ಇಲ್ಲಿನ ಸರ್ಕಾರದ ಮುಖ್ಯ ಗುರಿ ಅಂದರೆ ಸುಖಖರ ಪ್ರಯಾಣ. ನೀವು ಯಾವುದೇ ತರಹದ ಪ್ರಯಾಣ ಮಾಡಿ, ಕೊನೆಗೆ ಸುಖವಾಗಿ ಮನೆ ಸೇರುತ್ತಿರ. ನೀವು ವಿಶ್ವದ ಅತ್ಯುತ್ತಮ ಹೆದ್ದಾರಿಗಳನ್ನು ನೋಡಿಲ್ಲವೇ ? ಹಾಗಿದ್ದರೆ ಅಮೆರಿಕ ಕ್ಕೆ ಬರಲು ಅದು ಒಂದು ಕಾರಣ ಇರಬಹುದು. ಇಲ್ಲಿನ ರಸ್ತೆಗಳನ್ನು ನೋಡಲು, ಪ್ರಯಾಣ ಮಾಡಲು ನೀವು ಅದೃಷ್ಟ ಮಾಡಿರಬೇಕು. ಆಕಾಶದ ಎತ್ತರಕ್ಕೆ ಬೆಳೆದು ನಿಂತ ಮೇಲ್ಸೇತುವೆಗಳು, ಬರಿ ಅಮೆರಿಕ ದಲ್ಲೇ ಕಾಣಲು ಸಾಧ್ಯ. ಕೆಲವೊಮ್ಮೆ ಇದೆ ಮೇಲ್ಸೇತುವೆಗಳ ಮೇಲೆ ಪ್ರಯಾಣ ಮಾಡುವಾಗ ಕೆಳಗೆ ನೋಡಿದರೆ ಮೈ ಜುಮ್ ಎನಿಸುತ್ತದೆ. ಇಲ್ಲಿನ ರಸ್ತೆಗಳನ್ನು ಟಾರ್ ಅಥವಾ ಸಿಮೆಂಟ್ ಕಾಂಕ್ರೀಟ್ ಉಪಯೋಗಿಸಿ ನಿರ್ಮಿಸಿರುತ್ತಾರೆ. ಇಲ್ಲಿಯೂ ಕೂಡ ಕಾ೦ಟ್ರ್ಯಾಕ್ಟರು ಗಳೇ ಟೆಂಡರ್ ಪದ್ದತಿಯ ಮೂಲಕವೇ ರಸ್ತೆ ನಿರ್ಮಿಸುತ್ತಾರೆ. ಆದರೇ, ಹಣ ತಿನ್ನುವುದು, ದೋಚುವುದು ಕಂಡು ಬರುವುದಿಲ್ಲ. ಮುಖ್ಯವಾಗಿ ನೀವು ಬೇಕಾದಷ್ಟುಮೇಲ್ಸೇತುವೆಗಳನ್ನು ಇಲ್ಲಿ ಕಾಣ ಬಹುದು. ಇಂದಿನ ವರೆಗೆ ನಾನು ಇಲ್ಲಿ ರಸ್ತೆ ರಿಪೇರಿ ಮಾಡಿದ್ದನ್ನು ಕಂಡೆ ಇಲ್ಲ. ಹಾಗೇನಾದರು ರಿಪೇರಿ ನಡೆಯುತ್ತಿದ್ದರೆ ನೀವು ಸೂಚನಾ ಫಲಕಗಳನ್ನು ನೋಡುತ್ತೀರಾ ಮತ್ತು ಪರ್ಯಾಯ ರಸ್ತೆಗಳ ಬಗ್ಗೆ ಕೂಡ ಅದರಲ್ಲಿ ಸೂಚಿಸಿರುತ್ತಾರೆ. ಪ್ರತಿಯೊಂದು ಸಣ್ಣ, ದೊಡ್ಡ ರಸ್ತೆಗಳಲ್ಲೂ ಟ್ರಾಕ್ ಅಥವಾ ಲೇನ್ ಗಳನ್ನೂ ನೀವು ಕಾಣಬಹುದು. ರಸ್ತೆಯ ಉದ್ದಕ್ಕೂ ನೀವು ಅದೇ ಲೇನ್ ನಲ್ಲಿ ವಾಹನ ಓಡಿಸಬೇಕು. ಪ್ರತಿಯೊಂದು ರಸ್ತೆಯು ಜೋಡಿ ರಸ್ತೆಯಾಗಿರುತ್ತದೆ. ಒಂದು ಬದಿ ನೀವು ಅತಿ ಕಡಿಮೆ ಎಂದರೆ ಮೂರು ಲೇನ್ ಗಳನ್ನೂ ಕಾಣಬಹುದು. ಒಂದು ನೇರವಾಗಿ ಹೋಗಲು, ಎರಡನೆಯದು ಬಲಕ್ಕೆ ತಿರುಗಲು, ಮೂರನೆಯದು ಎಡಕ್ಕೆ ತಿರುಗಲು ಆಗಿರುತ್ತದೆ. ಪ್ರತಿ ಲೇನ್ ಗಳು ೧೨ ರಿಂದ ೧೪ ಅಡಿ ಆಗಿರುತ್ತದೆ. ಇನ್ನೂ ಎಲ್ಲಾ ರಸ್ತೆಗಳ ಬದಿಯಲ್ಲೂ ಪಾದಚಾರಿ ಮಾರ್ಗವಿರುತ್ತದೆ. ಪಾದಚಾರಿ ಮಾರ್ಗ ಮತ್ತು ಮುಖ್ಯ ರಸ್ತೆಯ ಮದ್ಯೆ ಹುಲ್ಲಿನ ಹಾಸು ಇರುತ್ತದೆ. ಎಲ್ಲಿ ನೋಡಿದರು ನಿಮಗೆ ಇಲ್ಲಿ ಮಣ್ಣೇ ಕಾಣಿಸುವುದಿಲ್ಲ, ಹಾಗೆ ಹುಲ್ಲು ಹಾಸು ಹಾಕಿ ರಸ್ತೆ ಮಾಡಿರುತ್ತಾರೆ. ನಿಮಗೆ ಎಲ್ಲೂ ಮಣ್ಣಿನ ನೆಲ ಗೋಚರಿಸುವುದೇ ಇಲ್ಲ. ಇನ್ನೂ ಹೊಂಡ, ಧೂಳು ಎಲ್ಲಿಂದ ಬರಬೇಕು ಹೇಳಿ. ನಿಮ್ಮ ವಾಹನ ತೊಳೆಯೋದೆ ಬೇಕಿಲ್ಲ. ಹಾಗೆ ಪಾದಚಾರಿಗಳಿಗೆ ಅವರ ಶೂ ಪಾಲಿಶ್ ಮಾಡೋದೇ ಬೇಕಿಲ್ಲ. ನೋಡಿ ಹೀಗೆ ಪಾದಚಾರಿ ಮಾರ್ಗ ಇದ್ದರೂ ಇಲ್ಲಿ ನಡೆಯೋರು ಬಹಳ ಕಡಿಮೆ. ಇಲ್ಲಿನ ಜನ ನಡೆಯೋದು ಕಡಿಮೆ. ಎಲ್ಲರ ಬಳಿ ಕಾರು ಇದ್ದೆ ಇರುತ್ತೆ. ಎಲ್ಲಿಗೆ ಹೋಗಬೇಕಾದ್ರು ಕಾರು ಏರಿ ಹೋಗುತ್ತಾರೆ. ಬರಿ ನಾಯಿ ಇದ್ದರೆ ಮಾತ್ರ ಸ್ವಲ್ಪ, ಅಂಥಹವರು ನಾಯಿ ಜೊತೆ ನಡೆದು ಕೊಂಡು ಹೋಗ್ತಾರೆ. ಹಾಗೇನೆ ಸಂಚಾರಿ ಸೂಚನಾ ಕಂಬ (Traffic Signal) ದಾಟೋದು ಬಹಳ ಕಷ್ಟ. ಎಲ್ಲೆಂದರೆ ಅಲ್ಲಿ ದಾಟೋ ಹಾಗೆ ಇಲ್ಲ. ಬರೀ ವೃತ್ತ ಮತ್ತು ಚೌಕ ಗಳಲ್ಲಿ (Circle & Square) ಮಾತ್ರ ದಾಟ ಬೇಕು. ಅದೂ ಪಾದಚಾರಿ ಸೂಚನೆ ಕಂಬದಲ್ಲಿ ಮೂಡಿದಾಗ ಮಾತ್ರ. ದೊಡ್ಡ ದೊಡ್ಡ ರಸ್ತೆಗಳನ್ನು ದಾಟೋದು ಇನ್ನೂ ಬಹಳ ಕಷ್ಟ. ಇಲ್ಲಿ ಕಂಬದಲ್ಲಿ ಒಂದು switch ಕೊಟ್ಟಿರುತ್ತಾರೆ . ಅದನ್ನು ಒತ್ತಿ ಸ್ವಲ್ಪ ಸಮಯ ಕಾದ ಮೇಲೆ, ಕಂಬದಲ್ಲಿ ಪಾದಚಾರಿ ದಾಟುವ ಸೂಚನೆ ಮೂಡುತ್ತದೆ. ಆಗಲೇ ನಾವು ಆ ರಸ್ತೆಯನ್ನು ದಾಟಬೇಕು. ಇನ್ನೂ ಎಲ್ಲಾ ರಸ್ತೆಗಳು ಸಮತಟ್ಟಾಗಿ ಇರುತ್ತವೆ. ಎಲ್ಲೂ ನೀವು ಉಬ್ಬು ತಗ್ಗಿನ ರಸ್ತೆಗಳನ್ನು ಕಾಣುವುದಿಲ್ಲ. ಒಂದು ನಗರ ಬಿಟ್ಟು ಇನ್ನೊಂದು ನಗರಕ್ಕೆ ಹೋಗುವಾಗ ನಿಮಗೆ ಹೆದ್ದಾರಿಗಳ ದರ್ಶನ ಆಗುತ್ತದೆ. ಈ ಹೆದ್ದಾರಿಗಳು ಎಷ್ಟು ನೇರವಾಗಿ ಇರುತ್ತದೆ ಎಂದರೆ ನೀವು ಬಹುಷಃ ಅಳತೆ ಪಟ್ಟಿ (Scale) ಇಟ್ಟು, ಅಳತೆ ಮಾಡಬೇಕೇನೋ ಅನಿಸುತ್ತದೆ. ಈ ಹೆದ್ದಾರಿಗಳಲ್ಲಿ ನೀವು ಕಡಿಮೆ ಅಂದರೆ ೬೦ ರಿಂದ ೮೦ ಮೈಲಿ ವೇಗದಲ್ಲಿ ವಾಹನ ಚಲಾಯಿಸಬೇಕು. ಅಕಸ್ಮಾತ್ ವೇಗ ಕಡಿಮೆ ಆದರೇ, ಅದೇ ವೇಗದ ಲೇನ್ ಗೆ ವಾಹನ, ಸೂಚನೆ ಕೊಟ್ಟು ಬದಲಾಯಿಸಬೇಕು. ಇನ್ನೂ ಹೆದ್ದಾರಿಯಿಂದ ಹೊರಗೆ ಹೋಗಬೇಕಾದಲ್ಲಿ Exit ಇರುತ್ತದೆ. ಇದನ್ನು ಉಪಯೋಗಿಸಿ ನಾವು ಬೇರೆ ರಸ್ತೆಗೆ ಸೇರಿಕೊಳ್ಳಬಹುದು. ಇದೆ ಇಲ್ಲಿ ಮುಖ್ಯವಾದದ್ದು. ಯಾರನ್ನಾದರೂ ನೀವು ರಸ್ತೆ ಕೇಳಿದರೆ ಎಡ ಬಲ ಅಂತ ಹೇಳಲ್ಲ, Go By I 71, take Exit 308 A, ಹೀಗೆ ಹೇಳುತ್ತಾರೆ. ಈ ವ್ಯವಸ್ತೆ ತುಂಬ ಚೆನ್ನಾಗಿದೆ. ಬಹುಷಃ ನಮ್ಮ ಭಾರತದ ಸಿವಿಲ್ ಅಭಿಯಂತರರು ಇದನ್ನು ಸ್ಟಡಿ ಮಾಡಿ, ಅಲ್ಲಿ ರಸ್ತೆಗಳನ್ನು ನಿರ್ಮಿಸಲು ಉಪಯೋಗಿಸಿದರೆ, ಸ್ವಲ್ಪ ತ್ರಾಸ ಕಡಿಮೆ ಆಗುತ್ತೋ ಏನೋ .ಇಲ್ಲಿನ ರಸ್ತೆಗಳಲ್ಲಿ ವಾಹನ ಓಡಿಸುವುದು ಎಂದರೆ ಜನಕ್ಕೆ ಮೋಜಿನ ತರಹ. ಇನ್ನೊಂದು ವಿಶೇಷ ಅಂದರೆ ಇಲ್ಲಿ ಯಾರೂ "Horn" ಮಾಡುವುದಿಲ್ಲ. ವಾಹನದಲ್ಲಿ "ಹಾರ್ನ್" ಇಲ್ಲ ಅಂತಲ್ಲ, ಇರುತ್ತೆ ಆದರೇ ವಾಹನ ನಿಲ್ಲಿಸಿ ದಾರಿ ನೋಡಿ, ದಾರಿ ಕೊಡುತ್ತಾರೆ. ಇದರಿಂದ ಶಬ್ದ ಮಾಲಿನ್ಯ ಅಂತು ಇಲ್ವೆ ಇಲ್ಲ. ಶಬ್ದ ಮಾಡೋದು ಬೈಗುಳಕ್ಕೆ ಸಮಾನ. ಅಕಸ್ಮಾತ್ ನೀವೇನಾದ್ರು ಹಾರ್ನ್ ಮಾಡಿದರೆ ಅಲ್ಲಿ ಏನೋ ಅಪಾಯ ಅಂತ ಅರ್ಥ. ಹೆದ್ದಾರಿಗಳಲ್ಲಿ ವಿಶ್ರಾಂತಿ, ಆಸ್ಪತ್ರೆ, ಹೋಟೆಲ್, ಪೆಟ್ರೋಲ್ pump ಮುಂತಾದುವುಗಳ ಬಗ್ಗೆ ಸೂಚನಾ ಫಲಕ, ೮-೧೦ ಮೈಲುಗಳ ಮುಂಚೆನೇ ತಿಳಿಸಿರುತಾರೆ. ಇನ್ನು ವಾಯು ಮಾಲಿನ್ಯ ಅಂತು ಇಲ್ವೆ ಇಲ್ಲ ಬಿಡಿ. ನೀವು ನಾಗತಿ ಹಳ್ಳಿಯವರ "ಕಾರ್ ಕಾರ್ ಎಲ್ಲ್ನೋಡಿ ಕಾರ್" ಹಾಡು ಕೇಳಿದ್ದರೆ, ಅದರ ಪೂರ್ಣ ಅರ್ಥ ಇಲ್ಲಿ ಬಂದರೆ ಆಗುತ್ತದೆ. ಅದರ ಸಾಹಿತ್ಯ ನಾನು ಮೇಲೆ ಹೇಳಿದ ಹಾಗೆ ಇದೆ. ರಸ್ತೆಯ ಮೇಲು ಕಾರು, ಮನೆಯಲ್ಲೂ ಕಾರು, ಆಫೀಸ್ ನಲ್ಲೂ ಕಾರು. ಎಲ್ಲಿ ನೋಡಿ ಇಲ್ಲಿ ಕಾರುಗಳೇ. ಇನ್ನು ಎಲ್ಲಾ ಕಾರುಗಳಲ್ಲೂ ಆಟೋ ಮ್ಯಾಟಿಕ್ ಗೇರ್ ಇರುತ್ತೆ. ಇದರಿಂದ ಎಲ್ಲರಿಗೂ ಕಾರು ಓಡಿಸೋದು ಸುಲಭ ನೋಡಿ. ಕ್ಲಚ್ ಇಲ್ಲದೆ ಇರೋದ್ರಿಂದ eದ ಗಾಲಿಗೆ ಪೂರ್ಣ ವಿಶ್ರಾಂತಿ. ಆದರೇ ಕಾಲು ಇಟ್ಟು ಕೊಳ್ಳಲು ಪೆಡಲ್ ಇರುತ್ತೆ. ಕೆಲವು ಕಾರು ಗಲ್ಲಿ ಕ್ರೂಸ್ ಕಂಟ್ರೋಲ್ ಇರುತ್ತೆ. ಇದರ ಉಪಯೋಗ ಹೆದ್ದಾರಿಗಳಲ್ಲಿ ಜಾಸ್ತಿ/ಮಾತ್ರ . ಇಲ್ಲೇ ನೇರ ರಸ್ತೆ ಇರುವುದರಿಂದ, ಇದನ್ನು ಉಪಯೋಗ ಮಾಡಬಹುದು. ಇದನ್ನು ವಾಹನವನ್ನು ಒಂದು ವೇಗಕ್ಕೆ ತೆಗೆದುಕೊಂಡು ಹೋಗಿ, On ಮಾಡಿ ಬಿಟ್ಟು, ನಮ್ಮ ಕೈ ಕಾಲುಗಳಿಗೆ ವಿಶ್ರಾಂತಿ ಕೊಡಬಹುದು. ಇಲ್ಲಿನ ಬಹಳಷ್ಟು ಕಾರುಗಳು Mercedes Benz, Bugati, BMW, Rolls-Royce, Jaguar, Audi, Chevrolet, Nissan, VolksWagen, Toyota, Hummer, Honda, Hyundai, Dodge, Kia, Infinity, Acura, Pontiac ಆಗಿರುತ್ತವೆ. ನಮ್ಮ ಮಾರುತಿ , ಟಾಟಾ ಗಳನ್ನು ಕಾಣೋದೆ ಇಲ್ಲ. ಇನ್ನು ಸುಮ್ಮ ಸುಮ್ಮನೆ ರಸ್ತೆಯಲ್ಲಿ ವಾಹನ ನಿಲ್ಲಿಸುವ ಹಾಗಿಲ್ಲ. ಅಕಸ್ಮಾತ್ ವಾಹನ ಕೆಟ್ಟರು ಸಹ ರಸ್ತೆಯ ಮೂಲೆಯಲ್ಲಿ ನಿಲ್ಲಿಸಿ, ಪಾರ್ಕಿಂಗ್ ದೀಪ ಆನ್ ಮಾಡಬೇಕು. ಬೇರೆ ವಾಹನಗಳಿಗೆ ತೊಂದರೆ ಆಗದೆ ಇರಲಿ ಎಂಬುದೇ ಇದರ ಉಪಾಯ. ಪಾರ್ಕಿಂಗ್ ಮಾಡಲು ನಿರ್ದಿಷ್ಟ ಸ್ತಳ ಸೂಚಿಸಿರುತ್ತಾರೆ. ಅಂಗವಿಕಲರಿಗೆ ಎಲ್ಲ ಕಡೆ ವಿಶೇಷ ಪಾರ್ಕಿಂಗ್ ಇರುತ್ತದೆ. ಇಲ್ಲಿ ಬೇರೆ ಯಾರೂ, ಯಾವುದೇ ಸಮಯದಲ್ಲಿ ನಿಲ್ಲಿಸುವಂತಿಲ್ಲ. ಅಕಸ್ಮಾತ್ ಇಲ್ಲಿ ನಿಲ್ಲಿಸಿದ್ದೆನಾದರು ಪೋಲೀಸರ ಕಣ್ಣಿಗೆ ಬಿದ್ದರೆ, ನೀವು ವಾಹನದಲ್ಲಿ ಇದ್ದರೇ, ದಂಡ ಕಟ್ಟಲು ಹೇಳುತ್ತಾರೆ. ಇದನ್ನು ತಪ್ಪಿಸಿ ಕೊಳ್ಳಲು ಆಗೋದೇ ಇಲ್ಲ ಇನ್ನು ನೀವು ಇಲ್ಲವಾದಲ್ಲಿ, ಕಾರನ್ನು ಪೋಲಿಸ್ ಟಾನೆಗೆ ತೆಗೆದು ಕೊಂಡು ಹೋಗುತ್ತಾರೆ ಅಥವಾ ದಂಡ ಕಟ್ಟಲು ಚೀಟಿ ಬರೆದಿತ್ತು ವಾಹನದ ಸಂಖ್ಯೆ ನಮೂದಿಸಿಕೊಂಡು ಹೋಗುತ್ತಾರೆ . ಇನ್ನು ರಸ್ತೆಯಲ್ಲಿ ಆಂಬುಲೆನ್ಸ್, ಶಾಲಾ ವಾಹನ , ಪೋಲಿಸ್ ಮತ್ತು ಅಗ್ನಿ ಶಾಮಕ ವಾಹನಗಳು ಹೋಗುತ್ತಿದಲ್ಲಿ ನಾವು ರಸ್ತೆಯ ಬಲ ಕೊನೆಯ ಲೇನ್ ಗೆ ಹೋಗಿ, ಅವಕ್ಕೆ ದಾರಿ ಮಾಡಿ ಕೊಡಬೇಕು. ಕೆಲವೊಮ್ಮೆ ಅವರೇ ಟ್ರಾಫಿಕ್ ನಿಯಂತ್ರಣ ಕೂಡ ಮಾಡುತ್ತಾರೆ. ನಿಮ್ಮ ಕಾರನ್ನು, ಇನ್ನ್ಯಾರೋ ಓಡಿಸಲು ಸಾಧ್ಯವೇ ಇಲ್ಲ. ನಿಮಗೆ ಮತ್ತು ಕಾರಿಗೆ ವಿಮೆ ಇದ್ದರೇ ಮಾತ್ರ ಕಾರು ಓಡಿಸಬಹುದು. ಇನ್ನು ಕಾರಿನ ಸಂಖ್ಯೆ, ಸಂಕ್ಯೆಯೇ ಆಗಿರಬೇಕಿಲ್ಲ. ನಿಮ್ಮ ಹೆಸರನ್ನು ಅದರಲ್ಲಿ ಹಾಕಿಸಬಹುದು. ನಿಮ್ಮ ಇಷ್ಟವಾದ ಸಂಕ್ಯೆಯನ್ನು ಕೂಡ ಪಡೆಯಬಹುದು. ಇನ್ನು ಕಾರಿನಲ್ಲಿ ಮುಂದಿನ ಸೀಟ್ ನಲ್ಲಿ ಕೂರುವ ಯಾರೇ ಆದರೂ ಕೂಡ, ಸೀಟ್ ಬೆಲ್ಟ್ ಹಾಕಿ ಕೊಳ್ಳಲೆ ಬೇಕು. ಮಕ್ಕಳು ಮುಂದಿನ ಸೀಟ್ ನಲ್ಲಿ ಕೂರುವಂತಿಲ್ಲ. ಅಕಸ್ಮಾತ್ ಅವರಿಗೆ ಇಷ್ಟ ಅಂತಾದರೆ ನಿಮಗೆ ಕಷ್ಟ. ಏನೆ ತಪ್ಪು ನೀವು ಮಾಡಿದರು ಅಥವಾ ನಿಮ್ಮ ಮನೆಯವರು ಮಾಡಿದರು ಅದಕ್ಕೆ ಇಲ್ಲಿ ಫೈನ್ ಕಟ್ಟಬೇಕು. (ಮುಂದುವರೆಯುತ್ತೆ)
Wednesday, July 21, 2010
Subscribe to:
Post Comments (Atom)
No comments:
Post a Comment