Showing posts with label ಗೂಗಲ್. Show all posts
Showing posts with label ಗೂಗಲ್. Show all posts

Tuesday, December 8, 2009

Google Kannada Dictionary

ಗೆಳೆಯರೇ, ಮತ್ತೊಂದು ಕನ್ನಡ-ಇಂಗ್ಲೀಶ್ ಡಿಕ್ಷನರಿ ಬಂದಿದೆ. ಗೂಗಲ್ ತಾಣದ್ದು.
ಇಲ್ಲಿ ನೋಡಿ,
1. ಕನ್ನಡ-ಇಂಗ್ಲೀಶ್ http://www.google.com/dictionary?aq=f&langpair=knen
2. ಇಂಗ್ಲೀಶ್ - ಕನ್ನಡ - http://www.google.com/dictionary?aq=f&langpair=enkn

Friday, November 27, 2009

ಗೂಗಲ್ ಮಕ್ಕಳ ದಿನ ಲೋಗೋ


ಮಕ್ಕಳ ದಿನದಂದು ಗೂಗಲ್ ಅಂತರ್ಜಾಲ ತಾಣದಲ್ಲಿ ಕಾಣಿಸಿಕೊಳ್ಳುವ ಲೋಗೋವನ್ನು ನಿರ್ಧರಿಸಲು ಗೂಗಲ್ ಭಾರತದ ಮಕ್ಕಳಿಗಾಗಿ ಸ್ಪರ್ಧೆ ನಡೆಸಿತ್ತು.ನವಂಬರ್ ಹದಿನಾಲ್ಕರಂದು ಗೂಗಲ್ ತಾಣದಲ್ಲಿ ಪ್ರದರ್ಶಿತವಾದ ಚಿತ್ರ ಗುರ್ಗಾಂವಿನ ಪುರು ಪ್ರತಾಪ್ ಸಿಂಗ್ ಎಂಬ ಬಾಲಕನದ್ದು. ಈ ಚಿತ್ರದಲ್ಲಿ ಭಾರತದ ಸೊಗಸನ್ನು ಚಿತ್ರಿಸಲಾಗಿದೆ.ಜಿ ಅಕ್ಷರವನ್ನು ನವಿಲಾಗಿಸಿ,ಒ ಅಕ್ಷರವನ್ನು ಒಮ್ಮೆ ಜ್ಞಾನದ ಪ್ರತೀಕವಾಗಿಸಿ,ಇನ್ನೊಂದು ’ಒ’ವನ್ನು ವೈಜ್ಞಾನಿಕ ಪ್ರಗತಿಯ ಪ್ರತೀಕವನ್ನಾಗಿಸಿ,’ಜಿ’ಯನ್ನು ಕಾಶ್ಮೀರ ಭಾರತದ ಹೆಮ್ಮೆ ಎನ್ನುವುದನ್ನು ತೋರಿಸಲು,ಎಲ್ ಅಕ್ಷರವನ್ನು ದೇಶಕ್ಕೆ ಪ್ರಾಣವನ್ನು ಮುಡಿಪಾಗಿರುವ ಸೈನಿಕರ ಸೈನಿಕರ ಬಗ್ಗೆ ಗೌರವ ತೋರಿಸಲು ಮತ್ತು ಕೊನೆಯ ಇ ಅಕ್ಷರವನ್ನು ಗಾಂಧೀಜಿಯವರ ಮೌಲ್ಯಗಳ ಬಗ್ಗೆ ಗೌರವ ವ್ಯಕ್ತ ಪಡಿಸಲು ಬಳಸಿದ್ದಾಗಿ ಪುರು ಪ್ರತಾಪ್ ಸಿಂಗ್ ಹೇಳಿದ್ದಾರೆ.ಈ ಸ್ಪರ್ಧೆಗೆ ನಾಲ್ಕು ಸಾವಿರ ಮಕ್ಕಳು ತಮ್ಮ ರಚನೆಗಳನ್ನು ಕಳಿಸಿದ್ದರು.

Wednesday, August 5, 2009

ಕನ್ನಡದಲ್ಲಿ ಬರೆಯ ಬೇಕೆ ? ಇಲ್ಲಿ ಸ್ವಲ್ಪ ಓದಿ... :-)

ನನ್ನ ನಲ್ಮೆಯ ಗೆಳೆಯರೆ ಹಾಗೂ ಗೆಳತಿಯರೆ,
ನೀವು ಬಹಳ ದಿನಗಳಿಂದ ಕಾತುರವಾಗಿ ನನ್ನ ಬ್ಲಾಗನ್ನು ಓದುತ್ತಿದ್ದಿರಾ, ಇನ್ನು ಮುಂದೆ ನೀವು ಕೂಡ ಕನ್ನಡದಲ್ಲಿ ಬ್ಲಾಗ್ ಬರೆಯಬಹುದು. ಅದು ಹೇಗೆ ಸಾದ್ಯ ಎನ್ನುತ್ತಿರಾ? ವಿವರಗಳಿಗೆ ಮುಂದೆ .....
ಕ್ರ.ಸಂ 1
ಈ ಕೆಳಗಿನ ಲಿಂಕ್ ಅನ್ನು ನಿಮ್ಮ ಅಂತರ್ಜಾಲದಲ್ಲಿ ಓಪನ್ ಮಾಡಿ
http://t13n.googlecode.com/svn/trunk/blet/docs/help_kn.html

ಕ್ರ.ಸಂ 2
ಇಲ್ಲಿ ನೀವು ಉಪಯೋಗಿಸುವ ಬ್ರೌಸರ್ ಸಾಫ್ಟ್ವೇರ್ (Internet explorer, Firefox, Chrome ) ಮುಂತಾದವುಗಳಿಗೆ ಪ್ರತ್ಯೇಕ ವಿಭಾಗಗಳಿವೆ. ಇಲ್ಲಿ ನಾನು Internet explorer ನಲ್ಲಿ ಹೇಗೆ ಬರೆಯಬಹುದು ಎಂದು ತೋರಿಸಿ ಕೊಡುತ್ತೇನೆ.
ಕ್ರ.ಸಂ 3
ಇಲ್ಲಿ ನಿಮ್ಮ ಮೌಸ್ ನಿಂದ ರೈಟ್ ಕ್ಲಿಕ್ ಮಾಡಿ. [ಅ Type in Kannada].
ಆಡ್ ಟು ಫೇವರಿಟ್ ಆಯ್ಕೆ ಮಾಡಿ.
ಇಲ್ಲಿಗೆ ಒಂದು ಕೆಲಸ ಮುಗಿಯಿತು.
ಕ್ರ.ಸಂ 4
ಈಗ ನಿಮ್ಮ ಇಷ್ಟದ ಅಂತರ್ಜಾಲ ತಾಣ ಓಪನ್ ಮಾಡಿ.
ಇಲ್ಲಿ ಕನ್ನಡದಲ್ಲಿ ಬರೆಯಬೇಕೆ. ಮುಂಚೆ ನೀವು ಫೇವರಿಟ್ ನಲ್ಲಿ ಸೇರಿಸಿದ Type in Kannada ಮೇಲೆ ಕ್ಲಿಕ್ ಮಾಡಿ
ಈಗ ನೋಡಿ ನಿಮ್ಮ ಎಲ್ಲ Text Boxes nalli ಅ ಎಂದು ಮೂಡಿರುತ್ತದೆ. Ctrl - G ಉಪಯೋಗಿಸಿ ಕನ್ನಡ ಮತ್ತು English ಎರಡನ್ನು ಕೂಡ ಟೈಪ್ ಮಾಡಬಹುದು.
ಉದಾಹರಣೆಗೆ : ಯಾವುದು = yaavudu ಎಂಬ ಅಕ್ಷರ ಗಳನ್ನು ಟೈಪ್ ಮಾಡಿ .

ಇನ್ನೂ ಗೊತ್ತಾಗಲಿಲ್ಲವೇ, ನನಗೆ ಒಂದು ದೂರವಾಣಿ ಕರೆ ಮಾಡಿ. ಬಂದು ಸಹಾಯ ಮಾಡುತ್ತೇನೆ.
Use the below link to directly type in Kannada and Copy - Paste the same as per your requirement.
http://www.google.co.in/transliterate/indic/kannada
Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು