Wednesday, December 16, 2009

ಇಂಟರ್ನೆಟ್ ರೈತರು…Internet Farmers


ನೀವು ನಿಮ್ಮ ಜೀವನದಲ್ಲಿ ಯಾವತ್ತಾದರೂ ಹೊಲದಲ್ಲಿ ಉಳುಮೆ ಮಾಡಿದೀರಾ? ಕುಯ್ಲು ಅನ್ನೋ ಪದ ಕೇಳಿದೀರಾ? ಒಂದು ಫಾರ್ಮ್ ಅಂತ ಮಾಡ್ಕೊಂಡು ಅಲ್ಲಿ ನಿಮ್ಮದೇ ಆದ ಮನೆ, ಸಾಕು ಪ್ರಾಣಿಗಳು, ಟ್ರಾಕ್ಟರ್ ಇಟ್ಕೊಂಡಿದ್ರಾ? ಇವೆಲ್ಲ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದೋ? ಇಲ್ವೋ? ಗೊತ್ತಿಲ್ಲ.. ಆದ್ರೆ ನೀವೀಗ ಇಂಟರ್ನೆಟ್ ಮೂಲಕ ಪ್ರಗತಿ ಪರ ರೈತರಾಗಬಹುದು … ನಿಮ್ಮದೇ ಒಂದು ಫಾರ್ಮ್. ಅಲ್ಲಿ ನಿಮಗೆ ಇಷ್ಟ ಬಂದ ಬೆಲೆ, ಮರ-ಗಿಡ, ಸಾಕು ಪ್ರಾಣಿಗಳು, ಮನೆ, ರೆಸ್ಟ್ ಹೌಸ್, ಅದೂ ಇದೂ ಎಲ್ಲಾ.. ಆ ಫಾರ್ಮ್ ನ ಹೆಸರು ಫಾರ್ಮ್ ವಿಲ್

ಹೇಗೆ ಅನ್ನೋದಾದ್ರೆ ಉತ್ತರ ಇಲ್ಲಿದೆ.. ನಿಮಗೆ ಇಂಟರ್ನೆಟ್ ಉಪಯೋಗಿಸೋಕೆ ಬರುತ್ತಾ? ನೀವು ಫೇಸ್ ಬುಕ್ ಮೆಂಬರಾ? ಹಾಗಿದ್ರೆ ನಿಮಗೂ ಒಂದು ಜಾಗ ಅಲ್ಲಿ ಮೀಸಲಿದೆ. ಅದು ನಿಮ್ಮದೇ ಸ್ವಂತ ಫಾರ್ಮ್. ಫಾರ್ಮ್ ಆರಂಭಿಸೋಕೆ ಅವರೇ ಒಂದಷ್ಟು ಹಣ ಕೊಟ್ಟು, ಜಾಗ ಕೊಟ್ಟು, ನಿಮಗೆ ಸಹಾಯ ಮಾಡ್ತಾರೆ. ಆಮೇಲೆಲ್ಲಾ ನಿಮ್ಮ ತಾಕತ್. ಹಂತ ಹಂತವಾಗಿ ಬೆಳೆ ಬೆಳೀತಾ ಹೋದ ಹಾಗೇ ನಿಮ್ಮಲ್ಲಿ ಹಣ ಜಾಸ್ತಿ ಆಗುತ್ತೆ. ನೀವೇ ಹೂಟಿ ಮಾಡ್ಬೇಕು, ನೀವೇ ಬೀಜ ಹಾಕ್ಬೇಕು, ನೀವೇ ಬೆಳೆ ಬೆಳೀಬೇಕು, ನೀವೇ ಕುಯ್ಲು ಮಾಡ್ಬೇಕು. ಇಂತಹ ಬೆಳೆ ಬೆಳೆಯೋಕೆ ಇಂತಿಷ್ಟು ಸಮಯ ಅಂತ ಬೇಕು. ಆ ಸಮಯದಲ್ಲಿ ಅದು ಸಂಪೂರ್ಣ ಫಸಲು ಕೊಟ್ಟಿರತ್ತೆ. ಅದನ್ನ ನೀವೇ ಕುಯ್ಲು ಮಾಡ್ತಿದ್ದ ಹಾಗೇ ನಿಮ್ಮ ಹಣ ಜಾಸ್ತಿ ಆಗುತ್ತೆ. ಆ ಹಣದಿಂದ ನೀವು ಮರ-ಗಿಡ, ಹಸು, ಕುರಿ, ಆನೆ, ಕುದುರೆ ಎಲ್ಲ ತಗೋಬಹುದು. ಹಾಗೇ ಬೆಳೆ ಬೆಳೆದು ಶ್ರೀಮಂತರಾಗ್ತಿದ್ದ ಹಾಗೇ ನಿಮ್ಮ ಫಾರ್ಮ್ ವಿಸ್ತೀರ್ಣ ಜಾಸ್ತಿ ಮಾಡ್ಕೋಬಹುದು. ಮನೆ ತಗೋಬಹುದು, ಹಂತ ಹಂತವಾಗಿ ಟ್ರಾಕ್ಟರ್, ಕುಯ್ಲು ಯಂತ್ರ, ನಾಟಿ ಯಂತ್ರ, ಬೈಕ್, ಎಲ್ಲ ತಗೋಬಹುದು. ನೀವು ಎಷ್ಟು ಇಂಟರೆಸ್ಟ್ ಇಟ್ಟು ಬೆಳೆ ಬೆಳೀತಿರೋ ಅಷ್ಟು ಬೇಗ ನಿಮ್ಮ ಲೆವೆಲ್ ಜಾಸ್ತಿ ಆಗ್ತ ಹೋಗುತ್ತೆ. ನಿಮ್ಮ XP ಜಾಸ್ತಿ ಆಗ್ತಾ ಇದ್ದ ಹಾಗೆಲ್ಲ ನಿಮ್ಮ ಲೆವೆಲ್ ಮೇಲೇರುತ್ತೆ. ಲೆವೆಲ್ ಏರ್ತಾ ಇದ್ದ ಹಾಗೇ ಹೊಸ ಹೊಸ ಬೆಳೆ ಬೆಳೆಯೋಕೆ ನಿಮ್ಮಿಂದ ಸಾಧ್ಯ ಆಗುತ್ತೆ. ನೀವಿಲ್ಲಿ ೮ ಗಂಟೆಯಲ್ಲಿ ಟೊಮೇಟೊ ಬೆಳೀಬಹುದು, ಒಂದು ದಿನದ ಒಳಗೆ ಸೂರ್ಯಕಾಂತಿ, ದ್ರಾಕ್ಷಿ ಬೆಳೀಬಹುದು, ೪ ಗಂಟೆಯಲ್ಲಿ ಸ್ಟ್ರಾಬೆರಿ ಬೆಳೆದು ಬಿಡಬಹುದು. ೧೦ ಕಾಯಿನ್ ಕೊಟ್ಟು ಸ್ಟ್ರಾಬೆರಿ ಹಾಕಿದ್ರೆ ೪ ಗಂಟೆಯ ಒಳಗೆ ನಿಮಗೆ ೪೦ ಕಾಯಿನ್ ಸಿಗತ್ತೆ. ಹಾಗೇ ಪ್ರತಿ ಬೆಳೆಗೂ ತನ್ನದೇ ಆದ ಬೆಲೆ. ತನ್ನದೇ ಆದ ಲಾಭ ಮತ್ತೊಂದು ಮಾತು, ಅಪ್ಪಿ ತಪ್ಪಿ ನಾಲ್ಕು ಗಂಟೆ ಒಳಗೆ ನೀವು ಸ್ಟ್ರಾಬೆರಿ ಕುಯ್ಲು ಮಾಡದಿದ್ರೆ ಐದನೇ ಗಂಟೆಗೆ ಬೆಳೆ ಹಾನಿ ಕಟ್ಟಿಟ್ಟ ಬುತ್ತಿ.

ಇನ್ನು
ನಿಮ್ಮ ಫಾರ್ಮ್ ನ ಸುಂದರವಾಗಿ ಇಡೋಕೆ ಸಾಕಷ್ಟು ಡೆಕೊರೆಶನ್ ವಸ್ತುಗಳೂ ಇಲ್ಲಿ ಸಿಗತ್ತೆ. ಬೇಲಿ ಹಾಕ್ಕೊಳೋಕೆ ಸಾಧ್ಯ ಇದೆ. ನೀವು ಕೊಂದ ಹಸು, ಕುರಿ ಪ್ರತಿ ದಿನ ಹಾಲು ಕೊಡುತ್ತೆ, ಕೋಳಿ ಮೊಟ್ಟೆ ಇಡುತ್ತೆ. ಜೊತೆಗೆ ನಿಮ್ಮ ತೋಟದ ಸುತ್ತ ಇರೋ ಮರಗಳೂ ಹಣ್ಣು ಹಂಪಲು ಕೊಡ್ತಾ ಇರುತ್ತೆ. ಎಲ್ಲದರಿಂದಲೂ ಲಾಭ, ಹಣ ಗ್ಯಾರಂಟಿ. ಇನ್ನು ನಿಮ್ಮ ಫಾರ್ಮ್ ಸುತ್ತ ನಿಮ್ಮ ಸ್ನೇಹಿತರು neighbours ಆಗಬಹುದು. ಅವರ ತೋಟಕ್ಕೆ ಹೋಗಿ ಸಹಾಯ ಮಾಡಬಹುದು. ಅದಕ್ಕೂ ನಿಮಗೆ ಹಣ ಸಿಗತ್ತೆ. ಹೀಗೆ ಹಣ ಗಳಿಸ್ತಾ ಗಳಿಸ್ತಾ ಲೆವೆಲ್ ಜಾಸ್ತಿ ಮಾಡ್ಕೊಂಡು, ಫಾರ್ಮ್ ವಿಸ್ತೀರ್ಣ ಜಾಸ್ತಿ ಮಾಡ್ಕೊಂಡು, ನಿಮ್ಮ ಉಳಿದ ಸ್ನೇಹಿತರ ತೋಟಕ್ಕೆ ಗಿಫ್ಟ್ ಕೊಟ್ಕೊಂಡು ನಿಮ್ಮದೇ ಫಾರ್ಮ್ ನಲ್ಲಿ ನೀವೇ ಹೀರೋ ಆಗಿರಬಹುದು. ನೀವು ಫಾರ್ಮ್ ವಿಲ್ ನಲ್ಲಿ ಇಲ್ದೆ ಇದ್ರೆ ಈಗಲೇ ಫೇಸ್ ಬುಕ್ ಮೆಂಬರ್ ಆಗಿ. ನೀವು ಫಾರ್ಮಿಂಗ್ ಶುರು ಮಾಡಿ. ಪ್ರಗತಿ ಪರ ರೈತರಾಗಿ ಎಂದು ಹಾರೈಸ್ತೀನಿ.

. ಆದ್ರೆ ಒಂದು ನೆನಪಿರಲಿ, ನೀವು ಮಾಡಿದ ಫಾರ್ಮ್ ನ ಯಾರಿಗೂ ವಿಲ್ ಬರೆದು ಹೋಗೋಕೆ ಫಾರ್ಮ್ ವಿಲ್ ನಲ್ಲಿ ಅವಕಾಶ ಇಲ್ಲ…!!!

No comments:

Post a Comment

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು