Wednesday, April 7, 2010

3G ನಿಮಗೆಷ್ಟು ಗೊತ್ತು ? How much do u know about 3G ?

3G -ಮೂರನೆಯ ತಲೆಮಾರಿನ ಮೊಬೈಲ್ ಸಂಪರ್ಕ ತಂತ್ರಜ್ಞಾನ. ಅನಲಾಗ್ ಮೊದಲನೆಯ ತಲೆಮಾರಿನದು. ಸರಳ ಡಿಜಿಟಲ್ ವಿಧಾನ ಎರಡನೆಯದು. 3G ಮೂರನೆಯದು. ಇದರಲ್ಲಿ ಅತಿವೇಗದ ಸಂಪರ್ಕ ಸಾಧ್ಯ. ಆದುದರಿಂದ ಈ ವಿಧಾನವನ್ನು ಬಳಸುವ ಮೊಬೈಲ್ ಫೋನುಗಳ ಮೂಲಕ ಒಬ್ಬರಿಗೊಬ್ಬರು ವೀಡಿಯೋ ಕರೆ ಕೂಡ ಮಾಡಬಹುದು. ಸುಮಾರು 3.6 mbps ನಷ್ಟು ವೇಗದಲ್ಲಿ ಅಂತರಜಾಲ ಸಂಪರ್ಕ ಸಾಧ್ಯ. ಟೆಲಿವಿಶನ್ ಕೂಡ ನೋಡಬಹುದು. ಹ್ಞಾಂ, ಇದೆಲ್ಲ ಮಾಡಬೇಕಾದರೆ ನಿಮ್ಮ ಮೊಬೈಲ್ ಫೋನಿನಲ್ಲಿ 3G ಸೌಲಭ್ಯ ಇರಬೇಕು ಮತ್ತು ನಿಮ್ಮ ಮೊಬೈಲ್ ಸಂಪರ್ಕ ಸೇವೆ ನೀಡುವವರು ಈ ಸೇವೆಯನ್ನು ನೀಡುತ್ತಿರಬೇಕು. ಇತ್ತೀಚೆಗೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಬಿಎಸ್‌ಎನ್‌ಎಲ್‌ನವರು ಈ ಸೇವೆ ಪ್ರಾರಂಭಿಸಿದ್ದಾರೆ. ಇನ್ನೆರಡು ತಿಂಗಳುಗಳಲ್ಲಿ ಕರ್ನಾಟಕದ 32 ನಗರಗಳಿಗೆ ಈ ಸೇವೆಯನ್ನು ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಬಹುಶಃ ಆರು ತಿಂಗಳುಗಳಲ್ಲಿ ಇತರೆ ಖಾಸಗಿ ಮೊಬೈಲ್ ಸಂಪರ್ಕ ನೀಡುವವರೂ ಈ ಸೇವೆಯನ್ನು ನಿಡಬಹುದು.

ಇದಕ್ಕೂ ಮುಂಚೆ 1G ಮತ್ತು 2G ಬಗ್ಗೆ ತಿಳಿಯೋಣವೆ ?????

ಆನಲಾಗ್‌(ಸಾದೃಶ್ಯ) ಸೆಲ್ಯುಲರ್‌ ದೂರವಾಣಿ ವ್ಯವಸ್ಥೆ (1G)
ವಾಣಿಜ್ಯಕವಾಗಿ ಮೊದಲ ಸಂಪೂರ್ಣ-ಸ್ವಯಂಚಾಲಿತ ಸೆಲ್ಯುಲರ್‌ ಜಾಲವನ್ನು (1G ಜನರೇಷನ್‌) NTT ಸಂಸ್ಥೆಯು 1979ರಲ್ಲಿ ಜಪಾನ್‌ನಲ್ಲಿ ಆರಂಭಿಸಿತು. ಆರಂಭಿಕ ಹಂತದಲ್ಲಿ ಜಾಲದ ವ್ಯಾಪ್ತಿ ಇಡೀ ಟೊಕಿಯೊ ಮಹಾನಗರ ಆವರಿಸಿತ್ತು. 20 ದಶಲಕ್ಷಕ್ಕಿಂತಲೂ ಹೆಚ್ಚು ನಿವಾಸಿಗಳಿದ್ದ ಟೊಕಿಯೊದಲ್ಲಿ, 23 ಬೇಸ್‌ ಸ್ಟೇಷನ್‌ಗಳ ಸೆಲ್ಯುಲರ್‌ ಜಾಲವಿತ್ತು. ಐದು ವರ್ಷಗಳಲ್ಲಿ, ಇಡೀ ಜಪಾನಿನ ಜನಸಂಖ್ಯೆಯನ್ನು ಒಳಗೊಳ್ಳುವಂತೆ NTT ಜಾಲವನ್ನು ವಿಸ್ತರಿಸಲಾಯಿತು. ಇದು ರಾಷ್ಟ್ರಾದ್ಯಂತ 1G ಜಾಲವನ್ನು ಹೊಂದಿದ ಮೊದಲ ಮೊಬೈಲ್‌ ಸೇವಾ ಸಂಸ್ಥೆಯಾಯಿತು.

1981ರಲ್ಲಿ 1G ಜಾಲದ ಎರಡನೆಯ ಆವೃತ್ತಿ ಬಿಡುಗಡೆಯಾಗಿತ್ತು. ಡೆನ್ಮಾರ್ಕ್‌, ಫಿನ್ಲೆಂಡ್‌, ನಾರ್ವೇ ಮತ್ತು ಸ್ವೀಡೆನ್‌ ದೇಶಗಳಲ್ಲಿ ನೊರ್ಡಿಕ್‌ ಮೊಬೈಲ್‌ ಟೆಲಿಫೋನ್‌ (NMT) ವ್ಯವಸ್ಥೆ ಆರಂಭವಾಗಿತ್ತು. NMT ಅಂತಾರಾಷ್ಟ್ರೀಯ ರೋಮಿಂಗ್(ಅನಂತ-ಅಸೀಮ) ವ್ಯವಸ್ಥೆ ಹೊಂದಿರುವ ಮೊದಲ ಮೊಬೈಲ್‌ ದೂರವಾಣಿ ಜಾಲವಾಗಿತ್ತು. ಆಸ್ಟೆನ್‌ ಮಾಕಿಟಲೊ ಎಂಬ ಸ್ವೀಡಿಷ್‌ ವಿದ್ಯುತ್‌ ಅಭಿಯಂತರ ಈ ಗುರಿ ಸಾಧಸಲು 1966ರಲ್ಲಿ ಕಾರ್ಯ ಆರಂಭಿಸಿದರು. ಇವರನ್ನು 'NMT ವ್ಯವಸ್ಥೆಯ ಪಿತಾಮಹ' ಎಂದು ಪರಿಗಣಿಸಲಾಗಿದೆ. ಕೆಲವರು ಇವರನ್ನು ಸೆಲ್ಯುಲರ್‌ ಫೋನ್‌ನ ಜನಕರೆಂದೂ ಪರಿಗಣಿಸುತ್ತಾರೆ.

ಆರಂಭಿಕ 1980ರ ದಶಕದಲ್ಲಿ UK, ಮೆಕ್ಸಿಕೊ ಮತ್ತು ಕೆನಡಾ ಸೇರಿದಂತೆ ಹಲವು ದೇಶಗಳು 1G ಜಾಲವ್ಯವಸ್ಥೆ ಆರಂಭಿಸಿದವು. USAದಲ್ಲಿ ಮೊದಲ ಬಾರಿಗೆ 1G ಜಾಲವು 1983ರಲ್ಲಿ ಆರಂಭವಾಯಿತು. ಚಿಕಾಗೋ ನಗರದ ಅಮೆರಿಟೆಕ್‌ ಸಂಸ್ಥೆಯು ಖ್ಯಾತ ಮೊಟೊರೊಲಾ ಡೈನಾಟ್ಯಾಕ್‌ ಮೊಬೈಲ್‌ ದೂರವಾಣಿ ಉಕಪರಣದ ಬಳಕೆಯೊಂದಿಗೆ ಆರಂಭಿಸಿತು. 1984ರಲ್ಲಿ, ಆಧುನಿಕ ವಾಣಿಜ್ಯ ಉದ್ದೇಶದ ಸೆಲ್ಯುಲರ್‌ ತಂತ್ರಜ್ಞಾನವನ್ನು ಬೆಲ್‌ ಲ್ಯಾಬ್ಸ್‌ ವಿನ್ಯಾಸದೊಂದಿಗೆ-ಅಭಿವೃದ್ಧಿಪಡಿಸಿತು. ಇದು ಬಹುಮಟ್ಟಿಗೆ ಗ್ಲ್ಯಾಡೆನ್‌, ಪ್ಯಾರೆಲ್ಮನ್‌ ಪೆಟೆಂಟ್‌ನ್ನು ಆಧರಿಸಿತ್ತು). ಇದು ಕೇಂದ್ರೀಯ ನಿಯಂತ್ರಿತ, ಅನೇಕ ಬೇಸ್‌ ಸ್ಟೇಷನ್‌ಗಳನ್ನು (ಸೆಲ್‌ ಸೈಟ್‌ಗಳು) ಬಳಸಿ ಸೇವೆಯೊದಗಿಸುತ್ತಿತ್ತು. ಪ್ರತಿಯೊಂದು ಬೇಸ್‌ ಸ್ಟೇಷನ್‌ ಒಂದು ಸಣ್ಣಪ್ರಮಾಣದ ವಲಯಕ್ಕೆ ಸೇವೆಯೊದಗಿಸುತ್ತದೆ (ಒಂದು ಸೆಲ್‌). ಭಾಗಶ:ಒಂದರ ಮೇಲೊಂದು ಜೋಡಿಸಿ ಸೆಲ್‌ ಸೈಟ್‌ಗಳನ್ನು ಸ್ಥಾಪಿಸಲಾಗಿರುತ್ತವೆ. ಸೆಲ್ಯುಲರ್‌ ವ್ಯವಸ್ಥೆಯಲ್ಲಿ, ಬೇಸ್ ಸ್ಟೇಷನ್‌ (ಸೆಲ್‌ ಸೈಟ್‌) ಹಾಗೂ ಟರ್ಮಿನಲ್‌ ((ಚಂದಾದಾರರ ದೂರವಾಣಿ ಉಪಕರಣ) ನಡುವಣ ಸಂಕೇತವು ಎರಡೂ ಕಡೆಗೆ ಸಮರ್ಪಕವಾಗಿ ತಲುಪಲು ಬಲಿಷ್ಟವಾಗಿರಬೇಕಷ್ಟೆ. ಹಾಗಾಗಿ, ವಿವಿಧ ಸೆಲ್‌ಗಳಲ್ಲಿ ಪ್ರತ್ಯೇಕ ಸಂವಾದಕ್ಕಾಗಿ ಒಂದೇ ಚಾನೆಲ್‌ನ್ನು(ಮಾಧ್ಯಮವನ್ನು) ಒಂದೇ ಹೊತ್ತಿಗೆ ಮಾತ್ರ ಬಳಸಬಹುದಾಗಿದೆ.

ಮೊಟ್ಟಮೊದಲ NMT ಹಾಗೂ ಮೊದಲ AMPS ಪ್ರತಿಷ್ಟಾಪನೆಗಳನ್ನು ಎರಿಕ್ಸನ್‌ AXE ಡಿಜಿಟಲ್‌ ವಿನಿಮಯದ ಗೋಚರತೆಯನ್ನು ಆಧರಿಸಿತ್ತು.

ಸೆಲ್ಯುಲರ್‌ ವ್ಯವಸ್ಥೆಗಳಿಗೆ ಹ್ಯಾಂಡೊವರ್‌ ಸೇರಿದಂತೆ ಬಹಳಷ್ಟು ಆಧುನಿಕ ತಂತ್ರಜ್ಞಾನಗಳ ಅಗತ್ಯವಿತ್ತು. ಮೊಬೈಲ್‌ ದೂರವಾಣಿಯು ಸೆಲ್‌ ನಿಂದ ಸೆಲ್‌ಗೆ ವರ್ಗಾವಣೆಗೊಂಡು ಸಂವಾದ ಮುಂದುವರೆಯಲು ಹ್ಯಾಂಡೊವರ್‌ ತಂತ್ರಜ್ಞಾನ ನೆರವಾಗುತ್ತಿತ್ತು. ಈ ವ್ಯವಸ್ಥೆಯು ಬೇಸ್‌ ಸ್ಟೇಷನ್‌ ಹಾಗೂ ಅವು ನಿಯಂತ್ರಿಸುವ ದೂರವಾಣಿಗಳಲ್ಲಿ ವ್ಯತ್ಯಾಸವಾಗಬಲ್ಲ ಸಂಕೇತ ರವಾನೆಯ ಸಾಮರ್ಥ್ಯ ಹೊಂದಿರುತ್ತವೆ. ಇದರಿಂದಾಗಿ ಶ್ರೇಣಿ ಮತ್ತು ಸೆಲ್‌ ಗಾತ್ರವೂ ಸಹ ಏರುಪೇರಿಗೆ ಸುಲಭ ದಾರಿ ನೀಡುತ್ತದೆ. ವ್ಯವಸ್ಥೆ ವಿಸ್ತಾರಗೊಂಡು ಗರಿಷ್ಠ ಸಾಮರ್ಥ್ಯ ಸಮೀಪಿಸಿದಾಗ, ಸಂಕೇತ ರವಾನೆಯ ಶಕ್ತಿ ಕುಗ್ಗಿಸುವ ಕ್ಷಮತೆಯು ಹೊಸ ಸೆಲ್‌ಗಳ ಸೇರ್ಪಡೆಗೆ ಅನುಮತಿ ನೀಡಿತು. ಇದರಿಂದಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಗಾತ್ರದ ಸೆಲ್‌ಗಳಾದವು; ಇದಕ್ಕೆ ಇಲ್ಲಿ ಹೆಚ್ಚು ಸಾಮರ್ಥ್ಯವೂ ಲಭಿಸುವುದು. ತುದಿಯಲ್ಲಿ ಆಂಟೆನಾ ಹೊಂದಿರದ ಹಳೆಯ, ಎತ್ತರದ ಸೆಲ್‌ ಜಾಲದ ಗೋಪುರಗಳು ಈ ರೀತಿಯ ಅಭಿವೃದ್ಧಿಗೆ ಸಾಕ್ಷ್ಯಾಧಾರಗಳಾಗಿವೆ. ಈ ಸೈಟ್‌ಗಳು ಮೊದಲಿಗೆ ದೊಡ್ಡ ಗಾತ್ರದ ಸೆಲ್‌ಗಳನ್ನು ಸೃಷ್ಟಿಸಿದ್ದವು. ಹಾಗಾಗಿ ಅವುಗಳ ಆಂಟೆನಾಗಳನ್ನು ಎತ್ತರದ ಗೋಪುರಗಳ ತುದಿಯಲ್ಲಿ ಪ್ರತಿಷ್ಟಾಪಿಸಲಾಗುತ್ತಿತ್ತು. ವ್ಯವಸ್ಥೆಯು ವಿಸ್ತರಿಸಿ ಸೆಲ್‌ ಗಾತ್ರಗಳು ಕಡಿಮೆಯಾದಾಗೆಲ್ಲ, ಶ್ರೇಣಿಯನ್ನು ಕುಗ್ಗಿಸಲು ಆಂಟೆನಾಗಳನ್ನು ಕೆಳಮಟ್ಟಕ್ಕಿಳಿಸಬಹುದಾಗಿತ್ತು.

ಡಿಜಿಟಲ್‌ ಮೊಬೈಲ್‌ ಸಂವಹನ (2G, 2.5G, ಮತ್ತು 2.75G)
ಡಿಜಿಟಲ್‌ 2G (ಎರಡನೆಯ ತಲೆಮಾರು) ಸೆಲ್ಯುಲರ್‌ ತಂತ್ರಜ್ಞಾನ ಮೂಲದ ಮೊದಲ ಆಧುನಿಕ ಆವಿಷ್ಕಾರ 1991ರಲ್ಲಿ ಆರಂಭಗೊಂಡಿತು. ಸದ್ಯಎಲಿಸಾ ಗ್ರೂಪ್‌ನ ಅಂಗವಾಗಿರುವ ರೇಡಿಯೊಲಿಂಜಾ GSM ದಲ್ಲಿ ಈ ತಂತ್ರಜ್ಞಾನ ಅಳವಡಿಸಲಾಯಿಸಿತು. 1G NMT ಜಾಲವನ್ನು ನಡೆಸುತ್ತಿದ್ದ, (ಇಂದು ಟಿಲಿಯಾಸೊನೆರಾ ಅಂಗವಾಗಿರುವ) ಟೆಲೆಕಾಂ ಫಿನ್ಲೆಂಡ್‌ ಸಂಸ್ಥೆಗೆ ರೇಡಿಯೊಲಿಂಜಾ ಸವಾಲೆಸೆದಾಗ ಮೊಬೈಲ್‌ ದೂರಸಂವಹನ ಕ್ಷೇತ್ರದಲ್ಲಿ ಸ್ಪರ್ಧೆಗೆ ನಾಂದಿಯಾಯಿತು.

ಮೊದಲ ಬಾರಿಗೆ 1993ರಲ್ಲಿ ಮೊಬೈಲ್‌ ದೂರವಾಣಿಗಳ ಮೂಲಕ ಮಾಹಿತಿ ಸೇವೆ ಆರಂಭಗೊಂಡಿತು. ಫಿನ್ಲೆಂಡ್‌ನಲ್ಲಿ ವ್ಯಕ್ತಿಗಳ ನಡುವೆ SMS ಪಠ್ಯ ಸಂದೇಶ ರವಾನೆಯೊಂದಿಗೆ ಇದು ಪರಿಚಯವಾಯಿತು. ಮೊಬೈಲ್‌ ದೂರವಾಣಿ ನೆರವಿನಂದ ಹಣ ಪಾವತಿ ವ್ಯವಸ್ಥೆಯನ್ನು 1998ರಲ್ಲಿ ಪ್ರಯೋಗಿಸಲಾಯಿತು. ಫಿನ್ಲೆಂಡ್‌ನಲ್ಲಿ ಕೊಕಾ ಕೊಲಾ ವಿತರಿಸುವ ಯಂತ್ರಕ್ಕಾಗಿ ಹಣ ಪಾವತಿ ಮಾಡುವುದರ ಮೂಲಕ ಇದನ್ನು ಜಾರಿಗೊಳಿಸಲಾಯಿತು. ಸ್ವೀಡೆನ್‌ನಲ್ಲಿ ಮೊದಲ ಬಾರಿಗೆ ಮೊಬೈಲ್‌ ಪಾರ್ಕಿಂಗ್‌ ವಾಣಿಜ್ಯ ಹಣ ಪಾವತಿಯ ಬಗ್ಗೆ ಪರೀಕ್ಷಿಸಲಾಗಿತ್ತು. ಆದರೆ 1999ರಲ್ಲಿ ನಾರ್ವೇದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಆರಂಭಿಸಲಾಯಿತು. ಬ್ಯಾಂಕ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಆಧರಿಸಿ 1999ರಲ್ಲಿ ಮೊದಲ ವಾಣಿಜ್ಯ ಪಾವತಿ ವ್ಯವಸ್ಥೆಯನ್ನು ಫಿಲಿಪ್ಪೀನ್ಸ್‌‌ ದೇಶದಲ್ಲಿ ಆರಂಭಿಸಲಾಯಿತು. ಗ್ಲೋಬ್‌ ಮತ್ತು ಸ್ಮಾರ್ಟ್‌ ಎಂಬ ಮೊಬೈಲ್‌ ನಿರ್ವಾಹಕರು ಏಕಕಾಲಕ್ಕೇ ತಮ್ಮ ಈ ಸೇವೆಗೆ ನಾಂದಿಹಾಡಿದರು. ಮೊಬೈಲ್‌ ದೂರವಾಣಿಗೆ ಮಾರಾಟವಾದ ಮೊದಲ ಕಡತವು ರಿಂಗಿಂಗ್‌ ಟೋನ್‌ ಆಗಿತ್ತು. ಇದನ್ನು 1998ರಲ್ಲಿ ಫಿನ್ಲೆಂಡ್‌ನಲ್ಲಿ ಬಳಸಲಾಯಿತು. ಮೊಬೈಲ್‌ ದೂರವಾಣಿಗಳಲ್ಲಿ ಮೊದಲ ಅಂತರಜಾಲ ಸಂಪೂರ್ಣ ಸೇವೆ 'ಐ-ಮೋಡ್‌' 1999ರಲ್ಲಿ ಬೆಳಕು ಕಂಡಿತು. ಜಪಾನಿನ NTT ಡೊಕೊಮೊ ಈ ಸೇವೆಯನ್ನು ಪರಿಚಯಿಸಿತು.

ವೈಡ್‌ಬ್ಯಾಂಡ್‌ ಮೊಬೈಲ್‌ ಸಂವಹನ-ಸಂಪರ್ಕ (3G)
ಮೊದಲ 3G (ಮೂರನೆಯ ತಲೆಮಾರಿನ) ಮೊದಲ ವಾಣಿಜ್ಯ ಉದ್ದೇಶದ ಆರಂಭ 2001ರಲ್ಲಾಯಿತು. ಪುನಃ ಜಪಾನ್‌ನಲ್ಲೇ NTT ಡೊಕೊಮೊ WCDMA ಪ್ರಮಾಣದಲ್ಲಿ 3G ಸೇವೆ ಆರಂಭಿಸಿತು. 'ರಿವಿಷನ್‌ ಎ'ಯನ್ನು EV-DOಗೆ ಹೊಂದಿಸಿಕೊಳ್ಳುವುದರ ಮೂಲಕ ಸಾಮಾನ್ಯ 2G CDMA ಜಾಲಗಳೆಲ್ಲವೂ 3G ಅಳವಡಿಕೆಗೆ ಸಿದ್ಧವಾದವು. EV-DOನ ರಿವಿಷನ್‌ ಎ ನಿಯಮಾವಳಿಗಳಿಗೆ ಹಲವು ಸೇರ್ಪಡೆ ಮಾಡುತ್ತದೆ. ಇದೇ ಸಮಯದಲ್ಲಿ ಹಳೆಯ EV-DO ಆವೃತ್ತಿಗಳಿಗೂ ಹೊಂದುವಂತೆ ಕಾರ್ಯ ನಿರ್ವಹಿಸುತ್ತದೆ.

ಈ ಬದಲಾವಣೆಗಳ ಪೈಕಿ ಹಲವು ಹೊಸ ಫಾರ್ವರ್ಡ್‌ ಲಿಂಕ್‌ ಡಾಟಾ ರೇಟ್‌ಗಳ ಪರಿಚಯವೂ ಇದೆ. ಇವುಗಳು ಗರಿಷ್ಠ ಬರ್ಸ್ಟ್‌ ರೇಟ್‌ನ್ನು ಪ್ರತಿ ಸೆಕೆಂಡ್‌ಗೆ 2.45 ಮೆಗಾಬಿಟ್ಸ್‌ಗಳಿಂದ 3.1 ಮೆಗಾಬಿಟ್ಸ್‌ಗಳಿಗೆ ಹೆಚ್ಚಿಸುತ್ತವೆ. ಸಂಪರ್ಕ ಸಾಧನಾ ಸಮಯ ಕಡಿತಗೊಳಿಸುವ ಪ್ರೊಟೊಕಾಲ್‌ಗಳನ್ನು (ವರ್ಧಿತ ಎಕ್ಸೆಸ್‌ ಚಾನೆಲ್‌ MAC) ಸಹ ಇವು ಒಳಗೊಂಡಿದ್ದವು. ಜೊತೆಗೆ, ಒಂದಕ್ಕಿಂತ ಹೆಚ್ಚು ಮೊಬೈಲ್‌ಗಳು ಅದೇ ಸಮಯಾವಧಿಯನ್ನು ಹಂಚಿಕೊಳ್ಳುವುದು (ಬಹು-ಬಳಕೆದಾರ ಪ್ಯಾಕೆಟ್‌ಗಳು) ಹಾಗೂ QoS ಫ್ಲ್ಯಾಗ್‌ಗಳ ಪರಿಚಯ. ಕಡಿಮೆ ಅಂತರ್ಗತವಾಗಿರುವಿಕೆ, VoIPಯಂತಹ ಕಡಿಮೆ ಬಿಟ್‌-ರೇಟ್‌ ಸಂವಹನಗಳಿಗೆ ಅವಕಾಶ ಮಾಡಿಕೊಡಲು ಈ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಯಿತು.

ಸ್ಥಾಪಿಸಲಾದ ನವೀನ ರೀತಿಯ 3G ತಂತ್ರಜ್ಞಾನಗಳಲ್ಲಿ ಹೈ-ಸ್ಪೀಡ್‌ ಡೌನ್ಲಿಂಕ್‌ ಪ್ಯಾಕೆಟ್‌ ಅಕ್ಸೆಸ್‌ (HSDPA) ಸಹ ಒಂದು. ಇದು ಹೈ-ಸ್ಪೀಡ್‌ ಪ್ಯಾಕೆಟ್‌ ಅಕ್ಸೆಸ್‌ (HSPA) ಗುಂಪಿನ ಒಂದು ವರ್ಧಿತ 3G (ಮೂರನೆಯ ತಲೆಮಾರಿನ ಮೊಬೈಲ್‌ ದೂರವಾಣಿ ವ್ಯವಸ್ಥೆಯು ಸಂವಹನದ ಪ್ರೊಟೊಕಾಲ್‌. ಇದಕ್ಕೆ 3.5G, 3G+ ಅಥವಾ ಟರ್ಬೊ 3G ಎಂದೂ ಹೇಳಲಾಗಿದೆ. ಯುನಿವರ್ಸಲ್ ಮೊಬೈಲ್‌ ಟೆಲಿಕಮ್ಯೂನಿಕೇಷನ್ಸ್‌ ಸಿಸ್ಟಮ್‌ (UMTS)-ಆಧಾರಿತ ಜಾಲಗಳು ಹೆಚ್ಚು ಡಾಟಾ ರವಾನಾ ವೇಗ ಮತ್ತು ಹೆಚ್ಚಿನ ಸಾಮರ್ಥ್ಯ ಪಡೆಯಲು ಇದು ಅವಕಾಶ ನೀಡುತ್ತದೆ.

ಸದ್ಯದ HSDPA ರಚನಾವ್ಯೂಹದ ನಿಯೋಜನಗಳು ಪ್ರತಿ ಸೆಕೆಂಡ್‌ಗೆ 1.8, 3.6, 7.2 and 14.0 ಮೆಗಾಬಿಟ್‌ ಡೌನ್ಲಿಂಕ್‌ ವೇಗಗಳಿಗೆ ಪೂರಕವಾಗಿರುತ್ತವೆ. HSPA+ನೊಂದಿಗೆ ಇನ್ನಷ್ಟು ವೇಗದ ವರ್ಧಕಗಳೂ ಜೊತೆಯಾಗುತ್ತವೆ. ಇದು ಪ್ರತಿ ಸೆಕೆಂಡಿಗೆ 42 ಮೆಗಾಬಿಟ್‌ಗಳು ಹಾಗೂ 3GPP ಪ್ರಮಾಣದ ರಿಲೀಸ್‌ 9ನೊಂದಿಗೆ 84 ಮೆಗಾಬಿಟ್‌ ವರೆಗೂ ವೇಗ ಸೌಲಭ್ಯ ನೀಡುತ್ತದೆ.

ಬ್ರಾಡ್‌ಬ್ಯಾಂಡ್‌ ನಾಲ್ಕನೆಯ ತಲೆಮಾರು (4G)

ಇತ್ತೀಚೆಗೆ ಬಿಡುಗಡೆಯಾದ, ಮುಂದುವರೆದ ವಿಕಸನದ ಭಾಗವೇ 4ನೆಯ ತಲೆಮಾರು. ಇದನ್ನು ಬಿಯಾಂಡ್‌ 3G ಎನ್ನಲಾಗಿದೆ. ಬ್ರಾಡ್‌ಬ್ಯಾಂಡ್‌ ವಯರ್ಲೆಸ್‌ ಅಕ್ಸೆಸ್‌ ಸೌಲಭ್ಯ ನೀಡುವುದೇ ಇದರ ಉದ್ದೇಶವಾಗಿದೆ. ವೇಗವಾಗಿ ಕಾರ್ಯನಿರ್ವಹಿಸಬಲ್ಲ ಸಾಧನಗಳಿಗೆ 100 ಮೆಗಾಬಿಟ್‌/ಸೆಕಂಡ್‌ ಸಾಮಾನ್ಯ ಡಾಟಾರೇಟ್‌ಗಳು ಹಾಗೂ ‌ITU-R[೧೭] ಸೂಚಿಸಿರುವ ತಟಸ್ಥ ಸಾಧನಗಳಿಗೆ 1 ಗಿಗಾಬಿಟ್‌/ಪ್ರತಿಸೆಕೆಂಡ್‌ ರಷ್ಟು ಡಾಟಾರೇಟ್‌ ಸೌಲಭ್ಯ ನೀಡುತ್ತದೆ. 4G ವ್ಯವಸ್ಥೆಗಳು 3GPP LTE (ದೀರ್ಘಾವಧಿ ವಿಕಸನ) ಸೆಲ್ಯುಲರ್ ಪ್ರಮಾಣವನ್ನು ಅಧರಿಸಿದೆ. ಇದು ಅತ್ಯುನ್ನತ ಮತ್ತು ಅಧಿಕ 326.4 ಮೆಗಾಬಿಟ್‌/ಸೆಕೆಂಡ್‌ ಬಿಟ್‌ ರೇಟ್‌ ಸೌಲಭ್ಯ ನೀಡುತ್ತವೆ. ಇದು ಬಹುಶಃ WiMax ಅಥವಾ ಫ್ಲ್ಯಾಷ್‌-OFDM ನಿಸ್ತಂತು ಮಹಾನಗರ ವಲಯದ ಜಾಲ ತಂತ್ರಜ್ಞಾನ ಅವಲಂಬಿಸಿದೆ. ಇದು ಮೊಬೈಲ್‌ ಬಳಕೆದಾರರಿಗೆ 233 ಮೆಗಾಬಿಟ್‌/ಸೆಕೆಂಡ್‌ ವರೆಗೂ ತಲುಪುವ ವೇಗಗಳುಳ್ಳ ಬ್ರಾಡ್‌ಬ್ಯಾಂಡ್‌ ವಯರ್ಲೆಸ್‌ ಅಕ್ಸೆಸ್‌ ಭರವಸೆ ನೀಡಬಲ್ಲದು. ಈ ವ್ಯವಸ್ಥೆಯಲ್ಲಿರುವ ರೇಡಿಯೊ ಇಂಟರ್ಫೇಸ್‌ ಎಲ್ಲಾ IP ಪ್ಯಾಕೆಟ್‌ ಸ್ವಿಚಿಂಗ್‌, MIMO ವೈವಿಧ್ಯ, ಬಹು-ನಿರ್ವಾಹಕ ತರಂಗಾಂತರದ ಯೋಜನೆ (ಮಲ್ಟಿ-ಕ್ಯಾರಿಯರ್‌ ಮಾಡ್ಯುಲೇಷನ್‌ ಸ್ಕೀಮ್‌), ಡೈನಾಮಿಕ್‌ ಚಾನೆಲ್‌ ಅಸೈನ್ಮೆಂಟ್‌ (DCA) ಹಾಗೂ ಚಾನೆಲ್‌-ಅವಲಂಬಿತ ನಿಗದೀಕರಣ ಆಧರಿಸಿದೆ. 4G ಯು ಸದ್ಯದ ಜಾಲ ಸೌಲಭ್ಯಕ್ಕೆ ಸಂಪೂರ್ಣ ರೀತಿಯಲ್ಲಿ ಬದಲಿ ವ್ಯವಸ್ಥೆಯಾಗಿರಬೇಕು. ಧ್ವನಿ, ಮಾಹಿತಿ ಹಾಗು ಪ್ರವಾಹರೂಪೀ ಬಹುಮಾಧ್ಯಮ (ಸ್ಟ್ರೀಮಿಂಗ್‌ ಮಲ್ಟಿಮೀಡಿಯಾ) ಮಾಹಿತಿಯನ್ನು ಬಳಕೆದಾರರಿಗೆ ಒದಗಿಸಲು ವ್ಯಾಪಕ, ಸುರಕ್ಷಿತ IP ವ್ಯವಸ್ಥೆ ಕಲ್ಪಿಸುವುದೆಂದು ನಿರೀಕ್ಷಿಸಲಾಗಿದೆ. ಈ ಮಾಹಿತಿಗಳನ್ನು ಹಿಂದಿನ ತಲೆಮಾರುಗಳಿಗಿಂತಲೂ ಹೆಚ್ಚಿನ ಡಾಟಾ ರೇಟ್‌ಗಳಲ್ಲಿ 'ಎಲ್ಲಾದರೂ, ಎಂತಾದರೂ' ಆಧಾರದ ಮೇಲೆ ನೀಡಬಹುದೆಂಬ ನಿರೀಕ್ಷೆಯೂ ಇದೆ. 2011ರಷ್ಟರೊಳಗೆ, ನಿಸ್ತಂತು ಉದ್ದಿಮೆಗಳು 4G ಬ್ರಾಡ್‌ಬ್ಯಾಂಡ್‌ ಜಾಲಗಳನ್ನು ಆರಂಭಿಸುತ್ತವೆ ಎಂಬ ನಿರೀಕ್ಷೆಯಿದೆ.

1 comment:

  1. ತಂತ್ರಜ್ಞಾನವನ್ನು ಬೆರಳುಗಳ ತುದಿಗೆ ತೆಗೆದುಕೊಂಡು ಹೋಗುವುದರಲ್ಲಿ ಯಾವುದೇ ಸಂಶಯ ವಿಲ್ಲ. ಅನ್ಸುತ್ತೆ..

    ReplyDelete

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು