ಸೋನು ನಿಗಮ್ ಮತ್ತು ಜಯಂತ್ ಕಾಯ್ಕಿಣಿ, ಅವರ ಸಮಾಗಮ ಕನ್ನಡದ ಚಲನ ಚಿತ್ರಗಳಲ್ಲಿ ಅತಿ ಮಧುರವಾಗಿ ಮೂಡಿ ಬರುತ್ತಿದೆ.
ಅನಿಸುತೆದೆ ಯಿಂದ ಪ್ರಾರಂಭವಾಗಿ, ಇತ್ತೀಚಿನ ಚಲಿಸುವ ಚೆಲುವೆ.. ಒಲಿಸಲು ಬರುವೆ ಗಿನ ಹಾದಿ ತುಂಬ ಅತ್ಯುತ್ತಮವಾಗಿದೆ. ಒಂದು ಹಾಡಿಗಿಂತ ಮತ್ತೊಂದು ಉತ್ತಮವಾಗಿ ಮೂಡಿಬರುತ್ತಿದೆ. ಇದು ಸೋನು ನಿಗಮ್ ಅವರ ಮೇಲಿಟ್ಟಿರುವ ನಮ್ಮ ಕನ್ನಡಿಗರ ಪ್ರೇರಣೆಯೋ ಏನೋ ನಾ ಕಾಣೆ.
ಅವರ ಇತ್ತೀಚಿನ, ಹಾಡೊಂದರ ಸಾಹಿತ್ಯ ವನ್ನು ನಿಮ್ಮ ಮುಂದೆ ಇಡುತ್ತಿದ್ದೀನೆ. ಆದನ್ನು ಕೇಳಿಕೊಂಡು ಇದರ ಅನುಭವ ಸವಿಯಿರಿ.
ಚಲಿಸುವ ಚೆಲುವೆ, ಒಲಿಸಲು ಬರುವೆ
ನಾ ಹೇಳಲೇ ಬೇಕು ಎಂದ ವಿಷಯವೇ ಮರೆತೋಯ್ತಲ್ಲ ನಿನ್ಮುಂದೆ, ಚೆಲುವೆ,
ನಾ ತೋರಿಸಲೆಂದೇ ತಂದ ಹೃದಯವೇ ಹೊರಟೆ ಹೋಯ್ತಲ್ಲ ನಿನ್ಹಿಂದೆ, ಚೆಲುವೆ,
ಬಿರಿವ ಬೆಳಕಿನ ಹೂವಂತೆ ನೀ ಹುಡುಗಿ ಚೆಂದದ ನೋವಂತೆನೀ
ಬೆಡಗಿ ಕಾಡುವೆ ಯೇಕಂಥ , ನೀ ಅಡಗಿ ಬಾರೆ ಚೂರು ಆಚೆಗೆ....
ಹೊಳೆವ ಬಿಸಿಲಿನ ಕೋಲಂತೆ,ನೀ ನಡೆವೆ ಕಬ್ಬಿಣ ಹಾಲಂತೆನೀ
ನುಡಿವೆ ನನ್ನನು ಹೇಗಂಥ,ನೀ ತಡೆವೆ ಬಾರೆ ಪೂರ ಈಚೆಗೆ...
ಕನಸು ನಿಜವಾದಂತೆ ಕನಸಾಗಿದೆ................
ಚಲಿಸುವ ಚೆಲುವೆ, ಒಲಿಸಲು ಬರುವೆ....
---------------------------------------------------------
ನೂರು ನೂರು ಬಯಕೆಗಳ ಪಾಠಶಾಲೆ ತೆರೆಯುವೆನು,
ನಲಿಸುತಲೇ ಕಲಿಯುವೇನುಜೋಡಿಯಾಗಿ ಹೆಸರುಗಳ ಗೀಚಿ ನೋಡಿ ಅಳಿಸುವೆನು,
ಸನಿಹದಲೇ ಸುಳಿಯುವೆನುಯಾರೊಂದು ಕಾಣದಿಲ್ಲಿ ಸೇರೋಣ, ಹಿತವಾಗಿ ಹಾಡಿಕೊಂಡು ಹಾರಿ ಹೋಗೋಣ
ಬಿರಿವ ಬೆಳಕಿನ ಹೂವಂತೆ, ನೀ ಹುಡುಗಿ ಚೆಂದದ ನೋವಂತೆನೀ
ಬೆಡಗಿ ಕಾಡುವೆ ಯೇಕಂಥ , ನೀ ಅಡಗಿ ಬಾರೆ ಚೂರು ಆಚೆಗೆ....
ಹೊಳೆವ ಬಿಸಿಲಿನ ಕೋಲಂತೆ,ನೀ ನಡೆವೆ ಕಬ್ಬಿಣ ಹಾಲಂತೆನೀ ನುಡಿವೆ ನನ್ನನು ಹೇಗಂಥ,ನೀ ತಡೆವೆ ಬಾರೆ ಪೂರ ಈಚೆಗೆ...ಕನಸು ನಿಜವಾದಂತೆ ಕನಸಾಗಿದೆ................
ಚಲಿಸುವ ಚೆಲುವೆ, ಒಲಿಸಲು ಬರುವೆ....
---------------------------------------------------------------
ಕಾದು ಕೂತ ಕನಸುಗಳ, ಕಾರು ಬಾರು ನಡೆಯುತಿರೆ,
ಹೃದಯದಲಿ ಹಗಲಿರುಳುಜೀವವೀಗ ಗರಿಗೆದರಿ ಮೂಕವಾಗಿ ಚಿಗುರುತಿದೆ,
ಉಸಿರುಗಳು ಬೆರೆತಿರಲುಕಣ್ಣಲ್ಲೇ ರೂಪ ರೇಕೆ ಹಾಕೋಣ,
ಜೊತೆಯಾಗಿ ಭಾವ ಲೋಕ ದೋಚಿಕೊಳ್ಳೋಣ
ಬಿರಿವ ಬೆಳಕಿನ ಹೂವಂತೆ, ನೀ ಹುಡುಗಿ ಚೆಂದದ ನೋವಂತೆನೀ
ಬೆಡಗಿ ಕಾಡುವೆ ಯೇಕಂಥ , ನೀ ಅಡಗಿ ಬಾರೆ ಚೂರು ಆಚೆಗೆ....
ಹೊಳೆವ ಬಿಸಿಲಿನ ಕೋಲಂತೆ,ನೀ ನಡೆವೆ ಕಬ್ಬಿಣ ಹಾಲಂತೆನೀ
ನುಡಿವೆ ನನ್ನನು ಹೇಗಂಥ,ನೀ ತಡೆವೆ ಬಾರೆ ಪೂರ ಈಚೆಗೆ...ಕನಸು ನಿಜವಾದಂತೆ ಕನಸಾಗಿದೆ................
ಚಲಿಸುವ ಚೆಲುವೆ, ಒಲಿಸಲು ಬರುವೆ....
No comments:
Post a Comment