Showing posts with label ಹುಡುಗಿ. Show all posts
Showing posts with label ಹುಡುಗಿ. Show all posts

Monday, August 10, 2009

ಟೆನ್ಶನ್.. ಟೆನ್ಶನ್.. ಟೆನ್ಶನ್..

ಹುಡುಗಿ ನಿಮ್ ಹತ್ರ ಲಿಫ್ಟ್ ಕೇಳಿದ್ಲು,
ದಾರಿ ಮಧ್ಯ ಅವಳಿಗೆ ಹೊಟ್ಟೆನೋವು ಶುರುವಾಯ್ತು,
ನಿಮಗೆ ಟೆನ್ಶನ್!

ನೀವು ಆಕೇನ ಆಸ್ಪತ್ರೆಗೆ ಕರ್ಕೊಂಡು ಹೋದ್ರಿ,
ಡಾಕ್ಟರ್ ಹೇಳಿದ್ರು - 'ನೀವು ತಂದೆ ಆಗ್ತಿದಿರಾ... ಅಂದ್ರು
ನಿಮಗೆ ಮತ್ತೆ ಟೆನ್ಶನ್!

ನೀವು ಹೇಳಿದ್ರಿ 'ನಾನು ಈ ಮಗುವಿನ ತಂದೆ ಅಲ್ಲಾ' ಅಂತ,
ಆದರೆ, ಹುಡುಗಿ ಹೇಳಿದ್ಲು- 'ಇವರೇ ತಂದೆ' ಅಂತ
ನಿಮಗೆ ಮತ್ತೂ ಟೆನ್ಶನ್!

ಪೋಲಿಸ್ ಬಂದ್ರು,ನಿಮ್ಮ ಮೆಡಿಕಲ್ ಚೆಕ್ ಅಪ್ ಮಾಡ್ಸಿದ್ರು,
ರಿಪೋರ್ಟ್ ಬಂತು,'ನಿಮಗೆ ತಂದೆ ಆಗೋ ಸಾಮರ್ಥ್ಯ ಇಲ್ವೆ ಇಲ್ಲಾ' ಅಂತ.
ನಿಮಗೆ ಮತ್ತೂ ಟೆನ್ಶನ್!

ಅಬ್ಬಾ ಈ ಸಮಸ್ಯೆಯಿಂದ ಪರಿಹಾರ ಕೊಟ್ಟಿದ್ದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳುತ್ತಾ ಮನೆಗೆ ಬಂದ್ರಿ,
ಮಗಳು ಅಪ್ಪಾ ಎನ್ನುತ್ತಾ ಹತ್ರ ಬಂದ್ಳು. ನಿಮಗೀಗ 'ಹಾಗಾದರೆ ಇವಳು ಯಾರ ಮಗಳು'?!?!? ಎಂಬ ಆಲೋಚನೆ.....
ನಿಮಗೀಗ ಫುಲ್ ಟೆನ್ಶನ್?!?!

ಏನಂತಿರಾ ??? ಈಗ ನಿಮಗೂ ಟೆನ್ಶನ್ ಶುರು ಆಯಿತೆ ????

Wednesday, July 22, 2009

ಹುಡುಗಿ ಬೇಕಾಗಿದ್ದಾಳೆ !!! -- Require a GIRL

ಹುಡುಗಿ ಬೇಕಾಗಿದ್ದಾಳೆ !!!
ಹುಡುಗಿಬೇಕಾಗಿದ್ದಾಳೆ ಇರಬೇಕು ತುಂಬಾ ಸಿಂಪಲ್ !
ನಕ್ಕರೆ ಗಲ್ಲದ ಮೇಲೆ ಬೀಳಬೇಕು ಡಿಂಪಲ್ !
ಅವಳ ತಲೆಯಲ್ಲಿ ಇರಬೇಕು ಪುಟ್ಟ ಪ್ರೊಸೆಸರ್ ಇಂಟೆಲ್ !
ಅವಳ ರೂಪ-ಲಾವಣ್ಯ ಕಂಡು ಬಾಯಿಬಿಡಬೇಕು ಪಕ್ಕದ್ಮನೆ ಅಂಕಲ್ !
ಅವಳು ಸ್ನಾನಕ್ಕೆ ಹಚ್ಚಬೇಕು ದಿನಾ ಸೋಪು ಸಿಂಥಾಲ್ !
ಅವಳ ಅಂದ ಹೊಗಳುತ್ತಾ ಕವಿಯಾಗಬೇಕು ಮೆಂಟಲ್ !
ಎತ್ತರದಲ್ಲಿ ಅವಳಾಗಿರಬೇಕು ರಾಜಸ್ತಾನದ ಕ್ಯಾಮೆಲ್ !
ಅವಳಗಲ್ಲ ನೋಡಿ ನೆನಪಾಗಬೇಕು ಕಾಶ್ಮೀರದ ಸಿಹಿ ಆಪಲ್ !
ಅವಳು ಬೀದಿಯಲ್ಲಿ ನಡೆದರೆ ಕಾಮೆಂಟ್ರಿ ಹೇಳಬೇಕು ಇಯಾನ್ ಚಾಪೆಲ್ !
ಮುಖದ ಮೇಲೆ ಇರಲಿ ಒಂದೇಒಂದು ಹರೆಯದ ಪಿಂಪಲ್ !
ನಮ್ಮ ಪ್ರೀತಿಯೆಂಬ ಧರ್ಮಕ್ಕೆ ಅವಳಾಗಬೇಕು ಗೀತಾ-ಕುರಾನ್ಬೈಬಲ್ !
ಅವಳು ಪ್ರೀತಿಮೆಚ್ಚಿ ನಾ ಕಟ್ಟಬೇಕು ಇನ್ನೊಂದು ತಾಜ್ಮಹಲ್ !
ಎಲ್ಲದಕ್ಕೂ ಮೊದಲ ಅವಶ್ಯಕತೆ ಅವಳಾಗಿರಬೇಕು ಸಿಂಗಲ್ !
ಇವಳೇನಾದರು ನಿಮಗೆ ಸಿಕ್ಕರೆಮಾಡಿ ನಂಗೆ ಈ-ಮೇಲ್ !
(ಬರೆದ ಪುಣ್ಯಾತ್ಮ ಯಾರೋ ಗೊತ್ತಿಲ್ಲ ... ಈ -ಮೇಲ್ ಮಾಡಿ ಅಂತ ಹೇಳಿ Mail ID ಸಹ ಕೊಟ್ಟಿಲ್ಲ .. )
Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು