Tuesday, August 4, 2009

ಧಾರವಾಡ ಕನ್ನಡ Vs ಬೆಂಗಳೂರು ಕನ್ನಡ --> ಬರ್ರೇಪಾ ಸ್ವಲ್ಪ Talk ಮಾಡುವಾ

ಮೊದಲಿನಿಂದಲೂ ಹಾಗೇನೇ, ಧಾರವಾಡ ಸೀಮೆಯವರ ಮಾತು ಎಂದರೆ ಬೆಂಗಳೂರು ಮಂದಿಗೆ ತಮಾಷೆ ಹಾಗೆಯೇ ಬೆಂಗಳೂರಿನ ಜನರ ಮಾತು ಎಂದರೆ ಧಾರವಾಡದ ಜನರ ಪಾಲಿಗೆ ಒಂಥರಾ ವಾಕರಿಕೆ . ಒಂದೇ ಮಾತು ಎರಡೂ ಕಡೆಯವರ ಭಾಷೆಯಲ್ಲಿ ಹೇಗೆ 'ಕೇಳಿಸುತ್ತದೆ' ಎಂಬುದಕ್ಕೆ ಇಲ್ಲಿ ಒಂದೆರಡಲ್ಲ , ಐದಾರು ಸಾಕ್ಷಿಗಳಿವೆ.

ಓದುತ್ತಾ ಓದುತ್ತಾ ನೀವು ಧಾರವಾಡದ ಆಸಾಮಿಯೋ ಬೆಂಗಳೂರಿನ ಅಣ್ಣಯನೋ ಆಗಿ ಹೋದರೆ; ಎರಡೂ ಸೀಮೆಗಳ ಡೈಲಾಗ್ ಹೇಳುತ್ತಾ ಹೇಳುತ್ತಾ ಹುಳ್ಳಗೆ ನಕ್ಕು ಹೊಟ್ಟೆ ನೋವು ಬರಿಸಿಕೊಂಡರೆ ನಾನು
ಜವಾಬ್ದಾರನಲ್ಲ.

ಈ ಸೂಚನೆಯನ್ನು ಮೊದಲೇ ಗಮನಿಸಿ, ನಂತರವೇ ಬೆಂಗಳೂರು - ಧಾರವಾಡ ಮಂಡಿಯ ಡೈಲಾಗ್ ಓದಲು ಆರಂಭಿಸಿ.
ಬೆಂಗಳೂರಿನವ: ಏನ್ಸಾರ್, ಚೆನ್ನಾಗಿದಿರಾ ?

ಧಾರವಾಡದವ: ಏನ್ರೀ ಸರಾ, ಆರಾಮೆನ್ರಿ?
*******
ಬೆಂಗಳೂರಿನವ: ಎಷ್ಟು ಚೆನ್ನಾಗಿ ಮಾತಾಡ್ತಾರೆ ಅವರು, ಭೇಷ್
ಧಾರವಾಡದವ: ಅವನವ್ನ ಸೂಳಿ ಮಗ, ಎಷ್ಟ್ ಚಲೋ ಮಾತಾಡ್ತಾನ, ನೋಡಲೇ, ಶಾಬಾಶ್ ಮಗ್ನ
*******
ಬೆಂಗಳೂರಿನವ: ನಾ ಏನೋ ಹೇಳಿದ್ರೆ, ಅವ್ರು ಇನ್ನೇನೋ ಮಾಡ್ತಾರೆ!
ಧಾರವಾಡದವ: ಅಲೇ ಇವ್ನ ಅಪ್ನ ಹಿಂಗ್ಯಾಕಲೆ? ಹೆಗಲಾಗಿಂದ ತಗಿ ಅಂದ್ರ ಬಗಲಾಗಿಂದ ತಗೀತಾನಲ್ಲಲೇ
******
ಬೆಂಗಳೂರಿನವ: ಏನ್ ಮಗಾ, ಫಿಗರ್ ಗೆ ಕಾಳ್ ಹಾಕ್ತಾ ಇದಿಯಾ ?
ಧಾರವಾಡದವ: ಏನ್ ಲೇ, ಬೋಸುಡಿಕೆ, ಲೈನ್ ಹೊಡ್ಯಾ ಕತ್ತಿಯೇನಲೇ .. ಯಾವಾಕಿಲೆ ಆಕೆ ?
******
ಬೆಂಗಳೂರಿನವ: ಕಳ್ಳ ನನ್ನ ಮಗಾ, ಎಲ್ಲಿ ಹೋದ್ನೋ ಇನ್ನೂ ಬರಲಿಲ್ಲ
ಧಾರವಾಡದವ: ತುಡುಗ್ ಸೂ.. ನನ್ಮಗ ಸಂಜಿ ಮುಂದಾ ಈ ಕಡೇ ಹೊದ್ನಲೆ ಹಾಳಾಗಿ , ಇನ್ನೂ ಬಂದಿಲ್ಲ
******
ಬೆಂಗಳೂರಿನವ: ಏನಂಕಲ್ ತಿಂಡಿ ಆಯ್ತಾ ?
ಧಾರವಾಡದವ: ಏನ್ರೀ ಕಾಕಾ, ತಿಂಡಿ ಆಯ್ತಿಲ್ ...
******
ಬೆಂಗಳೂರಿನವ: ನಮಸ್ಕಾರ
ಧಾರವಾಡದವ: ಶರಣು ಶರಣಾರ್ತಿ!

1 comment:

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು