Monday, July 12, 2010

ನನ್ನ ಅಮೇರಿಕಾ ಜೀವನ.........ಭಾಗ 5

ನಾನು ಇಷ್ಟು ದಿನ ಮೋಟೆಲ್ ನಲ್ಲಿ ಇದ್ದೆ. ಅಲ್ಲಿ ಎಲ್ಲ ಚೆನ್ನಾಗಿದೆ. ಚಿಕ್ಕದು ಚೊಕ್ಕವಾದದ್ದು ಆದರೇ ಬೆಲೆ ಮಾತ್ರ ದೊಡ್ಡದು. ಅದಕ್ಕೆ ಅಪಾರ್ಟ್ಮೆಂಟ್ ಗೆ ಬದಲಾಯಿಸುತ್ತ ಇದೀನಿ. ಅಪಾರ್ಟ್ಮೆ೦ಟ್ ಗಳನ್ನು ನಮ್ಮಲ್ಲಿಯ ತರಹ ಯಾವ ಅ೦ದ ಆಕಾರದಿ೦ದ ಬೇಕಾದರೂ ಕಟ್ಟುವ೦ತಿಲ್ಲ. ಇದಕ್ಕೆ ಸರಕಾರದ ನೀತಿ-ಕಾನೂನು ಗಳನ್ನು ಚಾಚೂ ತಪ್ಪದೆ ಅನುಸರಿಸ ಬೇಕಾಗುತ್ತದೆ. ಎಲ್ಲಾ ಮನೆ ಗಳೂ ಯುರೋಪಿನ ಶೈಲಿಯದಾಗಿರುತ್ತದೆ. ಹೊರ ನೋಟದಲ್ಲಿ ಇಟ್ಟಿಗೆಯನ್ನು ಬಳಸಿದ್ದು ಗೋಚರಿಸುತ್ತದೆ. ಈ ಇಟ್ಟಿಗೆಯ ಮೇಲೆ ಸಿಮೆ೦ಟು / ಬೇರೆ ಬಣ್ಣ ಬಳಿಯದೆ ಇಟ್ಟಿಗೆಯ ಅ೦ದವನ್ನು ಕಾಪಾಡುತ್ತಾರೆ. ಛಾವಣಿ ಹೆ೦ಚಿನ ಶೈಲಿಯ ಇಳಿಜಾರಿನದಾಗಿರುತ್ತದೆ, ಆದರೆ ಮ೦ಗಳೂರು ಹೆ೦ಚಲ್ಲ, ಸಣ್ಣ ಸಣ್ಣ ಶೀಟ್ ಗಳನ್ನು ಜೋಡಿಸಿ ಕಟ್ಟಿರುತ್ತಾರೆ. ಇಲ್ಲಿ ನೆಲ ಅ೦ತಸ್ತಿಗೆ ಮೊದಲ ಮಹಡಿ ಅನ್ನುತ್ತರೆ, ಹಾಗೇ ಮೊದಲ ಅ೦ತಸ್ತು ಎರಡನೆ ಮಹಡಿ.... ಪ್ರಾರ೦ಭದಲ್ಲಿ ಇಲ್ಲಿಯವರ ಜತೆ ವ್ಯವಹರಿಸುವಾಗ ಸ್ವಲ್ಪ ಎಡವಟ್ಟಾಗುತ್ತದೆ.
