ಅಮೇರಿಕಾದಲ್ಲಿ ಹ್ಯಾಲೋವೀನ್ (Halloween) ಅಂತ ಒಂದು ಹಬ್ಬವಿದೆ. ಎಲ್ಲರು ದೇವರುಗಳಿಗೆ ಹಬ್ಬ ಮಾಡಿದರೆ, ಇವರು ದೆವ್ವಗಳಿಗೆ ಈ ಹಬ್ಬ ಮಾಡ್ತಾರೆ. ನಮ್ಮ ಹಿಂದೂ ದೇಶದಲ್ಲಿ ಗಣಪತಿ, ದುರ್ಗಿ ಯ ಹಬ್ಬಗಳ ಸಮಯದಲ್ಲಿ, ದೇವರ ಆಕಾರವನ್ನು ಬೀದಿ ಬೀದಿ ಗಳಲ್ಲಿ, ಕೂಡಿಸುವ ಹಾಗೆ, ಇಲ್ಲಿ ದೆವ್ವಗಳನ್ನು ಕೂಡಿಸುತ್ತಾರೆ. ಮನೆಗಳಲ್ಲಿ, ಮಾಲುಗಳಲ್ಲಿ ದೆವ್ವಗಳ ಆಕಾರವನ್ನು ಮಾಡಿ ಕೆಲವು ಕಡೆ ಸ್ಪರ್ಧಾತ್ಮಕವಾಗಿ (ಭಾರತದಲ್ಲಿ ಗಣೇಶನನ್ನು ಕೂಡಿಸುವ ಹಾಗೆ, ವಿವಿಧ ಬಣ್ಣ, ಆಕಾರ, ಗಾತ್ರ ) ಅಲಂಕಾರ ಮಾಡಿ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ಪ್ರತಿ ವರುಷ ಅಕ್ಟೋಬರ್ ತಿಂಗಳಿನ ಕೊನೆಯ ದಿನದಂದು ಆಚರಿಸುತ್ತಾರೆ. ಇಂದಿನಿಂದಲೇ ಇಲ್ಲಿ ಚಳಿಗಾಲ ಪ್ರಾರಂಭವಾಗುತ್ತದೆ. ಹ್ಯಾಲೋವೀನ್ ಸಂದರ್ಭದಲ್ಲಿ ಭಯ ಹುಟ್ಟಿಸುವ (ದಿಗಿಲೆಬ್ಬಿಸುವ) ಮುಖವಾದ, ವೇಷಭೂಷಣ , ವಸ್ತ್ರ ಗಳ್ಳನ್ನು ಧರಿಸುವುದು ವಾಡಿಕೆಯಾಗಿದೆ. ಈ ದಿನದಂದು ಕುಂಬಳಕಾಯಿಯ(Pumpkin) ಒಳ ತಿರುಳನ್ನು ತೆರೆದು, ಒಂದು ಮಡಿಕೆಯ ಆಕೃತಿಯಲ್ಲಿ ಕಡಿದು, ಮುಖವಾಡ ಮಾಡಿ, ಅದರ ಒಳಗೆ ಮೇಣದ ಬತ್ತಿಯನ್ನು ಹೊತ್ತಿಸುತ್ತಾರೆ. ಈ ಮುಖವಾಡಕ್ಕೆ Jack-O-Lantern ಎಂದು ಹೆಸರು. ಇಡೀ ಆಚರಣೆಗೆ ಭಯದ ಲೆಪನವಿದ್ದರೂ, ಎಲ್ಲೋ ಒಂದು ಕಡೆ ನಮ್ಮ ಭಾರತದ ಹಬ್ಬಗಳಿಗೂ ಸಮವಾಗುತ್ತದೆ. ಇದನ್ನು ನಾವು ಸುಗ್ಗಿಯ ಸಂಕ್ರಾಂತಿ ಎಂತಲೂ ತಿಳಿಯಬಹುದು. ದುಷ್ಟ ದಹನ ಮಾಡುವುದರಿಂದ ಇದು ಹೋಳಿ ಹಬ್ಬಕೆ ಕೂಡ ಸಮ. ಇನ್ನು ಮನೆಗಳ ಮುಂದೆ ಮೇಣದ ಬತ್ತಿಗಳು ಕಂಗೊಲಿಸುವುದರಿಂದ ಮತ್ತು ನಮ್ಮ ದೀಪಗಳ ಹಬ್ಬಕ್ಕೆ ಹತ್ತಿರವಾದುದಕ್ಕೆ ದೀಪಾವಳಿ ಎಂತಲೂ ತಿಳಿಯಬಹುದು. ಇನ್ನು ಎಲ್ಲರು, ಅದರಲ್ಲಿ ಮಕ್ಕಳು ವಿವಿಧ ವೇಷ ಭೂಷಣ ಮಾಡುವುದರಿಂದ ಇದು ನಮ್ಮ ಕೃಷ್ಣ ಜನ್ಮಾಷ್ಟಮಿಗು ಕೂಡ ಸಮ. ಇಂದಿಗೆ ಫಾಲ್ ಋತು (ಎಲೆಗಳು ಉದುರುವುದು) ಕೂಡ ಮುಗಿಯುತ್ತದೆ, ಮತ್ತು ಎಲ್ಲರು ಓಕ್ ಎಲೆಗಳನ್ನು ತಂದು ತಮ್ಮ ಮನೆಗಳನ್ನು ಸಿನ್ಗರಿವುದರಿಂದ ಇದು ನಮ್ಮ ಬೇವು, ಮಾವು, ಬೆಲ್ಲದ ಯುಗಾದಿಗೆ ಕೂಡ ಹತ್ತಿರವಾದದ್ದು ಎನ್ನೋಣವೇ ? ನೀವೇ ನಿರ್ಧರಿಸಿ ತಿಳಿಸಿ.ಇನ್ನು ಇಂದಿನ ರಾತ್ರಿ ಇಲ್ಲಿನ ಜನ ಒಂದು ಆಟ ಆಡುತ್ತಾರೆ. ಅದರ ಹೆಸರು Trick-Or-Treat. ಅಂದು ರಾತ್ರಿ ನಿಮ್ಮ ಮನೆಗೆ ಯಾರಾದರು ಬಂದು ಬಾಗಿಲು ತಟ್ಟಿದರೆ ಅದು ಹ್ಯಾಲೋವೀನ್ ಕಂಡಿತಾ. ನಾವು ಮನೆ ಬಾಗಿಲು ತೆಗೆದ ಕೂಡಲೇ ದೆವ್ವದ ದರ್ಶನ. ನಂತರ ಇವರು ಟ್ರಿಕ್ ಆರ್ ಟ್ರೀಟ್ ಅಂತ ಕೇಳ್ತಾರೆ. ನೀವು ಟ್ರಿಕ್ ಅಂತ ಒಪ್ಪಿಕೊಂಡರೆ ನೀವು ಒಂದು ಜಾದೂ ಮಾಡಿಸಿ ತೋರಿಸಬೇಕು. ಇಲ್ಲವಾದಲಿ ಟ್ರೀಟ್ ಕೊಡಬೇಕು. ಅದಕ್ಕೆ ನಿಮ್ಮ ಮನೆಯಲ್ಲಿ ಒಂದಷ್ಟು ಚಾಕಲೇಟ್ ಗಳನ್ನು ತಂದಿರಿಸಿ. ಹ್ಯಾಪಿ ಹ್ಯಾಲೋವೀನ್ :)



