Showing posts with label ಅಮೇರಿಕಾ. Show all posts
Showing posts with label ಅಮೇರಿಕಾ. Show all posts

Tuesday, August 23, 2011

ಅಮೇರಿಕಾ ಪ್ರವಾಸ -- ಮತ್ತೊಮ್ಮೆ

ಮತ್ತೊಮ್ಮೆ ಮಗದೊಮ್ಮೆ ಅಮೆರಿಕಾಕ್ಕೆ ಪ್ರಯಾಣ ಬೆಳೆಸುವ ಅವಕಾಶ ನನಗೆ ಒದಗಿ ಬಂದಿದೆ. ಬಾರಿ ಷಿಕಾಗೋ(Chicago) ನಗರಕ್ಕೆ ಪ್ರಯಾಣ ಬೆಳೆಸಿದ್ದೇನೆ. ಇದರ ಸವಿವರ, ಸಪೂರವಾಗಿ ನಿಮ್ಮ ಮುಂದೆ ಇಡುತ್ತಿದ್ದೇನೆ. ಈ ಬಾರಿಯ ಪಯಣ ಬೆಂಗಳೂರು - ದುಬೈ - ಪ್ಯಾರಿಸ್ - ಷಿಕಾಗೋ ಮಾರ್ಗವಾಗಿ. ಕಿಂಗ್ ಫಿಷರ್ - ಏರ್ ಫ್ರಾನ್ಸ್ ವಿಮಾನಗಳಲ್ಲಿ ಪಯಣ ಅಷ್ಟೇನೂ ಸುಖಕರವಾಗಿರಲಿಲ್ಲ. ಜೊತೆಗೆ ಪಯಣದ ಸಮಯ ಕೂಡ ಜಾಸ್ತಿ, ಸುಮಾರು ೨೮ ಗಂಟೆಗಳು . ಷಿಕಾಗೋ ದಲ್ಲಿ ಬಂದೊಡನೆ ಅಮೆರಿಕ ವಲಸೆ ಅಧಿಕಾರಿಗಳ ಬಳಿ ಹೋದೆನು. ಇವರು ನನಗೆ ಅಮೇರಿಕಾದಲ್ಲಿ ಉಳಿದುಕೊಳ್ಳಲು ಮೊದ ಮೊದಲು ನಿರಾಕರಿಸಿದರು, ನಂತರ ಒಂದು ತಿಂಗಳ ಮಟ್ಟಿಗೆ ಉಳಿದು ಕೊಳ್ಳಲು ಅವಕಾಶ ಕೊಟ್ಟರು. ಇದಕ್ಕೆ ಕಾರಣ ನನ್ನ H1B ವೀಸಾ ಮುಗಿಯುವ ಅವಧಿ ಬಹಳ ಹತ್ತಿರ, ಕೇವಲ ಒಂದು ತಿಂಗಳು ಮಾತ್ರ ಉಳಿದಿತ್ತು. ಹೇಗೋ ಅವರ ಬಳಿ ಸ್ವಲ್ಪ ಹೊತ್ತು ಮಾತು ಕಥೆ ನಡೆಸಿ, ಅಮೇರಿಕಾದಲ್ಲಿ ಉಳಿದುಕೊಳ್ಳಲು ಮತ್ತೊಂದು ಅವಕಾಶ ಪಡೆದೆನು. ಇಲ್ಲಿ ನನ್ನ ಸ್ನೇಹಿತನ ಮನೆಯಲ್ಲಿ ಉಳಿದುಕೊಳ್ಳುವುದು ಎಂದು ತೀರ್ಮಾನಿಸಿದ್ದೆನು.ಅವನ ದೂರವಾಣಿ ಸಂಖ್ಯೆ ನನ್ನ ಬಳಿ ಇತ್ತು. ಅವನಿಗೆ ಕರೆ ಮಾಡಲು ವಿಮಾನ ನಿಲ್ದಾಣದಲ್ಲೇ ಇದ್ದ ಸಾರ್ವಜನಿಕ ದೂರವಾಣಿಯನ್ನು ಉಪಯೋಗ ಮಾಡಿಕೊಂಡೆನು. ಇಲ್ಲೂ ಕೂಡ ದೂರವಾಣಿ ಯಂತ್ರಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಇದಕ್ಕಾಗಿ ಒಂದು ಡಾಲರ್ ವ್ಯರ್ಥವಾಯಿತು. ಹೇಗೋ ಕೊನೆಗೂ ಕರೆ ಮಾಡಿ ಸಂಜೆಗೆ ಮನೆಗೆ ಬರುತ್ತೇನೆ ಎಂದು ತಿಳಿಸಿದೆನು. ಏಕೆಂದರೆ, ಅವನು ಕೂಡ ಕೆಲಸ ಮುಗಿಸಿ ಬರುವ ಸಮಯಕ್ಕೆ ಸಂಜೆ ಆಗುವುದು ಎಂದು ತಿಳಿದಿತ್ತು. ಈಗ ಇನ್ನು ಮದ್ಯಾನ್ಹ ವಾದ್ದರಿಂದ ಅಂತರ್ಜಾಲ ದ ಬಳಕೆ ಮಾಡಿ ಕೆಲವರಿಗೆ ಇ-ಮೇಲ್ ಮಾಡಿದೆ. ಹಾಗು ಕೆಲವರಿಗೆ ಗೂಗಲ್ ಬಳಕೆ ಮಾಡಿ ಕರೆ ಕೂಡ ಮಾಡಿದೆ. ಗೂಗಲ್ ನ ಉಪಯೋಗ ಅಮೇರಿಕಾದಲ್ಲಿ ಬಹಳವಾಗಿದೆ ಇದು ಒಂದು ಉದಾಹರಣೆ ಅಷ್ಟೇ. ಇದೆ ಸಮಯದಲ್ಲಿ ಇಲ್ಲಿ ಕೆಲವು ಹುಡುಗರು ಭಾರತದಿಂದ M.S.in CS & E ಮಾಡಲು ಬಂದಿಳಿದಿದ್ದರು. ಇವರಿಗೆ ನನ್ನ ಬಳಿ ಇದ್ದ ಚಿಲ್ಲರೆ ಹಣವನ್ನು ಉಪಯೋಗಿಸಿ ಅವರ ಸ್ನೇಹಿತರು ಮತ್ತು ಬಂಧು ಬಂದವರಿಗೆ ಕರೆ ಮಾಡಿ ವಿಷಯ ತಿಳಿಸಲು ಉಪಕರಿಸಿದೆನು. ಸುಮಾರು ೫ ಗಂಟೆಗೆ ವಿಮಾನ ನಿಲ್ದಾಣ ವನ್ನು ಬಿಟ್ಟು ಮನೆಯ ಕಡೆ ಟ್ಯಾಕ್ಷ್ಸಿ ಯಲ್ಲಿಪ್ರಯಾಣ ಬೆಳೆಸಿದೆನು. ಮಾರ್ಗ ಮದ್ಯೆ ಟ್ಯಾಕ್ಷ್ಸಿ ಚಾಲಕನ ದೂರವಾಣಿ ಉಪಯೋಗಿಸಿ ನನ್ನ ಸ್ನೇಹಿತನಿಗೆ ಕರೆ ಮಾಡಿದೆನು. ೬ ಗಂಟೆಗೆ ಮನೆ ಸೇರಿದೆನು. ಇಲ್ಲಿಯೂ ನನಗೆ ಮತ್ತೊಂದು ಆಘಾತವಾಯಿತು. ಟ್ಯಾಕ್ಷ್ಸಿ ಯವನು ಮೀಟರ್ ಗಿಂತ ಹೆಚ್ಚು ಶುಲ್ಕ ವಿಧಿಸಿದನು. (ಅಂದರೆ ಒಂದೂವರೆ) ಆದರೆ ಇಲ್ಲಿ ನಿಮಗೆ ರಶೀದಿ ಸಿಗುತ್ತೆ ಅಷ್ಟೇ. ಈಗ ನನ್ನ ಸ್ನೇಹಿತನ ದೂರವಾಣಿ ಉಪಯೋಗಿಸಿ ನನ್ನ ಅರ್ಧಾಂಗಿಗೆ ಕರೆ ಮಾಡಿ, ನನ್ನ ಸುರಕ್ಷಿತವಾದ ಆಗಮನವನ್ನು ತಿಳಿಸಿದೆನು.

Thursday, June 17, 2010

ನನ್ನ ಅಮೆರಿಕ ಪಯಣ.........ಭಾಗ 2

ಹೀಗೆ ಮಾತು ಕಥೆ ಜ್ಯೋತ್ಸ್ನಳ ಜೊತೆ ನಡೀತಾ ಇದೆ. ಅವಳು ದೆಹಲಿ ಇಂದ ಬಂದು ಬೆಂಗಳೂರಿನಲ್ಲಿ ಮದುವೆ ಆಗಿ ನೆಲೆಸಿದ್ದಾಳೆ. ಸದ್ಯಕ್ಕೆ ಅವಳ ಮಾವ ಅತ್ತೆ ಜೊತೆ ಕಲ್ಯಾಣ ನಗರದಲ್ಲಿ ಇದಾಳೆ. ಇವಳ ಗಂಡ ನನ್ನ ತರಹ ಗಣಕ ಯಂತ್ರ ಅಭಿಯಂತರ. ನ್ಯೂ ಜರ್ಸಿ , ಅಮೇರಿಕಾದಲ್ಲಿ ಇದ್ದಾನೆ. ಎರಡು ಕಾರ್ ಬೇರೆ ಇದೆ ಯಂತೆ ಅವನ ಹತ್ತಿರ. ಈಕೆ ಹಲ್ಲಿನ ಡಾಕ್ಟರ. ಇವಳು ಅಮೇರಿಕಾದಲ್ಲಿ ಕೆಲಸ ಆ ಮಾಡೋ ಹಾಗೆ ಇಲ್ಲ. ಏಕೆ ಗೊತ್ತ, ಯಾವುದೇ ಡಾಕ್ಟರ ಪದವಿ ಅಮೆರಿಕಾದ ಹೊರಗೆ ಮಾಡಿದ್ದರೆ ಅದು ಅಮೇರಿಕಾದಲ್ಲಿ ನಿಮಗೆ ಕೆಲಸ ಸಿಗೋ ಹಾಗೆ ಮಾಡಲ್ಲ. ಅಂದರೆ ಇಲ್ಲಿನ ವರು ಅದನ್ನು ಅಂಗೀಕರಿಸುವುದಿಲ್ಲ. ಅದಕ್ಕೆ ಈಕೆ ವಿದ್ಯಾರ್ಥಿಯಾಗಿ ತನ್ನ Clinical ಉನ್ನತ ಪದವಿಯನ್ನು ಮಾಡುತ್ತಿದ್ದಾಳೆ, ಅಮೇರಿಕಾದಲ್ಲಿ. ಕೆಲವು ದಿನಗಳ ಹಿಂದೆ ಯಷ್ಟೇ ಬೆಂಗಳೂರಿಗೆ ಬಂದಿದ್ದಳು. ತನ್ನ ಅತ್ತೆ ಮಾವನನ್ನು ನೋಡಲು. ಈಗ ಹಿಂತಿರುಗುತ್ತಿದ್ದಾಳೆ. ನ್ಯೂ ಜರ್ಸಿ ಯಲ್ಲಿ ನನ್ನ ಅಣ್ಣನಾದ ವೆಂಕಟೇಶನು ಇರುವನು ಎಂದು ಅವಳಿಗೆ ತಿಳಿಸಿದೆ. ಹಾಗು ನನ್ನ ಅತ್ತಿಗೆಯಾದ ಪೂರ್ವಿ ಕೂಡ ಅವನಜೊತೆ ಇರುವಳು. ಈಕೆ ಗರ್ಭಿಣಿ ಇನ್ನೇನು ತನ್ನ ಕಂದಮ್ಮನ ನಿರೀಕ್ಷೆಯಲ್ಲಿ ಇದ್ದಾಳೆ ಎಂದು ಜ್ಯೋತ್ಸ್ನಳಿಗೆ ತಿಳಿಸಿದೆನು. ಹಾಗು ನನಗೆ ಸಮಯ ಸಿಕ್ಕಲ್ಲಿ ನ್ಯೂ ಜರ್ಸಿಗೆ ಬರುವು ದಾಗಿ ಕೂಡ ಆಕೆಗೆ ತಿಳಿಸಿದೆನು. ಈಗ ಊಟದ ಸಮಯ ಗಗನ ಸಖ ಸಖಿಯರು, ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟಗಳನ್ನು ವಿಂಗಡಿಸಿ, ಎಲ್ಲ ಪ್ರಯಾಣಿಕರಿಗೂ ಹಂಚಿದರು. ನಾನು ಮತ್ತು ಜ್ಯೋತ್ಸ್ನಾ ಸಸ್ಯಾಹಾರಿ ಊಟ ತೆಗೆದು ಕೊಂಡೆವು , ಅವಳು ಸಸ್ಯ ಹಾರಿನೆ. ಆದರೇ ಅವಳ ಗಂಡ ಸಸ್ಯಾಹಾರಿಯಿಂದ ಮಾಂಸಾಹಾರಿ ಯಾಗಿ ಪರಿವರ್ತನೆ ಆಗಿದ್ದಾನೆ ಎಂದು ತಿಳಿಸಿದಳು. ಅಮೇರಿಕಾದಲ್ಲಿ ಎಲ್ಲ ಹೀಗೆ ಆಗೋದು. ನನ್ನ ಅಣ್ಣ ವೆಂಕಟೇಶನು ಕೂಡ ಹೀಗೇನೆ. ಅವನ ಕಥೆ ಬರೆಯಲಿಕ್ಕೆ ಸ್ವಲ್ಪ ಸಮಯ ಬೇಕ್ರಪ್ಪ. ಊಟದ ಬಗ್ಗೆ ಹೇಳ್ಬೇಕು ಅಂದ್ರೆ ಚೆನ್ನಾಗೆ ಇತ್ತು. ಸ್ವಲ್ಪ ಬಿಸ್ಕೆಟ್, ಬನ್, ಚಾಕಲೇಟ್ ಇತ್ಯಾದಿ ಕೂಡ ಇತ್ತು. ಈಗ ನನ್ನ ಸೀಟ್ ನ ಮುಂದೆ ಇದ್ದ ದೂರದರ್ಶನದಲ್ಲಿ ಏನೇನು ಇದೆ ಎಂದು ವೀಕ್ಷಣೆ ಶುರುವಾಯಿತು. ಇದೆ ಮೊದಲ ಬಾರಿ ವಿಮಾನ ಪ್ರಯಾಣವಾದ್ದರಿಂದ ಇದನ್ನು ಹೇಗೆ ಉಪಯೋಗಿಸೋದು ಎಂದು ತಿಳಿದಿರಲಿಲ್ಲ. ನಂತರ ಅಭ್ಯಾಸ ಆಗಿ ಹೋಯಿತು. ಇದು ಸ್ಪರ್ಶದ ಪರದೆ. ಅಂದರೆ ನಿಮಗೆ ಇಲ್ಲಿ ಬೇಕಾದಷ್ಟು ವಿಷಯಗಳಾದ ರೇಡಿಯೋ, ಚಲನಚಿತ್ರ, ಮಾರ್ಗದ ನಕ್ಷೆ, ಹೀಗೆ ಹಲವಾರು ಇದ್ದವು. ನೀವು ನಿಮಗೆ ಬೇಕಾದ ವಿಷಯವನ್ನು ಸ್ಪರ್ಶಿಸಿ ಆಯ್ಕೆ ಮಾಡಿಕೊಳ್ಳಬೇಕು. ನಾನು ಚಲನಚಿತ್ರಕ್ಕೆ ಹೋಗಿ, ಹಿಂದಿ ಭಾಷೆಯ ಚಲನಚಿತ್ರ ದ ಆಯ್ಕೆ ಮಾಡಿದೆನು. ಇಲ್ಲಿ ಬರಿ ರಾಷ್ಟ್ರೀಯ ಭಾಷೆಗಳ ಚಲನಚಿತ್ರಗಳು ಮಾತ್ರ ಇದಾವು. ಕನ್ನಡತೆಲುಗು, ತಮಿಳು ಮುಂತಾದ ಪ್ರಾದೇಶಿಕ ಭಾಷೆಗಳ ಚಲನ ಚಿತ್ರಗಳು ಇಲ್ಲಿ ಸಿಗಲ್ಲ. ಹಾಗೇನೆ ರೇಡಿಯೋ ಕೂಡ, ಬರೀ ಇಂಗ್ಲಿಷ್, ಸ್ಪಾನಿಶ್, ಫ್ರೆಂಚ್ ಮುಂತಾದುವು ಮಾತ್ರ ಇಲ್ಲಿ ಇರುತ್ತೆ. ನಾನು ಹಿಂದಿ ಚಲನ ಚಿತ್ರ "Wake Up SID" ವೀಕ್ಷಣೆ ಪ್ರಾರಂಭ ಮಾಡಿದೆ...ಇದು ಹೇಗಿದೆ ಅಂತ ಮುಂದಿನ ಭಾಗದಲ್ಲಿ ಹೇಳ್ತೀನಿ. .....
http://ravinrao.blogspot.com/2010/05/1.html
Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು