ಥಟ್ ಅಂಥ ಹೇಳಿ, ಇದು ದೂರದರ್ಶನ ಚಂದನದಲ್ಲಿ ಪ್ರಸಾರವಾಗುವ ಪ್ರಶ್ನೋತ್ತರ ಕಾರ್ಯಕ್ರಮ. ಇದು ತುಂಬ ಉತ್ತಮವಾಗಿ ಮೂಡಿಬರುತ್ತಿದೆ. ಅದೀಗ ಒಂದುಸಾವಿರದಿನ್ನೂರು ಕಂತುಗಳನ್ನು ಮುಗಿಸಿ ಮುನ್ನಡೆಯುತ್ತಿದೆ ಇಷ್ಟು ದಿನ ತೆರೆಯ ಮೇಲೆ ನೀವು ನೋಡುತ್ತಿದ್ದ ಈ ಕಾರ್ಯಕ್ರಮ ಈಗ ಅಂತರ್ಜಾಲದಲ್ಲಿ ನೀವೇ ಆಡಬಹುದು. ಕಾರ್ಯಕ್ರಮ ನಿರ್ವಹಿಸುವ ಡಾ.ನಾ.ಸೋಮೇಶ್ವರ ಅವರಿಗೆ ಕಾರ್ಯಕ್ರಮವನ್ನು ನೇರವಾಗಿ ನೋಡದವರಿಗೂ ಮತ್ತು ಆಸಕ್ತರಿಗೂ ಇದರ ಪ್ರಶ್ನೆಗಳನ್ನು ಮುಟ್ಟಿಸಬೇಕೆನ್ನುವ ಬಯಕೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕೇವಲ ಮೂರು ಜನರಾದರೆ,ಇತರರೂ ಭಾಗವಹಿಸಲು ಅವಕಾಶ ಸಿಗಬೇಕೆಂಬ ಹಂಬಲವೂ ಇತ್ತು.ಅದಕ್ಕಾಗಿ ಅವರು ಅಂತರ್ಜಾಲ ತಾಣ ಯಕ್ಷಪ್ರಶ್ನೆಯನ್ನು http://chiyabgs.typepad.com/yakshaprashne/ ಆರಂಭಿಸಿದ್ದಾರೆ. ಇದರ ಮೂಲಕ ನೋಂದಾಯಿಸಿಕೊಂಡರೆ ರಸಪ್ರಶ್ನೆಗಳು ರವಾನೆಯಾಗುತ್ತವೆ. ಸಂಪೂರ್ಣ ಸರಿಯುತ್ತರ ನೀಡಿದರೆ ಪ್ರಮಾಣಪತ್ರವೂ ಸಿಗಲಿದೆಯಂತೆ.ಧರ್ಮರಾಯನಿಗೆ ಯಮಧರ್ಮ ಪ್ರಶ್ನೆಗಳನ್ನು ಕೇಳಿದುದೇ ರಸಪ್ರಶ್ನೆಗಳ ಉಗಮವೆಂಬ ಅನಿಸಿಕೆಯೇ ಯಕ್ಷಪ್ರಶ್ನೆ ಎಂಬ ಹೆಸರಿನ ಆಯ್ಕೆಗೆ ಕಾರಣ. ಹಾಗಾದರೆ ನೀವು ರೆಡಿನಾ?
Wednesday, August 5, 2009
Subscribe to:
Post Comments (Atom)
No comments:
Post a Comment