ಮಿತ್ರರೇ,
ಅಮೆರಿಕ ಎಂದ ಕೂಡಲೆ ನೆನಪಾಗುವುದು ನ್ಯೂ ಯಾರ್ಕ್ ನಗರ. ಹಾಗೇನೆ ಇದು ಅಮೆರಿಕ ದ ಮುಖ್ಯ ಪ್ರವಾಸಿ ತಾಣ ಕೂಡ. ಇದನ್ನು ಅಮೆರಿಕಕ್ಕೆ ಬಂದ ಪ್ರತಿಯೊಬ್ಬರೂ ನೋಡಲೇ ಬಯಸುತ್ತಾರೆ. ಅದುವೇ ನಯಾಗರ ಜಲಪಾತ. ಇಲ್ಲಿಗೆ ನಾನು ಮತ್ತು ನನ್ನ ಸ್ನೇಹಿತರು, ನಮ್ಮ ಅಮೆರಿಕಾದ ಮೊದಲ ಪ್ರವಾಸ ಮಾಡಿದೆವು. ನಿಮಗೆ ತಿಳಿದಿದೆಯೋ ಇಲ್ಲವೋ, ನಯಾಗರ ಜಲಪಾತ ಎರಡು ದೇಶಗಳಲ್ಲಿ ಹರಡಿಕೊಂಡಿದೆ. ಅದೇ ಅಮೆರಿಕ ಮತ್ತು ಕೆನಡಾ ದೇಶಗಳು. ಜಲಪಾತದ ಒಂದು ಭಾಗದಲ್ಲಿ ಅಮೆರಿಕ, ಮತ್ತೊಂದು ಭಾಗದಲ್ಲಿ ಕೆನಡಾ. ಇವೆರಡರ ಮದ್ಯೆ ನಯಾಗರ ನದಿ ಇದೆ. ಇನ್ನೊಂದು ತರಹ ಹೇಳಬೇಕೆಂದರೆ ಅಮೆರಿಕಾದ ಈರೀ ಸರೋವರ ಮತ್ತು ಕೆನಡಾ ದ ಒಂಟಾರಿಯೋ ಸರೋವಗಳ ಮದ್ಯೆ ಇರುವ ಸಣ್ಣ ನಯಾಗರ ನದಿ, ಒಂದು ಜಲಪಾತವನ್ನು ಸೃಷ್ಟಿಸಿರುವುದೇ ಸೋಜಿಗ.ನಯಾಗರ ನದಿಯ ಪಶ್ಚಿಮ ಭಾಗದಲ್ಲಿ ಕೆನಡ ಇದ್ದರೆ, ಪೂರ್ವದಲ್ಲಿ ಅಮೆರಿಕ ಇದೆ. ನಯಾಗರ ಊರಿನ ಕೇಂದ್ರ ಬಿಂದು ಎಂದರೆ ನಯಾಗರ ಜಲಪಾತ. ನಮ್ಮ ಜೋಗ್ ಜಲಪಾತದ ರಾಜ, ರಾಣಿ, ರೋರೆರ್, ರಾಕೆಟ್ ತರ ನಯಾಗರ ಜಲಪಾತ ಕೂಡ ಮೂರು ಜಲಪಾತಗಳನ್ನು ಒಳಗೊಂಡಿದೆ. ಅವೇ ಅಮೆರಿಕನ್ ಜಲಪಾತ(American), ಬ್ರೈಡಲ್(Bridal) ಜಲಪಾತ, ಮತ್ತು ಕೆನಡಿಯನ್ / ಕುದುರೆ ಬೂಟಿನ ಜಲಪಾತ (Horse Shoe). ಇದರಲ್ಲಿ ಮುಖ್ಯವಾದದ್ದು ಕೆನಡಿಯನ್ ಜಲಪಾತ. ನಯಾಗರ ಜಲಪಾತದ ೯೦% ನೀರು ಇದರಲ್ಲೇ ಹರಿಯುತ್ತದೆ. ಇದನ್ನು ಪೂರ್ತಿಯಾಗಿ ಅಮೆರಿಕಾದ ಭಾಗದಿಂದ ನೋಡಲು ಆಗುವುದಿಲ್ಲ. ಇನ್ನು ಉಳಿದ ೧೦% ಅಮೆರಿಕನ್ ಜಲಪಾತದಲ್ಲಿ. ನಯಾಗರ ಜಲಪಾತ ದ ಎತ್ತರ ನಮ್ಮ ಜೋಗ್ ಜಲಪಾತ ಕ್ಕಿಂತ ಕಡಿಮೇನೆ. ಸುಮಾರು ೨೦೦ ಅಡಿ ಇರಬಹುದು ಅಷ್ಟೇ. ಮತ್ತೆ ಇದು ಏಕೆ ಇಷ್ಟೊಂದು ಪ್ರಸಿದ್ದಿ ಅಂತ ಕೇಳ್ತೀರಾ? ಇದರ ಅಗಲ ಇದೆ ನೋಡಿ, ಅಪಾರ ಗಾಂಭೀರ್ಯ ತಂದು ಕೊಡುತ್ತದೆ.
ಇನ್ನು ಇಲ್ಲಿಗೆ ಹೋಗುವ ಮುಂಚೆ ಪಿಟ್ಟ್ಸ್ ಬರ್ಗ್ (Pittsburgh) ನ ವೆಂಕಟೇಶ್ವರ ನ ದರ್ಶನ ಕೂಡ ಮಾಡಿ ಹೋಗೋಣ ಅನಿಸಿತ್ತು. ಅದಕ್ಕೆ ನಮ್ಮ ಪ್ರವಾಸದಲ್ಲಿ ಇದನ್ನು ಸೇರಿಸಿಕೊಂಡೆವು. ವೆಂಕಟೇಶ್ವರ ಎಷ್ಟು ಪ್ರಸಿದ್ದ ಅಂತ ಎಲ್ಲರಿಗೂ ಗೊತ್ತೇ ಇದೆ. ಅದೇ ತಿರುಪತಿಯ ಏಳು ಬೆಟ್ಟಗಳ ಮೇಲೆ ಆಸೀನನಾಗಿರುವ ವೆಂಕಟೇಶ್ವರ/ ಬಾಲಾಜಿ/ ಶ್ರೀನಿವಾಸ/ ಗೋವಿಂದಾ, ಬರೀ ರೂಪಾಯಿ ಲೆಕ್ಕ ಮಾಡಿಸುತ್ತಾನೆ/ಎಣಿಸುತ್ತಾನೆ. ಪಿಟ್ಟ್ಸ್ ಬರ್ಗ್ (Pittsburgh) ನ ವೆಂಕಟೇಶ್ವರ ಡಾಲರ್ ನ ಲೆಕ್ಕ ಮಾಡಿಸುತ್ತಾನೆ/ಎಣಿಸುತ್ತಾನೆ. ಇಲ್ಲಿ ಕೂಡ ವೆಂಕಟೇಶ್ವರ, ಪೆನ್ನಿ ಬೆಟ್ಟದ(Pennysylvania Hills) ಮೇಲೆ ಆಸೀನನಾಗಿದ್ದಾನೆ. ಅಮೆರಿಕಾದ ಮೊಟ್ಟಮೊದಲ ಭಾರತೀಯ ದೇವಸ್ತಾನ ಅಂದರೆ ಇದೇನೇ. 1976 ರಲ್ಲಿ ನಿರ್ಮಾಣಗೊಂಡ ದೇವಸ್ತಾನ ಅಮೆರಿಕಾದ ಹಿಂದೂ ಭಕ್ತರನ್ನು ಕಾಪಾಡುತ್ತಿದ್ದಾನೆ. ಇಂತಹ ಅಮೂಲ್ಯ ಸ್ಥಳಗಳಿಗೆ ನಮ್ಮ ಪ್ರವಾಸ ಕೈ ಗೊಂಡೆವು. ಮೊದಲು ನಿಶ್ಚಯಿಸಿದಂತೆ ಶನಿವಾರ ಹೊತ್ತಿಗೆ ಮುಂಚೆ ಹೊರಟು, ಭಾನುವಾರ ಸಂಜೆ/ ರಾತ್ರಿ ವಾಪಾಸಾಗುವುದು ಎಂದಿತ್ತು. ಆದರೇ ಹೊರಟಿದ್ದು ಮಾತ್ರ ಶನಿವಾರ ಬೆಳಗ್ಗೆ ೭ ಗಂಟೆ ೩೦ ನಿಮಿಷಕ್ಕೆ. ಇದಕ್ಕೂ ಮುಂಚೆನೇ ಗಿರೀಶ್ ಮತ್ತು ಪ್ರಶಾಂತ ಅವರು ಶುಕ್ರ ವಾರ ಸಂಜೆನೇ ಕಾರನ್ನು ಬಾಡಿಗೆಗೆ ಪಡೆದು ತಂದಿದ್ದರು. ಇಲ್ಲೇ ನಮಗೆ ಅದೃಷ್ಟ ಒಲಿದಿತ್ತು. ಅದೆಂದರೆ, ನಾವು ಕಾಯ್ದಿರಿಸಿದ್ದ Compact ಕಾರಿನ ಬದಲು, ನಮಗೆ Standard ಕಾರು ದೊರೆತಿತ್ತು. ಟೊಯೋಟ ಸಂಸ್ತೆಯ ಕ್ಯಾಮ್ರಿ (Toyota Camry) ಕಾರು ಬಹಳ ವಿಶಾಲವಾಗಿತ್ತು. ಇದರಲ್ಲಿ ನಾವು ನಾಲ್ಕೂ ಜನ (ರವಿ, ಪ್ರಶಾಂತ , ಗಿರೀಶ್, & ಗಿರೀಶ್ ರವರ ಪತ್ನಿ ) ಆರಾಮಾಗಿ ಕುಳಿತುಕೊಳ್ಳ ಬಹುದಾಗಿತ್ತು. ಕಾರಿನ ಬಣ್ಣ ಕಪ್ಪು. ಇಲ್ಲಿಂದ ನಾವು ಗ್ಯಾಸ್ ತುಂಬಿಸಿ I 71 S ರ ಮೂಲಕ ಪಿಟ್ಟ್ಸ್ ಬರ್ಗ್ ಗೆ ನಮ್ಮ ಪ್ರಯಾಣ ಪ್ರಾರಂಭಿಸಿದೆವು. ಕೊಲಂಬಸ್ ನಿಂದ ಪಿಟ್ಟ್ಸ್ ಬರ್ಗ್ ನ ದೂರ ಸರಿ ಸುಮಾರು ೨೦೦ ಮೈಲುಗಳು. ಒಂದು ಅಂದಾಜಿನ ಪ್ರಕಾರ ೩ ರಿಂದ ೩.೩೦ ಗಂಟೆ ಪ್ರಯಾಣ. ಸಮಯ ೯ ತಲುಪಿದಾಗ ನಾವು ಓಹಿಯೋ(Ohio,(OH)) ರಾಜ್ಯ ಬಿಟ್ಟು ಪೆನ್ನಿ ಸಿಲ್ ವೇನಿಯಾ (Pennsylvania,(PA)) ರಾಜ್ಯ ಪ್ರವೇಶಿಸಿದೆವು. ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿಶ್ರಮಿಸಿಕೊಳ್ಳುವ ಜಾಗಗಳು(Rest Area) ಇರುತ್ತವೆ. ಇಲ್ಲಿ, ನಿಮಗೆ ಆಯಾ ರಾಜ್ಯದ ಪ್ರವಾಸದ ಮಾಹಿತಿ ಸಿಗುತ್ತದೆ. ಹಾಗು, ಕುಡಿಯಲು ತಂಪಾದ ಪಾನೀಯ ಕೂಡ ಸಿಗುತ್ತದೆ. ನಾವು ೯.೧೫ ಕ್ಕೆ PA ದಣಿವು ಆರಿಸಿಕೊಳ್ಳುವುದಕ್ಕೆ ವಿಶ್ರಮಿಸಿದೆವು. ಇಲ್ಲಿಂದಲೇ ನಮ್ಮ ಮೊದಲ ಛಾಯಾ ಚಿತ್ರದ ಕಲಾಪ ಶುರುವಾಯಿತು. ಇಲ್ಲೇ ನಮ್ಮ ಕಾರಿನ ಚಾಲಕರು ಕೂಡ ಬದಲಾದರು. ಇದಕ್ಕೂ ಮುಂಚೆ ತಿಳಿಸಿದ ಹಾಗೆ ಗಿರೀಶ್ ರವರು, ಚಾಲನೆ ಮಾಡುತ್ತಿದ್ದರು. ಈಗ ಪ್ರಶಾಂತ್ ರವರ ಸರದಿ. ಇವರಿಗೆ ಭಾರತದಲ್ಲಿ ವಾಹನ ಚಾಲನೆ ಮಾಡಿ ಅನುಭವ ಇದೆ. ಹಾಗು ಅಮೆರಿಕ ದಲ್ಲಿ ಒಂದು ಅವಕಾಶಕ್ಕೆ ಕಾಯುತ್ತಿದ್ದರು. ಈಗ ಆ ಸಕಾಲ ಕೂಡಿ ಬಂದಿತ್ತು. ಗಿರೀಶ್ ರವರ ಮಾರ್ಗ ದರ್ಶನದಲ್ಲಿ, ಇವರು ಕೂಡ ಸ್ವಲ್ಪ ಸಮಯದಲ್ಲೇ ಅಮೆರಿಕಾದ ಕಾರು ಚಾಲನೆಗೆ ಮುನ್ನುಡಿ ಬರೆದರು. ೯.೩೦ ಕ್ಕೆ ಇಲ್ಲಿಂದ ಹೋರಾಟ ನಾವು, I 70 E ರ ಮುಖಾಂತರ ನಮ್ಮ ಪ್ರಯಾಣ ಮುಂದು ವರೆಸಿದೆವು. ರಾಷ್ಟ್ರೀಯ ಹೆದ್ದಾರಿ ಬಗ್ಗೆ ಹೆಚ್ಚಿಗೆ ಹೇಳಬೇಕಾಗಿಲ್ಲ. ಇದರ ಬಗ್ಗೆ ಹಿಂದೇನೆ ಹೇಳಿದ್ದೇನೆ. ಆದರೇ ನಿಗದಿ ಪಡಿಸಿದ ವೇಗ ೬೫ mph,ಅನ್ನು ಅನುಸರಿಸೋದೆ ಸ್ವಲ್ಪ ಕಷ್ಟ ಅನಿಸುತ್ತದೆ. ಭಾರತದಲ್ಲಿ ಈ ತರಹ ಯಾವುದೇ ವೇಗ ನಿಗದಿ ಪಡಿಸಿಲ್ಲ. ನೀವು ನಿದಾನಕ್ಕೆ/ಜೋರಾಗಿ ಹೋಗಿ ಯಾರೂ ನಿಮ್ಮನ್ನು ಕೇಳುವುದಿಲ್ಲ. ಆದರೇ. ಅಮೇರಿಕಾದಲ್ಲಿ ಕಾಪ್ಸ್ (Police) ನಿಮ್ಮನ್ನು ಹುಡುಕಿ ಕೊಂಡು ಬರುತ್ತಾರೆ. ಅವರು ನಿಮಗೆ ಟಿಕೆಟ್ (Not Confuse with Bus/Train/Flight ) ಕೊಡುತ್ತಾರೆ. ಇದು ನಿಮ್ಮ ವಾಹನ ಪರವಾನಗಿ ಮೇಲೆ ಪ್ರಭಾವ ಬೀರುತ್ತದೆ. ಮಾರ್ಗ ಮದ್ಯೆ ಕಾರು ಪಂಚರ್ ಆಗಿದೆ ಎಂದು ಅನಿಸಿತು. ಅದಕ್ಕೆ ರಸ್ತೆಯಲ್ಲೇ ತುರ್ತು ಪರಿಸ್ತಿತಿ ಲೇನ್ ನಲ್ಲಿ ನಿಲ್ಲಿಸಿದೆವು. ನೋಡಿದರೆ ಏನು ಆಗಿಲ್ಲ. ರಸ್ತೆ ಲೋಹದಿಂದ ಮಾಡಿದ್ದರಿಂದ ನಮಗೆ ಆ ತರಹ ಭಾಸವಾಗಿರಬೇಕು ಅನಿಸಿ, ಚಾಲಕನ ಬದಲಾವಣೆ ಮಾಡಿ, ಪ್ರಯಾಣ ಮುಂದುವರೆಸಿದೆವು. ಸುಮಾರು ೧೧ ಗಂಟೆಗೆ ಪಿಟ್ಟ್ಸ್ ಬರ್ಗ್ ನಗರ ಪ್ರವೇಶಿಸಿ, ೧೧.೩೦ ಕ್ಕೆ ದೇವಾಲಯ ದ ಬಳಿ ಸೇರಿದೆವು. ಕೈ ಕಾಲು ಮುಖ ತೊಳೆದು A.C. ನಲ್ಲಿ ಆಸಿನನಾಗಿರುವ ಡಾಲರ್ ವೆಂಕಟೇಶ್ವರನ ದರ್ಶನ ಮಾಡಿದೆವು. ಇದು ಹಿಂದೂ ದೇವಾಲಯವಾದ್ದರಿಂದ ಬರೇ ನಮ್ಮ ಭಾರತದವರನ್ನು ಸುತ್ತಲೂ ಕಾಣುತ್ತಿದ್ದೆವು.ಹೊಟ್ಟೆ ಬಾರಿ ಹಸಿದಿತ್ತು. ದೇವಾಲಯದಲ್ಲೇ ಪ್ರಸಾದದ ತರಹ ಊಟದ ವ್ಯವಸ್ತೆ ಇತ್ತು. ಉಚಿತವಾಗಿ ಅಲ್ಲ ಸ್ವಾಮೀ, ೨ ಡಾಲರ್ ಒಂದು Bowl/Plate ಗೆ. ಬಹಳ ತರಹದ ಆಹಾರ ಪದಾರ್ಥಗಳು ಇಲ್ಲಿ ಇತ್ತು. ನಾವು, ಎಲ್ಲವನ್ನು ಒಂದೊಂದು Bowl/Plate ತೆಗೆದುಕೊಂಡೆವು. ಸಾಂಬಾರ್ ರೈಸ್, ಪುಳಿಯೋಗರೆ, ಮೊಸರನ್ನ, ಪೊಂಗಲ್ ಎಲ್ಲ ಚೆನ್ನಾಗಿತ್ತು. ಇಲ್ಲಿನ ಒಂದೇ ವಿಚಾರ ನನಗೆ ಸರಿ ಅನಿಸದಿದ್ದ್ದು ಅಂದರೆ, ಅಮೆರಿಕ ದೇಶದ ಪ್ರಜೆ ಒಬ್ಬ ಸ್ವಚ್ಛ ಮಾಡುತ್ತಿದ್ದುದು, ಈತನನ್ನು ದೇವಾಲಯದವರು ಆಳಾಗಿ ನೋಡುತ್ತಿದುದು ಕೂಡ(I Mean Cleaner in Temple Restaurant). ಊಟ ಮುಗಿದ ನಂತರ ದೇವಸ್ತಾನದ ಬಳಿ ಕೆಲವು ಛಾಯಾ ಚಿತ್ರಗಳನ್ನು ತೆಗೆದು ಕೊಂಡು ಸಮಯ ೧.೧೫ ಆದಾಗ, ನಮ್ಮ ಮುಂದಿನ ಸ್ತಳ ಆತ್ಮಹತ್ಯೆಯ ಮೊನಚಾದ ತುದಿಗೆ(Suicide Point) ಮುಂದುವರೆಸಿದೆವು. ಇಲ್ಲಿಗೆ ಸೇರಲು ನಾವು ಹಲವಾರು ಸುರಂಗಗಳನ್ನು ಮತ್ತು ಸಂಪರ್ಕ ಸೇತುವೆಗಳನ್ನು ಉಪಯೋಗಿಸಿದೆವು. ಈ ಸ್ಥಳ ದಿಂದ ಪಿಟ್ಟ್ಸ್ ಬರ್ಗ್ ನ ಡೌನ್ ಟೌನ್ , ತುಂಬಾ ಚೆನ್ನಾಗಿ ಕಾಣುತ್ತದೆ. ಪಿಟ್ಟ್ಸ್ ಬರ್ಗ್ ನಗರ ವನ್ನು, ಬೆಟ್ಟಗಳನ್ನು ಕೊರೆದು ಮಾಡಿದ್ದಾರೆ. ಎರಡು ಬೆಟ್ಟಗಳ ಮದ್ಯೆ ನೀರಿದೆ ನೋಡಿ, ಅದೇ ಕಷ್ಟ. ಸೇತುವೆ ಗಳ್ಳನ್ನು ಉಪಯೋಗಿಸಿ, ಎರಡು ಬೆಟ್ಟಗಳ ಸಂಪರ್ಕ ಮಾಡಿದ್ದಾರೆ. ಈ ಸ್ಥಳದಿಂದ, ಅಕಸ್ಮಾತಾಗಿ ಕೆಳಗೆ ಬಿದ್ದರೆ, ಶಿವನ ಪಾದ ಸೇರುವುದು ಖಚಿತಾನೆ . ಅದಕ್ಕೆ ಈ ಹೆಸರು. ಇಲ್ಲಿಯೂ ಕೂಡ ಛಾಯಾ ಚಿತ್ರ ಗಳನ್ನು ತೆಗೆದು ಕೊಂಡು, ಮುಂದೆ ನಮ್ಮ ಪ್ರಯಾಣವನ್ನು ನಯಾಗರ ನಗರದ ಕಡೆ ಬೆಳೆಸಿದೆವು. ಅಮೇರಿಕಾದಲ್ಲಿ U ತಿರುವು ಇಲ್ಲಾ. ಅದೇ ಕಷ್ಟ ಆಗಿದ್ದು ನೋಡಿ. ನಾವು ಹೋಗುವ ರಸ್ತೆ ಒಂದು ಕಡೆ ತಪ್ಪಾಯಿತು. ಅದಕ್ಕೆ ಪ್ರತಿ ಫಲ ವಾಗಿ , ಪೂರ್ತಿ ಪಿಟ್ಟ್ಸ್ ಬರ್ಗ್ ನ ಡೌನ್ ಟೌನ್ ನ ದರ್ಶನ ಮಾಡಿದೆವು. ಇಲ್ಲೇ ನಮ್ಮ ಪ್ರಯಾಣದ ಅರ್ಧ ಗಂಟೆ ವ್ಯರ್ಥವಾಯಿತು. ಹಾಗು ಹೀಗೂ ೩ ಗಂಟೆಗೆ ಪಿಟ್ಟ್ಸ್ ಬರ್ಗ್ ನಗರ ಬಿಟ್ಟು I 279 N ಪ್ರವೇಶಿಸಿ ನಯಾಗರಾ ನಗರ ದ ಕಡೆ ಹೊರಟೆವು.
Thursday, September 2, 2010
ನನ್ನ ಮೊದಲ ಅಮೆರಿಕ ಪ್ರವಾಸ - ನಯಾಗರ ಜಲಪಾತ ಮತ್ತು ಪಿಟ್ಟ್ಸ್ ಬರ್ಗ್-1
Wednesday, August 4, 2010
ನನ್ನ ಅಮೆರಿಕ ಜೀವನ -- ಭಾಗ 7 --ಆಹಾರ ಹೇಗೆ ಏನು ?
ಇಲ್ಲಿ ಆಹಾರ ಇಲ್ಲಿ ಸಿಗುತ್ತೆ ಅಂದರೆ, ಅದಕ್ಕೆ ಅಂತಾನೆ ವಾಲ್ ಮಾರ್ಟ್, ಕ್ರೋಗೆರ್ ಇದೆ. ಇಲ್ಲಿ ನೋ ಮಾರ್ಕೆಟ್, ಚಿಲ್ಲರೆ ಅಂಗಡಿ ಮುಂತಾದುವುಗಳು. ಏನೇ ಬೇಕು ಅಂದ್ರು Wal Mart ಅಥವಾ Kroger ಇದೆ. ಇದು ನಮ್ಮ ಬಿಗ್ ಬಜಾರ್ ನಂತಹುದ್ದು. ಏನೇ ಬೇಕಾದ್ರೂ ಸಿಗುತ್ತೆ. ಇಲ್ಲಿ ನೀವು ಒಂದೇ ತರಕಾರಿಯ/ ಹಣ್ಣಿನ ದಶವತಾರಗಳನ್ನು ನೋಡಬಹುದು. ಉದಾಹರಣೆಗೆ ಈರುಳ್ಳಿ ನೆ ತಗೊಳ್ಳಿ, ಸರಿ ಸುಮಾರು ಹತ್ತು ತರಹದ್ದು ಸಿಗುತ್ತೆ. ಸ್ಮಾಲ್ ಸೈಜ್, ಮೀಡಿಯಂ ಸೈಜ್, ಬಿಗ್ ಸೈಜ್(ಡೈನೋಸಾರ್ ಮೊಟ್ಟೆ ಗಾತ್ರದ್ದು)., ಬಿಳಿಯದು, ಕೆಂಪು, ಪಿಂಕ್, ಬೇಬಿ ಈರುಳ್ಳಿ ನೋಡಿ ಎಷ್ಟಿದೆ ಅಂಥಾ.ಹೀಗೆ ಟೊಮೇಟೊ ದಲ್ಲಿ ಕೂಡ ಬಹಳಷ್ಟು ವಿಧ ಇದೆ. ಎಲ್ಲಾ ತರಕಾರಿಗಳನ್ನು ಕೊಂಡು ಕೊಳ್ಳೋದು ವೇಸ್ಟ್. ಏಕೆಂದರೆ, ಎಲ್ಲದಕ್ಕೂ ಹಣ ಕೊದಬೇಕಲ್ವಾ. ಅದಕ್ಕೆ ಒಂದು ಹಣಕ್ಕೆ ಎಲ್ಲಾ ತರಕಾರಿ ಸಿಗೋ ಹಾಗಾದ್ರೆ? ಅದೇ ಪ್ಯಾಕ್ಡ್ ತರಕಾರಿ ಗಳು ಇದೆ ನೋಡಿ. ಎಲ್ಲಾ ತರಕಾರಿಗಳನ್ನು ಪ್ಯಾಕ್ ಮಾಡಿ ಶೀತಲ ಯಂತ್ರದಲ್ಲಿ ಇಟ್ಟಿರುತ್ತಾರೆ. ಅದನ್ನೇ ನಾವು ಕೊಂಡು ಅಡಿಗೆ ಮಾಡಿ ಸೇವಿಸಿದರೆ ಆಯಿತು. ಎಷ್ಟು ಸಮಯ ಉಳಿತಾಯ ಅಲ್ಲವೇ. ಎಲ್ಲಾ ಹಣ್ಣು ಗಳಲ್ಲಿ ನಿಮಗೆ ಬೀಜ ಇರುವ & ಇಲ್ಲದೆ ಇರುವ ಹಣ್ಣು ಗಳು ಸಿಗುತ್ತವೆ. ಉದಾಹರಣೆಗೆ. ಮೂಸಂಬಿ, ಕಿತ್ತಳೆ, ನಿಂಬೆ ಹಣ್ಣುಗಳು. ಭಾರತದಲ್ಲಿ ಬೆಳೆಯದ/ಸಿಗದ ಹತ್ತಾರು ತರಹದ ವಿಚಿತ್ರ ಹಣ್ಣುಗಳು ಇಲ್ಲಿ ಸಿಗುತ್ತವೆ. ಇನ್ನು ಪ್ಯಾಕ್ಡ್ ಅಡಿಗೆ ಕೂಡ ಸಿಗುತ್ತೆ. ಚಪಾತಿ, ಪರೋಟ, ಸಮೋಸ ಇವೆಲ್ಲ ರೆಡಿ ಮೇಡ್ ಇಲ್ಲಿ.
ಭಾರತದ ಅಡಿಗೆಗಳನ್ನು / ಅಡಿಗೆ ಪದಾರ್ಥಗಳಿಗೆ ಇಲ್ಲಿ ಬೇರೆ ಸ್ಟೋರ್ಗಳು ಇವೆ. ಅವೆಂದರೆ, ಬಾಂಬೆ ಬಜಾರ್, ಭವಾನಿ ಕ್ಯಾಶ್ ಅಂಡ್ ಕ್ಯಾರಿ, ಪಟೇಲ್ ಬ್ರದರ್ಸ್, ಅಪ್ನ ಬಜಾರ್, ಹೀಗೆ ಬಹಳಷ್ಟು ಇವೆ. ಇವರೆಲ್ಲ ನಮ್ಮ ಭಾರತ ದಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿ ಇಲ್ಲಿ ಮಾರುತ್ತಾರೆ. ಅದಕ್ಕೆ ಇವುಗಳ ಬೆಲೆ ಬಲು ದುಬಾರಿ. ನಮ್ಮ ಕರಿ ಬೇವು, ಕೊತ್ತಂಬರಿ ಅಂತು ಕೇಳಲೇ ಬೇಡಿ.ಕೇವಲ ಒಂದು ಡಾಲರ್ ಗೆ ಒಂದು ಕಟ್ಟು. ಅದಕ್ಕೆ ಇಲ್ಲಿಗೆ ಬರುವ ಮೊದಲೇ ಭಾರತೀಯರು ಎಲ್ಲಾ ಅಲ್ಲಿಂದ ತೆಗೆದುಕೊಂಡು ಬರುತ್ತಾರೆ. ಅಮೇರಿಕಾದಲ್ಲಿ ದಿನನಿತ್ಯದ ವಸ್ತುಗಳ ಉತ್ಫಾದನೆ ಕಡಿಮೆ. ಆದರೆ ಜಗತ್ತಿನ ಎಲ್ಲಾ ದೇಶಗಳಿ೦ದ (ಭಾರತವೂ ಸೇರಿ) ಉತ್ತಮ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಾರೆ.ಇದರಲ್ಲಿ ಸಿ೦ಹ ಪಾಲು ಚೀನಾ ದೇಶದ್ದು. ಗೊ೦ಬೆಗಳು ನೂರಕ್ಕೆ ನೂರು ಭಾಗ ಚೀನಾದ್ದು. ಬಟ್ಟೆ ಗಳಲ್ಲಿ ’ಮೇಡ್ ಇನ್ ಇ೦ಡಿಯ’ ನೋಡಿ ನಾವು ಖುಷಿ ಪಡಬಹುದು. ಮೇಡ್ ಇನ್ ಬಾಂಗ್ಲಾದೇಶ್, ಪಾಕಿಸ್ತಾನ್ ಕೂಡ ನೀವು ಇಲ್ಲಿ ನೋಡಬಹುದು.
ಇನ್ನು ಅಮೆರಿಕಾದ ಹೋಟೆಲ್ ಗಳ ಬಗ್ಗೆ ಹೇಳಬೇಕಂದ್ರೆ, ಅದೇ McDonalds, Pizzahut, KFC, Taco Bell, Hooters, Sub Way, Chipotle ಹೀಗೆ ಕೆಲವು ಆಗಲೇ ಭಾರತದಲ್ಲಿ ಬಂದು ಬಿಟ್ಟಿವೆ.
Wednesday, July 21, 2010
ನನ್ನ ಅಮೇರಿಕಾ ಜೀವನ.........ಭಾಗ 6 ( ರಸ್ತೆ, ವಾಹನ ಗಳಿಗೆ ಸಂಬಂಧಿಸಿದ್ಧು)
Monday, July 12, 2010
ನನ್ನ ಅಮೇರಿಕಾ ಜೀವನ.........ಭಾಗ 5
ಇನ್ನು ಮನೆಯ ಬಗ್ಗೆ ಹೇಳುವುದಾದರೆ ಮನೇಲಿ ಒಂದು ಬೆಡ್ ರೂಂ, ಎರಡು ಬೆಡ್ ರೂಂ ಮನೆಗಳೇ ಜಾಸ್ತಿ. ಒಂದು ಗೃಹ ಸಂಕೀರ್ಣ (ವಟಾರ) ದಲ್ಲಿ ಬಹಳಷ್ಟು ಮನೆಗಳನ್ನು ನೀವು ಕಾಣಬಹುದು. ಒ೦ದು ಗೃಹ ಸ೦ಕೀರ್ಣದಲ್ಲಿ ಒ೦ದೇ ತೆರನಾದ (uniform) ಮನೆಗಳು ಕಾಣಿಸುತ್ತವೆ. ಎಲ್ಲಾ ಗೃಹಸ೦ಕೀರ್ಣದಲ್ಲೂ ವ್ಯಾಯಾಮಶಾಲೆ, ಆಟದ ಜಾಗ ಮತ್ತು ಈಜುಕೊಳವಿರುತ್ತದೆ. ಕೆಲವು ಕಡೆ ಬಿಸಿನೀರು ಮತ್ತು ತಣ್ಣೀರಿನ ಪ್ರತ್ಯೇಕ ಕೊಳವಿರುತ್ತದೆ. ಇನ್ನೂ ಕೆಲವು ಕಡೆ ಆಟದ ಮೈದಾನ ಕೂಡ ಇರುತ್ತದೆ. ನಮ್ಮ ಗೃಹ ಸಂಕೀರ್ಣದಲ್ಲಿ ದೊಡ್ಡ ದೂರದರ್ಶನ ಇರುವ ಕೊಟಡಿ ಕೂಡ ಇದೆ. ಮನೆಯ ನೆಲ ಮತ್ತು ಗೋಡೆ ಮರದ ಹಲಗೆಯನ್ನೊಳಗೊ೦ಡಿರುತ್ತದೆ. ನನ್ನ ಮನೆ ಅಮೆರಿಕಾದ ಮೊದಲನೇ ಮಹಡಿಯಲ್ಲಿ , ಅಂದರೆ ನೆಲ ಮಹಡಿಯಲ್ಲಿ ಇದೆ. ಮನೆಯ ಒಳಗೆ ನೆಲದ ಮೇಲೆ ಮೆತ್ತನೆಯ ನೆಲಹಾಸು (Soft Carpet) ಇರುತ್ತದೆ. ಮತ್ತೆ ಕಸ ಗುಡಿಸುವುದು ಹೇಗೆ? ಕಸವನ್ನು ಯಾರೂ ಗುಡಿಸುವುದಿಲ್ಲ, ಬದಲಾಗಿ ಗಾಳಿಯಿ೦ದ ಕೆಲಸ ಮಾಡುವ ಉಪಕರಣವನ್ನು (Vaccum Cleaner) ಎಲ್ಲರ ಮನೆಯಲ್ಲೂ ಉಪಯೋಗಿಸುತ್ತಾರೆ. ಇನ್ನು ಅಡಿಗೆ ಮಾಡಲು ವಿದ್ಯುತ್ ಓಲೆ, ಮಾಂಸ ಬೇಯಿಸಲು ಓವೆನ್, ಆಹಾರ ಬಿಸಿ ಮಾಡಲು ಓವೆನ್, ಪಾತ್ರೆ ತೊಳೆಯಲು ಡಿಶ್ ವಾಷೆರ್ ಉಪಯೋಗಿಸುತ್ತಾರೆ. ದೊಡ್ಡ ಶೀತಲ ಯಂತ್ರ ಕೂಡ ಇದೆ. ಇನ್ನು ಹವಾ ನಿಯಂತ್ರಿತ ಯಂತ್ರದಲ್ಲೇ ಬಿಸಿ ಮತ್ತು ತಣ್ಣನೆಯ ಗಾಳಿ ಬರಲು ಅವಕಾಶ ಇದೆ. ಬಟ್ಟೆ ಯಾರೂ ಜಾಸ್ತಿ ಇಲ್ಲಿ ಒಗೆಯೋದೆ ಇಲ್ಲ. ಎಲ್ಲರು ಹೊಸ ಬಟ್ಟೆ ಕೊಂಡುಕೊಳ್ಳುತ್ತಾರೆ ಜಾಸ್ತಿ. ಒಗೆಯಲೇ ಬೇಕು ಅಂದ್ರೆ ವಾಶಿಂಗ್ ಮಶೀನ್ ನ್ನು ಉಪಗೊಯಿಸುತ್ತಾರೆ. ಅದು ಕೂಡ ತಿಂಗಳಿಗೆ ಒಮ್ಮೆ ಇರಬಹುದು. ಇನ್ನು ಇದನ್ನು ಒಣಗಿಸೋಕೆ ಬಿಸಿಲೆ ಬೇಕಾಗಿಲ್ಲ. ಅದಕ್ಕೊಸ್ಕರಾನೆ Dryer ಅನ್ನೋ ಯಂತ್ರ ಇದೆ. ಇದು ಅರ್ಧ ಗಂಟೇಲಿ ಎಲ್ಲ ಒಗೆದಿರೋ ಬಟ್ಟೆ ನ ಒಣಗಿಸುತ್ತೆ. ಇವೆಲ್ಲ ಯಂತ್ರಗಳು ಕೆಲಸ ಮಾಡಬೇಕು ಅಂದರೆ ನಿಮಗೆ ವಿದ್ಯುತ್ ಬೇಕೇ ಬೇಕಲ್ವೆ. ಅಕಸ್ಮಾತ್ ಕರೆಂಟ್ ಹೋದರೆ. ಹಾಗಂತ ಕನಸಿನಲ್ಲೂ ಕೂಡ ಊಹಿಸಬೇಡಿ. ಇಲ್ಲಿ ವಿದ್ಯುತ್ ಸಮಸ್ಯೆನೇ ಇಲ್ಲ. ವರ್ಷಕ್ಕೊಮ್ಮೆ ಇವರೇ ಅದನ್ನು ಕೆಲವು ನಿಮಿಷಗಳು ಆರಿಸ್ತಾರಂತೆ ಅಂತ ಕೇಳಿದೆ. ಅದು ಕೂಡ ಅದನ್ನು ಕಂಡು ಹಿಡಿದವನನ್ನು ನೆನಪಿಸಿಕೊಳ್ಳೋ ಕೊಸ್ಕರ. ಇಲ್ಲಿನ ಇಲೆಕ್ಟ್ರಿಕ್ ಸ್ವಿಚ್ ಮತ್ತು ಪ್ಲಗ್ಗು ನಮ್ಮಲ್ಲಿಯ ತರ ಇರುವುದಿಲ್ಲ. ಅತ್ಯ೦ತ ಸುರಕ್ಷತೆಯಿ೦ದ ಕೂಡಿದ್ದು ಮಕ್ಕಳೂ ಸಹ ಕರೆ೦ಟ್ ಹೊಡಿಸಿ ಕೊಳ್ಳಲು ಸಾದ್ಯವಿಲ್ಲ! ಸ್ವಿಚ್ಚನ್ನು ನಮ್ಮಲ್ಲಿ ಮೇಲಿನಿ೦ದ ಕೆಳಗೆ ’ಆನ್’ ಮಾಡಿದರೆ ಇಲ್ಲಿ ಕೆಳಗಿನಿ೦ದ ಮೇಲೆ ’ಆನ್’ ಮಾಡುತ್ತಾರೆ!! ಹೊಸದರಲ್ಲಿ ನಮಗೆ ವ್ಯತ್ಯಾಸವಾಗುತ್ತದೆ.
ಮೇಲೆ ತಿಳಿಸಿದ ಎಲ್ಲಾ ಯಂತ್ರಗಳನ್ನು ಅವರು ನಮಗೆ ಮನೇಲಿ ಕೊಡೋದಿಲ್ಲ. ನನಗೆ ಬರೀ ವಿದ್ಯುತ್ ಒಲೆ, ಶೀತಲ ಯಂತ್ರ, ಡಿಶ್ ವಾಷರ್ ಯಂತ್ರ ಮಾತ್ರ ಕೊಟ್ಟಿದ್ದಾರೆ. ಉಳಿದವುಗಳನ್ನು ಬಾಡಿಗೆಗೆ ಅಥವಾ ಹೊಸದಾಗಿ ಕೊಂಡುಕೊಳ್ಳ ಬಹುದು. ಇನ್ನು ಸ್ನಾನದ ಮನೆಯ ವಿಷಯಕ್ಕೆ ಬಂದರೆ, ಇಲ್ಲಿ ಅಪ್ಪಿ ತಪ್ಪಿ ಬಕೆಟ್, ಚಂಬು ಹುಡ್ಕೋಕೆ ಹೋಗಬೇಡಿ. ಇಲ್ಲಿ shower ನಿಂದಾನೆ ಸ್ನಾನ ಮಾಡೋದು. ಬಿಸಿ/ತಣ್ಣೀರು ಹದ ಮಾಡಿ ಕೊಳ್ಳಲು ನಲ್ಲಿಯಲ್ಲಿಯೆ ಹೊ೦ದಾಣಿಕೆ ಗಳಿರುತ್ತವೆ. ಸ್ನಾನದ ಗು೦ಡಿಯಲ್ಲಿ (ಬಾತ್-ಟಬ್ಬು) ನಿ೦ತು ಸೋಪು ಹಚ್ಹಿಕೊ೦ಡು ಶವರಿಗೆ ಮೈಒಡ್ಡಿದರೆ ಆಯಿತು ಸ್ನಾನ. ಶೌಚಕ್ಕೂ ಅಷ್ಟೆ ಭಾರತೀಯ ಶೈಲಿಯದು ಇಲ್ಲಿ ಇರುವುದಿಲ್ಲ. ಶೌಚಾಲಯ ಬೇರೆ ಸ್ನಾನದ ಕೊನೆ ಬೇರೆ ಅಲ್ಲ. ಸ್ನಾನದ ಕೋಣೆಯಲ್ಲೇ ಒಂದು ಶೌಚದ ಡಬ್ಬ ಇರುತ್ತೆ. ಅದು ಭಾರತದ ಮಾದರಿಯದ್ದಲ್ಲ. ಇಲ್ಲಿ ಎಲ್ಲವೂ ಪೇಪರ್ ಮಯ. ಏನಕ್ಕೆ ಅಂತೀರಾ , ಒರೆಸಿ ಕೊಳ್ಳೋಕೆ .
ಅಮೆರಿಕಾ ಕೂಡ ನಮ್ಮ ದೇಶದ೦ತೆ ಇ೦ಗ್ಲೆ೦ಡಿನ ಹಿಡಿತದಲ್ಲಿತ್ತು, ಸ್ವಾತ೦ತ್ರ್ಯ ಬ೦ದು 235 ವರ್ಷಗಳಾಯಿತು. ಹಾಗಾಗಿ ಇಲ್ಲಿ ಬ್ರಿಟೀಶರ ಕುರುಹುಗಳನ್ನು ಕಾಣಬಹುದು. ಅದಕ್ಕೇ ಇಲ್ಲಿ ಸೆ೦ಟಿಮೀಟರ್, ಕಿಲೋಮೀಟರ್, ಲೀಟರ್ ಬದಲಾಗಿ ಇ೦ಚು, ಮೈಲು, ಗ್ಯಾಲನ್ ಎ೦ಬ ಬ್ರಿಟೀಷ್ ಕ್ರಮವನ್ನು ಅನುಸರಿಸುತ್ತಾರೆ.ಇಲ್ಲಿಯ ಹಣವೆಂದರೆ 'ಡಾಲರ್'. ನಮ್ಮ ರೂಪಾಯಿ ಇಲ್ಲಿ ಡಾಲರ್ ಮತ್ತು ಪೈಸ ಅಂದ್ರೆ 'ಸೆಂಟ್'.ಆದರೆ ಒಂದು ಡಾಲರ್ ಬೆಲೆ/ಮೌಲ್ಯ ಸುಮಾರು ನಮ್ಮ 50 ರೂಪಾಯಿಗಳಿಗೆ ಸಮ (ಇದು ದಿನವೂ ಬದಲಾವಣೆ ಆಗುತ್ತದೆ ಅಂತ ನಿಮಗೆ ಗೊತ್ತಿರಬಹುದಲ್ಲ).
ಅಮೇರಿಕಾದಲ್ಲಿ ಸರ್ವೇ ಸಾಮಾನ್ಯವಾಗಿ (85%) ಜನ ಮಾತನಾಡುವುದು ಇ೦ಗ್ಲೀಷ್ ಭಾಷೆ. ಇಲ್ಲಿಯ ಇ೦ಗ್ಲೀಷ್ ಭಾಷೆಗೂ ಇ೦ಗ್ಲೆ೦ಡಿನ (ನಮ್ಮ) ಇ೦ಗ್ಲೀಷಿಗೂ ವ್ಯತ್ಯಾಸ ಇದೆ. ಅದಕ್ಕೇ ಅಮೆರಿಕನ್ ಇ೦ಗ್ಲೀಷ್ ಎನ್ನುತ್ತಾರೆ. ಒಂದೇ ಅರ್ಥಕ್ಕೆ ಬೇರೆ ಪರ್ಯಾಯ ಶಬ್ದಗಳನ್ನು ಉಪಯೋಗಿಸುತ್ತಾರೆ. ಉದಾಹರಣೆಗೆ 'toilet' ಗೆ 'rest room', petrol-gas, ground floor-first floor, curd-yogurt, Police-Cop, Z - Zee, Zero - O ಇತ್ಯಾದಿ. ಮೊದಮೊದಲು ಬಹಳ ಭ್ರಮಣೆ (confuse) ಕೂಡ ಆಗುತ್ತದೆ!
ಆಮೆರಿಕ ಬಹಳ ದೊಡ್ಡ ದೇಶ.ನಾವು ಭಾರತವನ್ನೇ ದೊಡ್ಡ ದೇಶ ಎನ್ನುತ್ತೇವೆ.(ಜನಸಂಕ್ಯೆಯಲ್ಲಿ) ಅಮೆರಿಕ ವಿಸ್ತೀರ್ಣ ದಲ್ಲಿ ಭಾರತಕ್ಕಿ೦ತ ಸುಮಾರು ಮೂರು ಪಟ್ಟು ದೊಡ್ಡದು. ವಿಮಾನದಲ್ಲಿ ಕುಳಿತರೆ ಅಮೆರಿಕದ ಪೂರ್ವ ಅಂಚಿನಿಂದ ಪಶ್ಚಿಮ ಅಂಚು ತಲುಪಲು ಸುಮಾರು ೧೦ ಘಂಟೆ ಬೇಕೇ ಬೇಕು. ಇದರಿಂದಲೇ ನಿಮಗೆ, ಅಮೆರಿಕಾದ ಗಾತ್ರದ ಅರಿವಾಗಬಹುದು. ಆದರೆ ಜನಸ೦ಖ್ಯೆಯಲ್ಲಿ ಮಾತ್ರ ಭಾರತದ ನಾಲ್ಕನೆ ಒ೦ದು ಭಾಗ!
ಇಲ್ಲಿ ಒಟ್ಟು 50 ರಾಜ್ಯ ಗಳಿವೆ. ಇದರ ಗುರುತಿಗಾಗಿ ಅಮೇರಿಕಾದ ಬಾವುಟದಲ್ಲಿ 50 ನಕ್ಷತ್ರಗಳಿವೆ. ಈ 50 ರಾಜ್ಯಗಳಲ್ಲಿ ಟೆಕ್ಸಾಸ್’, ನ್ಯೂಯಾರ್ಕ್ ,ನ್ಯೂ ಜೆರ್ಸಿ, ಓಹಿಯೋ, ಕ್ಯಾಲಿಫೋರ್ನಿಯಾ, ಫ್ಲೋರಿಡ, ವಾಶಿಂಗ್ ಟನ್, ಇವೆ ಮುಖ್ಯವಾದುವು.
Tuesday, June 22, 2010
ನನ್ನ ಅಮೇರಿಕಾ ಪಯಣ.........ಭಾಗ 5
ಚಿಕಾಗೋ ವಿಮಾನ ನಿಲ್ದಾಣ ಏನು, ಒಸಿ ಚಿಕ್ಕದಲ್ಲ. ಇದು ಸುಮಾರಾಗೆ ಇದೆ. ಇಲ್ಲೂ ಬಸ್, ಉಗಿ ಬಂಡಿ ಕೂಡ ಇದೆ(ವಿಮಾನ ನಿಲ್ದಾಣದ ಒಳಗೆನೆ). ಇದೇ ನನ್ನ ಮೊದಲ ಅಮೆರಿಕ ಪ್ರಯಾಣ ಮತ್ತು ಮೊದಲ ಭೇಟಿಯ ನಗರವಾದದ್ದರಿಂದ ಇಲ್ಲಿ ನನ್ನನ್ನು ತಪಾಸಣೆ ಮಾಡಿ ಮುಂದೆ, ಹೋಗಲು ಬಿಡುತ್ತಾರೆ. ಇದು ಕೆಲವರು ದೊಡ್ಡ ಮತ್ತು ಮದ್ಯಮ ಅಮೆರಿಕ ನಗರಗಳಲ್ಲಿ ಮಾತ್ರ ಮಾಡುತ್ತಾರೆ. ಪ್ರತಿಯೊಬ್ಬನಿಗೂ ಇಲ್ಲೇ ತಪಾಸಣೆ ಮಾಡಿ ಮುಂದೆ ಹೋಗಲು ಬಿಡುತ್ತಾರೆ. ಇಲ್ಲೇ ನಾನು ಅಮೆರಿಕ ದಲ್ಲಿ ಎಷ್ಟು ದಿನ ಉಳಿಯಬಹುದು ಎಂದು ನನ್ನ ಪಾಸ್ಪೋರ್ಟ್ ನಲ್ಲಿ, ಟಸ್ಸೇ ಹಾಕಿ ಮುದ್ರಿಸುತ್ತಾರೆ. (SEAL/RUBBER STAMP). ಇದಕ್ಕೋಸ್ಕರ ಮತ್ತೊಂದು ಅರ್ಜಿ(I-94) ಭರ್ತಿ ಮಾಡಿ , ಸಂದರ್ಶನ ಕ್ಕೆ ಹೋದೆನು. (Immigration Check). ಇಲ್ಲಿ ಮತ್ತೆ ಅದೇ ಪ್ರಶ್ನೋತ್ತರ ಸಮಾವೇಶ, ಚೆನ್ನೈ ನಲ್ಲಿ ನಡೆದ ತರ. ಕೊನೆಗೆ ಅಂತು ಇಂತೂ ಅಮೆರಿಕ ದಲ್ಲಿ ಒಳಗೆ ಹೋಗಲು ಬಿಟ್ರು. ಇಲ್ಲಿಂದ ನಾನು ಸ್ವಲ್ಪ ಆರಾಮಾಗಿ ಓಡಾಡಬಹುದು. ಮುಂದೆ ಕೊಲಂಬಸ್ ಗೆ ಪಯಣ, ಇಲ್ಲಿಂದ ಮುಂದೆ ಬರಿ ಅಮೆರಿಕ ವಿಮಾನಗಳು ಮಾತ್ರ ಹೋಗುತ್ತವೆ. ನಾನು ಕೂಡ ಅಮೆರಿಕನ್ ಏರ್ ಲೈನ್ಸ್ ವಿಮಾನದಲ್ಲಿ ಹೋಗಬೇಕಿತ್ತು. ಅದಕ್ಕೆ ನನ್ನ ಸಾಮಾನು ಸರಂಜಾಮು ಗಳನ್ನೂ ಬ್ರಿಟಿಶ್ ಏರ್ ವೇಸ್ ನಿಂದ ತೆಗೆದು ಅಮೆರಿಕನ್ ಏರ್ ಲೈನ್ಸ್ ವಿಮಾನಕ್ಕೆ ಸ್ತಳಾನ್ತರಿಸಿದೆ. ಮತ್ತೆ ಅದೇ ಸೆಕ್ಯೂರಿಟಿ ತಪಾಸಣೆ ನಡೆಯಿತು. ಇಲ್ಲಿಂದ ಮುಂದೆ ನನ್ನ ವಿಮಾನದ ಗೇಟ್ ಬಳಿ ಬಂದೆ. ಕೊಲಂಬಸ್ ನಲ್ಲಿ ಮಳೆ ಬರುತ್ತಿದ್ದ ಕಾರಣ, ಅಲ್ಲಿಗೆ ಹೋಗುವ ಕೊನೆಯ ವಿಮಾನ (ನಾನು ಹೋಗೋದು) ರದ್ದಾಗೋ ಪರಿಸ್ತಿತಿ ಉಂಟಾಗಿತ್ತು. ಆದರೇ ಕಾಲ ಕ್ರಮೇಣ ಮಳೆ ಕಡಿಮೆ ಆದ ಕಾರಣ ಸ್ವಲ್ಪ ತಡವಾಗಿ ವಿಮಾನ ಹೊರಡುತ್ತದೆ ಎಂದು ಘೋಷಣೆ ಮಾಡಿದರು. ಸಮಯವಿದ್ದ ಕಾರಣ ಮತ್ತೆ ನನ್ನ ಅಣ್ಣನಾದ ವೆಂಕಟೇಶನಿಗೆ ದೂರವಾಣಿ ಕರೆ ಮಾಡೋಣ ಎಂದುಅನಿಸಿತು. ನನ್ನ ಬಳಿ ಚಿಲ್ಲರೆ ಇಲ್ಲ. ಚಿಲ್ಲರೆ ಗೋಸ್ಕರ, ಒಂದು ಕಿತ್ತಳೆ ರಸದ ಸೀಸೆಯನ್ನು ಕೊಂಡು ಕೊಂಡೆನು . ಬೆಲೆ ಎಷ್ಟು ಅಂತ ಕೇಳಬೇಡಿ. ಕೇವಲ 3.5$. ಚಿಲ್ಲರೆ ಏನೋ ಸಿಕ್ತು ಆದರೇ ಕರೆ ಮಾಡಲಿಕ್ಕೆ ಮಾತ್ರ ಆಗಲಿಲ್ಲ. ಯಾರೂ ಸಹಾಯ ಮಾಡೋರು ಕೂಡ ನನಗೆ ಕಾಣಿಸಲಿಲ್ಲ. ಕೊನೆಗೆ ನಾನು ಹೊರಡೋ ವಿಮಾನದ ಗೇಟ್ ಅನ್ನು ಬದಲಾವಣೆ ಮಾಡುತ್ತಿದ್ದರು. ಹೇಗೋ ಕೊನೆಗೆ ನನ್ನ ವಿಮಾನ ಹೊರಡಲು ನಿಲ್ದಾಣಕ್ಕೆ ಬಂದಿತು. ಇದು ಬಹಳ ಚಿಕ್ಕ ವಿಮಾನ. ದೇಶೀ ವಿಮಾನ ನೋಡ್ರಿ ಅದಕ್ಕೆ. ಕೇವಲ ಒಂದು 30 ಸೀಟ್ ಗಳು ಇರಬಹುದು. ಅದರಲ್ಲಿ ಕೇವಲ 8-10 ಜನ ಮಾತ್ರ ಇದ್ದರು. ಇದು ನಮ್ಮ ಬಿ.ಎಂ. ಟಿ.ಸಿ ಬಸ್ ತರ ಅನ್ಕೊಬಹುದು. ಆದ್ರೆ ಇದರಲ್ಲಿ ಭಯ ಜಾಸ್ತಿ ಆಗುತ್ತೆ. ಇಲ್ಲಿಂದ ಕೊಲಂಬಸ್ ಕೇವಲ ಒಂದು ಗಂಟೆ ಪ್ರಯಾಣ. ಮಳೆ ಸುರಿತಾನೆ ಇದೇ. ಮೋಡಗಳನ್ನು ಭೇಧಿಸಿ, ನಮ್ಮ ವಿಮಾನದ ಕಪ್ತಾನ ನಮ್ಮನ್ನು ಕರೆದೊಯುತ್ತಿದ್ದಾರೆ. ಏನು ಗುಡುಗು,ಏನು ಮಿಂಚು ಆದರು ನಮ್ಮನ್ನ್ನು ಹುಷಾರಾಗಿ ದಡ ಸೇರಿಸಿದರು ಕಪ್ತಾನ ಸಾಹೇಬರು. ನಾನು ವಿಮಾನ ಇಳಿದಾಗ ಗಂಟೆ 12.30 ರಾತ್ರಿ, ಕೊಲಂಬಸ್ ನಲ್ಲಿ. ಇಲ್ಲಿಂದ ನನ್ನ ಸಾಮಾನು ಸರಂಜಾಮುಗಳನ್ನು ತೆಗೆದು ಕೊಂಡು, ಒಂದು ಬಾಡಿಗೆ ಕಾರಲ್ಲಿ ನನ್ನ ಹೋಟೆಲ್ ಗೆ ಹೋಗೋಣ ಎಂದು, ಅದನ್ನು ಹುಡುಕಲು ಕಾರಿನ ನಿಲ್ದಾಣಕ್ಕೆ ಬಂದೆ. ರಾತ್ರಿ ೧ ಗಂಟೆ ಆದರು ಕೂಡ ಇಲ್ಲಿ ಬೇಕಾದಷ್ಟು ಪ್ರಯಣಿಕರಿದ್ರು. ನನಗೆ ಬಾಡಿಗೆ ಕಾರು ದೊರೆಯಲು ಸ್ವಲ್ಪ ಸಮಯ ಹಿಡಿಯಿತು. ಬಾಡಿಗೆ ಕಾರು ದೊರೆತ ನಂತರ, ನನ್ನ ಹೋಟೆಲ್ ಆದ "Extended Stay Deluxe" ನ ಬಳಿ ಕರೆದೊಯ್ಯಲು ಡ್ರೈವರ್ ಗೆ ಹೇಳಿದೆ. ಅವನು ಮಳೆ ಬರುತ್ತಿದ್ದರು ಕೂಡ ನಿದಾನವಾಗಿ car ಚಲಾಯಿಸಿ, ನನ್ನನ್ನು ಹೋಟೆಲ್ ಬಳಿ ಇಳಿಸಿದನು. ಬಾಡಿಗೆ ಕಾರಿನ ದರ 40$ . ಇಲ್ಲಿಗೆ ನನ್ನ ಪ್ರಯಾಣ ಮುಗಿಯಿತು. ಇನ್ನು ಹೋಟೆಲ್ ನಲ್ಲಿ ನನ್ನ ಆಫೀಸಿನ ಸ್ನೇಹಿತರಾದ ಪ್ರಶಾಂತ್ ಮತ್ತು ಗಿರೀಶ್ ರವನ್ನು ಸಂಪರ್ಕ ಮಾಡಿ ಒಂದು ರೂಮಿನಲ್ಲಿ ಇಳಿದ್ಕೊಂಡೆ. ಈ ರೂಮಿನಲ್ಲಿ ಇದಕ್ಕೂ ಮುಂಚೆ ಖ್ವಾಜಾ ಶೈಖ್ , ಎನ್ನುವವನ ಜೊತೆ ರೂಮನ್ನು ಹಂಚಿಕೊಳ್ಳುವುದು ಎಂದು ನಿರ್ಧರಿಸಿದೆ. ಮುಂದೆ ಸ್ನಾನ ಮಾಡಿ ಮಲಗಿದ್ದಷ್ಟೇ. ನಾಳೆಯಿಂದ ಆಫೀಸ್ ಬೇರೆ ಹೋಗಬೇಕು. ಇಲ್ಲಿಗೆ ನನ್ನ ಅಮೆರಿಕಾದ ಪಯಣದ ಕಥನ ಮುಗಿಯಿತು. ಮುಂದೆ ಅಮೆರಿಕದ ಜೀವನ ಬಗ್ಗೆ ಬರಿತೇನೆ. ಕಾತುರದಿಂದ ಎದುರು ನೋಡ್ತಾ ಇರ್ತೀರಾ? ??
http://ravinrao.blogspot.com/2010/06/4.html
http://ravinrao.blogspot.com/2010/06/3.html
http://ravinrao.blogspot.com/2010/06/2.html
http://ravinrao.blogspot.com/2010/05/1.html
Sunday, June 20, 2010
ನನ್ನ ಅಮೇರಿಕಾ ಪಯಣ.........ಭಾಗ 4
http://ravinrao.blogspot.com/2010/06/3.html
http://ravinrao.blogspot.com/2010/06/2.html
Saturday, June 19, 2010
ನನ್ನ ಅಮೇರಿಕಾ ಪಯಣ.........ಭಾಗ 3
http://ravinrao.blogspot.com/2010/06/2.html
http://ravinrao.blogspot.com/2010/05/1.html
Thursday, June 17, 2010
ನನ್ನ ಅಮೆರಿಕ ಪಯಣ.........ಭಾಗ 2
http://ravinrao.blogspot.com/2010/05/1.html
Thursday, May 13, 2010
ನನ್ನ ಅಮೆರಿಕ ಪಯಣ.........ಭಾಗ 1
ನಾನು ದಿನಾಂಕ 14 ನೆ ಬೆಳಿಗ್ಗೆ ನನ್ನ ಅಮೆರಿಕ ಪಯಣ ಆರಂಭಿಸಿದೆನು. ನಾನು ಹೋಗಬೇಕಾದ ಜಾಗ ಕೊಲಂ ಬಸ್ ಗೆ ನೇರ ವಿಮಾನ ಇಲ್ಲವಾದ ಕಾರಣದಿಂದ, ಎರಡು ಮೂರು ವಿಮಾನ ಬದಲಾಯಿಸಿ ಕೊಲಂ ಬಸ್ ಸೇರಿದೆನು.
ದಿನಾಂಕ 14 ರ ಬೆಳಿಗ್ಗೆ 2.30 ಕ್ಕೆ ಬೆಂಗಳೂರಿನ ನನ್ನ ಮನೆಯಾದ, ಹೊಸಕೆರೆಹಳ್ಳಿ ಬಿಟ್ಟು, ದೇವನಹಳ್ಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ವನ್ನು 3.30 ಕ್ಕೆ ಸೇರಿದೆನು. ಇಲ್ಲಿ ಸಮಯ ವಿಲ್ಲವಾದದ್ದರಿಂದ ನನ್ನನ್ನು ಬೀಳ್ಕೊಡುಗೆ ಮಾಡಲು ಬಂದಿದ್ದ ಅಮ್ಮ, ಅಪ್ಪ, ಅಣ್ಣ(ಶ್ರೀನಿವಾಸ್) , ಹಾಗೂ ನನ್ನ ಸ್ನೇಹಿತರಾದ ಶ್ರೀನಿವಾಸ್ ಮತ್ತು ಕಿರಣ್ ರನ್ನು ಹೊರಗೆ ಬಿಟ್ಟು, ವಿಮಾನ ನಿಲ್ದಾಣ ಪ್ರವೇಶಿಸಿದೆನು. ಇಲ್ಲಿ ನನ್ನ ಮೊದಲ ವಿಮಾನದ ಗಗನ ಸಕಿಯರನ್ನು ವಿಚಾರಣೆ ಮಾಡಿ, ನನ್ನ ಸಾಮಾನು ಸರಂಜಾಮು ಗಳನ್ನೂ ತಪಾಸಣೆ ಮಾಡಿಸಿ, ಸರಿಯಾದ ತೂಕ ವಾದ 20 ಕಿಲೋ ಗ್ರಾಂ ಇದೆ ಎಂದು ನಿಗದಿ ಪಡಿಸಿ, ನನ್ನ ಪೂರ್ತಿ ಪ್ರಯಾಣದ ನಿರ್ಗಮನ ಟಿಕೆಟ್ ಗಳನ್ನೂ ಪಡೆದೆನು. ಇದಕ್ಕೂ ಮುಂಚೆ, ಅಂತರ್ಜಾಲದಲ್ಲಿ ಇದೆ ಟಿಕೆಟ್ ಗಳನ್ನೂ, ನನ್ನ ಕಚೇರಿಯವರು ಕಾಯಿದಿರಿಸಿದ್ದರು. ಇಲ್ಲಿಂದ ನಾನು ಮುಂದೆ ಮೊದಲನೇ ಮಹಡಿಗೆ ತೆರಳಬೇಕಾದ್ದರಿಂದ, ನನ್ನವರಿಗೆ ಫೋನ್ ಕರೆ ಮಾಡಿ, ನಾನು ಹೊರಡುತ್ತಿದ್ದೇನೆ, ಹಾಗೂ ನೀವು ಇನ್ನು, ಮನೆಗೆ ತೆರಳಬಹುದು ಎಂದು ತಿಳಿಸಿದೆನು. ನನ್ನ ತಾಯಿಯ ಕಣ್ಣಿರನ್ನು ಕಾಣದೆ ಹೋದರು ಕೂಡ, ಒಂದು ತಾಯಿಗೆ ಕಂದನ ಅವಶ್ಯಕತೆ ಎಷ್ಟು, ಎಂದು ತಿಳಿದೆನು. ಇಲ್ಲಿಂದ ಮೊದಲನೇ ಮಹಡಿಗೆ ತೆರಳಿ, ಇಲ್ಲಿ ನನ್ನ ವಲಸೆ ಹೋಗುವಿಕೆ ಬಗ್ಗೆ, ಸಣ್ಣ ಸಂದರ್ಶನ ನಡೆಸಿದರು. ಈ ಸಂದರ್ಶನದಲ್ಲಿ ನನ್ನ ವೀಸಾ ಬಗ್ಗೆ ಪ್ರಶ್ನಿಸಿದರು. ನನ್ನ ಉತ್ತರಗಳೆಲ್ಲ ಸರಿ ಇದ್ದರಿಂದ ನನ್ನ ವಲಸೆ(IMMIGRATION CHECK) ಹೋಗುವಿಕೆ ಕಾರ್ಯ ಸಂಪೂರ್ಣ ಆಯಿತು. ಮುಂದೆ ವಿಮಾನ ಹತ್ತುವುದೇ ಉಳಿದಿತ್ತು. ಈಗಾಗಲೇ ಸಮಯ ೫ ಗಂಟೆ ಆಗಿತ್ತು. ೫.೩೦ ಕ್ಕೆ ನನ್ನವರ ಜೊತೆ ಮಾತನಾಡಿ, ೬ ಗಂಟೆಗೆ ವಿಮಾನ ಹತ್ತಿದೆನು. ಇದಕ್ಕೂ ಮುಂಚೆ ಪ್ರತಿಯೊಬ್ಬ ಪ್ರಯಾಣಿಕನನ್ನು ಗಗನ ಸಖ, ಸಖಿಯರು ತಪಾಸಣೆ ಮಾಡಿದರು. ನನ್ನ ಸೀಟ್ ನಂಬರ್ ನ್ನು ಹುಡುಕಿ ಕೊಂಡು ಹೋದೆನು. ನನ್ನ ಸೀಟ್ ನಂಬರ್ 20 B ಆಗಿತ್ತು, B ಅನ್ನುವುದು A & C ಮದ್ಯದಲ್ಲಿ ಬರುತ್ತದೆ ಎನ್ನುವುದು ನಿಮಗೆಲ್ಲ ತಿಳಿದಿರುವ ವಿಷಯವೇ. ಇದರಲ್ಲೇನು ಸ್ವಾರಸ್ಯ ಎಂದು ಕೇಳ್ತಿರಾ? A & C ನಲ್ಲಿ ಹುಡುಗಿಯರು ಕೂತಿದ್ರು, ನಾನು ಅವರ ಮದ್ಯದಲ್ಲಿ ಕೂರಬೇಕಾಗಿತ್ತು. ತಕ್ಷಣ ನನಗೆ ಇದೆ ತರಹದ ವೀಡಿಯೊ ನೋಡಿದ ಜ್ಞಾಪಕ ಆಯಿತು. ಆದರು ಏನ್ ಮಾಡೋದು ಕೂರಲೆಬೇಕಲ್ವ ಕೂತ್ಕೊಂಡೆ. ನಂತರ ನಮ್ಮ ಕೈ ಬ್ಯಾಗ್ ಗಳನ್ನೂ, ವಿಮಾನದ ಒಳಗೆ ಲಗ್ಗೇಜ್ ಜಾಗದಲ್ಲಿ ಇತ್ತು, ಕುಳಿತುಕೊಂಡೆವು. ಮೊದಲ ಹುಡುಗಿಯ ಪರಿಚಯ, ಜ್ಯೋತ್ಸ್ನಾ ಇವಳ ಹೆಸರು, ಸುಂದರಿಯು ಕೂಡ ಆದ್ರೆ ಏನೋ ನನ್ನ ಅದೃಷ್ಟ ನೆ ಸರಿ ಇಲ್ಲ ನೋಡಿ, ಅವಳಿಗೆ ಆಗಲೇ ಮದುವೆ ಆಗಿತ್ತು. ಇನ್ನೊಂದು ವಿಷಯ ಅಂದ್ರೆ ಇವಳು ಕೂಡ ಬ್ರಾಮ್ಹಿನ್. ಇನ್ನೊಬ್ಳು ಜಪಾನೀಸ್ , ಇವಳ ಬಗ್ಗೆ ಮಾತಾಡೋದೇ ಬೇಡ. ನನ್ನ ಬಾಷೆ ಇವಳಿಗೆ ಬರಲ್ಲ್ಲ. ಈಗ ಗಗನ ಸಖಿಯರಿಂದ ಒಂದು ಪ್ರಕಟಣೆ "ಎಲ್ಲರು ಸೀಟ್ ಬೆಲ್ಟ್ ಧರಿಸಿ ಎಂದು". ಎಲ್ಲರು ಧರಿಸಿದ ಮೇಲೆ, ವಿಮಾನ ಹಾರಾಟ ಪ್ರಾರಂಭ ಆಗ್ತಿದೆ.... ನನಗೆ ಮೊದಲ ವಿಮಾನ ಪ್ರಯಾಣ ವಾದ್ದರಿಂದ ಏನೋ ಒಂತರ ಆಗ್ತಿದೆ. ಕಣ್ಣು ಮುಚ್ಚಿ ಕುಳಿತೆ. ವಿಮಾನ ಹಾರಿತು. ಮತ್ತೆ ಗಗನ ಸಖಿಯರಿಂದ ಒಂದು ಪ್ರಕಟಣೆ "ಎಲ್ಲರು ಸೀಟ್ ಬೆಲ್ಟ್ ತೆಗೆಯಬಹುದು" . ಈಗ ಕಣ್ಣು ತೆರೆದು ನೋಡ್ತೇನೆ ಮೋಡಗಳನ್ನು ಭೇದಿಸಿ ಮುನ್ನುಗ್ಗುತ್ತಿದೆ ನಮ್ಮ ವಿಮಾನ. ಹೇಳೋದೇ ಮರೆತೇ, ಈ ವಿಮಾನ BRITISH AIRWAYS ಸಂಸ್ತೆ ಯದ್ದು. ಇದು ಬೆಂಗಳೂರಿನಿಂದ ಲಂಡನ್ ವರೆಗೆ, ಹೋಗುತ್ತೆ. ಇನ್ನೋದ್ ವಿಷ್ಯ ಗೊತ್ತ , ಎಲ್ಲ ವಿಮಾನಗಳು ನಾನ್ಸ್ಟಾಪ್, ಎಕ್ಷ್ಪ್ರೆಸ್ , ಹೇಗೆ ಬೇಕಾದರು ಕರೆಯಿರಿ. ಮತ್ತೆ ಜ್ಯೋತ್ಸ್ನಳ ಜೊತೆ ಮಾತು ಕಥೆ ಮುಂದುವರೆಯುತ್ತದೆ............................