ಇನ್ನು ಮನೆಯ ಬಗ್ಗೆ ಹೇಳುವುದಾದರೆ ಮನೇಲಿ ಒಂದು ಬೆಡ್ ರೂಂ, ಎರಡು ಬೆಡ್ ರೂಂ ಮನೆಗಳೇ ಜಾಸ್ತಿ. ಒಂದು ಗೃಹ ಸಂಕೀರ್ಣ (ವಟಾರ) ದಲ್ಲಿ ಬಹಳಷ್ಟು ಮನೆಗಳನ್ನು ನೀವು ಕಾಣಬಹುದು. ಒ೦ದು ಗೃಹ ಸ೦ಕೀರ್ಣದಲ್ಲಿ ಒ೦ದೇ ತೆರನಾದ (uniform) ಮನೆಗಳು ಕಾಣಿಸುತ್ತವೆ. ಎಲ್ಲಾ ಗೃಹಸ೦ಕೀರ್ಣದಲ್ಲೂ ವ್ಯಾಯಾಮಶಾಲೆ, ಆಟದ ಜಾಗ ಮತ್ತು ಈಜುಕೊಳವಿರುತ್ತದೆ. ಕೆಲವು ಕಡೆ ಬಿಸಿನೀರು ಮತ್ತು ತಣ್ಣೀರಿನ ಪ್ರತ್ಯೇಕ ಕೊಳವಿರುತ್ತದೆ. ಇನ್ನೂ
ಕೆಲವು ಕಡೆ ಆಟದ ಮೈದಾನ ಕೂಡ ಇರುತ್ತದೆ. ನಮ್ಮ ಗೃಹ ಸಂಕೀರ್ಣದಲ್ಲಿ ದೊಡ್ಡ ದೂರದರ್ಶನ ಇರುವ ಕೊಟಡಿ ಕೂಡ ಇದೆ. ಮನೆಯ ನೆಲ ಮತ್ತು ಗೋಡೆ ಮರದ ಹಲಗೆಯನ್ನೊಳಗೊ೦ಡಿರುತ್ತದೆ. ನನ್ನ ಮನೆ ಅಮೆರಿಕಾದ ಮೊದಲನೇ ಮಹಡಿಯಲ್ಲಿ , ಅಂದರೆ ನೆಲ ಮಹಡಿಯಲ್ಲಿ ಇದೆ. ಮನೆಯ ಒಳಗೆ ನೆಲದ ಮೇಲೆ ಮೆತ್ತನೆಯ ನೆಲಹಾಸು (Soft Carpet) ಇರುತ್ತದೆ. ಮತ್ತೆ ಕಸ ಗುಡಿಸುವುದು ಹೇಗೆ? ಕಸವನ್ನು ಯಾರೂ ಗುಡಿಸುವುದಿಲ್ಲ, ಬದಲಾಗಿ ಗಾಳಿಯಿ೦ದ ಕೆಲಸ ಮಾಡುವ ಉಪಕರಣವನ್ನು (Vaccum Cleaner) ಎಲ್ಲರ ಮನೆಯಲ್ಲೂ ಉಪಯೋಗಿಸುತ್ತಾರೆ. ಇನ್ನು ಅಡಿಗೆ ಮಾಡಲು ವಿದ್ಯುತ್ ಓಲೆ, ಮಾಂಸ ಬೇಯಿಸಲು ಓವೆನ್, ಆಹಾರ ಬಿಸಿ ಮಾಡಲು ಓವೆನ್, ಪಾತ್ರೆ ತೊಳೆಯಲು ಡಿಶ್ ವಾಷೆರ್ ಉಪಯೋಗಿಸುತ್ತಾರೆ. ದೊಡ್ಡ ಶೀತಲ ಯಂತ್ರ ಕೂಡ ಇದೆ. ಇನ್ನು