ಆಚಾರ ವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಪ
ವಿಚಾರವಿಲ್ಲದೆ ಪರರದೂಷಿಪುದಕ್ಕೆ ಚಾಚಿ ಕೊಂಡಿರುವಂಥ ನಾಲಿಗೆ ಅಪ
ಪ್ರಾತ: ಕಾಲದೋಳೆದ್ದು ನಾಲಿಗೆ ಶ್ರೀಪತಿ ಎನ್ನಬಾರದೆ ನಾಲಿಗೆ
ಪತಿತಪಾವನ ನಮ್ಮ ರತಿಪತಿಜನಕನ ಸತತವು ನುಡಿ ಕಂಡ್ಯ ನಾಲಿಗೆ 1
ಛಾಡಿ ಹೇಳಲು ಬೇಡ ನಾಲಿಗೆ ನಿನ್ನ ಬೇಡಿಕೊಂಬೆನು ನಾಲಿಗೆ
ರೂಢಿಗೋಡೆಯ ಶ್ರೀ ರಾಮನ ನಾಮವ ಪಾಡುತಲಿರು ಕಂಡ್ಯ ನಾಲಿಗೆ 2
ಹರಿಯ ಸ್ಮರಣೆ ಮಾಡು ನಾಲಿಗೆ ನರಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರವಿಠಲರಾಯನ ಚರಣ ಕಮಲ ನೆನೆ ನಾಲಿಗೆ 3
===============================================================
ಗಿಳಿಯು ಪಂಜರದೊಳಿಲ್ಲ ರಾಮ ರಾಮ
ಗಿಳಿಯು ಪಂಜರದೊಳಿಲ್ಲ ರಾಮ ರಾಮ
ಬರಿದೆ ಪಂಜರವಾಯಿತಲ್ಲ ರಾಮ ರಾಮ
ಗಿಳಿಯು ಪಂಜರದೊಳಿಲ್ಲ ರಾಮ ರಾಮ
ಗಿಳಿಯು ಪಂಜರದೊಳಿಲ್ಲ ರಾಮ ರಾಮ
ಅಕ್ಕ ಕೇಳೆ ಎನ್ನ ಮಾತು ಚಿಕ್ಕದೊಂದು ಗಿಳಿಯ ಸಾಕಿ
ಅಕ್ಕ ನಾನಿಲ್ಲದ ವೇಳೆ ಬೆಕ್ಕು ಕೊಂಡು ಹೋಯಿತಯ್ಯೋ ರಾಮ ರಾಮ ಗಿಳಿಯು ಪಂಜರದೊಳಿಲ್ಲ
ಓಂಬತ್ತು ಬಾಗಿಲ ಮನೆಯಲ್ಲಿ ತುಂಬಿದ ಸಂದಣಿಯಿರಲು
ಕಂಬ ಮುರಿದು ಡಿಂಬ ಬಿದ್ದು ಅಂಬರಕ್ಕೆ ಹಾರಿತಯ್ಯೋ ರಾಮ ರಾಮ ಗಿಳಿಯು ಪಂಜರದೊಳಿಲ್ಲ
No comments:
Post a Comment