ಗೆಳೆಯರೇ/ಗೆಳತಿಯರೆ,
ನಾವೆಲ್ಲಾ ಕೃಷ್ಣನ ಮದುವೆಗೆ ದಿ:೨೭ ರಂದು ಹೊರಟು ೨೮ ವಾಪಸ್ ಬಂದ ಬಗ್ಗೆ ಒಂದು ಸಣ್ಣ ಲೇಖನವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ . ಓದಿ ಆನಂದಿಸಿ, ನಿಮ್ಮ ಅಭಿಪ್ರಾಯ ಬರೆಯಿರಿ .
೨೭ರ ಬೆಳಗ್ಗೆ ಸರಿ ಸುಮಾರು ೬.೩೦ಕ್ಕೆ ಉಮೇಶ್ ಅವರಿಂದ ದೂರವಾಣಿ ಕರೆ ಬಂತು. ಇವರು ಹೇಳಿದ ಪ್ರಕಾರ ನಾನು ಡ್ರೆಸ್ ಮಾಡಿಕೊಂಡು ೮ ಗಂಟೆಗೆ ನಾಯಂದನಹಳ್ಳಿ ಬಳಿ ಕಾಯುವುದು ಎಂದು ತಿಳಿಸಿದರು. ನಾನು ಇವರ ಕರೆಗೆ ಓಗೊಟ್ಟು ಅಲ್ಲಿ ೮.೧೫ ಕ್ಕೆ ಸೇರಿದೆ. ಆದರೇ ಇವರು ಬರಲೇ ಇಲ್ಲ . ನಾನು ಅಲ್ಲೇ ಒಂದು ಗಂಟೆ ಕಾಲ ಕಾದ ಮೇಲೆ ಇವರು ವಾಗನ್ ಆರ್ ಕಾರಿನಲ್ಲಿ ಬಂದರು. ನಾನು(ರವಿ ಎನ್ ರಾವ್ ), ಉಮೇಶ್, ಸುರೇಂದ್ರ ಮತ್ತು ಪ್ರಸನ್ನ ವಾಗನ್ ಆರ್ ಕಾರಿನಲ್ಲಿ ಮೈಸೂರ್ ಟ್ರಿಪ್ ಗೆ ಹೊರಟೆವು. ಮುಂಚೆಯೇ ತೀರ್ಮಾನದಂತೆ ಮತ್ತೊಬ್ಬ ಕೃಷ್ಣ ನು ನಮ್ಮ ಜೊತೆ ಬರಬೇಕಿತ್ತು. ಆದರೇ ಕೆಲವು ಕಾರಣಗಳಿಂದ ಅವನು ನಮ್ಮ ಜೊತೆ ಬರಲಿಲ್ಲ. ಈ ವಿಷಯವನ್ನು ಅವನು ನಮಗೆ ಎಸ್.ಎಂ.ಎಸ್ ಮೂಲಕ ತಿಳಿಸಿದ. ಅಲ್ಲಿಂದ ೯ಕ್ಕೆ ಹೊರಟ ನಾವು ಜಾನಪದ ಲೋಕದ ಪಕ್ಕದಲ್ಲಿರುವ ಕಾಮತ್ ಉಪಚಾರ ನಲ್ಲಿ ಉಪಹಾರ ಮಾಡಲು ನಿಲ್ಲಿಸಿದೆವು. ಅಲ್ಲಿ ನಾವು ಕೇಸರಿ ಬಾತ್, ಇಡ್ಲಿ ವಡೆ, ಟೊಮ್ಯಟೊ ದೋಸೆ, ಈರುಳ್ಳಿ ದೋಸೆ, ಮದ್ದೂರ್ ವಡೆ ಮತ್ತು ಅಕ್ಕಿ ರೊಟ್ಟಿ ಆರ್ಡರ್ ಮಾಡಿದೆವು. ಕೇಸರಿ ಬಾತ್ ಮತ್ತು ಅಕ್ಕಿ ರೊಟ್ಟಿ ಕ್ಷಣದಲ್ಲೇ ತಂದು ಕೊಟ್ಟ. ಸ್ವಲ್ಪ ಸಮಯದಲ್ಲೇ ಅದನ್ನು ನಾವೆಲ್ಲ ತಿಂದು ಮುಗಿಸಿದೆವು. ಆನಂತರ ಬಂದು ಹೇಳುತ್ತಾನೆ ಇಡ್ಲಿ ವಡೆ ಮುಗಿದಿದೆ ಅಂತ. ಮತ್ತೆ ನಾವು ಮಸಾಲೆ ದೋಸೆ ಆರ್ಡರ್ ಮಾಡಿದೆವು. ಈಗ ಸುರೇಂದ್ರ ಅವರ ಈರುಳ್ಳಿ ದೋಸೆ, ಉಮೇಶ ಅವರ ಟೊಮ್ಯಟೊ ದೋಸೆ ಬಂತು. ಈರುಳ್ಳಿ ದೋಸೆ ಚೆನ್ನಾಗಿ ಇತ್ತು. ಆದರೇ, ಟೊಮ್ಯಟೊ ದೋಸೆನೆ ನೋಡಿ ವಿಶೇಷ. ಇದು ಖಾಲಿ ದೋಸೆಯ ಮೇಲೆ ಟೊಮ್ಯಟೊ ಕತ್ತರಿಸಿ, ಬೇಯಿಸಿ ಕೊಟ್ಟ ದೋಸೆ ಆಗಿತ್ತು. ನಂತರ ಪ್ರಸನ್ನ ಅವರ ಮಸಾಲೆ ದೋಸೆ ಬಂತು. ಇದರಲ್ಲೂ ವಿಶೇಷವಿತ್ತು. ಪ್ಲೈನ್ ದೋಸೆಯ ಒಳಗೆ ಆಲೂ ಪಲ್ಯ, ಇದುವೇ ನಮ್ಮ ಮಸಾಲೆ ಇಲ್ಲದ ದೋಸೆ. ನಂತರ ಉಮೇಶ್ ಅವರಿಂದ ಮತ್ತೊಂದು ಪ್ಲೈನ್ ದೋಸೆ ಆರ್ಡರ್. ಇದು ಬಹಳ ಬೇಗ ಬಂತು. ನಂತರ ೨ ರಲ್ಲಿ ೪ ಕಾಫಿ ಹೀರಿ, ಇಲ್ಲಿಂದ ಹೊರಟಾಗ ಸಮಯ ೧೧.೩೦ ಆಗಿತ್ತು . ಕಾಮತ್ ಉಪಚಾರದಲ್ಲಿ, ಕೆಲವು ಹುದುಯಿರನ್ನು ಕಂಡು ನಮ್ಮ ಕಣ್ಣು ತಂಪು ಮಾಡಿಕೊಂಡೆವು ಎಂಬುದನ್ನು ಬಿಟ್ಟರೆ, ಬೇರೆಯಲ್ಲ ಸೊನ್ನೆ. ಇಲ್ಲಿಂದ ಹೊರಟ ನಮ್ಮ ಪಯಣ ಶ್ರೀ ರಂಗ ಪಟ್ಟಣದ ಸಂಗಯದಲ್ಲಿ ಸ್ತಗಿತ. ಇಲ್ಲಿ ಏನು ಇಲ್ಲ, ಆದರೂ ಸುಮ್ಮನೆ ಇಳಿದು ಸ್ವಲ್ಪ ವಾಯು ವಿಹಾರ ಮಾಡಿದೆವು. ಮತ್ತೆ, ತಿಪುಉವಿನ ಬೇಸಿಗೆ ಅರಮನೆ ನೋಡಲು ಹೊರಟೆವು. ಇಲ್ಲಿ ಕೆಲವು ಛಾಯಾ ಚಿತ್ರಗಳನ್ನು ತೆಗೆದು, ಟಿಪ್ಪುವಿನ ವಸ್ತು ಸಂಗ್ರಹಾಲಯ ವೀಕ್ಷಣೆ. ಮುಂದೆ ರಂಗನಾಥ ದೇವಸ್ತಾನ ನೋಡಲು ಹೊರಟೆವು. ಆದರೆ, ಅದಾಗಲೇ ಸಮಯ ೨ ಗಂಟೆ ದಾಟಿತ್ತು. ದೇವಸ್ತಾನ ಮುಚ್ಚಿತ್ತು. ಇಲ್ಲಿ ಒಂದು ತರಹನಾದ ಹುಲಿ ದ್ರಾಕ್ಷಿ ಮತ್ತು ಮಾವಿನ ಕಾಯಿ, ಮೆಣಸಿನ ಪುಡಿ ಜೊತೆ ತಿಂದಾಗ ಬಾಯಲ್ಲಿ ರಸ ಸುರಿಯುತ್ತಿತ್ತು. ಇದು ತುಂಬಾ ಚೆನ್ನಾಗಿತ್ತು ಅಂಥ ಬೇರೆ ಹೇಳಬೇಕಾ. ಇಲ್ಲಿಂದ ರಂಗನ ತಿಟ್ಟು ಪಕ್ಷಿ ಧಾಮದ ಕೆಡೆ ಹೊರಟೆವು. ಬಹಳ ಪಕ್ಷಿಗಲೇನು ಇರಲಿಲ್ಲ. ಇಲ್ಲಿ ಕೂಡ ಸುಮ್ಮನೆ ಛಾಯಾ ಚಿತ್ರಗಳನ್ನು ತೆಗೆದುಕೊಂಡೆವು. ಇಲ್ಲಿಂದ ನಾವು ಬೃಂದಾವನ ಗಾರ್ಡನ್ ಕಡೆಗೆ ಹೊರಟೆವು. ಮಾರ್ಗ ಮದ್ಯದಲ್ಲಿ ಆಶಾ ದಾಬಾ ನಲ್ಲಿ ಊಟಕ್ಕೆಂದು ನಿಲ್ಲಿಸಿದೆವು. ಇಲ್ಲಿ ರೋಟಿ, ಪನ್ನೀರ್ ಬಟರ್ ಮಸಾಲ ಮತ್ತು ಸುರೇಂದ್ರ ಅವರ ಮುಖ್ಯ ಖಾದ್ಯ ದಾಲ್ ಫ್ರೈ ಆರ್ಡರ್ ಮಾಡಿದೆವು.( ೪+೪ ರೋಟಿ ) . ಮತ್ತೆ ಜೀರಾ ಫ್ರೈಡ್ ರೈಸ್ ತಿಂದೆವು. ಇಲ್ಲಿ ಎಲ್ಲ ಖಾದ್ಯಗಳು ತುಂಬಾ ಚೆನ್ನಾಗಿತ್ತು. ಸರಿ ಸುಮಾರು ೪ ಗಂಟೆಗೆ ಕೆ.ಅರ್.ಎಸ ತಲುಪಿದೆವು. ಇಲ್ಲಿ ಕೆ.ಅರ್.ಎಸ ಅಣೆಕಟ್ಟಿನ ಸೇತುವೆಯ ಮೇಲೆ ಬಿಡಲಿಲ್ಲ. ಆದರೂ ಬೃಂದಾವನ ತೋಟದ ವೀಕ್ಷಣೆ, ಛಾಯಾ ಚಿತ್ರ ತೆಗೆಯುವುದು, ೬.೩೦ ರ ವರೆಗೆ ನಡೆಯಿತು. ಇಲ್ಲಿಂದ ಮೈಸೂರ್ ಅರಮನೆ ಕಡೆಗೆ ಪಯಣ ಮುಂದುವರೆಯಿತು. ಇಲ್ಲಿ ದೀಪಗಳಿಂದ ಕಂಗೊಲೆಯುತ್ತಿದ್ದ ಅರಮನೆಯಾ ಛಾಯಾ ಚಿತ್ರಗಳನ್ನು ಮಾತ್ರ ತೆಗೆದು ಕೊಳ್ಳಲು ಸಾದ್ಯವಾಯಿತು. ೭.೩೦ ಕ್ಕೆ (ನಾವು ಹೊರಟ ೧೦ ನಿಮಿಷಗಳ ನಂತರ ) ಲೈಟ್ ಕೂಡ ಆರಿಸಿದರು. ಇಲ್ಲಿಗೆ ನಮ್ಮ ಪ್ರವಾಸದ ಮೊದಲ ದಿನ ಮುಗಿಯಿತು. ಇಲ್ಲಿಂದ ನಾವು ಉಮೇಶನ ಸ್ನೇಹಿತನ ಮನೆಯಲ್ಲಿ ಉಳಿದುಕೊಳ್ಳಲು ಹೊರಟೆವು. ಬೋಗಾವಿ ಎರಡನೇ ಹಂತದ, ಪ್ರದೀಪನ ಮನೆಗೆ ಅಂತು ಇಂತು ಬಹಳ ಪ್ರಯಾಸ ಪಟ್ಟು ಸೇರಿದೆವು. ಇಲ್ಲಿಗೆ ಸೇರಲು ಬಹಳಷ್ಟು ದೂರವಾಣಿ ಕರೆಗಳನ್ನು ಮಾಡಿದೆವು ಎಂಬುದನ್ನು ತಿಳಿಸುತ್ತೇನೆ. ಇಲ್ಲಿ ನಮ್ಮನ್ನು ಇಳಿಸಿ ಉಮೇಶ್ ಮತ್ತು ಅವನ ಸ್ನೇಹಿತ ಪ್ರದೀಪ್ ಊಟ ಪಾರ್ಸೆಲ್ ತರಲು ಪ್ರದೀಪನ ವಾಹನ ದಲ್ಲಿ ಹೊರಟರು. ಮತ್ತೆ ಅದೇ ರೊಟ್ಟಿ ಮತ್ತು ಫ್ರೈಡ್ ರೈಸ್ ಊಟ ಮಾಡಿ ಮಲಗಿದಾಗ ೧೧ ಗಂಟೆಯಾಗಿತ್ತು.
ಎರಡನೇ ದಿನ ೨೮ ರಂದು ಬೆಳಗ್ಗೆ ೬ ಗಂಟೆಗೆ ಎದ್ದೆವು. ಉಮೇಶನಿಗೆ ಬ್ಬಿಸಿ ನೀರಿನಲ್ಲಿ ಸ್ನಾನ ಮಾಡಿ ಅಭ್ಯಾಸ. ಇದನ್ನೇ ಅವನು ಪ್ರದೀಪನ ಮುಂದಿಟ್ಟ. ಇಲ್ಲಿ ಎಲಕ್ಟ್ರಿಕ್ ಕಾಯಿಲ್ ಇರಲಿಲ್ಲ, ಆದರೆ ಗ್ಯಾಸ್ ಇತ್ತು. ಅದರ ಮೇಲೆ ನೀರನ್ನು ಕಾಯಿಸಿ ಸ್ನಾನ ಮಾಡಿದೆವು. ನನಗೆ ತಣ್ಣೀರು ಸ್ನಾನ ಮಾಡಿ ಅಬ್ಯಾಸ ಇತ್ತು. ಆದ್ದರಿಂದ, ನಾನು ತಣ್ಣೀರಿನಲ್ಲೇ ಸ್ನಾನ ಮಾಡಿದೆ. ನಂತರ, ಎಲ್ಲರೂ ಸ್ನಾನ ಮಾಡಿ, ಚಾಮುಂಡಿ ಬೆಟ್ಟದ ಕೆಡೆಗೆ ಹೊರಟಾಗ ಸಮಯ ೮ ಗಂಟೆಯಾಗಿತ್ತು. ಅಲ್ಲಿ ಚಾಮುಂಡೆಶ್ವರಿಯ ದರ್ಶನ ನಾವು ಪಡೆಯಲಿಲ್ಲ. ಭಾರಿ ಜನ ಸಂದಣಿ ಇರುವುದರಿಂದ ನಾವು ಹೊರಗಡೆಯಿಂದ ಚಾಮುಂಡೆಶ್ವರಿಯ ಆಶೀರ್ವಾದ ಪಡೆದು, ದೊಡ್ಡ ಬಸವಣ್ಣನನ್ನು ನೋಡಲು ಹೊರಟೆವು. ಇಲ್ಲಿ ಬಸವಣ್ಣನ ಛಾಯಾ ಚಿತ್ರಗಳನ್ನು ತೆಗೆದು ಕೊಂಡು ಮೈಸೂರಿನ ಕಡೆ ಪಯಣ ನಡೆಸಿದೆವು. ಬೆಟ್ಟ ಇಳಿಯುವಾಗ ಒಂದು ಮಹಿಳೆ ಮತ್ತು ಅವನ ತಮ್ಮ ಸ್ಕೂಟರ್ ನಿಂದ ಬಿದ್ದಿದ್ದರು. ನಮ್ಮ ಮುಂದಿನ ಕಾರಿನಲ್ಲಿ ಹೋಗುತ್ತಿದ್ದ ಮಂದಿ, ಅವರಿಹೆ ಸಹಾಯ ಮಾಡುತ್ತಿದ್ದರು. ಆದ್ದರಿಂದ ನಾವು ಮದುವೆಯಕಡೆಗೆ ನಮ್ಮ ಪಯಣ ಮುಂದುವರೆಸಿದೆವು. ಕಲ್ಯಾಣ ಮಂಟಪ ಇರುವ ಜಾಗ ಪ್ರದೀಪನಿಗೆ ಗೊತ್ತಿತ್ತು. ಆದರಿಂದ ನಾವು ಪ್ರಯಾಸವಿಲ್ಲದೆ ಅಲ್ಲಿಗೆ ಸೇರಿದೆವು. ಅಲ್ಲಿಗೆ ಈಗಾಗಲೇ ನಮ್ಮ ಮತ್ತೊಬ್ಬ ಸ್ನೇಹಿತ ರಘುನಂದನ್ ಆಗಮಿಸಿದ್ದರು. ನಾವೆಲ್ಲರೂ ಮೊದಲು ಉಪಹಾರ ಸೇವಿಸಲು ಹೊರಟೆವು. ಆಹಾ !!! ಇಲ್ಲಿ ಬಾಯಲ್ಲಿ ನೀರೂರಿಸುವ ಬೂದು ಕುಂಬಳ ಹಲ್ವ ಮತ್ತು ಪೊಂಗಲ್ ಮಾಡಿದ್ದರು. ಇದನ್ನು ನಾವು ಸೇವಿಸಿದೆವು. ಪೊಂಗಲ್ ಎರಡನೇ ಬಾರಿ ಕೇಳಿದರು, ಆದರೆ ಹಲ್ವ ಕೇಳಲಿಲ್ಲ. ಈಗ ಮದುವೆ ಮನೆಯ ಒಳಗೆ ಹೋಗಿ, ಕೃಷ್ಣನ ನ್ನು ಮಾತಾಡಿಸಿ, ಛಾಯಾ ಚಿತ್ರ ತೆಗೆದು ಕೊಂಡೆವು. ಮತ್ತೆ ಹೂಗೊಂಚಲು ತರಲು ಹತ್ತಿರವೆಲ್ಲ ಓ ಡಾಡಿದೆವು . ಎಲ್ಲೂ ಸಿಗಲಿಲ್ಲ, ಮುಹೂರ್ತದ ಸಮಯ ವಾದ್ದರಿಂದ ವಾಪಸ್ ಬಂದೆವು. ಮದುವೆಯ ಮಂಟಪದಲ್ಲಿ ಮಾಡುವೆ ನಡೆಯಲಿಲ್ಲ. ಬದಲಾಗಿಕೋಣೆಯ ಮತ್ತೊಂದು ಭಾಗದಲ್ಲಿ ನಡೆಯಿತು. ಇಲ್ಲಿ ಸುಮ್ಮನೆ ಕುಳಿತು ಕುಳಿತು ಬೇಜಾರಾಯಿತೆ ವಿನಃ, ನಮಗೆ ಮದುವೆಯ ಮೇಲೆ ಆಸಕ್ತಿ ಹೋಯಿತು. ಮತ್ತೆ ೧೨.೩೦ ಕ್ಕೆ ಊಟದ ಮನೆಗೆ ಹೊರಟೆವು. ಊಟ ತುಂಬ ಚೆನ್ನಾಗಿತ್ತು, ಅನ್ನ, ರಸ, ಹುಳಿ, ಮೈಸೂರಿನ ಪ್ರಸಿದ್ಧ ತಿನಿಸು ಮೈಸೂರ್ ಪಾಕ್, ಜಿಲೇಬಿ, ಹಪ್ಪಳ, ಸಂಡಿಗೆ ಮುಂತಾದ ಖಾಧ್ಯಗಳಿಂದ ತುಂಬ ರುಚಿಕರವಾಗಿತ್ತು. ಊಟ ದ ವಿಶೇಷ ವೆಂದರೆ ಇಲ್ಲಿ ಎಲ್ಲರಿಗೂ ೨ ರೂ ನಾಣ್ಯ ವನ್ನು ಕೊಟ್ಟರು. ಊಟ ಮುಗಿಸಿ , ಕೃಷ್ಣನಿಗೆ ಉಡುಗೊರೆ ರಶೀತಿಯನ್ನು ಕೊಟ್ಟು, ಅವನಿಗೆ ಶುಭಾಶಯ ಹೇಳಿದೆವು. ಇಲ್ಲಿಂದ ಬೆಂಗಳೂರಿನ ಕಡೆ ಹೊರಡಲು ಅಣಿಯಾದೆವು. ದಂಪತಿಗಳ ಛಾಯಾ ಚಿತ್ರ ಒಂದನ್ನು ನಾವು ತೆಗೆದು ಕೊಂಡಿಲ್ಲವಾದ್ದರಿಂದ, ನಾನು ಒಬ್ಬನೇ ಮತ್ತೆ ಒಳಗೆ ಹೋದೆನು. ಈಗ ಇಲ್ಲಿ ಮತ್ತೊಂದು ಆಶ್ಚರ್ಯ ಕಾದಿತ್ತು. ಈಗಲೇ ಕ್ರಿಷ್ಣನವರಿಂದ ಶ್ವೇಥಳಿಗೆ ಮಾಂಗಲ್ಯ ಭಾಗ್ಯ ನಡೆಯಿತು, ಅರ್ಥಾತ್ ಮದುವೆಯ ಮುಖ್ಯ ಭಾಗ. ಇದರ ಛಾಯಾ ಚಿತ್ರ ಗಳನ್ನು ತೆಗೆದು ಕೊಂಡೆನು. ಇಲ್ಲಿಂದ ಹೊರಗೆ ಬಂದು,೧.೩೦ ಕ್ಕೆ ಬೆಂಗಳೂರಿನ ಕಡೆ ಪ್ರಯಾಣ ನಡೆಸಿದೆವು. ಮಾರ್ಗ ಮದ್ಯೆ ಪ್ರದೀಪ್ ಇಳಿದು ಕೊಂಡನು, ಮತ್ತು ರಘು ನಮ್ಮ ಜೊತೆ ಸೇರಿಕೊಂಡನು. ಇಲ್ಲಿಂದ ಹೊರಟ ನಾವು, ರಾಮನಗರ ದ ಹತ್ತಿರ ಹಣ್ಣಿನ ರಸ ಕುಡಿಯಲು ನಿಲ್ಲಿಸಿದೆವು. ಅಲ್ಲಿ ಹಣ್ಣಿನ ರಸ ಕುಡಿದ ನಂತರ ೪.೩೦ ಕ್ಕೆ ಹೊರಟು ನಾಯಂದನ ಹಳ್ಳಿ ಸೇರಿದೆವು. ಇಲ್ಲಿ ರಘು ಮತ್ತು ನಾನು ಇಳಿದು ಕೊಂಡೆವು. ಉಮೇಶ್, ಸುರೇಂದ್ರ ಮತ್ತು ಪ್ರಸನ್ನ ರಾಜಾಜಿ ನಗರದಲ್ಲಿ ಇಳಿದು ಕೊಂಡರು.
ನಮ್ಮನ್ನು ಹುಷಾರಾಗಿ ಕರೆದುಕೊಂಡು ಹೋಗಿ, ಹುಷಾರಾಗಿ ವಾಪಸ್ ಸೇರಿಸಿದ ಪ್ರಸನ್ನ ಅವರಿಗೆ ನನ್ನ ವಂದನೆಗಳನ್ನು ಸಲ್ಲಿಸುತ್ತ ನನ್ನ ಪ್ರಯಾಣದ ಅನುಭವವನ್ನು ಮುಗಿಸುತ್ತಿದ್ದೇನೆ .