ಹವಾ ನಿಯಂತ್ರಿತ ಯಂತ್ರದಲ್ಲೇ ಬಿಸಿ ಮತ್ತು ತಣ್ಣನೆಯ ಗಾಳಿ ಬರಲು ಅವಕಾಶ ಇದೆ. ಬಟ್ಟೆ ಯಾರೂ ಜಾಸ್ತಿ ಇಲ್ಲಿ ಒಗೆಯೋದೆ ಇಲ್ಲ. ಎಲ್ಲರು ಹೊಸ ಬಟ್ಟೆ ಕೊಂಡುಕೊಳ್ಳುತ್ತಾರೆ ಜಾಸ್ತಿ. ಒಗೆಯಲೇ ಬೇಕು ಅಂದ್ರೆ ವಾಶಿಂಗ್ ಮಶೀನ್ ನ್ನು ಉಪಗೊಯಿಸುತ್ತಾರೆ. ಅದು ಕೂಡ ತಿಂಗಳಿಗೆ ಒಮ್ಮೆ ಇರಬಹುದು. ಇನ್ನು ಇದನ್ನು ಒಣಗಿಸೋಕೆ ಬಿಸಿಲೆ ಬೇಕಾಗಿಲ್ಲ. ಅದಕ್ಕೊಸ್ಕರಾನೆ Dryer ಅನ್ನೋ ಯಂತ್ರ ಇದೆ. ಇದು ಅರ್ಧ ಗಂಟೇಲಿ ಎಲ್ಲ ಒಗೆದಿರೋ ಬಟ್ಟೆ ನ ಒಣಗಿಸುತ್ತೆ. ಇವೆಲ್ಲ ಯಂತ್ರಗಳು ಕೆಲಸ ಮಾಡಬೇಕು ಅಂದರೆ ನಿಮಗೆ ವಿದ್ಯುತ್ ಬೇಕೇ ಬೇಕಲ್ವೆ. ಅಕಸ್ಮಾತ್ ಕರೆಂಟ್ ಹೋದರೆ. ಹಾಗಂತ ಕನಸಿನಲ್ಲೂ ಕೂಡ ಊಹಿಸಬೇಡಿ. ಇಲ್ಲಿ ವಿದ್ಯುತ್ ಸಮಸ್ಯೆನೇ ಇಲ್ಲ. ವರ್ಷಕ್ಕೊಮ್ಮೆ ಇವರೇ ಅದನ್ನು ಕೆಲವು ನಿಮಿಷಗಳು ಆರಿಸ್ತಾರಂತೆ ಅಂತ ಕೇಳಿದೆ. ಅದು ಕೂಡ ಅದನ್ನು ಕಂಡು ಹಿಡಿದವನನ್ನು ನೆನಪಿಸಿಕೊಳ್ಳೋ ಕೊಸ್ಕರ. ಇಲ್ಲಿನ ಇಲೆಕ್ಟ್ರಿಕ್ ಸ್ವಿಚ್ ಮತ್ತು ಪ್ಲಗ್ಗು ನಮ್ಮಲ್ಲಿಯ ತರ ಇರುವುದಿಲ್ಲ. ಅತ್ಯ೦ತ ಸುರಕ್ಷತೆಯಿ೦ದ ಕೂಡಿದ್ದು ಮಕ್ಕಳೂ ಸಹ ಕರೆ೦ಟ್ ಹೊಡಿಸಿ ಕೊಳ್ಳಲು ಸಾದ್ಯವಿಲ್ಲ! ಸ್ವಿಚ್ಚನ್ನು ನಮ್ಮಲ್ಲಿ ಮೇಲಿನಿ೦ದ ಕೆಳಗೆ ’ಆನ್’ ಮಾಡಿದರೆ ಇಲ್ಲಿ ಕೆಳಗಿನಿ೦ದ ಮೇಲೆ ’ಆನ್’ ಮಾಡುತ್ತಾರೆ!! ಹೊಸದರಲ್ಲಿ ನಮಗೆ ವ್ಯತ್ಯಾಸವಾಗುತ್ತದೆ.
ಮೇಲೆ ತಿಳಿಸಿದ ಎಲ್ಲಾ ಯಂತ್ರಗಳನ್ನು ಅವರು ನಮಗೆ ಮನೇಲಿ ಕೊಡೋದಿಲ್ಲ. ನನಗೆ ಬರೀ ವಿದ್ಯುತ್ ಒಲೆ, ಶೀತಲ ಯಂತ್ರ, ಡಿಶ್ ವಾಷರ್ ಯಂತ್ರ ಮಾತ್ರ ಕೊಟ್ಟಿದ್ದಾರೆ. ಉಳಿದವುಗಳನ್ನು ಬಾಡಿಗೆಗೆ ಅಥವಾ ಹೊಸದಾಗಿ ಕೊಂಡುಕೊಳ್ಳ ಬಹುದು. ಇನ್ನು ಸ್ನಾನದ ಮನೆಯ ವಿಷಯಕ್ಕೆ ಬಂದರೆ, ಇಲ್ಲಿ ಅಪ್ಪಿ ತಪ್ಪಿ ಬಕೆಟ್, ಚಂಬು ಹುಡ್ಕೋಕೆ ಹೋಗಬೇಡಿ. ಇಲ್ಲಿ shower ನಿಂದಾನೆ ಸ್ನಾನ ಮಾಡೋದು. ಬಿಸಿ/ತಣ್ಣೀರು ಹದ ಮಾಡಿ ಕೊಳ್ಳಲು ನಲ್ಲಿಯಲ್ಲಿಯೆ ಹೊ೦ದಾಣಿಕೆ ಗಳಿರುತ್ತವೆ. ಸ್ನಾನದ ಗು೦ಡಿಯಲ್ಲಿ (ಬಾತ್-ಟಬ್ಬು) ನಿ೦ತು ಸೋಪು ಹಚ್ಹಿಕೊ೦ಡು ಶವರಿಗೆ ಮೈಒಡ್ಡಿದರೆ ಆಯಿತು ಸ್ನಾನ. ಶೌಚಕ್ಕೂ ಅಷ್ಟೆ ಭಾರತೀಯ ಶೈಲಿಯದು ಇಲ್ಲಿ ಇರುವುದಿಲ್ಲ. ಶೌಚಾಲಯ ಬೇರೆ ಸ್ನಾನದ ಕೊನೆ ಬೇರೆ ಅಲ್ಲ. ಸ್ನಾನದ ಕೋಣೆಯಲ್ಲೇ ಒಂದು ಶೌಚದ ಡಬ್ಬ ಇರುತ್ತೆ. ಅದು ಭಾರತದ ಮಾದರಿಯದ್ದಲ್ಲ. ಇಲ್ಲಿ ಎಲ್ಲವೂ ಪೇಪರ್ ಮಯ. ಏನಕ್ಕೆ ಅಂತೀರಾ , ಒರೆಸಿ ಕೊಳ್ಳೋಕೆ .
ಅಮೆರಿಕಾ ಕೂಡ ನಮ್ಮ ದೇಶದ೦ತೆ ಇ೦ಗ್ಲೆ೦ಡಿನ ಹಿಡಿತದಲ್ಲಿತ್ತು, ಸ್ವಾತ೦ತ್ರ್ಯ ಬ೦ದು 235 ವರ್ಷಗಳಾಯಿತು. ಹಾಗಾಗಿ ಇಲ್ಲಿ ಬ್ರಿಟೀಶರ ಕುರುಹುಗಳನ್ನು ಕಾಣಬಹುದು. ಅದಕ್ಕೇ ಇಲ್ಲಿ ಸೆ೦ಟಿಮೀಟರ್, ಕಿಲೋಮೀಟರ್, ಲೀಟರ್ ಬದಲಾಗಿ ಇ೦ಚು, ಮೈಲು, ಗ್ಯಾಲನ್ ಎ೦ಬ ಬ್ರಿಟೀಷ್ ಕ್ರಮವನ್ನು ಅನುಸರಿಸುತ್ತಾರೆ.ಇಲ್ಲಿಯ ಹಣವೆಂದರೆ 'ಡಾಲರ್'. ನಮ್ಮ ರೂಪಾಯಿ ಇಲ್ಲಿ ಡಾಲರ್ ಮತ್ತು ಪೈಸ ಅಂದ್ರೆ 'ಸೆಂಟ್'.ಆದರೆ ಒಂದು ಡಾಲರ್ ಬೆಲೆ/ಮೌಲ್ಯ ಸುಮಾರು ನಮ್ಮ 50 ರೂಪಾಯಿಗಳಿಗೆ ಸಮ (ಇದು ದಿನವೂ ಬದಲಾವಣೆ ಆಗುತ್ತದೆ ಅಂತ ನಿಮಗೆ ಗೊತ್ತಿರಬಹುದಲ್ಲ).
ಅಮೇರಿಕಾದಲ್ಲಿ ಸರ್ವೇ ಸಾಮಾನ್ಯವಾಗಿ (85%) ಜನ ಮಾತನಾಡುವುದು ಇ೦ಗ್ಲೀಷ್ ಭಾಷೆ. ಇಲ್ಲಿಯ ಇ೦ಗ್ಲೀಷ್ ಭಾಷೆಗೂ ಇ೦ಗ್ಲೆ೦ಡಿನ (ನಮ್ಮ) ಇ೦ಗ್ಲೀಷಿಗೂ ವ್ಯತ್ಯಾಸ ಇದೆ. ಅದಕ್ಕೇ ಅಮೆರಿಕನ್ ಇ೦ಗ್ಲೀಷ್ ಎನ್ನುತ್ತಾರೆ. ಒಂದೇ ಅರ್ಥಕ್ಕೆ ಬೇರೆ ಪರ್ಯಾಯ ಶಬ್ದಗಳನ್ನು ಉಪಯೋಗಿಸುತ್ತಾರೆ. ಉದಾಹರಣೆಗೆ 'toilet' ಗೆ 'rest room', petrol-gas, ground floor-first floor, curd-yogurt, Police-Cop, Z - Zee, Zero - O ಇತ್ಯಾದಿ. ಮೊದಮೊದಲು ಬಹಳ ಭ್ರಮಣೆ (confuse) ಕೂಡ ಆಗುತ್ತದೆ!
ಆಮೆರಿಕ ಬಹಳ ದೊಡ್ಡ ದೇಶ.ನಾವು ಭಾರತವನ್ನೇ ದೊಡ್ಡ ದೇಶ ಎನ್ನುತ್ತೇವೆ.(ಜನಸಂಕ್ಯೆಯಲ್ಲಿ) ಅಮೆರಿಕ ವಿಸ್ತೀರ್ಣ ದಲ್ಲಿ ಭಾರತಕ್ಕಿ೦ತ ಸುಮಾರು ಮೂರು ಪಟ್ಟು ದೊಡ್ಡದು. ವಿಮಾನದಲ್ಲಿ ಕುಳಿತರೆ ಅಮೆರಿಕದ ಪೂರ್ವ ಅಂಚಿನಿಂದ ಪಶ್ಚಿಮ ಅಂಚು ತಲುಪಲು ಸುಮಾರು ೧೦ ಘಂಟೆ ಬೇಕೇ ಬೇಕು. ಇದರಿಂದಲೇ ನಿಮಗೆ, ಅಮೆರಿಕಾದ ಗಾತ್ರದ ಅರಿವಾಗಬಹುದು. ಆದರೆ ಜನಸ೦ಖ್ಯೆಯಲ್ಲಿ ಮಾತ್ರ ಭಾರತದ ನಾಲ್ಕನೆ ಒ೦ದು ಭಾಗ!
ಇಲ್ಲಿ ಒಟ್ಟು 50 ರಾಜ್ಯ ಗಳಿವೆ. ಇದರ ಗುರುತಿಗಾಗಿ ಅಮೇರಿಕಾದ ಬಾವುಟದಲ್ಲಿ 50 ನಕ್ಷತ್ರಗಳಿವೆ. ಈ 50 ರಾಜ್ಯಗಳಲ್ಲಿ ಟೆಕ್ಸಾಸ್’, ನ್ಯೂಯಾರ್ಕ್ ,ನ್ಯೂ ಜೆರ್ಸಿ, ಓಹಿಯೋ, ಕ್ಯಾಲಿಫೋರ್ನಿಯಾ, ಫ್ಲೋರಿಡ, ವಾಶಿಂಗ್ ಟನ್, ಇವೆ ಮುಖ್ಯವಾದುವು.

No comments:

Post a Comment

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು