Wednesday, June 29, 2011

ಶಹಬ್ಬಾಸ್ ಅಮೆರಿಕ - ಹಿಂದು ದೇವತೆಗಳೊಂದಿಗೆ ಅಮೆರಿಕ ಅಂಚೆಚೀಟಿ

ಅಮೆರಿಕಾದಲ್ಲಿ ವಾಸಿಸುತ್ತಿರುವ ಭಾರತೀಯರಿಗಾಗಿ ww.USA-Postage.com, ಏಳು ಅಧ್ಯಾತ್ಮಿಕ ವಿನ್ಯಾಸದಲ್ಲಿ ಅಂಚೆ ಚೀಟಿಗಳನ್ನು ಹೊರತಂದಿದೆ. ಸಾಯಿಬಾಬಾ, ಮಹಾಲಕ್ಷ್ಮಿ , ಶ್ರೀ ವೆಂಕಟೇಶ್ವರ, ಸುಬ್ರಹ್ಮಣ್ಯ, ವಿನಾಯಕ, ಶಿವಪಾರ್ವತಿ, ಶ್ರೀಕೃಷ್ಣನ ಚಿತ್ರಗಳೊಂದಿಗೆ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಈ ರೀತಿಯ ಅಂಚೆಚೀಟಿಗಳನ್ನು ಹೊರತರುತ್ತಿರುವುದು. ಮತ್ತೆಲ್ಲೂ ಲಭ್ಯವಾಗದ ವಿಶಿಷ್ಟ ವಿನ್ಯಾಸಗಳಲ್ಲಿ ಈ ಅಂಚೆಚೀಟಿಗಳನ್ನು ರೂಪಿಸಲಾಗಿದೆ. ಉಡುಗೊರೆ ರೂಪದಲ್ಲಿ ಕೊಡಲು, ವಿಶೇಷ ಸಂದರ್ಭಗಳಲ್ಲಿ ಬರೆಯುವ ಪತ್ರಗಳಿಗೆ ಅಂಟಿಸಲು ಈ ಅಂಚೆಚೀಟಿಗಳನ್ನು ಬಳಸಿಕೊಳ್ಳಬಹುದು.

ಈ ರೀತಿಯ ವಿಭಿನ್ನ ಅಂಚೆಚೀಟಿಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಅಮೆರಿಕಾದಲ್ಲಿನ ಭಾರತೀಯರು ಇವುಗಳನ್ನು ಆನ್ ಲೈನ್ ನಲ್ಲಿ ಖರೀಸಬಹುದು. ಪ್ರತಿ ಅಂಚೆಚೀಟಿಯ ಮಖ ಬೆಲೆ 18.99 ಡಾಲರ್. ಭಾರತೀಯ ದೇವತೆಗಳು ಅಮೆರಿಕಾ ಅಂಚೆಚೀಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ.

2011ರಲ್ಲಿ ಹುಟ್ಟಿ ಬೆಳೆದ ಮಾರ್ಡ್ರನ್ ಗಾದೆಗಳು

ಒರಿಜಿನಲ್ ಗಾದೆಗಳು, ನುಡಿಗಟ್ಟುಗಳನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿ 2011ರ ಜನ ಜೀವನಶೈಲಿಗೆ ಹೊಂದುವ ಕೆಲವು ಗಾದೆಗಳ ಸಂಗ್ರಹ ಇಲ್ಲಿದೆ. ಹೆಚ್ಚು ಪೀಠಿಕೆ ಬೇಡ, ಸುಮ್ಮನೆ ಓದಿ ಆನಂದಿಸಿ

ಆಳಾಗಿ ದುಡಿ; ಹಾಳಾಗಿ ಹೋಗು

* ಕೈ ಕೆಸರಾದರೆ ನಾನೇನು ಮಾಡಲಿ?

* ಉಪ್ಪು ತಿಂದ ಮೇಲೆ ಬೀಪಿ ಬರಲೇಬೇಕು

* ಕಾಲು ಇದ್ದಷ್ಟು ಹಾಸಿಗೆ ಹಾಸಿಕೋ

* ಆಕಳು ಕಪ್ಪಾದರೆ ಸಗಣಿನೂ ಕಪ್ಪೇ..

* ಜ್ಞಾನ ದೇಗುಲವಿದು, ಮೊಬೈಲ್ ಸ್ವಿಚ್ ಆಫ್ ಮಾಡಿ ಒಳಗೆ ಬನ್ನಿ

* ಏನಾದ್ರೂ ಮಾಡು; ಮೊದ್ಲು ಸ್ನಾನ ಮಾಡು

* ಕಬ್ಬು ಡೊಂಕಾದರೆ ತಿನ್ನೋದು ಬಿಡ್ತೇವ್ಯೇ?

* ಇಬ್ಬರ ಜಗಳ, ಮೂರನೆಯವನಿಗೆ ಪೆಟ್ಟು.

* ಹಣ್ತಿಂದವ ತಪ್ಪಿಸಿಕೊಂಡ; ಮೂತಿ ಒರೆಸ್ಕಂಡವ ಸಿಕ್ಕಾಕ್ಕೊಂಡ

* ಮನಸ್ಸೊಳಗೆ ಅನಾಚಾರ, ಮುಖದಲ್ ಬೃಂದಾವನ..

* ಗೆಳೆಯರ ಜಗಳ ಗುಂಡು ಹಾಕುವ ತನಕ..

* ವೈದ್ಯ ಬಯಸಿದ್ದೂ ಡಯಾಬಿಟೀಸು, ರೋಗಿಗಾಗಿದ್ದೂ ಡಯಾಬಿಟೀಸು.
Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು