾಲೆ ಊಟವ ಮನದಲೆ ನೆನೆದು
ಬರ್ಗರ್ ಚೀಸು ಕಣ್ಣ್ಮುಚ್ಚಿ ತಿಂದು
ನೀರಿನ ಬದಲು ಕೂಕನೆ ಕುಡಿದು
ಬೊಜ್ಜು ತುಂಬಿದ ಹೊಟ್ಟೆಯ ನೋಡು
ಲೈಫು ಇಷ್ಟೇನೆ ...!
ರೋಡು ಕಾರು ಆರಾಮು ನೋಡಿ
ನಮ್ ದೇಶಾನ ಉದ್ದಕ್ಕೂ ತೆಗಳು
ಟ್ರಾಫಿಕ್ ಅಲ್ಲಿ ಟಿಕೇಟು ಸಿಕ್ರೆ
ನಮ್ಮೊರ್ ಮಾಮನೆ ಸರಿ ಅಂತ ಹೊಗಳು
ಲೈಫು ಇಷ್ಟೇನೆ ...!
ಲಾಂಗ್ ವೀಕೆಂಡ್ಗೆ ಲಾಂಗ್ ಲಾಂಗ್ ಪ್ಲಾನು
ಮೂರ್ ದಿನದಲ್ಲಿ ಆರೂರ್ ಸುತ್ತು
ನಮ್ ದೇಶಾನೇ ಸರಿಯಾಗಿ ನೋಡ್ದೆ
ಅಮೆರಿಕ ಮಾತ್ರ ಪೂರ್ತಿ ನೋಡ್ಕೋ
ಲೈಫು ಇಷ್ಟೇನೆ...!
ಫೋನು ಕ್ಯಾಮೆರಾ ಡೀಲ್ಅಲ್ಲಿ ಮುಳುಗು
ಬೇಕೋ ಬೇಡವೋ ಎಲ್ಲಾನು ಕೊಂಡ್ಕೋ
ಹಾಗು ಹೀಗೂ ಇಂಡಿಯಾಗೆ ಸೇರ್ಸು
ಎಲ್ಲಾರ್ಗೂ ಹಂಚಿ ದೊಡ್ಡತನ ತೋರ್ಸು
ಲೈಫು ಇಷ್ಟೇನೆ ...!
ಈ ಬರಹ ನನ್ನದಲ್ಲ. ನನ್ನಂತೆಯೇ ಓರ್ವ ಅಮೆರಿಕ ವನ್ನು ಸುತ್ತಿದವರು ಬರೆದಿದ್ದು..........
Thursday, February 17, 2011
Subscribe to:
Posts (Atom)