Monday, August 29, 2011
Tuesday, August 23, 2011
ಅಮೇರಿಕಾ ಪ್ರವಾಸ -- ಮತ್ತೊಮ್ಮೆ
ಮತ್ತೊಮ್ಮೆ ಮಗದೊಮ್ಮೆ ಅಮೆರಿಕಾಕ್ಕೆ ಪ್ರಯಾಣ ಬೆಳೆಸುವ ಅವಕಾಶ ನನಗೆ ಒದಗಿ ಬಂದಿದೆ. ಈ ಬಾರಿ ಷಿಕಾಗೋ(Chicago) ನಗರಕ್ಕೆ ಪ್ರಯಾಣ ಬೆಳೆಸಿದ್ದೇನೆ. ಇದರ ಸವಿವರ, ಸಪೂರವಾಗಿ ನಿಮ್ಮ ಮುಂದೆ ಇಡುತ್ತಿದ್ದೇನೆ. ಈ ಬಾರಿಯ ಪಯಣ ಬೆಂಗಳೂರು - ದುಬೈ - ಪ್ಯಾರಿಸ್ - ಷಿಕಾಗೋ ಮಾರ್ಗವಾಗಿ. ಕಿಂಗ್ ಫಿಷರ್ - ಏರ್ ಫ್ರಾನ್ಸ್ ವಿಮಾನಗಳಲ್ಲಿ ಪಯಣ ಅಷ್ಟೇನೂ ಸುಖಕರವಾಗಿರಲಿಲ್ಲ. ಜೊತೆಗೆ ಪಯಣದ ಸಮಯ ಕೂಡ ಜಾಸ್ತಿ, ಸುಮಾರು ೨೮ ಗಂಟೆಗಳು . ಷಿಕಾಗೋ ದಲ್ಲಿ ಬಂದೊಡನೆ ಅಮೆರಿಕ ವಲಸೆ ಅಧಿಕಾರಿಗಳ ಬಳಿ ಹೋದೆನು. ಇವರು ನನಗೆ ಅಮೇರಿಕಾದಲ್ಲಿ ಉಳಿದುಕೊಳ್ಳಲು ಮೊದ ಮೊದಲು ನಿರಾಕರಿಸಿದರು, ನಂತರ ಒಂದು ತಿಂಗಳ ಮಟ್ಟಿಗೆ ಉಳಿದು ಕೊಳ್ಳಲು ಅವಕಾಶ ಕೊಟ್ಟರು. ಇದಕ್ಕೆ ಕಾರಣ ನನ್ನ H1B ವೀಸಾ ಮುಗಿಯುವ ಅವಧಿ ಬಹಳ ಹತ್ತಿರ, ಕೇವಲ ಒಂದು ತಿಂಗಳು ಮಾತ್ರ ಉಳಿದಿತ್ತು. ಹೇಗೋ ಅವರ ಬಳಿ ಸ್ವಲ್ಪ ಹೊತ್ತು ಮಾತು ಕಥೆ ನಡೆಸಿ, ಅಮೇರಿಕಾದಲ್ಲಿ ಉಳಿದುಕೊಳ್ಳಲು ಮತ್ತೊಂದು ಅವಕಾಶ ಪಡೆದೆನು. ಇಲ್ಲಿ ನನ್ನ ಸ್ನೇಹಿತನ ಮನೆಯಲ್ಲಿ ಉಳಿದುಕೊಳ್ಳುವುದು ಎಂದು ತೀರ್ಮಾನಿಸಿದ್ದೆನು.ಅವನ ದೂರವಾಣಿ ಸಂಖ್ಯೆ ನನ್ನ ಬಳಿ ಇತ್ತು. ಅವನಿಗೆ ಕರೆ ಮಾಡಲು ವಿಮಾನ ನಿಲ್ದಾಣದಲ್ಲೇ ಇದ್ದ ಸಾರ್ವಜನಿಕ ದೂರವಾಣಿಯನ್ನು ಉಪಯೋಗ ಮಾಡಿಕೊಂಡೆನು. ಇಲ್ಲೂ ಕೂಡ ದೂರವಾಣಿ ಯಂತ್ರಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಇದಕ್ಕಾಗಿ ಒಂದು ಡಾಲರ್ ವ್ಯರ್ಥವಾಯಿತು. ಹೇಗೋ ಕೊನೆಗೂ ಕರೆ ಮಾಡಿ ಸಂಜೆಗೆ ಮನೆಗೆ ಬರುತ್ತೇನೆ ಎಂದು ತಿಳಿಸಿದೆನು. ಏಕೆಂದರೆ, ಅವನು ಕೂಡ ಕೆಲಸ ಮುಗಿಸಿ ಬರುವ ಸಮಯಕ್ಕೆ ಸಂಜೆ ಆಗುವುದು ಎಂದು ತಿಳಿದಿತ್ತು. ಈಗ ಇನ್ನು ಮದ್ಯಾನ್ಹ ವಾದ್ದರಿಂದ ಅಂತರ್ಜಾಲ ದ ಬಳಕೆ ಮಾಡಿ ಕೆಲವರಿಗೆ ಇ-ಮೇಲ್ ಮಾಡಿದೆ. ಹಾಗು ಕೆಲವರಿಗೆ ಗೂಗಲ್ ಬಳಕೆ ಮಾಡಿ ಕರೆ ಕೂಡ ಮಾಡಿದೆ. ಗೂಗಲ್ ನ ಉಪಯೋಗ ಅಮೇರಿಕಾದಲ್ಲಿ ಬಹಳವಾಗಿದೆ ಇದು ಒಂದು ಉದಾಹರಣೆ ಅಷ್ಟೇ. ಇದೆ ಸಮಯದಲ್ಲಿ ಇಲ್ಲಿ ಕೆಲವು ಹುಡುಗರು ಭಾರತದಿಂದ M.S.in CS & E ಮಾಡಲು ಬಂದಿಳಿದಿದ್ದರು. ಇವರಿಗೆ ನನ್ನ ಬಳಿ ಇದ್ದ ಚಿಲ್ಲರೆ ಹಣವನ್ನು ಉಪಯೋಗಿಸಿ ಅವರ ಸ್ನೇಹಿತರು ಮತ್ತು ಬಂಧು ಬಂದವರಿಗೆ ಕರೆ ಮಾಡಿ ವಿಷಯ ತಿಳಿಸಲು ಉಪಕರಿಸಿದೆನು. ಸುಮಾರು ೫ ಗಂಟೆಗೆ ವಿಮಾನ ನಿಲ್ದಾಣ ವನ್ನು ಬಿಟ್ಟು ಮನೆಯ ಕಡೆ ಟ್ಯಾಕ್ಷ್ಸಿ ಯಲ್ಲಿಪ್ರಯಾಣ ಬೆಳೆಸಿದೆನು. ಮಾರ್ಗ ಮದ್ಯೆ ಟ್ಯಾಕ್ಷ್ಸಿ ಚಾಲಕನ ದೂರವಾಣಿ ಉಪಯೋಗಿಸಿ ನನ್ನ ಸ್ನೇಹಿತನಿಗೆ ಕರೆ ಮಾಡಿದೆನು. ೬ ಗಂಟೆಗೆ ಮನೆ ಸೇರಿದೆನು. ಇಲ್ಲಿಯೂ ನನಗೆ ಮತ್ತೊಂದು ಆಘಾತವಾಯಿತು. ಟ್ಯಾಕ್ಷ್ಸಿ ಯವನು ಮೀಟರ್ ಗಿಂತ ಹೆಚ್ಚು ಶುಲ್ಕ ವಿಧಿಸಿದನು. (ಅಂದರೆ ಒಂದೂವರೆ) ಆದರೆ ಇಲ್ಲಿ ನಿಮಗೆ ರಶೀದಿ ಸಿಗುತ್ತೆ ಅಷ್ಟೇ. ಈಗ ನನ್ನ ಸ್ನೇಹಿತನ ದೂರವಾಣಿ ಉಪಯೋಗಿಸಿ ನನ್ನ ಅರ್ಧಾಂಗಿಗೆ ಕರೆ ಮಾಡಿ, ನನ್ನ ಸುರಕ್ಷಿತವಾದ ಆಗಮನವನ್ನು ತಿಳಿಸಿದೆನು.
Friday, August 5, 2011
Subscribe to:
Posts (Atom)