Saturday, July 3, 2010

ನನ್ನ ಅಮೇರಿಕಾ ಜೀವನ.........ಭಾಗ 4 -- ಅಮೆರಿಕಾದ ಸ್ವಾತಂತ್ರ್ಯ ದಿನ

ಭಾರತದಲ್ಲಿರುವಂತೆಯೇ, ಇಲ್ಲಿಯೂ ಕೂಡ ಸ್ವಾತಂತ್ರ್ಯ ದಿನ ಇದೆ. ಇಲ್ಲಿನ ರಾಷ್ಟ್ರೀಯ ಹಬ್ಬಗಳಲ್ಲಿ ಇದು ಒಂದು. ಪ್ರತಿ ವರ್ಷ ಜುಲೈ 4 ರಂದು, ಅಮೇರಿಕಾದಲ್ಲಿ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುತ್ತಾರೆ. ಈ ಸಂಭ್ರಮ ಯಾವಾಗಲೂ ಜುಲೈ ತಿಂಗಳ ನಾಲ್ಕನೇ ತಾರೀಖಿನ ಆಸುಪಾಸಿನಲ್ಲಿ, ವಾರಾಂತ್ಯವನ್ನು ಸೇರಿಸಿಕೊಂಡು ಜರುಗುತ್ತದೆ. ಅಂದರೆ ಈ ಬಾರಿ ಶುಕ್ರವಾರ ಜುಲೈ ಎರಡರಿಂದ ಹಿಡಿದು, ಸೋಮವಾರ ಜುಲೈ ಐದರ ವರೆಗೆ ನಡೆಯಿತು. ಇಲ್ಲಿನ ಸ್ವಾತಂತ್ರ್ಯ ದಿನಗಳ ಕಾರ್ಯಕ್ರಮಗಳು ನಡೆಯುವ ರೀತಿ, ಜಾಗ ಇದನ್ನೆಲ್ಲಾ ತಿಳಿದುಕೊಂಡು, ಇದನ್ನು ನೋಡಲು ನಾವು ಅಣಿಯಾದೆವು. ವಾಸ್ತವವಾಗಿ ಈ ಕಾರ್ಯಕ್ರಮಗಳು ನಡೆಯುವ ರೀತಿ, ಅವುಗಳಲ್ಲಿ ಪಾಲ್ಗೊಳ್ಳುವ ಜನರ ಬಗ್ಗೆ ಸಹಜವಾಗಿಯೇ ನನಗೆ ಬಹಳ ಆಸಕ್ತಿ ಇತ್ತು. ಹಿಂದೆಂದೋ, ಕಾರ್ಯಕ್ರಮಗಳು ನಡೆದ ಬಗ್ಗೆ ವರದಿ ಓದುವುದಕ್ಕೂ, ಅಲ್ಲಿ ಸೇರಿದ ಜನರೊಡನೆ ಒಬ್ಬನಾಗಿ ಭಾಗಿಯಾಗುವುದಕ್ಕೂ ವ್ಯತ್ಯಾಸವಿಲ್ಲವೇ?



ಜುಲೈ 3 ರ ಸಂಜೆ ಕಾರ್ಯಕ್ರಮಗಳ ವೀಕ್ಷಣೆ ನೋಡಲು ಹೋಗುವುದು ಎಂದು ನಿರ್ಧರಿಸಿದೆವು. ನಾವು ಹೋಗಬೇಕಾದ ಸ್ತಳ, ಹೋಟೆಲ್ನಿಂದ ದೂರದಲ್ಲಿತ್ತು. ಹೇಗೆ ಹೋಗುವುದು ಎಂಬುದೇ ಪ್ರಶ್ನೆ. ನಮ್ಮ ಅನುಕೂಲಕ್ಕೆ, ಸ್ನೇಹಿತನಾದ ಪ್ರದೀಪ್ ದೂರವಾಣಿ ಕರೆ ಮಾಡಿ, ಅವನು ಅಲ್ಲಿಗೆ ಹೋಗುತ್ತಿರುವುದನ್ನು ತಿಳಿಸಿದ, ಹಾಗು ಅವನು ಅಲ್ಲಿಗೆ, ತನ್ನ ಕಾರಿನಲ್ಲಿ ಒಬ್ಬನೇ ಹೋಗುತ್ತಿರುವುದನ್ನು ತಿಳಿಸಿದ. ನಾವು (ನಾನು, ಗಿರೀಶ್ ಮತ್ತು ಪ್ರಶಾಂತ) ಕೂಡ ಬೇಕಾದಲ್ಲಿ ಅವನ ಜೊತೆ ಬರಬಹುದು ಎಂದು ಕೂಡ ತಿಳಿಸಿದ. ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದರೆ ಬಾಣ ಬಿರುಸುಗಳ(Fire Works) ಪ್ರದರ್ಶನ. ಇದು ರಾತ್ರಿ ಹತ್ತು ಗಂಟೆಗೆ ಪ್ರಾರಂಭವಾಗುತ್ತದೆ ಎಂದು ನಮಗೆ ಮೊದಲೇ ತಿಳಿದಿತ್ತು. ಅದಕ್ಕಾಗಿ ನಾವು ಹೋಟೆಲನ್ನು ರಾತ್ರಿ 8.30ಕ್ಕೆ ಬಿಟ್ಟೆವು. ಆ ಸಮಯದಲ್ಲಿ ಕೂಡ ಇಲ್ಲಿ ಉರಿ ಉರಿ ಬಿಸಿಲು. ಇನ್ನೇನು ಸೂರ್ಯಾಸ್ತದ ಸಮಯ ಹತ್ತಿರ ಬಂದಿತ್ತು, ಎಲ್ಲೆಲ್ಲಿ ಕಣ್ಣು ಹಾಯಿಸಿದರೂ ಹಸಿರುಡುಗೆ ತೊಟ್ಟ, ಬಣ್ಣ ಬಣ್ಣದ ಹೂವುಗಳಿಂದ ನಲಿಯುವ ರಮ್ಯ ನೋಟ. ಇಲ್ಲಿಗೆ ಹೋಗಲು ನಮಗೆ ರಸ್ತೆ ಗೊತ್ತಿಲ್ಲ, ಆದರೇ GPS ಇದೆಯಲ್ಲ. ಇದು ನಮ್ಮ ಚಿಂತೆಯನ್ನು ದೂರ ಮಾಡಿತು. ನಾವು ಹೊರಡುತ್ತಿರುವ ಮತ್ತು ತಲುಪಬೇಕಾದ ಸ್ಥಳವನ್ನು ಅದರಲ್ಲಿ ನಮೂದಿಸಿದಾಗ, ಅದು ನಮಗೆ ರಸ್ತೆಯ ಮಾರ್ಗ ತೋರಿಸಿತು. ಕಾರಿನಲ್ಲಿ ಗ್ಯಾಸ್ ಮುಗಿಯುವ ಹಂತದಲ್ಲಿ, ಇತ್ತು. ಅದಕ್ಕೆ ಮಾರ್ಗ ಮದ್ಯೆ ತುಂಬಿಸಲು ನಿಲ್ಲಿಸಿದೆವು. ಇಲ್ಲಿ ಭಾರತದ ಪೆಟ್ರೋಲ್ ಬಂಕ್ ಗಳಲ್ಲಿ ಇರುವಂತೆ ಯಾರೂ ಸಹಾಯಕರು ಇರಲಿಲ್ಲ. ನಮ್ಮ ಕಾರಿಗೆ ಇಂದನ ನಾವೇ ತುಂಬಿಸಿ ಕೊಳ್ಳ ಬೇಕು. ಹಣ ಕಟ್ಟುವ ಬಗೆ ಕೇಳ್ತೀರಾ, ಇಲ್ಲಿ ಎಲ್ಲಾ ಪ್ಲಾಸ್ಟಿಕ್ ಕಾರ್ಡ್ ಗಳಿಂದಲೇ ಕೆಲಸ ನಡೆಯೋದು. ಪ್ರದೀಪನು, ತನ್ನ ಬಳಿ ಇದ್ದ ಕಾರ್ಡ್ ಅನ್ನು ಉಪಯೋಗಿಸಿ, ಗ್ಯಾಸ್ ತುಂಬಿ ಸಿದನು. ಇನ್ನೊಂದ್ ವಿಷಯ ಅಂದರೆ ಇಲ್ಲಿ ಪ್ರತಿ ದಿನ ಪೆಟ್ರೋಲ್, ಗ್ಯಾಸ್, ಬೆಲೆ ಬದಲಾಗುತ್ತಿರುತ್ತೆ. ಇಲ್ಲಿನ ಅಳತೆಯ ಮಾಪನ ಭಾರತಕಿಂತಾ ಬಿನ್ನನೆ. ಇಲ್ಲಿ ದ್ರವ ಪದಾರ್ಥಗಳನ್ನು ಗ್ಯಾಲನ್ ನಲ್ಲಿ ಅಳತೆ ಮಾಡುತ್ತಾರೆ. ಒಂದು ಗ್ಯಾಲ್ಲನ್ ಗೆ ಸುಮಾರು 3.78541178 ಲೀಟರ್ ಗಳು. ನಡೆಯುವ ಕೂಡ ಕಡಿಮೇನೆ. ನಾವು ಒಂದು ಗ್ಯಾಲ್ಲನ್ ತುಂಬಿಸಿ ಮುಂದೆ ನಡೆದೆವು. DownTown, ಇದೆ ಪ್ರದೇಶದಲ್ಲಿ ಬಾಣ ಬಿರುಸುಗಳ(Fire Works) ಪ್ರದರ್ಶನ ನಡೆಯುತ್ತದೆ. ಇದು ನಮ್ಮ ಬೆಂಗಳೂರಿನ ಮಹಾತ್ಮಾಗಾಂಧಿ ರಸ್ತೆ ತರಹದ್ದು. ಇದನ್ನು ನಾವು ಕೋಲಂಬಸ್ ನ Majestic ಅಂತ ಕೂಡ ಕರೆಯಬಹುದು. ಇಲ್ಲೇ ಕೋಲಂಬಸ್ ನ ಸಾರ್ವಜನಿಕ ಬಸ್ ಸೇವೆ COTA ದ ಮುಖ್ಯ ನಿಲ್ದಾಣ ಇರುವುದು. ಈ DownTown ನಲ್ಲೆ ನೀವು ಕೋಲಂಬಸ್ ನ ನಿಜವಾದ ಅಮೆರಿಕ ಕಾಣಬಹುದು. ಇಲ್ಲಿಗೆ ನಾವು ಸೇರಿದಾಗ 9 ಗಂಟೆಯಾಗಿತ್ತು. ನಾವು ನಮ್ಮ ಕಾರನ್ನು ನಿಲ್ಲಿಸಿ ಪ್ರದರ್ಶನ ನೋಡಬೇಕಲ್ಲವೇ. ಇದನ್ನು ನಿಲ್ಲಿಸಲು ನಾವು ಪಟ್ಟ ಹರ ಸಾಹಸ ಕೇಳಬೇಡಿ. ಅಂತು ಇಂತೂ ಹತ್ತಿರದ ಎಲ್ಲ ಕಾರು ನಿಲ್ದಾಣಗಳನ್ನು ತಿರುಗಿ ತಿರುಗಿ, ಕೊನೆಗೆ 10 ಡಾಲರ್ ಗೆ ಒಂದು ಕಡೆ ನಿಲ್ಲಿಸಿದೆವು. 5 ಡಾಲರ್ ಕನಿಷ್ಠ ಬೆಲೆ, ಒಂದು ಗಂಟೆಗೆ . ಸ್ವಾತಂತ್ರ್ಯ ದಿನವಾದ್ದರಿಂದ 10 ಡಾಲರ್ ಗೆ ಬೆಳಗ್ಗೆ 6 ಗಂಟೆಯವರೆಗೆ ನಿಲ್ಲಿಸಬಹುದಿತ್ತು. ಹಾಗು ಹೀಗೂ ಇದರಲ್ಲೇ ಸ್ವಲ್ಪ ಸಮಯ ವ್ಯರ್ಥ ಆಯಿತು. ನಾವು ಪ್ರದರ್ಶನಕ್ಕೆ ಹೋಗೋ ಹೊತ್ತಿಗೆ 9.45 ಆಗಿತ್ತು. ಕೋಲಂಬಸ್ ನ ಜನ ಜಂಗುಳಿ ಚೆನ್ನಾಗಿಯೇ ಸೇರಿತ್ತು. ಸರಿಯಾಗಿ ಹತ್ತು ಗಂಟೆಗೆ Fire Works ಪ್ರಾರಂಭ ಆಯಿತು. ಇದನ್ನು ನೋಡಲು ಎರಡು ಕಣ್ಣು ಸಾಲದು ಆನಿಸಿತು ನನಗೆ. ಪ್ರದರ್ಶನ ಸುಮರೆ 30 ನಿಮಿಷಗಳು ನಡೆಯಿತು. ಇನ್ನೇನು ಮುಗಿಯೋ ಸಮಯ ಬಂದಾಗ ಅತಿ ಅಧ್ಬುತವಾಗಿತ್ತು. ಬರಿ ಕಣ್ಣಿನಿಂದ ನೋಡೋದೇ ಅಲ್ಲ, ಇದರ ಶಬ್ದ ಕೂಡ ಕಿವಿಗೆ ಇಂಪಾಗಿತ್ತು. ನಾನು ಮತ್ತು ಎಲ್ಲ ಸ್ನೇಹಿತರು ಇದರ ಛಾಯಾ ಚಿತ್ರಗಳನ್ನು ತೆಗೆದು ಕೊಂಡೆವು. ನಂತರ DownTown ನಲ್ಲಿ ಸ್ವಲ್ಪ ವಿಹಾರ ಮಾಡಿ, ನಮ್ಮ ಕಾರು ನಿಲ್ಲಿಸಿದ ಜಾಗಕ್ಕೆ ಬಂದೆವು. ಇಲ್ಲಿಂದ ಕಾರು ತೆಗೆದುವುದು ಇನ್ನೊಂದು ನರಕ ಸದೃಶ. ಆದರೇ ಇಲ್ಲಿಂದ ಅದನ್ನು ಎಲ್ಲ ಜನ ಸಾಲಿನಲ್ಲಿ ತೆಗೆಯುವ ಪದ್ಧತಿ ಇಷ್ಟ ಆಯಿತು. ಎಲ್ಲರೂ ಒಮ್ಮೆಲೇ ತೆಗೆದು, ನಗರದಲ್ಲಿ Traffic Jam ಮಾಡುವ ಬದಲು, ಒಬ್ಬೊಬ್ಬರೇ ಅವರವರ ಕಾರನ್ನು ಒಂದೇ ಸಾಲಿನಲ್ಲಿ ಮುಂದಕ್ಕೆ ದಾಟಿ ಹೋಗದೆ (Instead of Overtaking) ಹೊರಗೆ ಹೋಗುತ್ತಿದ್ದ ದೃಶ್ಯ ನನ್ನ ಮನ ಮುಟ್ಟಿತು. ನಮ್ಮ ಭಾರತ ದಲ್ಲೂ ಇದೆ ತರಹ ಜನ ಅರ್ಥ ಮಾಡಿಕೊಂಡು ವಾಹನ ಓಡಿಸಿದರೆ, ಅದೇ Traffic Jam ಅಲ್ಲೂ ಆಗುವುದಿಲ್ಲ. ನಿಲ್ದಾಣದಿಂದ ಹೊರಗೆ ಬಂದಾಗ ಸಮಯ 12 ಆಗಿತ್ತು. ಮತ್ತೆ ಪ್ರದೀಪನೆ ನಮ್ಮನ್ನು ಹೋಟೆಲ್ ತಲುಪಿಸಿದಾಗ ಸಮಯ 12.೩೦. ಇದೆ ತರಹ ಪ್ರದರ್ಶನ ಇನ್ನೂ ೩ ದಿನ ನಗರದ ವಿವಿದೆಡೆ ನಡೆಯುತ್ತೆ. ಆದರೇ ನಾವು ಹೋಗಲ್ಲ. ಕಾರಣ ನಿಮಗೆ ಗೊತ್ತೇ ಇರುತ್ತೆ. ಅದೇ ವಾಹನ ಸೌಲಭ್ಯ ನಮ್ಮ ಬಳಿ ಇಲ್ಲ ನೋಡಿ. ಮುಂದೆ ಇನ್ನೂ ಕೆಲವು ದಿನ ಗಳಲ್ಲಿ ಹೋಟೆಲ್ ನಿಂದ ಮನೆಗೆ ಹೋಗುತ್ತಿದ್ದೇನೆ. ಇದರ ಬಗ್ಗೆ ಮುಂದಿನ ಲೇಖನದಲ್ಲಿ ಹೇಳುತ್ತೇನೆ.

No comments:

Post a Comment

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು