Showing posts with label reader. Show all posts
Showing posts with label reader. Show all posts

Monday, January 3, 2011

Train your brain 50% faster

Can U read this?

fi yuo cna raed tihs, yuo hvae a sgtrane mnid, too. Cna yuo raed tihs? Olny 55 plepoe tuo fo 100 anc.

i cdnuolt blveiee taht I cluod aulaclty uesdnatnrd waht I was rdanieg. The phaonmneal pweor of the hmuan mnid, aoccdrnig to a rscheearch at Cmabrigde Uinervtisy, it dseno't mtaetr in waht oerdr the ltteres in a wrod are, the olny iproamtnt tihng is taht the frsit and lsat ltteer be in the rghit pclae. The rset can be a taotl mses and you can sitll raed it whotuit a pboerlm. Tihs is bcuseae the huamn mnid deos not raed ervey lteter by istlef, but the wrod as a wlohe. Azanmig huh? yaeh and I awlyas tghuhot slpeling was ipmorantt! if you can raed tihs forwrad it.

If you can read this, your brain is 50% faster than those who can't.

Monday, March 8, 2010

ನಿಮಗೆ ಇ-ಪುಸ್ತಕ ಇಷ್ಟಾನ ? ಅಥವಾ ಆ - ಪುಸ್ತಕಾನ ?








ನಿಮಗೆ ಯಾವುದಾಗಬಹುದು? ಇ - ಪುಸ್ತಕವೋ, ಆ ಪುಸ್ತಕವೋ?

ನನಗಂತೂ ಆ ಪುಸ್ತಕವೇ ಇಷ್ಟ. ಅದೇ ನಮ್ಮ ಹಳೆಕಾಲದ ಕಾಲದ ಸವಾಲನ್ನು ಸ್ವೀಕರಿಸಿ ನಮ್ಮ ನೆಚ್ಚಿನ ಗೆಳೆಯನಂತೆ ಯಾವ ಸಮಯದಲ್ಲೂ, ಯಾವ ಸ್ಥಳದಲ್ಲೂ ಸೇರಲು ಉತ್ಸುಕತೆ ತೋರುವ ಬಣ್ಣ ಬಣ್ಣದ ಕವಚದ ಮೇಲೆ ಕೆಲವೊಮ್ಮೆ ಧೂಳನ್ನು ಹೊತ್ತು ನಿಂತ ಪುಸ್ತಕ, ಕಾಗದದ ಪುಸ್ತಕ.

ಕಂಪ್ಯೂಟರ್ ಬಂದ ಹೊಸತು. ಅದರ ಬಗ್ಗೆ ಗುಣಗಾನ. ಕಂಪ್ಯೂಟರ್ ಅದನ್ನು ಮಾಡುತ್ತಂತೆ, ಇದನ್ನು ಮಾಡುತ್ತಂತೆ, ಕೀಲಿಗಳನ್ನು ಒತ್ತಿಬಿಟ್ಟರೆ ಸಾಕಂತೆ ಎಲ್ಲವೂ ತಂತಾನೇ ಬಂದುಬಿಡುತ್ತಾನೆ, ಇನ್ನು ಕಛೇರಿಗಳಲ್ಲಿ ಕಾಗದದ ಉಪಯೋಗ ಇರುವುದಿಲ್ಲವಂತೆ, ಪೇಪರ್ ಲೆಸ್ ಆಫೀಸ್ ಅಂತೆ... ಅಂತೆ ಕಂತೆಗಳು ಪುಂಖಾನು ಪುಂಖವಾಗಿ ಪತ್ರಿಕೆಗಳ ತುಂಬಾ ರಾರಾಜಿಸಿದವು. ಆದರೆ ವಾಸ್ತವದಲ್ಲಿ ಆದದ್ದೇನು? ಕಾಗದದ ಖರ್ಚು ಮೊದಲಿಗಿಂತ ಹೆಚ್ಚೇ ಆಯಿತು. ಕಂಪ್ಯೂಟರ್ ಉಪಯೋಗಿಸಿ ಲೆಕ್ಕ ಪತ್ರ ನೋಡುವ, ತಯಾರಿಸುವವರಿಗೆ ಈಗ ನಮೂನೆ ನಮೂನೆಗಳ ರಿಪೋರ್ಟ್ಗಳು. ಮೊದಲೆಲ್ಲಾ ಆದಾಯ, ಖರ್ಚು ಇವೆರಡನ್ನೂ ಕಳೆದು ಉಳಿದಿದ್ದು ಲಾಭ ಅಥವಾ ನಷ್ಟ. ಈಗ? ಯಾವ ರೀತಿಯ ರಿಪೋರ್ಟ್ ಬೇಕು ನಿಮಗೆ ? Profit and loss report, balance sheet, statement of account, monthly forecast, yearly forecast, salesman wise report, product wise report…… ಇನ್ನೂ ಸಾವಿರಾರು ರಿಪೋರ್ಟ್ಗಳು. ಇವೆಲ್ಲವನ್ನೂ ಕಾಗದದ ಮೇಲೆ ಇಳಿಸಲೇ ಬೇಕಲ್ಲವೇ? ಕಾಗದದ ಖರ್ಚು ಹೆಚ್ಚಾಯಿತು ತಾನೇ?

ಇಂಟರ್ನೆಟ್ ಬಂದ ಮೇಲಂತೂ ಕೇಳಬೇಡಿ, ವಿಶ್ವವೇ ಬೆರಳ ತುದಿಗಳ ಮೇಲೆ . ರಾಮನ ಬಂಟ ಆಂಜನೇಯನಂತೆ ನಮ್ಮ ಎಲ್ಲಾ ಕೇಳಿಕೆಗಳನ್ನೂ ಪೂರೈಸಲು ತಯಾರಾಗಿ ನಿಂತ google ನಂಥ ಸರ್ಚ್ ಇಂಜಿನ್ ಗಳು. ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಂಡು ಸರಾಗವಾಗಿ ಓದಬಹುದು. ಇನ್ನು ಪುಸ್ತಕಗಳ ಕತೆ ಮುಗಿದಂತೆ ಎಂದು ಪಂಡಿತರ ಭವಿಷ್ಯವಾಣಿ. ಅದರಲ್ಲೂ "kindle" (ಮೊಬೈಲ್ ಗಿಂತ ಸ್ವಲ್ಪ ದೊಡ್ಡದಾದ ) ಎನ್ನುವ ಉಪಕರಣ amazon ನವರು ಹೊರತಂದಿದ್ದೆ ತಡ ಯಾವ ಪುಸ್ತಕ ಬೇಕಾದರೂ,(ಮೂರೂವರೆ ಸಾವಿರ ಪುಸ್ತಕಗಳನ್ನು ಡೌನ್ಲೋಡ್ ಮಾಡಬಹುದು), ಹಣ ಕೊಟ್ಟು ಡೌನ್ ಲೋಡ್ ಮಾಡಿಕೊಳ್ಳಬಹುದು. ನನ್ನಂಥ ಪುಸ್ತಕ ಪ್ರೇಮಿಗೆ ಈ ವಿಷಯ ದಿಗಿಲು ತಂದಿತು. ಅಂದರೆ ನನ್ನ ಆ ಪ್ರೀತಿಯ ಪುಸ್ತಕ ನಮ್ಮ ನೆಚ್ಚಿನ ಆಟಗಳಾದ ಗೋಲಿ, ಬುಗುರಿ, ಲಗೋರಿ, ಗಾಳಿಪಟಗಳಂತೆ ಗೋತಾ ಹೊಡೆದು ಚರಿತ್ರೆ ಸೇರಿಹೋಗ ಬಹುದೇ ಎಂದು. ಟೆಕ್ನಾಲಜಿ ಯ ಮೋಹಕ್ಕೆ ಬಿದ್ದು ಪ್ರೀತಿಯಿಂದ ಮರ ಕಡಿದು ತಯಾರಿಸಿದ ಕಾಗದದ ಪುಸ್ತಕಕ್ಕೆ ಸೋಡಾ ಚೀಟಿ ಕೊಡುವ ಮೊದಲು ನಮಗೆ ಖುಷಿ ಮತ್ತು ಮುದ ತಂದ, ತರುತ್ತಲೂ ಇರುವ ಹಳೆಮಿತ್ರನ ಗುಣ ವೈಶಿಷ್ಟ್ಯ ಒಂದು ಸ್ವಲ್ಪ ನೋಡೋಣ.

ವಿವಿಧ ರೀತಿಯ ಉಡುಗೆ (ಕವಚ ) ತೊಟ್ಟ, ವಿವಿಧ ಆಕಾರ ಮತ್ತು ಸೈಜುಗಲಲ್ಲಿ ಬರುವ ಪುಸ್ತಕಗಳು cat walk ಮೇಲೆ ನಡೆಯುವ ಲಲನಾಮಣಿಗಳಂತೆ ಸುಂದರ. ನಮಗಿಷ್ಟವಾದ ಪುಸ್ತಕವನ್ನು ತೆಗೆದು ಅದರ ಮೇಲ್ಮೆಯನ್ನು ತಡವಿ, ಲೇಖಕ, ಪ್ರಕಾಶಕ ಯಾರು ಎಂದು ನೋಡಿ, ಮುನ್ನುಡಿ ಓದಿ, ಹಾಳೆಗಳನು ತಿರುವುವ ಮಜಾ " kindle" ಆಗಲಿ ಲ್ಯಾಪ್ಟಾಪ್ ಆಗಲಿ ಕೊಡಬಲ್ಲುದೆ ?

ಕೊಂಡು ತಂದ ನಂತರ ನಮಗೆ ಬೇಕಾದ ಸ್ಥಳದಲ್ಲಿ ಸೋಫಾದ ಮೇಲೆ ಒರಗಿಯೋ, ಸ್ಟಡಿ ಯಲ್ಲಿ ಕೂತೋ, ಅಡುಗೆಮನೆಯ ಕೌಂಟರ್ ಟಾಪ್ ಮೇಲೋ, ನಿಂತೋ, ಪುಸ್ತಕವನ್ನು ಓದಬಹುದು. ಸ್ವಲ್ಪ ಹೊತ್ತು ಓದಿದ ನಂತರ ಒಂದು ಬುಕ್ ಮಾರ್ಕ್ ಇಟ್ಟು ಎದ್ದು ಹೋಗಬಹುದು. ಬುಕ್ ಮಾರ್ಕ್ ಗಳೋ ಈಗಂತೂ ಸುಂದರವಾದ ವಿವಿಧ ಶೈಲಿಗಳಲ್ಲಿ ಬರುತ್ತಿದೆ. ನನ್ನ ಹತ್ತಿರಇರುವ ಚಿನ್ನದ ಬಣ್ಣದ ಚಪ್ಪಟೆ ಲೋಹದ ಮೇಲೆ ಬಣ್ಣದ ಚಿಟ್ಟೆ ಹೊತ್ತ ಬುಕ್ ಮಾರ್ಕ್ ಚಿಟ್ಟೆ ಚಂಚಲತೆ ತೋರಿಸಿ ಓಡಿ ಹೋಗದೆ ಕಾಯುತ್ತಾ ನಿಂತಿರುತ್ತದೆ. ಬುಕ್ ಮಾರ್ಕ್ ಗಳನ್ನೂ ಸಂಗ್ರಹಿಸುವುದೂ ಸಹ ಒಂದು ಆಸಕ್ತಿದಾಯಕ ಚಟುವಟಿಕೆ. ಈ ಕೆಲಸವನ್ನು ನಮ್ಮ ಲ್ಯಾಪ್ ಟಾಪ್ ಮೇಲೆ ಪ್ರಯೋಗಿಸಿ ನೋಡಿ. ಇದ್ದಕ್ಕಿದ್ದಂತೆ ಚಾರ್ಜ್ ಹೋಗಿಬಿಡುತ್ತದೆ, ಇಲ್ಲಾ ಒಮ್ಮೆಲೇ ಸ್ಕ್ರೀನ್ ಮೆಲಿನದೆಲ್ಲಾ ಮಾಯವಾಗಿ ಬಿಡುತ್ತದೆ, ಕಾರಣ ಹ್ಯಾಂಗ್ ಅಪ್ ಅಥವಾ ಡಿಸ್ಕ್ ಕರಪ್ಟ್. ಈ ಪ್ರಾರಬ್ದ ನಮ್ಮ ನಿಷ್ಠೆಯ ನೆಂಟನಿಗೆ ಇಲ್ಲ. ಬುಕ್ ಮಾರ್ಕ್ ಅನ್ನು ತನ್ನಅ ಒಡಲಲ್ಲಿ ಇಟ್ಟುಕೊಂಡು ನಮಗಾಗಿ ಪ್ರೀತಿಯಿಂದ ಕಾಯುತ್ತಾನೆ.

ಮರೆತೆ ನೋಡಿ. ಪುಸ್ತಗಳು ಸೌಂದರ್ಯ ವರ್ಧಕವೂ ಹೌದು. Perfumed ಪುಸ್ತಕಗಳ ಬಗ್ಗೆ ನಾನು ಹೇಳುತ್ತಿಲ್ಲ. ಡೌನ್ ಲೋಡ್ ಮಾಡಿಕೊಂಡ ಪುಸ್ತಕವನ್ನು ಘಂಟೆಗಟ್ಟಲೆ ಕಣ್ಣಿವೆ ಇಕ್ಕದೆ ಓದಿ ಗೊತ್ತಾಗುತ್ತೆ . ಕಣ್ಣಿನ ಸುತ್ತಾ ಸುಕ್ಕುಗಳು guarantee. ಆ ಸಮಸ್ಯೆ ನಮ್ಮ ನೆಂಟ ನಮಗೆ ನೀಡುವುದಿಲ್ಲ. ಪುಸ್ತಕ ಕೈಯಲ್ಲಿ ಹಿಡಿದಾಗ, ಕೈ ಕುತ್ತಿಗೆಯ ಸ್ನಾಯುಗಳು ತಂತಾನೇ ಸಡಿಲವಾಗುತ್ತವೆ. Computer screen ಅನ್ನು ಒಂದೇ ಸಮನೆ ನೋಡುತ್ತಾ ಇದ್ದರೆ ಸ್ನಾಯುಗಳು ಬಿಗಿ ಹಿಡಿಯುತ್ತವೆ. Spondylitis, carpal tunnel syndrome ಇತ್ಯಾದಿ ಸುಂದರ, ಕಿವಿಗೆ ಇಂಪಾದ ರೋಗಗಳು ತಾಗಿಕೊಳ್ಳುತ್ತವೆ.

ಕೊನೆಯದಾಗಿ ನಮ್ಮ ಸಂಗ್ರಹದಲ್ಲಿರುವ ಪುಸ್ತಕಗಳ ಕಂಪು ನಮ್ಮ ಸಂದು ಹೋದ ಕಾಲದ, ಮಧುರ, ಕಹಿ ನೆನಪುಗಳನ್ನೂ ಮೆಲುಕು ಹಾಕುವಂತೆ ಮಾಡುತ್ತವೆ.

ನನ್ನ ಮತ ಇ-ಹೊತ್ತಗೆಗೆ,ಏಕೆಂದರೆ,ಕಿಂಡಲ್ ಮಾದರಿಯ ಹೊತ್ತಗೆಯಲ್ಲಿ ಸಾವಿರಾರು ಹೊತ್ತಗೆಗಳನ್ನು ಇಡಬಹುದು. ಇನ್ನೂರೈವತ್ತು ಗ್ರಾಂ ತೂಕದಲ್ಲಿ ಒಂದು ಲೈಬ್ರರಿಯನ್ನು ಎಲ್ಲಿ ಬೇಕಲ್ಲಿಗೆ ಒಯ್ಯಬಹುದು.ಇದರಲ್ಲೂ ಪ್ರಕಾಶಕರ, ಬರೆದವರ, ಮೊತ್ತದ ವಿವರಗಳಿರುತ್ತವೆ. ಅವನ್ನು ಆಸ್ವಾದಿಸಬಹುದು. ಇದರಲ್ಲೂ ಬುಕ್ ಮಾರ್ಕಿಂಗ್ ಇರುತ್ತದೆ.ಇದರಲ್ಲಿ ಅಡಿಟಿಪ್ಪಣಿ ಮಾಡಿಕೊಳ್ಳುವ ಸೌಲಭ್ಯವೂ ಇದೆ. ನಿಮಗೊಬ್ಬರಿಗೆ ಮಾತ್ರ ಓದಲು ಅನುಕೂಲವಾಗುವಂತೆ ಲಾಕ್ ಮಾಡಿಕೊಳ್ಳಬಹುದು.ನಿಮ್ಮ ಹೆಸರನ್ನು ಬರೆದಿಡಬಹುದು!ಸಾವಿರಾರು ಹೊತ್ತಗೆಗಳನ್ನು ನಮಗೆ ಬೇಕಾದಲ್ಲಿಗೆ ಒಯ್ಯಬಲ್ಲ ಸೌಲಭ್ಯವೇ ರೋಮಾಂಚಕಾರಿ ಸಂಗತಿ! ಟಿಎಫ್ಟಿ ಮಾನಿಟರ್‍ ಇದ್ದರೆ ಕಣ್ಣಿಗೆ ಅಂಥ ಆಯಾಸವಾಗುವುದಿಲ್ಲ.ಒಂದನೆಯ ತರಗತಿಯಿಂದ ಇಂಜಿನಿಯರಿಂಗ ವರೆಗಿನ ಪಠ್ಯಗಳನ್ನು ಒಂದೇ ಹೊತ್ತಗೆಯಲ್ಲಿ ಸಂಗ್ರಹಿಸಬಹುದು. ಮೆಡಿಕಲ್ ಹೊತ್ತಗೆಗಳು ಒಂದೇ ಇ-ಹೊತ್ತಗೆಯಲ್ಲಿ ಲಭ್ಯ.ಹಾಗೆಯೇ ಇ-ಹೊತ್ತಗೆಯನ್ನು ಪವರ್‍ ಕಟ್/ಲೋಡ್ ಶೆಡ್ಡಿಂಗ್ ಸಮಯದಲ್ಲೂ ಬಳಸಬಹುದು!
ಪರಿಸರಕ್ಕೆ ಒಳಿತಾಗುವ ತಂತ್ರಜ್ಞಾನಕ್ಕೆ ಬೆಂಬಲಿಸೋಣ! ತಂತ್ತಜ್ಞಾನ ಬಳಸಿ ಕಾಡು ಉಳಿಸಿ!
References:
http://www.engadget.com/2006/09/11/amazon-kindle-meet-amazons-e-book-reader/
http://www.infibeam.com/Pi
http://ebookstore.sony.com/reader/
http://www.usemobilesavepaper.com
Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು