Tuesday, July 21, 2009

ಕನ್ನಡ ಗಾದೆಗಳು -- ಬ್ಲಾಗ್ ಬರಹಗಾರನಿಗೆ ವರುಷ , ಕಾಮೆಂಟ್ ಮಾಡೋರಿಗೆ ನಿಮಿಷ--> ಬ್ಲಾಗ್ ಬಣ್ಣ ಕಾಮೆಂಟ್ ಓದಿದ ಮೇಲೆ

ಇಲ್ಲಿದೆ ನೋಡಿ ಕನ್ನಡ ಗಾದೆಗಳು, ನಿಮ್ಮ ಹತ್ತಿರ ಇನ್ನೂ ಇದ್ದರೆ ಈಲಿ ಸ್ವಲ್ಪ ಬರೀತೀರ

ಗಾದೆಮಾತುಗಳು ಜನರ ಅನುಭವದ ಸಾರ ಸಂಗ್ರಹ. 'ವೇದ ಸುಳ್ಳಾದರೂ ಗಾದೆ ಸುಳ್ಳಾಗದು' ಎಂಬ ಗಾದೆಯೇ ಗಾದೆಗಳ ಮಹತ್ವವನ್ನು ನೋಡುತ್ತದೆ. ಸಾಮಾನ್ಯ ಜನರ ನಡುವೆ ಬಳಕೆಯಲ್ಲಿರುವ ಈ ಮಾತುಗಳಲ್ಲಿ ಜೀವನಾನುಭವ ಅಷ್ಟೇ ಅಲ್ಲದೇ ಕಾವ್ಯ ಗುಣವನ್ನೂ ಅಲ್ಲಲ್ಲಿ ಕಾಣಬಹುದು. ನಾನು ಇಲ್ಲಿ ಕೊಡುತ್ತಿರುವ ಗಾದೆಮಾತುಗಳನ್ನು ಬೇರೆ ಬೇರೆ ಕಾರಣಗಳಿಗಾಗಿ ಆರಿಸಿದ್ದೇನೆ.

ಹಪ್ಪಳ ಮುರಿಯೋಕೆ ಡೊಗ್ಗಾಲು ಹಾಕಬೇಕೇ?
ಎಂಥೆಂತದ್ದೊ ಅಂತರಿಸಿದ ಮೇಲೆ ಸಂಕ್ರಾಂತಿ ಬಂತಂತೆ .. ಮೂಸೋಕೆ
ಉರಿದು ಉಪ್ಪಾಗಿ ತಿಂದು ಮಣ್ಣಾದಳು
ತುಪ್ಪದಂಥಾ ಮಾತಿಗೆ ಒಪ್ಪಿಕೊಂಡು ತಿಪ್ಪೇ ಪಾಲಾದ
ನರಿ ಕೊಂಬಿದ್ದರೂ ನರರಿಗೆ ಹೆದರಬೇಕು
ನರಿ ಮದುವೇಲಿ ಕತ್ತೇ ಪಾರುಪತ್ಯ (ಆಡಳಿತ, ಪೌರೋಹಿತ್ಯ)
ನಾಯಿ ಮುಟ್ಟಿದ ಮಡಕೆ ನಾಯಿ ಕೊಳ್ಳಿಗೆ (ಕೊರಳಿಗೆ) ಕಟ್ಟು
ಬಟ್ಟೆ ಮಾಸಿದರೆ ಅಗಸನಿಗೆ, ನಾಲಿಗೆ ಮಾಸಿದರೆ ಕೆರಕ್ಕೆ
ಪಿತ್ತ ನೆತ್ತಿಗೇರಿದವಗೆ ಶಂಖ ಕರ್ರಗೆ ಕಂಡರೆ ಅದರ ಬಣ್ಣ ಕೆಟ್ಟೀತೇ?
ಅತ್ತಿತ್ತಲ ಮಾರಿ ಬಂದು ಅತ್ತೆಯ ಬಡಕೊಂಡು (ಬಡಿದು ಕೊಂದು) ಹೋಗಲಿ
ಬಾಯಿಲ್ಲದೋನು ಬರದೇಲಿ ಸತ್ತನಂತೆ
ಕಲ್ಲಲ್ಲಿ ಇಟ್ಟವನ ಬೆಲ್ಲದಲ್ಲಿ ಇಡಬೇಕು
ಮಂಕುದಿಣ್ಣೆ ಮದಿವೆಗೆ ಹೋದರೆ ವಾಲಗದವರೆಲ್ಲಾ ಅಟ್ಟಾಡಿಕೊಂಡು ಹೊಡೆದರಂತೆ
ನಮ್ಮ ಮನೆ ರಾಗಿ ಕಲ್ಲಾಡಿದರೆ ನಾಡೆಲ್ಲಾ ನೆಂಟರು
ಹಚ್ಚಗಿದ್ದ ಕಡೆ ಮೇಯುವುದು ಬೆಚ್ಚಗಿದ್ದ ಕಡೆ ಮಲಗುವುದು
ಹಲ್ಲು ಹತ್ತಿದವ (ರುಚಿ ಹತ್ತಿದವ) ಒಳ್ಳು (ಒರಳು) ನೆಕ್ಕಿದ
ಹೀನ ಸುಳಿ (ದುಷ್ಟ ಬುದ್ದಿ) ಬೋಳಿಸಿದರೂ ಹೋಗದು
ಹೊತ್ತು (ಸೂರ್ಯ, ಬಿಸಿಲು) ಬಂದತ್ತ ಕೊಡೆ (ಛತ್ರಿ) ಹಿಡಿ
ಅಜ್ಜಿ ಸಾಕಿದ ಮಗ ಕಜ್ಜಕ್ಕೂ ಬಾರದು
ಅಲಲಾ ಅನ್ನೊ ಅಳ್ಳಿ-ಮರ ನಂಬಬಹುದು, ಮೆತ್ತಗಿರೊ ಕಳ್ಳಿ-ಗಿಡ ನಂಬಲಾಗದು
ಆಳು ನೋಡುದ್ರೆ ಅಬ್ಬಬ್ಬಾ! ಬಾಳು ನೋಡುದ್ರೆ ಬಾಯ್ ಬಡ್ಕೊಬೇಕು
ಆಳಿನ ಮೇಲೆ ಆಳು ಬಿದ್ದು ದೋಣು ಬರಿದಾಯ್ತು
ಇದ್ದಲಿನವನ ಸ್ನೇಹಕ್ಕಿಂತ ಗಂಧದವನ ಗುದ್ದಾಟ ಲೇಸು
ಇರಲಾರದೆ ಇರುವೆ ಬಿಟ್ಟುಕೊಂಡು ಕಿರಂಗೂರಿಗೆ ಹೋಗಿ ಕಣಿ ಕೇಳಿದ
ಉಪ್ಪು ಬರುವ ಹೊತ್ತಿಗೆ (ನೆಮ್ಮದಿ ಬರುವ ಕಾಲಕ್ಕೆ) ಸೊಪ್ಪಿನಾಟ ಪೂರೈಸಿತು
ಎತ್ತೋರ್ ಇಲ್ಲದ ಮಕ್ಕಳ ಹೆತ್ತೇನು ಫಲ
ಹೆಣ್ಣು ಕೊಟ್ಟ ಮಾವ ಕಣ್ಣು ಕೊಟ್ಟ ದೇವರ ಸಮಾನ
ಗುಟ್ಟು ನಿಲ್ಲದ ಬಾಯಿಗೆ ಮುತ್ತು ಕೊಟ್ಟ ಹಾಗೆ
ಕಡಲೆ ಕಾಯೋಕೆ ಕಾಗೆ ಕಾವಲು ಹಾಕಿದಂತೆ
ದಾನ ದಾನಕ್ಕಿಂತ ನಿದಾನ ದೊಡ್ಡದು
ದಿಕ್ಕು ದಿಕ್ಕಿಗೆ ಹೋದರೂ ದುಕ್ಕ ತಪ್ಪದು
ಉರಿದ ಹೊಟ್ಟೆಗೆ ಉಪ್ಪು ತುಂಬಿಸಿದಂಗೆ
ಇರುಳು ಚಿಂತೆ ನಿದ್ದೆಗೇಡು, ಹಗಲು ಚಿಂತೆ ಕೆಲಸಗೇಡು
ಆಡುವವ ಆಡಿದ್ರೆ ನೋಡುವವಗೆ ಸಿಗ್ಗು
ಅಂಜಿದವನ ಮೇಲೆ ಕಪ್ಪೆ ಹಾರಿದಂಗೆ
ಹೆಸರಿಗೆ ಹೆಂಡ್ರ ಕಾಣೆ ಮಗನ ಹೆಸರು ನಂಜುಂಡ
ಅಲ್ಲದ ಕನಸು ಕಂಡರೆ ಎದ್ದು ಕುಂಡ್ರು.
ನಮ್ಮ ಕಣ್ಣು ನಮಗೆ ಕೆಡಿಸಿತು
ನಾಯಿಗೆ ಹೇಳಿದರೆ ನಾಯಿ ತನ್ನ ಬಾಲಕ್ಕೆ ಹೇಳಿತು.
ದಾನಕ್ಕೆ ಕೊಟ್ಟ ಎಮ್ಮೆಯ ಹಲ್ಲು ಎಣಿಸಿದರು.
ಬಂದಷ್ಟು ಬಂತು ಬರಡೆಮ್ಮೆ ಹಾಲು.
ಮೂರು ಕೋಟಿ ಜನ ಸೇರಲ್ಲಿಲ್ಲ ಮೈಲಾರಲಿಂಗನ ಜಾತ್ರೆ ನಡೀಲ್ಲಿಲ್ಲ.
ಮೂರೂ ಬಿಟ್ಟವರು ಊರಿಗೆ ದೊಡ್ಡವರು.
ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು.
ಎಮ್ಮೆ ತಪ್ಪಿದರೆ ಕಪ್ಪೆ ಹೊಂಡ.
ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ.
ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ.
ಕೋತಿ ತಾನು ಕೆಡೋದಲ್ಲದೆ ವನನೆಲ್ಲ ಕೆಡಿಸಿತ್ತು.
ಕಪ್ಪೆ ಹಿಡಿದು ಕೊಳಗಕ್ಕೆ ತುಂಬಿದ ಹಾಗೆ.
ನೊಣ ತಿಂದು ಜಾತಿ ಕೆಡಿಸಿಕೊಂಡರು.
ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ.
ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು.
ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೆ?
ಮನೆಗೆ ಮಾರಿ ಊರಿಗೆ ಉಪಕಾರಿ.
ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ.
ಓಡ್ಹೋಗುವನ ಚಡ್ಡಿ ಹರಕಂಡಷ್ಟೆ ಲಾಭ.
ಬರಗಾಲದಲ್ಲಿ ಅಧಿಕಮಾಸ ಬಂದ ಹಾಗೆ.
ತಾನೂ ತಿನ್ನ, ಪರರಿಗೂ ಕೊಡ.
ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು.
ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ.
ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ.
ಹಟದಿಂದ ಹೆಣ್ಣು ಕೆಟ್ಟಳು ಚಟದಿಂದ ಗಂಡು ಕೆಟ್ಟ
ಗಂಡಸರ ಕೈಯಲ್ಲಿ ಕೂಸು ನಿಲ್ಲದು ಹೆಂಗಸರ ಕೈಯಲ್ಲಿ ಮಾತು ನಿಲ್ಲದು
ಎಳ್ಳಿನಲ್ಲಿ ಎಣ್ಣೆ ಅಡಕ ಹಾಲಿನಲ್ಲಿ ಬೆಣ್ಣೆ ಅಡಕ
ಮೇಲೆ ಬಸಪ್ಪ ಒಳಗೆ ವಿಷಪ್ಪ
ಹೊರಗೆ ಬೆಳಕು ಒಳಗೆ ಕೊಳಕು
ಹಿಟ್ಟೂ ಹಳಸಿತ್ತು ನಾಯಿಯೂ ಹಸಿದಿತ್ತು
ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ
ಏಕಾದಶಿಯ ಮನೆಗೆ ಶಿವರಾತ್ರಿ ಬಂದ ಹಾಗೆ
ಒಪ್ಪವಿಲ್ಲದ ಮಾತು ತುಪ್ಪವಿಲ್ಲದ ಊಟ
ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು
ಇದ್ದಾಗ ಹಿರಿಯಣ್ಣ ಇಲ್ಲದಾಗ ತಿರಿಯಣ್ಣ
ಒಕ್ಕುವುದು ರೈತನ ಗುಣ ನೆಕ್ಕುವುದು ನಾಯಿಯ ಗುಣ
ಅರಮನೆಯ ಮುಂದಿರಬೇಡ ಕುದುರೆಯ ಹಿಂದಿರಬೇಡ
ತಾಯಿಯಂತೆ ಮಗಳು ನೂಲಿನಂತೆ ಸೀರೆ

ಕತ್ತೆಯಂಥ ಅತ್ತೆ ಬೇಕು ಮುತ್ತಿನಂಥ ಗಂಡ ಬೇಕು
ಅರಿತರೆ ಮಾತನಾಡು ಮರೆತರೆ ಕೂತು ನೋಡು
ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು
ಹಾಲಿದ್ದ ಕಡೆ ಬೆಕ್ಕು ಕೂಳಿದ್ದ ಕಡೆ ನಾಯಿ
ಆಪತ್ತಿಗಾದವನೇ ನೆಂಟ ಕೆಲಸಕ್ಕಾದವನೇ ಭಂಟ
ಗಂಜಿಯ ಕುಡಿದರೂ ಗಂಡನ ಮನೆ ಲೇಸು
ಒಲಿದರೆ ನಾರಿ ಮುನಿದರೆ ಮಾರಿ
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು
ಕಚ್ಚೋ ನಾಯಿ ಬೊಗಳುವುದಿಲ್ಲ
ತುಂಬಿದ ಕೊಡ ತುಳುಕುವುದಿಲ್ಲ
ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ
ತಾಳಿದವನು ಬಾಳಿಯಾನು
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?
ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ
ಮುದುಕರಿಗೆ ಮುದ್ದೆ ಕೇಡು ಹಳೇ ಬಟ್ಟೆಗೆ ನೂಲು ಕೇಡು
ಲಾಲಿಸಿದರೆ ಮಕ್ಕಳು ಪೂಜಿಸಿದರೆ ದೇವರು
ಉತ್ತರೆ ಹೊಲ ಚಂದ ಬಿತ್ತರೆ ಬೆಳೆ ಚಂದ
ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?
ಹಂಗಿನರಮನೆಗಿಂತ ಕುಂದಣದ ಗುಡಿ ಲೇಸು
ಹಸಿದು ಹಲಸು ಉಂಡು ಮಾವು

ಕಂತೆಗೆ ತಕ್ಕಂತೆ ಬೊಂತೆ
ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ
ಕಾಸಿಗೆ ತಕ್ಕ ಕಜ್ಜಾಯ
ಮೋಟಾಳಿಗೊಂದು ಚೋಟಾಳು
ಅಡಿಕೆಗೆ ಹೋದ ಮಾನ ಆನೆ ಕೊಟ್ರು ಬರಲ್ವಂತೆ
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ"
ಬ್ಲಾಗ್ ಬರಹಗಾರನಿಗೆ ವರುಷ , ಕಾಮೆಂಟ್ ಮಾಡೋರಿಗೆ ನಿಮಿಷ
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ
ಕಾಮೆಂಟ್ ಮಾಡೊರಿಗೆ ಚೆಲಾಟ, flag ಮಾಡಿದಾಗ moderators ಗೆ
ಅಳಿಯನ ಕುರುಡು ಬೆಳಗಾದ ಮೇಲೆ...
ಬ್ಲಾಗ್ ಬಣ್ಣ ಕಾಮೆಂಟ್ ಓದಿದ ಮೇಲೆ
ಆಸೆ ಪಟ್ಟು ಅಕ್ಕನ ಮನೆಗೆ ಹೋದರೆ ಹಾಸೋಕ್ಕೆ ಕೊಟ್ಟಿದ್ದಳಂತೆ ಹಳೇ ಕಂಬ್ಳೀನ.
ಅಜ್ಜೀಗೆ ಅರಿವೆ ಚಿಂತೆ ಮೊಮ್ಮಗಳೀಗೆ ಗೆಳೆಯನ ಚಿಂತೆ.
ಏನೆ ಶಂಕರಿ ಓಡಾಟ ಅಂದ್ರೆ ಶ್ಯಾನುಭೋಗರ ಮನೇಲಿ ದ್ಯಾವ್ರೂಟ ಅಂದ್ಲಂತೆ
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ
ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ
ಊಟ ತನ್ನಿಚ್ಚೆ, ನೋಟ ಪರರಿಚ್ಚೆ.
ಹಲ್ಲಿದ್ದರೆ ಕಡಲೆ ಇಲ್ಲ. ಕಡಲೆ ಇದ್ದರೆ ಹಲ್ಲಿಲ್ಲ
ದೇವರು ವರ ಕೊಟ್ರೆ ಪೂಜಾರಿ ವರ ಕೊಡೊದಿಲ್ಲ.
ದೇವರೇ ಹಗ್ಗ ತಿಂತಾ ಇದ್ದನಂತೆ ಪೂಜಾರಿ ಬಯಸಿದನಂತೆ ಶ್ಯಾವಿಗೇನ.
ನವಿಲು ಜಾಗರವಾಡೋದನ್ನ ನೋಡಿ ಕೆಂಭೂತ ಪುಕ್ಕ ಕೆದರಿಕೊಂಡಿತಂತೆ.
ಮೆದೆಗೆ ಬೆಂಕಿ ಹಾಕಿ ಅರಳು ಆರಿಸಿಕೊಂಡರಂತೆ.
ಹೇಳ್ತಾ ಹೇಳ್ತಾ ಮಗಳು ಹೆಣ್ಣನ್ನೇ ಹಡೆದಳಂತೆ.
ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅತ್ತರಂತೆ.
ಕರೆವಾಗ ಹಾಲು ಕೊಡದವರು ಹೆಪ್ಪಿಟ್ಟು ಮೊಸರು ಕೊಟ್ಟಾರೆಯೇ?
ಇಬ್ಬರ ಜಗಳ ಮೂರನೆಯವನಿಗೆ ಲಾಭ
ಎತ್ತುಯೀತು ಅಂದ್ರೆ ಕೊಟ್ಟಿಗೆಗೆಕಟ್ಟು ಅಂದ್ರಂತೆ
ಬೆರಳು ತೋರಿಸಿದ್ರೆ ಹಸ್ತಾನೇ ನುಂಗಿದ್ರಂತೆ
ಆಪತ್ಕಾಲದಲ್ಲಿ ಆದವನೇ ನೆಂಟ
ಕಲಿಯೋ ತನಕ ಬ್ರಹ್ಮ ವಿದ್ಯೆ ಕಲಿತ ಮೇಲೆ ಕೋತಿ ವಿದ್ಯೆ.....
ವೇದ ಸುಳ್ಳಾದರು ಗಾದೆ ಸುಳ್ಳಾಗದು
ಅಮ್ಮಂನಂತೆ ಮಗಳು ನೂಲಿನಂತೆ ಸೀರೆ
ಬಡವರ ಮನೆ ಊಟ ಚಂದ ಬಲ್ಲಿದರ ಮನೆ ನೋಟ ಚಂದ
ಎದ್ದು ಬಂದು ಎದೆಗೆ ಒದ್ದರೆ, ಇದ್ದಿದ್ದು ಇದ್ದಂಗೆ ಹೇಳಿದ್ರಂತೆ
ಅರ್ಧ ರಾತ್ರೀಲಿ ಕೊಡೆ ಹಿಡಿದರೆ ಅಲ್ಪನಿಗೆ ಐಶ್ವರ್ಯ ಸಿಕ್ಕಿದಳಂತೆ
ಮೀಸೆ ಮಣ್ಣಾದ್ರು ಜಟ್ಟಿ ಕೆಳಗೆ ಬೀಳಲಿಲ್ಲವಂತೆ
ಕುಲಾವಿ ಹೊಲಿಸೋಕೆ ಮುಂಚೆ ಕೂಸು ಹುಟ್ತಿಸಿದರು
ಬೇವಿನ ಕಾಯಿಗೆ ಹಾಗಲ ಕಾಯಿ ಸಾಕ್ಷಿ
ನಮ್ಮ ಮನೆ ಕಾವಲಿ ತೂತಾದರೆ ಎಲ್ಲಾರ ಮನೆ ದೋಸೆ ತೂತು
ಚಂಡಾಲ ಶಿಶ್ಯರು ಚೋರ ಗುರು

ಪೂಜಾರಿ ವರ ಕೊಟ್ರು ದೇವ್ರು ವರ ಕೊಡ
ತುಸು ತಿನ್ನೋದಕ್ಕಿಂತ ಕಸ ತಿನ್ನು
ಗಾದೆ ಸುಳ್ಳಾದರೂ ವೇದ ಸುಳ್ಳಾಗದು

ನೀರು ಕುಡಿದ ಮೇಲೆ ಉಪ್ಪು ತಿನ್ನಲೇ ಬೇಕು
ಬುದ್ದಿ ಬಂದ ಮೇಲೆ ಕೆಟ್ಟಿದ್ದಾಯ್ತು
ಮುನಿದರೆ ಮಾರಿ ಅಗುತ್ತಾಳೆ ನಾರಿ
ಬೆಳಿಗ್ಗೆ ಎದ್ದು ರಾಮನಿಗು ಸೀತೆಗು ಏನು ಸಂಬಂಧ ಅಂದಿದ್ದಕ್ಕೆ ರಾತ್ರಿ ಎಲ್ಲಾ ರಾಮಯಣ ನೋಡಿದ್ರಂತೆ
ಮೂರನೆಯವನಿಗೆ ಲಾಭ ಅಗಿದ್ದಕ್ಕೆ ಇಬ್ಬರ ಜಗಳ
ಕೋಲು ಮುರಿದರೂ ಹಾವು ಸಾಯಬಾರದು
ಹೆಂಡ ಕುಡಿಸಿದರೆ ಕೋತಿಯಂತೆ
ಎಮ್ಮೆಗೆ ಬರೆ ಎಳೆದಿದ್ದಕ್ಕೆ ಎತ್ತಿಗೆ ಜ್ವರ ಬಂತಂತೆ
ಕಜ್ಜಾಯಕ್ಕೆ ತಕ್ಕ ಕಾಸು
ಹಸ್ತ ನುಂಗಿದರೆ ಬೆರಳು ತೋರಿಸಿದನಂತೆ
ಯಥಾ ಪ್ರಜಾ ತಥಾ ರಾಜ
ಹೆಗಲು ಮುಟ್ತಿ ನೋಡಿಕೊಂಡಿದ್ದಕ್ಕೆ ಕುಂಬಳ ಕಾಯಿ ಕಳ್ಳ ಅಂದ್ರಂತೆ
ಆನೆಗೆ ಹೋದ ಮಾನ ಅಡಿಕೆ ಕೊಟ್ಟರೂ ಬರೊಲ್ಲ
ದೇವ ಲೋಕ ಹಾಳಾದರೆ ನಾಯಿ ಬೊಗಳುತ್ತದೆಯೆ ?

ದಡ್ಡನಿಗೆ ಮಾತಿನ ಪೆಟ್ಟು ಜಾಣನಿಗೆ ದೊಣ್ಣೆ ಪೆಟ್ಟು
ಕೈಲಾಸ ಇದ್ರೆ ಕಾಸು

ಬಾಯಿ ಮೊಸರಾದರೆ ಕೈ ಕೆಸರು
ಇಲಿ ಹಿಡಿದು ಬೆಟ್ಟ ಅಗೆದ್ರಂತೆ
ಹುಲಿ ಬಂದ್ರೆಇಲಿ ಬಂತು ಅಂದ್ರಂತೆ
ಸುಳ್ಳಿಗೆ ಸಾವಿಲ್ಲ ಸತ್ಯಕ್ಕೆ ಸುಖವಿಲ್ಲ
ಕೊಟ್ಟವನು ವೀರಭದ್ರ ಇಸ್ಕೊಂಡವನು ಈರಭದ್ರ (ಕೋಡಂಗಿ )
ಕುರುಬನಿಗೆ ಲಾಭ ಆದಷ್ಟೂ ಕುರಿ ಕೊಬ್ಬಿತು
ತೋಳ ಕಾಯೋದಕ್ಕೆ ಕುರಿ ಕಳಿಸಿದರಂತೆ
ಇರುವೆ ಬಿಟ್ಕೊಂಡು ಇರಲಾರದಾದರು
ಕರುಳರಿಯದಿದ್ದರ್ರೂ ಕಣ್ಣರಿಯಿತು
ಶಸ್ತ್ರಾಭ್ಯಾಸ ಸಮಯದಲ್ಲಿ ಯುದ್ಢ
ದ್ರಾಕ್ಷಿ ಹುಳಿಯಾದರೆ ಕೈಗೆ ಎಟುಕುವುದಿಲ್ಲ
ಗುಡಿಸಲಿಗಿಂತ ಹಂಗಿನ ಅರಮನೆಯೆ ಲೇಸು
ಪಟ್ಟಣ ಸೇರಿ ಕೆಡು
ಬಚ್ಚಿಟ್ಟದ್ದು ತನಗೆ ಕೊಟ್ಟದ್ದು ಪರರಿಗೆ
ವಿಷ ಕುಡಿದ ಮಕ್ಕಳೆ ಬದುಕೊಲ್ಲ ಇನ್ನು ಹಾಲು ಕುಡಿದ ಮಕ್ಕಳು ಬದುಕುತ್ತಾರ ?
ಅಂಗಾಲಿಗೆ ತ್ರಾಣವಿದ್ದರೆ ಬಂಗಾಲಕ್ಕೆ ಹೋಗಬಹುದು.
ಅಂಗಡಿ ಮಾರಿ ಗೊಂಗಡಿ ಹೊದ್ದ ಹಾಗೆ.
ಅಂಗಾಲಿಗೆ ಹೇಸಿಕೆಯಿಲ್ಲ , ಕರುಳಿಗೆ ನಾಚಿಕೆಯಿಲ್ಲ .
ಅಂಗೈ ಹಾಗೆ ಹೊಲ ಮಾಡಿದರೆ , ಮುಂಗೈ ತುಂಬ ತುಪ್ಪ.
ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ .
ಅಂಬಲಿ ಊಟ ; ಕಂಬಳಿ ಹೊದಿಕೆ.
ಅಕ್ಕ ಇದ್ದರೆ ಭಾವ ; ರೊಕ್ಕ ಇದ್ದರೆ ಸೂಳೆ.
ಅಕ್ಕರೆಯಿಂದಲ್ಲದಿದ್ದರೂ ಅಪವಾದಕ್ಕೆ ಹೆದರಿ ಕರೆಯಬೇಕು.
ಅಕ್ಕರೆಯಿಲ್ಲದ ಉಪ್ಪರಿಗೆಗಿಂತ ಅಕ್ಕರೆಯ ತಿಪ್ಪೆಯೇ ಲೇಸು.
ಅಕ್ಕಿ ಕೊಟ್ಟು ಅಕ್ಕನ ಮನೆಯೇ?
ಸಾಲ ಮಾಡಿದವನು ತೀರಿಸಿ ಸಾಯಲ್ಲಿಲ್ಲ, ಮೂಲ ಮಾಡಿದವನು ತಿಂದು ಸಾಯಲ್ಲಿಲ್ಲ.
ಹುಟ್ಟಿದ ಲಾಗಾಯ್ತೂ ಯಜ್ಞಕಾರ್ಯ ಮಾಡದಿದ್ದವನು ಗಡ್ಡಕ್ಕೆ ಬೆಂಕಿ ಹಚ್ಚಿಕೊಂಡನಂತೆ.
ಬಳಸದೇ ಬಾವಿ ಕೆಟ್ಟಿತು, ಹೋಗದೇ ನೆಂಟಸ್ತನ ಕೆಟ್ಟಿತು.
ಮನೆಗೊಬ್ಬ ಅಜ್ಜಿ, ಒಲೆಗೊಂದು ಕುಂಟೆ.
ಚೇಳಿನ ಮಂತ್ರವೂ ಗೊತ್ತಿಲ್ಲ, ಹಾವಿನ ಬುಟ್ಟಿಗೆ ಕೈ ಹಾಕಿದಂತೆ.
ಲಂಕೆ ಸುಟ್ಟರೂ ಹನುಮಂತ ಹೊರಗೆ.
ತಲೆ ಬೋಳಿಸಿದರೆ ಸುಳಿ ಹೋಗುತ್ತದೆಯೆ?
ದಿವಾಳಿ ತೆಗೆಯುವವನ ವ್ಯಾಪಾರ ಹೆಚ್ಚಂತೆ, ಆಚಾರ ಕೆಟ್ಟವನ ಪೂಜೆ ಹೆಚ್ಚಂತೆ.
ಇಪ್ಪತ್ತಕ್ಕೆ ಯಜಮಾನಿಕೆ, ಎಪ್ಪತ್ತಕ್ಕೆ ಅತಿಸಾರ ಬರಬಾರದು.
ಮಾಡುವವರಿದ್ದರೆ ನೋಡು ನನ್ನ ವೈಭೋಗ.
ಆಳ ನೋಡಿ ಹಾರು .
ಆಳುದ್ದದ ಬಾವಿ ಮುಚ್ಚಬಹುದು , ಗೇಣುದ್ದದ ಹೊಟ್ಟೆ ಮುಚ್ಚಲಾಗದು.
ಆಳೋರಿಲ್ಲದೆ ನಾಡು ಕೆಟ್ಟಿತು.
ಇಕ್ಕಟ್ಟಾದರೂ ತನ್ನ ಮನೆಯೇ ಚೆಂದ .
ಇಕ್ಕುವವಳು ನಮ್ಮವಳಾದರೆ ಕೊಟ್ಟಿಗೆಯಲ್ಲಾದರೂ ಉಂಡೇನು.
ಇಟ್ಟರೆ ತೊಟ್ಟರೆ ಪುಟ್ಟಕ್ಕನೂ ಚೆಂದ. (--ಬಟ್ಟೆ ,ಒಡವೆ )
ಇತ್ತತ್ತ ಬಾ ಅಂದರೆ ಹೆಗಲೇರಿ ಕೂತ .
ಇದ್ದ ಮಕ್ಕಳಿಗೇ ಕೂಳಿಲ್ಲ ; ಮತ್ತೊಂದು ಕೊಡೋ ಶಿವರಾಯ ಅಂದರಂತೆ.
ಇದ್ದರೆ ಈ ಊರು . ಎದ್ದರೆ ಮುಂದಿನೂರು . ( ನಿಶ್ಚಿಂತಾತ್ಮನ ಪರಿ!)
ಇದ್ದಾಗ ನವಾಬ ; ಇಲ್ಲದಾಗ ಫಕೀರಸಾಬ ( ಹಣ ಇದ್ದಾಗ ಧಾರಾಳತನದಿಂದ ಇದ್ದು ಇಲ್ಲದಾಗ ಬಡ ಫಕೀರನಂತಿರುವದು )
ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡ ಹಾಗೆ.
ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ.
ಕಳ್ಳನ ಮನಸ್ಸು ಹುಳ್ ಹುಳ್ಳಗೆ.
ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ.
ದಿನಾ ಸಾಯೋರಿಗೆ ಅಳೋರು ಯಾರು.
ಅಕ್ಕನ ಚಿನ್ನವಾದರೂ ಅಕ್ಕಸಾಲಿಗ ಬಿಡ.
ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡಲಿಲ್ಲ.
ಎತ್ತಿಗೆ ಜ್ವರ, ಎಮ್ಮೆಗೆ ಬರೆ.
ಕೆಲಸವಿಲ್ಲದ ಆಚಾರಿ ಮಗಳ ಕಾಲು ಕೆತ್ತಿದ.
ಸಾವಿರ ಕಾಲ ಸಾಮ ಓದಿದ ಮಗ ಮನೆ ಅಜ್ಜಿ ಸೊಂಟ ಮುರಿದ.

No comments:

Post a Comment

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು