1)ಟೀಚರ್: ನಿಮ್ಮ ಮಗನಿಗೆ ಟಿ.ವಿ.ಯಲ್ಲಿ ಕ್ವಿಜ್ ತೋರಿಸಬೇಡಿ !
ತಂದೆ: ಯಾಕೆ ?
ಟೀಚರ್: ನಿನ್ನ ತಂದೆ ಯಾರು ಅಂತ ಕೇಳಿದ್ರೆ ೪ ಆಯ್ಕೆ ಕೊಡಿ ಅಂತಾನೆ !!!
2)ಟೀಚರ್: ನಿಮ್ಮ ಮಗ ಸಿಗರೇಟ್ ಸೇದುತ್ತಾನೆ ನೀವು ಕೇಳುವುದಿಲ್ಲವೆ ?
ಅಪ್ಪ: ನಾನು ಕೇಳಿದರೆ ಅವನು ಕೊಡಲ್ಲ ಅನ್ನುತ್ತಾನೆ !!!
3)ಅಧ್ಯಾಪಕರು: ನಿನ್ನ ಮತ್ತು ತಂದೆಯ ಹೆಸರೇನು?
ರಮೇಶ: ನನ್ನ ಹೆಸರು ಸೂರ್ಯ ಪ್ರಕಾಶ. ತಂದೆಯ ಹೆಸರು ಬಾಲ ಜೀವನ್ ಸಾರ್.
ಅಧ್ಯಾಪಕರು: ಹಾಗಾದರೆ ನಿನ್ನ ಮತ್ತು ತಂದೆಯ ಹೆಸರನ್ನು ಇಂಗ್ಲೀಷ್‌ನಲ್ಲಿ ಉತ್ತರಿಸು?
ರಮೇಶ: ಮೈ ನೇಮ್ ಈಸ್ ಸನ್ ಲೈಟ್. ಮೈ ಫಾದರ್ ನೇಮ್ ಈಸ್ ಲೈಫ್ ಬಾಯ್ !
4)ಟೀಚರ್ : ನಿಜವಾದ ಕನ್ನಡಿಗ ಯಾರು ? ಗುಂಡ ನೀನು ಹೇಳು ?
ಗುಂಡ : ಇಂಗ್ಲೀಷ್ SUBJECTನಲ್ಲಿ ಫೇಲ್ ಆದವರು ಟೀಚರ್ !!!
5)ಟೀಚರ್ ಗುಂಡನಿಗೆ ಚೆನ್ನಾಗೆ ಹೊಡಿತ್ತಾಯಿದ್ದರು....
ಪ್ರಾಂಶುಪಾಲರು ಯಾಕೆ ಅವನಿಗೆ ಹೊಡಿತ್ತಾಯಿದ್ದೀರ...?
ಟೀಚರ್ : ನಾನು ಗಾಂಧಿ ಬಗ್ಗೆ ಏನಾದರೂ ಬರೀ ಅಂದ್ರೆ, ಇವನು ಪೂಜಾ ಗಾಂಧಿ ಬಗ್ಗೆ ಎರಡು ಪುಟಗಳನ್ನು ಬರೆದಿದ್ದಾನೆ...!
6)ಪರೀಕ್ಷೆಯಲ್ಲಿ ಗುಂಡ ಬೇಜಾರಾಗಿದ್ದ.
ಎಕ್ಸಾಮಿನರ್ ಬಂದು ಕೇಳಿದರು : ಯಾಕ್ರೀ, ಪ್ರಶ್ನೆಗಳು ಟಫ್ ಆಗಿವೆಯಾ ?
ಗುಂಡ ಹೇಳಿದ : ಇಲ್ಲ, ತಲೆ ಕೆಡ್ತಾ ಇದೆ. ಮೊದಲ ಪ್ರಶ್ನೆಗೆ ಯಾವ ಜೇಬಲ್ಲಿ ಉತ್ತರ ಇದೆ ಅಂತ ನೆನಪಾಗ್ತಾ ಇಲ್ಲ...!!!
7)ಟೀಚರ್ : ಆಪರೇಷನ್ ಮಾಡೋವಾಗ ಡಾಕ್ಟರ್‌ಗಳು, ಮಾಸ್ಕ್ ಯಾಕೆ ಹಾಕಿಕೊಳ್ತಾರೆ ಗೊತ್ತಾ??
ಚಿಂಟೂ : ಆಪರೇಷನ್ ಫೇಲಾದ್ರೆ ಪೇಷಂಟ್ ಗುರುತು ಹಿಡಿಬಾರದಲ್ವ!! ಅದಕ್ಕೆ ಟೀಚರ್
8) ಮಾಥ್ಸ್ ಟೀಚರ್ : ಗುಂಡ ನಿನ್ನ ಹತ್ತಿರ ವಿರುವ 12 ಚಾಕಲೇಟ್ ನಲ್ಲಿ ,4ನ್ನು ರೀನಾ ಗೆ, 3ನ್ನು ವೀಣಾಳಿಗೆ ಮತ್ತು 2ನ್ನು ಮೀನಾಳಿಗೆ ಕೊಟ್ಟಾಗ ನಿನಗೇನು ಉಳಿಯುತ್ತದೆ ?
ಗುಂಡ: ನನಗೆ ಮೂರು ಚಾಕಲೇಟ್ ಮತ್ತು ಮೂರು ಗರ್ಲ್ ಫ್ರೆಂಡ್ ಸಿಗುತ್ತಾರೆ .
9)ಗುಂಡ ಮತ್ತು ಸೀನ ಪ್ರಾಣ ಸ್ನೇಹಿತರು. ಒಂದು ದಿನ ಸೀನ ಮೃತಪಟ್ಟ.
ಆಗ ಪೊಲೀಸರು ಸಾವಿನ ತನಿಖೆಗೆ ಬಂದರು.
ಪೊಲೀಸ್ : ನಿಮ್ಮ ಸ್ನೇಹಿತ ಹೇಗೆ ಸತ್ತರು ?
ಗುಂಡ : ಹೊಟ್ಟೆಯೊಳಗೆ ಇಲಿ ಓಡಾಡಿದ ಹಾಗಾಗ್ತಿದೆ ಅಂತ ಕೂಗ್ತಿದ್ದ. ಅದಕ್ಕೆ ಇಲಿ ಪಾಷಣ ಕೊಟ್ಬಿಟ್ಟೆ. !!!
10)ಹುಚ್ಚರಿಬ್ಬರು ಮಾತನಾಡುತ್ತಿದ್ದರು.
ಮೊದಲನೇ ಹುಚ್ಚ : ಲೋ ನೋಡ್ತಾ ಇರು ಸದ್ಯದಲ್ಲೇ ನಾನು ಭಾರತದ ಪ್ರಧಾನ ಮಂತ್ರಿಯಾಗುತ್ತೇನೆ.
ಎರಡನೇ ಹುಚ್ಚ : ಅದು ಸಾಧ್ಯವಿಲ್ಲ.
ಮೊದಲನೇ ಹುಚ್ಚ : ಏಕೆ ಸಾಧ್ಯವಿಲ್ಲ?
ಎರಡನೇ ಹುಚ್ಚ : ನಾನು ಆ ಸ್ಥಾನಕ್ಕೆ ರಾಜಿನಾಮೆ ನೀಡಲು ತಯಾರಿಲ್ಲ. ! !
11)ಸದ್ದಾಮ್ : ಪಾಕಿಸ್ತಾನಲ್ಲೆ ಒಂದು ಕರೆ ಮಾಡಲೇ ?
ಯಮ : ಮಾಡು
ಸದ್ದಾಮ್ : ಬಿಲ್ ಎಷ್ಟಾಯಿತು ?
ಯಮ : ಸೊನ್ನೆ ರೂಪಾಯಿ.
ಸದ್ದಾಮ್ : ಯಾಕೆ ?
ಯಮ : ಏಕೆಂದರೆ, ನರಕದಿಂದ ನರಕಕ್ಕೆ ಉಚಿತ ಕರೆ (Free Call)
Monday, July 27, 2009
Subscribe to:
Post Comments (Atom)
No comments:
Post a Comment