Thursday, October 20, 2011

ಅಂತು ಇಂತೂ ಹೊರಟಿತು ನಮ್ಮ ಬೆಂಗಳೂರು ಮೆಟ್ರೋ

ಬೆಂಗಳೂರಿಗರ ಬಹು ನಿರೀಕ್ಷಿತ ಕನಸಿನ ಕೂಸು ಮೆಟ್ರೋ ರೈಲಿನ ಮೊದಲನೇ ಹಂತ, ಅಂತೂ ಇಂದು 20  ಅಕ್ಟೋಬರ್ 2011 ರಂದು 11  ಗಂಟೆಗೆ ಉಧ್ಘಾಟನೆ ಆಗಿದೆ. ಮಹಾತ್ಮಾ ಗಾಂಧಿ ರಸ್ತೆಯಿಂದ ಬೈಯಪ್ಪನಹಳ್ಳಿ ವರೆಗೆ  ಈ ಮೆಟ್ರೋ ರೈಲು ಸಂಚರಿಸಲಿದೆ.ಸಂಪೂರ್ಣ ಹವಾ ನಿಯಂತ್ರಿತವಾಗಿರುವ ನಮ್ಮ ಮೆಟ್ರೋ ರೈಲು ಒಂದುಬಾರಿಗೆ ಒಂದು ಸಾವಿರ ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ. ರೈಲು ಬೋಗಿಯ ಒಳಗಿನ ಎರಡೂ ಬದಿಗಳಲ್ಲಿ ಸಿಸಿಟಿವಿ ಹಾಗೂ ಸೀಟಿನ ವ್ಯವಸ್ಥೆ ಮಾಡಲಾಗಿದೆ. 2006 ರಲ್ಲಿ ಆರಂಭವಾದ ಮೆಟ್ರೋ ಯೋಜನೆ ಕಾಮಗಾರಿ ಹಲವಾರು ಅಡೆತಡೆಗಳ ನಡುವೆಯೂ ಐದು ವರ್ಷಗಳ ನಂತರ ಪೂರ್ಣಗೊಂಡಿದ್ದು, ಗುರುವಾರ ಸಂಜೆ 4 ಗಂಟೆಗೆ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ. 2006 ರಲ್ಲಿ ಆರಂಭವಾದ ಮೆಟ್ರೋ ಯೋಜನೆ ಕಾಮಗಾರಿ ಹಲವಾರು ಅಡೆತಡೆಗಳ ನಡುವೆಯೂ ಐದು ವರ್ಷಗಳ ನಂತರ ಪೂರ್ಣಗೊಂಡಿದ್ದು, ಗುರುವಾರ ಸಂಜೆ 4 ಗಂಟೆಗೆ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ.
 ದಕ್ಷಿಣ ಭಾರತದ ಮೊದಲ ಮೆಟ್ರೋ ರೈಲು ಸೇವೆ ಕೂಡ ಇದಾಗಿದೆ.

5  ರೈಲು ನಿಲ್ದಾಣಗಳು:
  1. ಎಂ.ಜಿ.ರಸ್ತೆ,
  2. ಟ್ರಿನಿಟಿ ರಸ್ತೆ
  3. ಇಂದಿರಾನಗರ
  4. ಸ್ವಾಮಿ ವಿವೇಕಾನಂದ ನಗರ
  5. ಬೈಯಪ್ಪನ ಹಳ್ಳಿ

ಮೆಟ್ರೋ ರೈಲು ತಲುಪುವ ಸಮಯದ ವಿವರ :
ಎಂ.ಜಿ.ರಸ್ತೆ - ಟ್ರಿನಿಟಿ ರಸ್ತೆ : 1 ನಿಮಿಷ 30 ಸೆಕೆಂಡ್‌
ಟ್ರಿನಿಟಿ- ಹಲಸೂರು ರಸ್ತೆ : 1 ನಿಮಿಷ 33 ಸೆಕೆಂಡ್‌
ಹಲಸೂರು - ಇಂದಿರಾನಗರ : 1 ನಿಮಿಷ 45 ಸೆಕೆಂಡ್‌
ಇಂದಿರಾ ನಗರ- ಸ್ವಾಮಿ ವಿವೇಕಾನಂದ ನಗರ : 1 ನಿಮಿಷ 55 ಸೆಕೆಂಡ್‌
ಸ್ವಾಮಿ ವಿವೇಕಾನಂದ ನಗರ - ಬೈಯಪ್ಪನ ಹಳ್ಳಿ: 2 ನಿಮಿಷ

 
ಮೆಟ್ರೋ ರೈಲು ಪ್ರಯಾಣದರ
ಎಂ.ಜಿ.ರಸ್ತೆ - ಟ್ರಿನಿಟಿ ರಸ್ತೆ 10 ರೂ.
ಎಂ.ಜಿ ರಸ್ತೆ - ಹಲಸೂರು 12 ರೂ.
ಎಂ.ಜಿ.ರಸ್ತೆ -ಇಂದಿರಾ ನಗರ 12 ರೂ.
ಎಂ.ಜಿ.ರಸ್ತೆ - ಸ್ವಾಮಿ ವಿವೇಕಾನಂದ ನಿಲ್ದಾಣ 14 ರೂ.
ಎಂ.ಜಿ. ರಸ್ತೆ - ಬೈಯಪ್ಪನ ಹಳ್ಳಿ 15 ರೂ.

ಇನ್ನಷ್ಟು  ಸುದ್ದಿಗಳು:
http://kannada.oneindia.in/news/2011/10/18/priyanka-bmrcl-metro-driver-kaggalipura-farmer-daughter-aid0039.html
http://kannada.oneindia.in/news/2011/10/17/namma-metro-bmrcl-sanchar-saral-ಸರಾg-cards-aid0039.ಹ್ತ್ಮ್ಲ್
http://kannada.oneindia.in/news/2011/10/13/bmrcl-namma-metro-inauguration-security-arrangements-aid0039.html

Friday, September 9, 2011

Steve Jobs Apple;s unleashed..

  Macintosh of 1984
Powerbook 1991
PowerMac 1997
Power Book 1998
iBook 1999
iMac 1998
Power Mac G4 Cube 2000
i Mac 2000
i Phone/ i  Pod Touch 1997
Macbook Air

Friday, September 2, 2011

ನೀವು ನೋಡದೆ ಇರೋ ಚಿತ್ರ- ವಿಚಿತ್ರ ಕಟ್ಟಡಗಳು

 
 
 
 
 
 
 
 
 
 
 
 
Some more can be found at: http://unusual-architecture.com/

Tuesday, August 23, 2011

ಅಮೇರಿಕಾ ಪ್ರವಾಸ -- ಮತ್ತೊಮ್ಮೆ

ಮತ್ತೊಮ್ಮೆ ಮಗದೊಮ್ಮೆ ಅಮೆರಿಕಾಕ್ಕೆ ಪ್ರಯಾಣ ಬೆಳೆಸುವ ಅವಕಾಶ ನನಗೆ ಒದಗಿ ಬಂದಿದೆ. ಬಾರಿ ಷಿಕಾಗೋ(Chicago) ನಗರಕ್ಕೆ ಪ್ರಯಾಣ ಬೆಳೆಸಿದ್ದೇನೆ. ಇದರ ಸವಿವರ, ಸಪೂರವಾಗಿ ನಿಮ್ಮ ಮುಂದೆ ಇಡುತ್ತಿದ್ದೇನೆ. ಈ ಬಾರಿಯ ಪಯಣ ಬೆಂಗಳೂರು - ದುಬೈ - ಪ್ಯಾರಿಸ್ - ಷಿಕಾಗೋ ಮಾರ್ಗವಾಗಿ. ಕಿಂಗ್ ಫಿಷರ್ - ಏರ್ ಫ್ರಾನ್ಸ್ ವಿಮಾನಗಳಲ್ಲಿ ಪಯಣ ಅಷ್ಟೇನೂ ಸುಖಕರವಾಗಿರಲಿಲ್ಲ. ಜೊತೆಗೆ ಪಯಣದ ಸಮಯ ಕೂಡ ಜಾಸ್ತಿ, ಸುಮಾರು ೨೮ ಗಂಟೆಗಳು . ಷಿಕಾಗೋ ದಲ್ಲಿ ಬಂದೊಡನೆ ಅಮೆರಿಕ ವಲಸೆ ಅಧಿಕಾರಿಗಳ ಬಳಿ ಹೋದೆನು. ಇವರು ನನಗೆ ಅಮೇರಿಕಾದಲ್ಲಿ ಉಳಿದುಕೊಳ್ಳಲು ಮೊದ ಮೊದಲು ನಿರಾಕರಿಸಿದರು, ನಂತರ ಒಂದು ತಿಂಗಳ ಮಟ್ಟಿಗೆ ಉಳಿದು ಕೊಳ್ಳಲು ಅವಕಾಶ ಕೊಟ್ಟರು. ಇದಕ್ಕೆ ಕಾರಣ ನನ್ನ H1B ವೀಸಾ ಮುಗಿಯುವ ಅವಧಿ ಬಹಳ ಹತ್ತಿರ, ಕೇವಲ ಒಂದು ತಿಂಗಳು ಮಾತ್ರ ಉಳಿದಿತ್ತು. ಹೇಗೋ ಅವರ ಬಳಿ ಸ್ವಲ್ಪ ಹೊತ್ತು ಮಾತು ಕಥೆ ನಡೆಸಿ, ಅಮೇರಿಕಾದಲ್ಲಿ ಉಳಿದುಕೊಳ್ಳಲು ಮತ್ತೊಂದು ಅವಕಾಶ ಪಡೆದೆನು. ಇಲ್ಲಿ ನನ್ನ ಸ್ನೇಹಿತನ ಮನೆಯಲ್ಲಿ ಉಳಿದುಕೊಳ್ಳುವುದು ಎಂದು ತೀರ್ಮಾನಿಸಿದ್ದೆನು.ಅವನ ದೂರವಾಣಿ ಸಂಖ್ಯೆ ನನ್ನ ಬಳಿ ಇತ್ತು. ಅವನಿಗೆ ಕರೆ ಮಾಡಲು ವಿಮಾನ ನಿಲ್ದಾಣದಲ್ಲೇ ಇದ್ದ ಸಾರ್ವಜನಿಕ ದೂರವಾಣಿಯನ್ನು ಉಪಯೋಗ ಮಾಡಿಕೊಂಡೆನು. ಇಲ್ಲೂ ಕೂಡ ದೂರವಾಣಿ ಯಂತ್ರಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಇದಕ್ಕಾಗಿ ಒಂದು ಡಾಲರ್ ವ್ಯರ್ಥವಾಯಿತು. ಹೇಗೋ ಕೊನೆಗೂ ಕರೆ ಮಾಡಿ ಸಂಜೆಗೆ ಮನೆಗೆ ಬರುತ್ತೇನೆ ಎಂದು ತಿಳಿಸಿದೆನು. ಏಕೆಂದರೆ, ಅವನು ಕೂಡ ಕೆಲಸ ಮುಗಿಸಿ ಬರುವ ಸಮಯಕ್ಕೆ ಸಂಜೆ ಆಗುವುದು ಎಂದು ತಿಳಿದಿತ್ತು. ಈಗ ಇನ್ನು ಮದ್ಯಾನ್ಹ ವಾದ್ದರಿಂದ ಅಂತರ್ಜಾಲ ದ ಬಳಕೆ ಮಾಡಿ ಕೆಲವರಿಗೆ ಇ-ಮೇಲ್ ಮಾಡಿದೆ. ಹಾಗು ಕೆಲವರಿಗೆ ಗೂಗಲ್ ಬಳಕೆ ಮಾಡಿ ಕರೆ ಕೂಡ ಮಾಡಿದೆ. ಗೂಗಲ್ ನ ಉಪಯೋಗ ಅಮೇರಿಕಾದಲ್ಲಿ ಬಹಳವಾಗಿದೆ ಇದು ಒಂದು ಉದಾಹರಣೆ ಅಷ್ಟೇ. ಇದೆ ಸಮಯದಲ್ಲಿ ಇಲ್ಲಿ ಕೆಲವು ಹುಡುಗರು ಭಾರತದಿಂದ M.S.in CS & E ಮಾಡಲು ಬಂದಿಳಿದಿದ್ದರು. ಇವರಿಗೆ ನನ್ನ ಬಳಿ ಇದ್ದ ಚಿಲ್ಲರೆ ಹಣವನ್ನು ಉಪಯೋಗಿಸಿ ಅವರ ಸ್ನೇಹಿತರು ಮತ್ತು ಬಂಧು ಬಂದವರಿಗೆ ಕರೆ ಮಾಡಿ ವಿಷಯ ತಿಳಿಸಲು ಉಪಕರಿಸಿದೆನು. ಸುಮಾರು ೫ ಗಂಟೆಗೆ ವಿಮಾನ ನಿಲ್ದಾಣ ವನ್ನು ಬಿಟ್ಟು ಮನೆಯ ಕಡೆ ಟ್ಯಾಕ್ಷ್ಸಿ ಯಲ್ಲಿಪ್ರಯಾಣ ಬೆಳೆಸಿದೆನು. ಮಾರ್ಗ ಮದ್ಯೆ ಟ್ಯಾಕ್ಷ್ಸಿ ಚಾಲಕನ ದೂರವಾಣಿ ಉಪಯೋಗಿಸಿ ನನ್ನ ಸ್ನೇಹಿತನಿಗೆ ಕರೆ ಮಾಡಿದೆನು. ೬ ಗಂಟೆಗೆ ಮನೆ ಸೇರಿದೆನು. ಇಲ್ಲಿಯೂ ನನಗೆ ಮತ್ತೊಂದು ಆಘಾತವಾಯಿತು. ಟ್ಯಾಕ್ಷ್ಸಿ ಯವನು ಮೀಟರ್ ಗಿಂತ ಹೆಚ್ಚು ಶುಲ್ಕ ವಿಧಿಸಿದನು. (ಅಂದರೆ ಒಂದೂವರೆ) ಆದರೆ ಇಲ್ಲಿ ನಿಮಗೆ ರಶೀದಿ ಸಿಗುತ್ತೆ ಅಷ್ಟೇ. ಈಗ ನನ್ನ ಸ್ನೇಹಿತನ ದೂರವಾಣಿ ಉಪಯೋಗಿಸಿ ನನ್ನ ಅರ್ಧಾಂಗಿಗೆ ಕರೆ ಮಾಡಿ, ನನ್ನ ಸುರಕ್ಷಿತವಾದ ಆಗಮನವನ್ನು ತಿಳಿಸಿದೆನು.

Friday, August 5, 2011

The Perferct point snaps..... --> Skilled Photography











Wednesday, June 29, 2011

ಶಹಬ್ಬಾಸ್ ಅಮೆರಿಕ - ಹಿಂದು ದೇವತೆಗಳೊಂದಿಗೆ ಅಮೆರಿಕ ಅಂಚೆಚೀಟಿ

ಅಮೆರಿಕಾದಲ್ಲಿ ವಾಸಿಸುತ್ತಿರುವ ಭಾರತೀಯರಿಗಾಗಿ ww.USA-Postage.com, ಏಳು ಅಧ್ಯಾತ್ಮಿಕ ವಿನ್ಯಾಸದಲ್ಲಿ ಅಂಚೆ ಚೀಟಿಗಳನ್ನು ಹೊರತಂದಿದೆ. ಸಾಯಿಬಾಬಾ, ಮಹಾಲಕ್ಷ್ಮಿ , ಶ್ರೀ ವೆಂಕಟೇಶ್ವರ, ಸುಬ್ರಹ್ಮಣ್ಯ, ವಿನಾಯಕ, ಶಿವಪಾರ್ವತಿ, ಶ್ರೀಕೃಷ್ಣನ ಚಿತ್ರಗಳೊಂದಿಗೆ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಈ ರೀತಿಯ ಅಂಚೆಚೀಟಿಗಳನ್ನು ಹೊರತರುತ್ತಿರುವುದು. ಮತ್ತೆಲ್ಲೂ ಲಭ್ಯವಾಗದ ವಿಶಿಷ್ಟ ವಿನ್ಯಾಸಗಳಲ್ಲಿ ಈ ಅಂಚೆಚೀಟಿಗಳನ್ನು ರೂಪಿಸಲಾಗಿದೆ. ಉಡುಗೊರೆ ರೂಪದಲ್ಲಿ ಕೊಡಲು, ವಿಶೇಷ ಸಂದರ್ಭಗಳಲ್ಲಿ ಬರೆಯುವ ಪತ್ರಗಳಿಗೆ ಅಂಟಿಸಲು ಈ ಅಂಚೆಚೀಟಿಗಳನ್ನು ಬಳಸಿಕೊಳ್ಳಬಹುದು.

ಈ ರೀತಿಯ ವಿಭಿನ್ನ ಅಂಚೆಚೀಟಿಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಅಮೆರಿಕಾದಲ್ಲಿನ ಭಾರತೀಯರು ಇವುಗಳನ್ನು ಆನ್ ಲೈನ್ ನಲ್ಲಿ ಖರೀಸಬಹುದು. ಪ್ರತಿ ಅಂಚೆಚೀಟಿಯ ಮಖ ಬೆಲೆ 18.99 ಡಾಲರ್. ಭಾರತೀಯ ದೇವತೆಗಳು ಅಮೆರಿಕಾ ಅಂಚೆಚೀಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ.

2011ರಲ್ಲಿ ಹುಟ್ಟಿ ಬೆಳೆದ ಮಾರ್ಡ್ರನ್ ಗಾದೆಗಳು

ಒರಿಜಿನಲ್ ಗಾದೆಗಳು, ನುಡಿಗಟ್ಟುಗಳನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿ 2011ರ ಜನ ಜೀವನಶೈಲಿಗೆ ಹೊಂದುವ ಕೆಲವು ಗಾದೆಗಳ ಸಂಗ್ರಹ ಇಲ್ಲಿದೆ. ಹೆಚ್ಚು ಪೀಠಿಕೆ ಬೇಡ, ಸುಮ್ಮನೆ ಓದಿ ಆನಂದಿಸಿ

ಆಳಾಗಿ ದುಡಿ; ಹಾಳಾಗಿ ಹೋಗು

* ಕೈ ಕೆಸರಾದರೆ ನಾನೇನು ಮಾಡಲಿ?

* ಉಪ್ಪು ತಿಂದ ಮೇಲೆ ಬೀಪಿ ಬರಲೇಬೇಕು

* ಕಾಲು ಇದ್ದಷ್ಟು ಹಾಸಿಗೆ ಹಾಸಿಕೋ

* ಆಕಳು ಕಪ್ಪಾದರೆ ಸಗಣಿನೂ ಕಪ್ಪೇ..

* ಜ್ಞಾನ ದೇಗುಲವಿದು, ಮೊಬೈಲ್ ಸ್ವಿಚ್ ಆಫ್ ಮಾಡಿ ಒಳಗೆ ಬನ್ನಿ

* ಏನಾದ್ರೂ ಮಾಡು; ಮೊದ್ಲು ಸ್ನಾನ ಮಾಡು

* ಕಬ್ಬು ಡೊಂಕಾದರೆ ತಿನ್ನೋದು ಬಿಡ್ತೇವ್ಯೇ?

* ಇಬ್ಬರ ಜಗಳ, ಮೂರನೆಯವನಿಗೆ ಪೆಟ್ಟು.

* ಹಣ್ತಿಂದವ ತಪ್ಪಿಸಿಕೊಂಡ; ಮೂತಿ ಒರೆಸ್ಕಂಡವ ಸಿಕ್ಕಾಕ್ಕೊಂಡ

* ಮನಸ್ಸೊಳಗೆ ಅನಾಚಾರ, ಮುಖದಲ್ ಬೃಂದಾವನ..

* ಗೆಳೆಯರ ಜಗಳ ಗುಂಡು ಹಾಕುವ ತನಕ..

* ವೈದ್ಯ ಬಯಸಿದ್ದೂ ಡಯಾಬಿಟೀಸು, ರೋಗಿಗಾಗಿದ್ದೂ ಡಯಾಬಿಟೀಸು.

Wednesday, March 23, 2011

Chocolate names in the mouth of Lovers

PERK - Perfect Emotional Romantic Kiss.
MUNCH - Meet Urgetnly Now for a Charming Hug.
KIT KAT - Kiss In Time, Kiss Any Time
DAIRY MILK - Darling Always I Remeber You, Mostly In Loving Kisses.
OK - One Kiss.....
Which one you are getting to your Lover ?

Thursday, February 17, 2011

ಅಮೆರಿಕ ಲೈಫು ಇಷ್ಟೇನೆ ...!!!

ತಿಂಗಳ ಕೊನೆಯ ಡಾಲರಿಗಾಗಿ
ವಾರ ಪೂರ್ತಿ ಯಾರಿಗೋ ದುಡಿದು
ವೀಕೆಂಡ್ ಶಾಪಿಂಗ್ ವಾಶಿಂಗ್ ಮಾಡಿ
ಪಾರ್ಟಿ ಕ್ಲಬ್ಬಿನ ಲೋಕವ ಸೇರು
ಲೈಫು ಇಷ್ಟೇನೆ ...!


ವಾಲ್ಮಾರ್ಟ್ ಟಾರ್ಗೆಟ್ ಬೆಷ್ಟ್ ಬೈ ಸುತ್ತು
ಡಾಲರ್ ಜೊತೆಗೆ ರೂಪಾಯಿ ಗುಣಿಸು
ಆರ್ಕುಟ್ ಫೇಸ್ಬುಕ್ ಸ್ಕೈಪನೆ ಜಪಿಸಿ
ಲ್ಯಾಪ್-ಟಾಪ್ ಅಲ್ಲೇ ಜೀವನ ಮುಗಿಸು
ಲೈಫು ಇಷ್ಟೇನೆ ...!

ಮಸಾಲೆ ಊಟವ ಮನದಲೆ ನೆನೆದು
ಬರ್ಗರ್ ಚೀಸು ಕಣ್ಣ್ಮುಚ್ಚಿ ತಿಂದು
ನೀರಿನ ಬದಲು ಕೂಕನೆ ಕುಡಿದು
ಬೊಜ್ಜು ತುಂಬಿದ ಹೊಟ್ಟೆಯ ನೋಡು
ಲೈಫು ಇಷ್ಟೇನೆ ...!

ರೋಡು ಕಾರು ಆರಾಮು ನೋಡಿ
ನಮ್ ದೇಶಾನ ಉದ್ದಕ್ಕೂ ತೆಗಳು
ಟ್ರಾಫಿಕ್ ಅಲ್ಲಿ ಟಿಕೇಟು ಸಿಕ್ರೆ
ನಮ್ಮೊರ್ ಮಾಮನೆ ಸರಿ ಅಂತ ಹೊಗಳು
ಲೈಫು ಇಷ್ಟೇನೆ ...!

ಲಾಂಗ್ ವೀಕೆಂಡ್ಗೆ ಲಾಂಗ್ ಲಾಂಗ್ ಪ್ಲಾನು
ಮೂರ್ ದಿನದಲ್ಲಿ ಆರೂರ್ ಸುತ್ತು
ನಮ್ ದೇಶಾನೇ ಸರಿಯಾಗಿ ನೋಡ್ದೆ
ಅಮೆರಿಕ ಮಾತ್ರ ಪೂರ್ತಿ ನೋಡ್ಕೋ
ಲೈಫು ಇಷ್ಟೇನೆ...!

ಫೋನು ಕ್ಯಾಮೆರಾ ಡೀಲ್ಅಲ್ಲಿ ಮುಳುಗು
ಬೇಕೋ ಬೇಡವೋ ಎಲ್ಲಾನು ಕೊಂಡ್ಕೋ
ಹಾಗು ಹೀಗೂ ಇಂಡಿಯಾಗೆ ಸೇರ್ಸು
ಎಲ್ಲಾರ್ಗೂ ಹಂಚಿ ದೊಡ್ಡತನ ತೋರ್ಸು
ಲೈಫು ಇಷ್ಟೇನೆ ...!

ಈ ಬರಹ ನನ್ನದಲ್ಲ. ನನ್ನಂತೆಯೇ ಓರ್ವ ಅಮೆರಿಕ ವನ್ನು ಸುತ್ತಿದವರು ಬರೆದಿದ್ದು..........

Friday, January 21, 2011

Changing the names of bangalore by US Visitors/Tourists..

In Bangalore, the US tourists and visitors decide to change or modify the names of few places as per their pronunciation/understanding. The list goes as below..
Eajipura - Easy Pura
Domlur - Dumb lur
Jayanagar - Joy Nagar
Lakkasandra - Luck Sandra(Sandra as in Sandra Bullock)
Jakkasandra - Jack Sandra
Bommasandra - Bum Sandra
Bhoopasandra - B**b Sandra ;-)
Marathalli - Marta Halli
Yelahanka - You All Hunk Huh ?
Madiwala - My Diva La
Yeshwantpur - Yes Want Pure
Hoody - Howdy
Koramangala - Core Mangla
Shivaji Nagar - She Wow Jee Nagar / Schwarzzenegger
Alsur - All Sore ?
Peenya - Pain ya
Basavanagudi - Bus Van Goody
Hosa road - whose ya road
Shikari palya - Shakira Palya :-) lol

Monday, January 3, 2011

Train your brain 50% faster

Can U read this?

fi yuo cna raed tihs, yuo hvae a sgtrane mnid, too. Cna yuo raed tihs? Olny 55 plepoe tuo fo 100 anc.

i cdnuolt blveiee taht I cluod aulaclty uesdnatnrd waht I was rdanieg. The phaonmneal pweor of the hmuan mnid, aoccdrnig to a rscheearch at Cmabrigde Uinervtisy, it dseno't mtaetr in waht oerdr the ltteres in a wrod are, the olny iproamtnt tihng is taht the frsit and lsat ltteer be in the rghit pclae. The rset can be a taotl mses and you can sitll raed it whotuit a pboerlm. Tihs is bcuseae the huamn mnid deos not raed ervey lteter by istlef, but the wrod as a wlohe. Azanmig huh? yaeh and I awlyas tghuhot slpeling was ipmorantt! if you can raed tihs forwrad it.

If you can read this, your brain is 50% faster than those who can't.
Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು