Showing posts with label ಶ್ಯಮಂತಕ. Show all posts
Showing posts with label ಶ್ಯಮಂತಕ. Show all posts

Sunday, September 12, 2010

ಗಣೇಶ ಚತುರ್ಥಿ ಕಥೆ - ಸ್ಯಮಂತಕ -- ಶ್ರೀ ಸಿದ್ಧಿ ವಿನಾಯಕ ವ್ರತ


ಗಣೇಶ ಚತುರ್ಥಿ ಭಾರತದಲ್ಲಿ ವೈಭವದಿಂದ ಆಚರಿಸಲ್ಫಡುವ ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ನಾಲ್ಕನೇ ದಿನ, ಚತುರ್ಥಿ ದಿನ ಈ ಹಬ್ಬವನ್ನು ಆಚರಿಸುತ್ತೇವೆ. ಈ ಹಬ್ಬದಲ್ಲಿ ಮುಖ್ಯವಾಗಿ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪೂಜೆ ಮಾಡುತ್ತೇವೆ. ಇದಕ್ಕೆ ಸಿದ್ಧಿ ವಿನಾಯಕ ವ್ರತ ಎಂದು ಕೂಡ ಹೆಸರು.
ಗಣೇಶ ಚತುರ್ಥಿಯ ದಿನ ಚಂದ್ರ ದರ್ಶನ ಮಾಡಿದವರು "ಚೋರ" ನೆಂಬ ಅಪಖ್ಯಾತಿಗೆ ಗುರಿಯಾಗುತ್ತಾರೆ, ಎಂಬುದಕ್ಕೆ "ಶಮಂತಕಕೋಪಾಖ್ಯಾನ" ದ ಕಥೆ ಇದೆ. ಹಿಂದೆ ಸತ್ರಾರ್ಜಿತ ಎಂಬ ರಾಜನಿದ್ದನು. ಇವನು ತಪಸ್ಸು ಮಾಡಿ, ಸೂರ್ಯನಿಂದ ಶಮಂತಕ ಮಣಿಯನ್ನು ವರವಾಗಿ ಪಡೆದನು. ಇದು ಪ್ರತಿ ದಿನಕ್ಕೆ ೧೦ ತೊಲ ಬಂಗಾರ/ಚಿನ್ನ ಕೊಡುತ್ತಿತ್ತು. ಇದು ನಿನ್ನ ಬಳಿ ಇರಲು ಕ್ಷೇಮವಲ್ಲ ನನಗೆ ಕೊಡು ಎಂದು ಶ್ರೀ ಕೃಷ್ಣನು ಕೇಳುತ್ತಾನೆ. ಆದರೇ ಸತ್ರಾರ್ಜಿಥನು ಇದನ್ನು ನಿರಾಕರಿಸುತ್ತಾನೆ. ಒಮ್ಮೆ ಸತ್ರಾರ್ಜಿಥನ ತಮ್ಮನಾದ ಪ್ರಸೇನಜಿತನು ಮಣಿಯನ್ನು ಧರಿಸಿ ಕಾಡಿಗೆ ಬೇಟೆಗೆ ಹೋಗುತ್ತಾನೆ. ಇವನ ಕೊರಳಲ್ಲಿ ಫಳ ಫಳ ಹೊಳೆತ್ತಿದ್ದ ಮಣಿಯನ್ನು ಕಂಡು ಒಂದು ಸಿಂಹವು ಅವನನ್ನು ಕೊಂದು ತೆಗೆದುಕೊಂಡಿತು . ಇದನ್ನು ಜಾಂಬವನ್ತನು ಕಂಡು ಆ ಸಿಂಹವನ್ನು ಕೊಂದು ಮಣಿಯನ್ನು ಮನೆಗೆ ತೆಗೆದು ಕೊಂಡು ಹೋದನು. ಇದನ್ನು ತನ್ನ ಮನೆಯಾಲ್ಲಿರುವ ತೊಟ್ಟಿಲಿಗೆ ಕಟ್ಟಿದನು. ಇತ್ತ ಪ್ರಸೇನ ಜಿಥನು ಮನೆಗೆ ಹಿಂತಿರುಗ ದಿರುವುದನ್ನು ಕಂಡು, ಮಣಿಯ ಆಸೆಗಾಗಿ ಕೃಷ್ಣನೇ ಅವನನ್ನು ಕೊಂದಿದ್ದಾನೆ ಎಂದು ಸತ್ರಾರ್ಜಿತನು ಅಪಪ್ರಚಾರ ಮಾಡಿದನು.
ಅಪವಾದ ಹೊತ್ತ ಕೃಷ್ಣನು ಮಣಿಯನ್ನು ಹುಡುಕಿಕೊಂಡು ಕಾಡಿಗೆ ಪ್ರವೇಶಿಸಿದನು. ಕಾಡಿನಲ್ಲಿ ಪ್ರಸೆನಜಿಥನ ಕೊಂದ ಸ್ತಳದ ಬಳಿ ನಡೆದು, ಅಲ್ಲಿ ಸಿಂಹದ ಹೆಜ್ಜೆ ಗುರುತುಗಳನ್ನು ಕಂಡು, ಅದನ್ನು ಅನುಸರಿಸಿ ನಡೆದನು. ಹೀಗೆ ಜಾಂಬ ವನ್ಥನ ಗುಹೆಯನ್ನು ಪ್ರವೇಶಿಸಿ ಅಲ್ಲಿ ಹೊಳೆಯುತ್ತಿದ್ದ ಮಣಿಯನ್ನು ತೆಗೆದು ಕೊಳ್ಳಲು, ಜಾಂಬ ವನ್ಥನ ಪ್ರವೆಹ್ಸ್ವಾಯಿತು. ಇವರಿಬ್ಬರ ನಡುವೆ ೨೧ ದಿನಗಳ ಕಾಲ ಯುದ್ದ ನಡೆಯಿತು. ನಂತರ ತಾನು ರಾಮನ ಜೊತೆ ಯುದ್ದ ಮಾಡುತ್ತಿರುವುದು ಎಂದು ಜಾಮ್ಬವನ್ಥನಿಗೆ ಅರಿವಾಗಿ, ಯುದ್ದ ನಿಲ್ಲಿಸಿ, ಮಣಿಯನ್ನು ಕೊಟ್ಟು, ಮಗಳನ್ನು( ಜಾಂಬವತಿ) ಕೊಟ್ಟು ಶರಣು ಶರಣು ಎಂದು ಕಾಲಿಗೆ ಬಿದ್ದು, ಮಗಳನ್ನು ವಿವಾಹ ಮಾಡಿ ಕೊಟ್ಟನು. ಈ ಕಥೆಯನ್ನು ಚಂದ್ರ ದರ್ಶನ ಮಾಡಿದ ಆರೋಪದಿಂದ ಮುಕ್ತಿ ಹೊಂದಲು ಜನರು ಕಥೆ ಕೇಳಿ ಈ ಕೆಳಗಿನ ಶ್ಲೋಕಗಳನ್ನು ಹೇಳಿಕೊಳ್ಳುತ್ತಾರೆ.
ಸಿಂಹ: ಪ್ರಸೇನ ಮಧೇ: ಸಿಂಹೋ ಜಾಂಬ ವಂತಾ ಹತ :
ಸು ಕುಮಾರಕ ಕ ಮಾರೋಧಿ ತವ ಹ್ಯೇಶ: ಶ್ಯಮಂತಕಹ:

ಏಕ ದಂತಾಯ ವಿದ್ಮಹೇ, ವಕ್ರ ತುಂಡಾಯ ಧೀಮಹೆ, ತನ್ನೋ ದಂತಿ: ಪ್ರಚೋದಯಾತ್..
ವಕ್ರ ತುಂಡ ಮಹಾ ಕಾಯ ಕೋಟಿ ಸೂರ್ಯ ಸಮಪ್ರಭ, ನಿರ್ವಿಘ್ನಂ ಕುರುಮೆ ದೇವ ಸರ್ವ ಕಾರ್ಯೇಷು ಸರ್ವದ..
ಅ ಗಜಾನನ ಪದ್ಮಾರ್ಕಂ ಗಜಾನನ ಮಹಾರ್ನಿಶಂ, ಅನೇಕ ದಂತಂ ಭಕ್ತಾನಾಂ ಏಕ ದಂತಂ ಉಪಾಸ್ಮಹೆ...

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು