Saturday, January 30, 2010

ಮೂವರು ಮೂರ್ಖರು ಚಿತ್ರ ವಿಶ್ಲೇಷಣೆ---

೨೦೦೯ ರ ಕೊನೆಯ ಚಿತ್ರ ಒಂದು ಅಧ್ಭುತ ಮಾಡುತ್ತದೆ ಎಂದು ನಾವು ಯಾರೂ ಊಹಿಸಿರಲಿಕ್ಕಿಲ್ಲ. ಚಿತ್ರದ ಮೂಲ ಖ್ಯಾತ ಬರಹಗಾರ ಚೇತನ್ ಭಗತ್ ರವರ ಪುಸ್ತಕ ಫೈವ್ ಪಾಯಿಂಟ್ ಸಂ ಒನ್ . ಮುನ್ನಾ ಭಾಯಿ ಖ್ಯಾತಿಯ ರಾಜಕುಮಾರ್ ಹಿರಾನಿ ಯವರ ನಿರ್ದೇಶನದಲ್ಲಿ ಮೂಡಿಬಂದತಹ ಚಿತ್ರ ಮತ್ತೊಂದು ಖ್ಯಾತಿಯ ಮಟ್ಟವನ್ನು ತಲುಪಿದೆ. ೩೧೬ ಕೋಟಿಗಳಿಗೂ ಮೀರಿ ಹಣ ಬಾಚಿರುವ ಈ ಚಿತ್ರದ ಬಗ್ಗೆ ಸ್ವಲ್ಪ ತಿಳಿಯೋಣವೆ.
ಇದೊಂಥರ ತಾರೆ ಜಮೀನ್ ಪರ್‌ನ ಎರಡನೇ ಭಾಗದಂತಿದೆ. ಅಲ್ಲಿ ಮಕ್ಕಳ ಕನಸುಗಳಿಗೆ ಕಾಮನಬಿಲ್ಲು ಕಟ್ಟಿ ತೋರಿಸಿದ ಅಮೀರ್ ಇಲ್ಲಿ ಯುವಕರ ಮನಸ್ಸನ್ನು ಗಾಳಿಪಟವಾಗಿಸುತ್ತಾರೆ. ಮುನ್ನಾಭಾಯಿ ಖ್ಯಾತಿಯ ರಾಜ್‌ಕುಮಾರ್ ಇಲ್ಲೂ ಸಂದೇಶಗಳನ್ನು ಪ್ರೇಕ್ಷಕನಿಗೆ ಸಾಗಿಸುತ್ತಲೇ ಸುಂದರ ಕತೆ ಹೆಣೆದಿದ್ದಾರೆ. ರಾಂಕ್ ನೀಡಿ ಯುವಕರನ್ನು ಕೇವಲ ಉದ್ಯೋಗಿಗಳನ್ನಾಗಿಸುವ ಸಮಾಜ, ಮಕ್ಕಳು ಎಂಜಿನಿಯರ್, ಡಾಕ್ಟರ್ ಮಾತ್ರ ಆಗಬೇಕೆಂಬ ಪಾಲಕರ ಆಸೆ, ಆದರೆ ಈಡೇರದ ಆಸೆಗಳ ಮಧ್ಯೆ ಯುವಕರ ಕಣ್ಣೀರು. ಕಾಲೇಜಿನ ಪ್ರಾಚಾರ್ಯ ವೀರೂ ಸಹಸ್ರಬುದ್ಧೆಯಾಗಿರುವ ಬೊಮ್ಮನ್ ಇರಾನಿ ಮತ್ತೊಂದು ಪ್ರಶಸ್ತಿ ಗೆಲ್ಲುವ ಎಲ್ಲ ಸಾಧ್ಯತೆಗಳೂ ಇವೆ. ಹಾಡುಗಳೂ ಸಹ ಮತ್ತೆ, ಮತ್ತೆ ಗುನುಗುನಿಸುತ್ತವೆ.

ಮೂಲ ಕಾದಂಬರಿಯಲ್ಲಿ ಪ್ರಿನ್ಸಿಪಲ್ ಕಾರು ಬಿಟ್ಟು ಇಳಿಯುವುದಿಲ್ಲ, ಇಲ್ಲಿ ಸೈಕಲ್ ಹೊಡೆಯುತ್ತಾರೆ. ಅಲ್ಲಿ ಹೊಸದಿಲ್ಲಿಯ ಐಐಎಂ ಕಾಲೇಜಿದೆ ಇಲ್ಲಿ ಬರೀ ಎಂಜಿನಿಯರಿಂಗ್ ಕಾಲೇಜಿದೆ. ಇನ್ನಷ್ಟು ಬದಲಾವಣೆಗಳೂ ಇವೆ. ವಿಧು ವಿನೋದ್ ಚೋಪ್ರಾ ತಮ್ಮ ಸ್ವಂತ ಬ್ಯಾನರ್‌ನಡಿ ಈ ಚಿತ್ರ ನಿರ್ಮಿಸಿದ್ದಾರೆ.

ಇಲ್ಲಿ ನಮಗೊಬ್ಬ ಪ್ರಭುದ್ದ ಹಾಸ್ಯಗಾರನ ಪರಿಚಯವಾಗುತ್ತದೆ. ಅವನೇ ಓಮಿ ವೈದ್ಯ. ಸೈಲೆಂಸೆರ್ ನಾಮದಲ್ಲಿ ಇಂಗ್ಲಿಷ್ ಹಿಂದಿಯ ಸಂಭಾಷಣೆ ಕೊಡುವ ಬಗೆ ಅತ್ಯದ್ಭುತ. ಇನ್ನು ಅಮೀರ್ ಬಗ್ಗೆ ಹೇಳಲೇ ಬೇಕಾಗಿಲ್ಲ. ಅವನ ವಯಸ್ಸು ೪೪ ಎಂದು ಹೇಳಿದರೆ ನೀವು ನಂಬಲಿಕ್ಕೆ ಆಗುವುದೇ. ವೈರಸ್ (VIRUS) ಬಗ್ಗೆ ಹೇಳಲೇ ಬೇಕಾಗಿಲ್ಲ. ಬೊಮನ್ ಇರಾನಿಯ ಮತ್ತೊಂದು ಅಧ್ಭುತ ಅಭಿನಯ ನೀವು ಕಾನಲಿದ್ದಿರಿ ಎಂದರೆ ತಪ್ಪಾಗಲಾರದು.

ಒಟ್ಟಾರೆ
ಈ ವರ್ಷದ ಎಲ್ಲಾ ಪ್ರಶಸ್ತಿಗಳನ್ನು ಮೂವರು ಮೂರ್ಖರು ನೊಂದಯಿಸಲಿದ್ದಾರೆ.

No comments:

Post a Comment

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು