ಎಲ್ಲರಿಗೂ ತಿಳಿದಿರುವ ಹಾಗೆ ಬೆಂಗಳೂರಿನಲ್ಲಿ ಪ್ರತಿ ವರ್ಷವೂ ಚಿತ್ರ ಸಂತೆ ನಡೆಯುತ್ತದೆ. ನಾನು ಬೆಂಗಳೂರಿಗೆ ಬಂದಾಗಲಿಂದ ಅಲ್ಲಿಗೆ ಹೋಗೋಣ ಅಂತಿದ್ದೆ. ಆದರೇ ಕೂಡಿ ಬಂದಿದ್ದು ಈ ವರುಷ.
ನನಗೆ ತಿಳಿದ ಹಾಗೆ ಪ್ರತಿ ವರ್ಷದ ಕೊನೆಯಲ್ಲಿ ಚಿತ್ರ ಸಂತೆ ನಡೆಯುತ್ತಿತ್ತು. ಆದರೇ ಕಳೆದೆರಡು ವರುಷಗಳಿಂದ ವರ್ಷದ ಆರಂಭದಲ್ಲಿ ನಡೆಯುತ್ತಿದೆ. ಹಿಂದಿನ ಬಾರಿ ಚಿತ್ರ ಸಂತೆ ೨೫-೦೧-೨೦೦೯ ರಂದು ನಡೆದಿತ್ತು. ಈ ಬಾರಿ ೩೧-೧-೨೦೧೦ ರಿಂದ ೪-೨-೨೦೧೦ ರ ವರೆಗೆ ನಡೆಯುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪ ನವರು ಮಾಡಿದರು. ಅದು ಸಂಜೆ ೬ ಗಂಟೆಗೆ ನಡೆಯಿತು. ನಾನು ಆ ಸಮಯಕ್ಕೆ ಮನೆ ಬಿಟ್ಟಿದ್ದೆ. ಆದ್ದರಿಂದ ಉದ್ಗಾಟನೆ ಸಮಯಕ್ಕೆ ಸೇರಲು ಆಗಲಿಲ್ಲ. ಆದರು ನಾನು ಅಲ್ಲಿಗೆ ಸೇರುವ ಹೊತ್ತಿಗೆ ೭ ಗಂಟೆಯಾಗಿತ್ತು. ಶಿವಾನಂದ ವೃತ್ತದಲ್ಲೇ ನನ್ನ ಎರಡು ಚಕ್ರದ ವಾಹನವನ್ನು ನಿಲ್ಲಿಸಿ ಅಲ್ಲಿಂದಲ ನಡೆದು ಚಿತ್ರಕಲಾ ಪರಿಷತ್ ಕಡೆ ಹೊರಟೆನು. ವೃತ್ತದಿಂದಲೇ ಕಲೆಯಪ್ರದರ್ಶನ ವಾಗ ತೊಡಗಿತು. ಬಹಳಷ್ಟು ವರ್ಣಚಿತ್ರ ಗಳು ನನ್ನ ಕಣ್ಮನ ಸೆಳೆದವು. ಹೀಗೆ ಮುಂದುವರೆದು ಚಿತ್ರ ಕಲಾಪರಿಷತ್ಒಳಗೆ ನಡೆದೆನು. ಅಲ್ಲೂ ಕೂಡ ಬಹಳಷ್ಟು ವರ್ಣಚಿತ್ರ ಗಳು ನನ್ನ ಕಣ್ಮನ ಸೆಳೆದವು. ಇವುಗಳಲ್ಲಿ ಕೆಲವು ಚಿತ್ರಗಳು ಮಾರಾಟಕ್ಕೂ ಇತ್ತು. ಕ್ಯಾಮ್ಲಿನ್ ಅವರ ಒಂದು ಪುಟ್ಟ ಅಂಗಡಿ ಕೂಡ ಇಲ್ಲಿಗೆ ಬಂದಿತ್ತು ಹಾಗು ಅವರು ಬಣ್ಣ ಹಚ್ಚುವ ಬೇಕಾದಷ್ಟು ಬಣ್ಣಗಳನ್ನು ಇಲ್ಲಿ ಮಾರಾಟ ಮಾಡುತ್ತಿದ್ದರು. ಇಲ್ಲಿಗೆ ಕಬ್ಬು ಅವರ ಕಬ್ಬಿಣ ರಸದ ಅಂಗಡಿ, ಹಳ್ಳಿ ಮನೆ ಅವರ ಸಣ್ಣ ಉಪಹಾರ ಮಂದಿರವು ಇತ್ತು. ಕ್ವಾಲಿಟೀಸ್ ರವರ ಮಂಜು ಕೆನೆ ಅಂಗಡಿ (Ice Cream) ಕೂಡ ಇತ್ತು. ಕೆಲವರು ಅದನ್ನು ತಿನ್ನುವದರಲ್ಲಿ ನಿರತರಾಗಿದ್ದರು. ಇಲ್ಲಿರುವ ವರ್ಣ ಚಿತ್ರಗಳನ್ನು ಅವರು ಛಾಯಾ ಚಿತ್ರ ಗಳನ್ನುತೆಗೆದು ಕೊಳ್ಳಲು ಬಿಡಲಿಲ್ಲ. ಕಲೆಯನ್ನು ನೋಡಿ ಆನಂದಿಸಬೇಕೆ ಹೊರತು ಛಾಯಾ ಚಿತ್ರ ತೆಗೆದು ಕೊಲ್ಲಬಾರದು ಎಂದು ಹೇಳುತ್ತಿದ್ದರು. ಕೆಲವು ವರ್ಣ ಚಿತ್ರ ಗಳನ್ನು ನಿಮಗೆ ಬೇಕಾದಲ್ಲಿ ಕೊಂಡುಕೊಳ್ಳ ಬಹುದಾಗಿತ್ತು . ಇವುಗಳ ಬೆಲೆ ಕೆಲವು ಸ್ತಿರ (Fixed) ಆಗಿತ್ತು. ಇವುಗಳಲ್ಲಿ ಹೆಚ್ಚಿನ ಬೆಲೆಯ ರೂ ೮೦,೦೦೦ ದ ರವಿ ವರ್ಮನ ಚಿತ್ರವೂ ಅಡಗಿತ್ತು. ಇನ್ನು ಕೆಲ ಚಿತ್ರಗಳಿಗೆ ನಾವೇ ಎಷ್ಟು ಬೇಕಾದರೂ ಹಣ ಕೊಟ್ಟು ಪಡೆಯಬಹುದಾಗಿತ್ತು. ಇಲ್ಲಿಂದ ಹೊರಗೆ ಬಂದು, ನನ್ನ Portrait(ಪ್ರತಿಕೃತಿ ) ಚಿತ್ರವನ್ನು ರೂ ೧೦೦ ಕೊಟ್ಟು ಬರೆಸಿಕೊಂಡೇ. ಇನ್ನೊಂದು ತೆಂಗಿನ ಕಾಯಿಯಲ್ಲಿ ಕೆತ್ತಿದ ಗಣೇಶನನ್ನು ಕೊಂಡುಕೊಂಡೆ . ಇಲ್ಲಿಗೆ ನನ್ನ ಚಿತ್ರ ಸಂತೆಯ ಯಾತ್ರೆ ಮುಕ್ತಾಯವಾಯಿತು. ಜೈ ಕರ್ನಾಟಕ ಮಾತೆ.
Showing posts with label ಬೆಂಗಳೂರು. Show all posts
Showing posts with label ಬೆಂಗಳೂರು. Show all posts
Tuesday, February 2, 2010
ಹೀಗೊಂದು ಚಿತ್ರ ಸಂತೆ ಬೆಂಗಳೂರಿನಲ್ಲಿ
Tuesday, August 4, 2009
ಧಾರವಾಡ ಕನ್ನಡ Vs ಬೆಂಗಳೂರು ಕನ್ನಡ --> ಬರ್ರೇಪಾ ಸ್ವಲ್ಪ Talk ಮಾಡುವಾ
ಮೊದಲಿನಿಂದಲೂ ಹಾಗೇನೇ, ಧಾರವಾಡ ಸೀಮೆಯವರ ಮಾತು ಎಂದರೆ ಬೆಂಗಳೂರು ಮಂದಿಗೆ ತಮಾಷೆ ಹಾಗೆಯೇ ಬೆಂಗಳೂರಿನ ಜನರ ಮಾತು ಎಂದರೆ ಧಾರವಾಡದ ಜನರ ಪಾಲಿಗೆ ಒಂಥರಾ ವಾಕರಿಕೆ . ಒಂದೇ ಮಾತು ಎರಡೂ ಕಡೆಯವರ ಭಾಷೆಯಲ್ಲಿ ಹೇಗೆ 'ಕೇಳಿಸುತ್ತದೆ' ಎಂಬುದಕ್ಕೆ ಇಲ್ಲಿ ಒಂದೆರಡಲ್ಲ , ಐದಾರು ಸಾಕ್ಷಿಗಳಿವೆ.
ಓದುತ್ತಾ ಓದುತ್ತಾ ನೀವು ಧಾರವಾಡದ ಆಸಾಮಿಯೋ ಬೆಂಗಳೂರಿನ ಅಣ್ಣಯನೋ ಆಗಿ ಹೋದರೆ; ಎರಡೂ ಸೀಮೆಗಳ ಡೈಲಾಗ್ ಹೇಳುತ್ತಾ ಹೇಳುತ್ತಾ ಹುಳ್ಳಗೆ ನಕ್ಕು ಹೊಟ್ಟೆ ನೋವು ಬರಿಸಿಕೊಂಡರೆ ನಾನು ಜವಾಬ್ದಾರನಲ್ಲ.
ಈ ಸೂಚನೆಯನ್ನು ಮೊದಲೇ ಗಮನಿಸಿ, ನಂತರವೇ ಬೆಂಗಳೂರು - ಧಾರವಾಡ ಮಂಡಿಯ ಡೈಲಾಗ್ ಓದಲು ಆರಂಭಿಸಿ.
ಬೆಂಗಳೂರಿನವ: ಏನ್ಸಾರ್, ಚೆನ್ನಾಗಿದಿರಾ ?
ಧಾರವಾಡದವ: ಏನ್ರೀ ಸರಾ, ಆರಾಮೆನ್ರಿ?
*******
ಬೆಂಗಳೂರಿನವ: ಎಷ್ಟು ಚೆನ್ನಾಗಿ ಮಾತಾಡ್ತಾರೆ ಅವರು, ಭೇಷ್
ಧಾರವಾಡದವ: ಅವನವ್ನ ಸೂಳಿ ಮಗ, ಎಷ್ಟ್ ಚಲೋ ಮಾತಾಡ್ತಾನ, ನೋಡಲೇ, ಶಾಬಾಶ್ ಮಗ್ನ
*******
ಬೆಂಗಳೂರಿನವ: ನಾ ಏನೋ ಹೇಳಿದ್ರೆ, ಅವ್ರು ಇನ್ನೇನೋ ಮಾಡ್ತಾರೆ!
ಧಾರವಾಡದವ: ಅಲೇ ಇವ್ನ ಅಪ್ನ ಹಿಂಗ್ಯಾಕಲೆ? ಹೆಗಲಾಗಿಂದ ತಗಿ ಅಂದ್ರ ಬಗಲಾಗಿಂದ ತಗೀತಾನಲ್ಲಲೇ
******
ಬೆಂಗಳೂರಿನವ: ಏನ್ ಮಗಾ, ಫಿಗರ್ ಗೆ ಕಾಳ್ ಹಾಕ್ತಾ ಇದಿಯಾ ?
ಧಾರವಾಡದವ: ಏನ್ ಲೇ, ಬೋಸುಡಿಕೆ, ಲೈನ್ ಹೊಡ್ಯಾ ಕತ್ತಿಯೇನಲೇ .. ಯಾವಾಕಿಲೆ ಆಕೆ ?
******
ಬೆಂಗಳೂರಿನವ: ಕಳ್ಳ ನನ್ನ ಮಗಾ, ಎಲ್ಲಿ ಹೋದ್ನೋ ಇನ್ನೂ ಬರಲಿಲ್ಲ
ಧಾರವಾಡದವ: ತುಡುಗ್ ಸೂ.. ನನ್ಮಗ ಸಂಜಿ ಮುಂದಾ ಈ ಕಡೇ ಹೊದ್ನಲೆ ಹಾಳಾಗಿ , ಇನ್ನೂ ಬಂದಿಲ್ಲ
******
ಬೆಂಗಳೂರಿನವ: ಏನಂಕಲ್ ತಿಂಡಿ ಆಯ್ತಾ ?
ಧಾರವಾಡದವ: ಏನ್ರೀ ಕಾಕಾ, ತಿಂಡಿ ಆಯ್ತಿಲ್ ...
******
ಬೆಂಗಳೂರಿನವ: ನಮಸ್ಕಾರ
ಧಾರವಾಡದವ: ಶರಣು ಶರಣಾರ್ತಿ!

Subscribe to:
Posts (Atom)