ಬೆಂಗಳೂರಿಗರ ಬಹು ನಿರೀಕ್ಷಿತ ಕನಸಿನ ಕೂಸು ಮೆಟ್ರೋ ರೈಲಿನ ಮೊದಲನೇ ಹಂತ, ಅಂತೂ ಇಂದು 20 ಅಕ್ಟೋಬರ್ 2011 ರಂದು 11 ಗಂಟೆಗೆ ಉಧ್ಘಾಟನೆ ಆಗಿದೆ. ಮಹಾತ್ಮಾ ಗಾಂಧಿ ರಸ್ತೆಯಿಂದ ಬೈಯಪ್ಪನಹಳ್ಳಿ ವರೆಗೆ ಈ ಮೆಟ್ರೋ ರೈಲು ಸಂಚರಿಸಲಿದೆ.ಸಂಪೂರ್ಣ ಹವಾ ನಿಯಂತ್ರಿತವಾಗಿರುವ ನಮ್ಮ ಮೆಟ್ರೋ ರೈಲು ಒಂದುಬಾರಿಗೆ ಒಂದು ಸಾವಿರ ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ. ರೈಲು ಬೋಗಿಯ ಒಳಗಿನ ಎರಡೂ ಬದಿಗಳಲ್ಲಿ ಸಿಸಿಟಿವಿ ಹಾಗೂ ಸೀಟಿನ ವ್ಯವಸ್ಥೆ ಮಾಡಲಾಗಿದೆ. 2006 ರಲ್ಲಿ ಆರಂಭವಾದ ಮೆಟ್ರೋ ಯೋಜನೆ ಕಾಮಗಾರಿ ಹಲವಾರು ಅಡೆತಡೆಗಳ ನಡುವೆಯೂ ಐದು ವರ್ಷಗಳ ನಂತರ ಪೂರ್ಣಗೊಂಡಿದ್ದು, ಗುರುವಾರ ಸಂಜೆ 4 ಗಂಟೆಗೆ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ. 2006 ರಲ್ಲಿ ಆರಂಭವಾದ ಮೆಟ್ರೋ ಯೋಜನೆ ಕಾಮಗಾರಿ ಹಲವಾರು ಅಡೆತಡೆಗಳ ನಡುವೆಯೂ ಐದು ವರ್ಷಗಳ ನಂತರ ಪೂರ್ಣಗೊಂಡಿದ್ದು, ಗುರುವಾರ ಸಂಜೆ 4 ಗಂಟೆಗೆ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ.
ದಕ್ಷಿಣ ಭಾರತದ ಮೊದಲ ಮೆಟ್ರೋ ರೈಲು ಸೇವೆ ಕೂಡ ಇದಾಗಿದೆ.
- ಎಂ.ಜಿ.ರಸ್ತೆ,
- ಟ್ರಿನಿಟಿ ರಸ್ತೆ
- ಇಂದಿರಾನಗರ
- ಸ್ವಾಮಿ ವಿವೇಕಾನಂದ ನಗರ
- ಬೈಯಪ್ಪನ ಹಳ್ಳಿ
ಎಂ.ಜಿ.ರಸ್ತೆ - ಟ್ರಿನಿಟಿ ರಸ್ತೆ : 1 ನಿಮಿಷ 30 ಸೆಕೆಂಡ್
ಟ್ರಿನಿಟಿ- ಹಲಸೂರು ರಸ್ತೆ : 1 ನಿಮಿಷ 33 ಸೆಕೆಂಡ್
ಹಲಸೂರು - ಇಂದಿರಾನಗರ : 1 ನಿಮಿಷ 45 ಸೆಕೆಂಡ್
ಇಂದಿರಾ ನಗರ- ಸ್ವಾಮಿ ವಿವೇಕಾನಂದ ನಗರ : 1 ನಿಮಿಷ 55 ಸೆಕೆಂಡ್
ಸ್ವಾಮಿ ವಿವೇಕಾನಂದ ನಗರ - ಬೈಯಪ್ಪನ ಹಳ್ಳಿ: 2 ನಿಮಿಷ
ಎಂ.ಜಿ.ರಸ್ತೆ - ಟ್ರಿನಿಟಿ ರಸ್ತೆ 10 ರೂ.
ಎಂ.ಜಿ ರಸ್ತೆ - ಹಲಸೂರು 12 ರೂ.
ಎಂ.ಜಿ.ರಸ್ತೆ -ಇಂದಿರಾ ನಗರ 12 ರೂ.
ಎಂ.ಜಿ.ರಸ್ತೆ - ಸ್ವಾಮಿ ವಿವೇಕಾನಂದ ನಿಲ್ದಾಣ 14 ರೂ.
ಎಂ.ಜಿ. ರಸ್ತೆ - ಬೈಯಪ್ಪನ ಹಳ್ಳಿ 15 ರೂ.
ಇನ್ನಷ್ಟು ಸುದ್ದಿಗಳು:
http://kannada.oneindia.in/news/2011/10/18/priyanka-bmrcl-metro-driver-kaggalipura-farmer-daughter-aid0039.htmlhttp://kannada.oneindia.in/news/2011/10/17/namma-metro-bmrcl-sanchar-saral-ಸರಾg-cards-aid0039.ಹ್ತ್ಮ್ಲ್
http://kannada.oneindia.in/news/2011/10/13/bmrcl-namma-metro-inauguration-security-arrangements-aid0039.html
No comments:
Post a Comment