ಆರತಿ ಎತ್ತಿರೇ ಕಳ್ ಮಂಜಗೆ ನಮ್ ಸುಳ್ಳ್ ಮಂಜಂಗೆ
ಸುಸ್ತ್ ಆಗದ ಮನ್ಮಥ, ಸದಾ ಸುಖಿ ಬಾಯಿಬಿಟ್ಟರೆ ಸಂಸ್ಕೃತ,
ಬಾಯಿಬಿಟ್ಟರೆ ಸಂಸ್ಕೃತ, ತಲೆಕೆಟ್ಟರೆ ವಿಕೃತ
ನವರಸಗಳನ್ನು ಗಟಗಟ ಕುಡಿದ ಮಗನೇ
ಆರತಿ ಎತ್ತಿರೇ ಕಳ್ ಮಂಜಗೆ ನಮ್ ಸುಳ್ಳ್ ಮಂಜಂಗೆ.....
ಅಡ್ಡ ಅರಳಿಕಟ್ಟೆ, ದುಂದು ಸಿಕ್ಕಾಬಟ್ಟೆ, ಸೋಮಾರಿ ಗೆಳೆಯರ ಬಳಗದ ಲೀಡರ್
ಮಾತಲ್ಲಿ ಬಲುತೀಟೆ, ಕಾಸ್ ಕೊಟ್ರೆ ಮೇಲ್ ಕೋಟೆ, ಯಾಮಾರ್ದ್ರೆ ಬಿಳಿ ಯರಡು ಒಂದ್ ಕೆಂಪು
ರಾತ್ರಿಯೆಲ್ಲಾ ಮಲಗೋಲ್ಲ, ಮಧ್ಯಾಹ್ನವಾದ್ರೂ ಏಳಲ್ಲಾ
ಊರಲೆಲ್ಲ ಕೈ ಸಾಲ, ಮುಂಡೇದು ಶೋಕಿಲಾಲ
ಅತ್ತೆಯ ಒಡವೆ ದಾನ ಮಾಡುವ ಅಳಿಯಾ...
ಆರತಿ ಎತ್ತಿರೇ ಕಳ್ ಮಂಜಗೆ ನಮ್ ಸುಳ್ಳ್ ಮಂಜಂಗೆ
ಅಪ್ಪ ಲೆಕ್ಕಕಿಲ್ಲ, ಅಮ್ಮನ ಮಾತ್ ಕೇಳಲಿಲ್ಲ, ಗಿಡವಾಗಿ ಬಗ್ಗದ ಮುದ್ದು ಲೋಫರ್
ಶಾಲೇಲಿ ಕಲೀಲಿಲ್ಲ, ಕಾಲೇಜ್ನಲ್ಲಿ ಬರೀಲಿಲ್ಲ, ನೂರೆಂಟು ವಿದ್ಯೇಲೂ ಮಾಸ್ಟರ್
ತಲೆಹರಟೆ ಜಾತಕ, ಹೆಗ್ಹೆಜೆಗೂ ನಾಟಕ. ಅಣಕ ಮಾಡುವ ಗಟ್ಟ, ಅತ್ಯುತ್ತಮ ಈ ನಟ
ರಾಜ್ಯ ಪ್ರಶಸ್ತಿ ವಂಚಿತನಾದ ಮಗನೇ...
ಆರತಿ ಎತ್ತಿರೇ ಕಳ್ ಮಂಜಗೆ ನಮ್ ಸುಳ್ಳ್ ಮನ್ಜಂಗೆ
ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ, ಎದ್ದೇಳಲೋ
ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ, ಎದ್ದೇಳಲೋ
ಎಲ್ಲಯ್ಯ ಎವೆರೆಸ್ಟು, ಎಸ್ಟ್ ಮಾಡ್ತೀಯ ರೆಸ್ಟು
ಸತ್ತ ಮೇಲೆ ಕೋಟಿ ವರುಷ ಬದುಕಿದ್ದರೆ ಎಷ್ಟು
ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ, ಎದ್ದೇಳಲೋ
ಎದ್ದೇಳಲೋ ಎದ್ದೇಳಲೋ
ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ, ಎದ್ದೇಳಲೋ
Music: V.Manohar
Lyrics: Guruprasad
Release Date: 17-July-2009.
No comments:
Post a Comment