Monday, July 13, 2009

ಹೀಗೊಂದು ಸಸ್ಯಾಹಾರಿ ಹಳ್ಳಿ -- A Vegetarian Village

ಬನ್ನಿ ಕೊಪ್ಪ, ಎನ್ನುವ ಹಳ್ಳಿಯಲ್ಲಿ ಜನ ಕೋಳಿ ಕೂಗಿದರೆ ಏಳುವುದಿಲ್ಲ. ಏಕೆಂದರೆ ಇಲ್ಲಿ ಯಾವ ಮನೆಯಲ್ಲೂ ಕೋಳಿ ಇಲ್ಲ. ಹೀಗೆ ಈ ಹಳ್ಳಿಯಲ್ಲಿ ನಿಮಗೆ ಯಾವ ಪ್ರಾಣಿಯು ಇಲ್ಲ, ಹಸು ಒಂದನ್ನು ಬಿಟ್ಟು. ಆದ್ದರಿಂದಲೇ ಇದನ್ನು ಸಸ್ಯಾ ಹಾರಿ ಹಳ್ಳಿ ಎಂದು ಕರೆಯುತ್ತಾರೆ. ಈ ಹಳ್ಳಿ ಹಾವೇರಿ ಜಿಲ್ಲೆಯ, ಶಿಗ್ಗಾಂವ ತಾಲ್ಲೂಕಿನಿಂದ ಆರು ಕಿಲೋಮೀಟರ್ ದೂರದಲ್ಲಿದೆ.

೨೫೦ ಜನ, ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ, ನಿಮಗೆ ಹುಡುಕಿದರೂ ಒಂದು ಕೋಳಿ, ಕುರಿ, ಹಂದಿ, ಆಡು ಸಿಗುವುದಿಲ್ಲ. ಮನೆಗೊಂದು ಆಕಳು ಮಾತ್ರ ಇದೆ. ಈ ಹಳ್ಳಿಯನ್ನು ಪಾಂಡವಪುರ ಎಂದು ಕೂಡ ಕರೆಯುತ್ತಾರೆ. ಇಲ್ಲಿನ ಹಿರಿಯರು ಹೇಳುವ ಪ್ರಕಾರ, ಮಹಾ ಭಾರತದ ಪಂಚ ಪಾಂಡವರು ಇಲ್ಲಿ ಒಂದು ವರ್ಷ ವಾದ ಮಾಡಿದ್ದುಂಟು ಹಾಗೂ ಅವರೂ ಕೂಡ ಯಾವುದೇ ಪ್ರಾಣಿಯನ್ನು ಸಾಕಿರಲಿಲ್ಲ. ಕೆಲವರು ಸಾಕಲು ಪ್ರಯತ್ನ ಪಟ್ಟು ಮಣ್ಣು ಮುಕ್ಕಿದ್ದಾರೆ.

ಫಕೀರಪ್ಪ ಒಮ್ಮೆ ೧೫ ಬಾತು ಕೋಳಿ ಗಳನ್ನೂ ಬೆಳೆಸಲು ಪ್ರಯತ್ನ ಪಟ್ಟರು. ಆದರೇ ಅತಿ ಬೇಗ ಯಾವುದೊ ತರಹದ ಕಾಯಿಲೆ ಇಂದ ತೀರಿಕೊಂಡರು. ಆಡು ಮತ್ತು ಕುರಿಗಳನ್ನು ಬೆಳೆಸಲು ಪ್ರಯತ್ನ ಪಟ್ಟವರು ಕೂಡ ಇದೆ ಗತಿ ಅನುಭವಿಸಿದರು.

ಧರ್ಮಪ್ಪ ಪೂಜಾರ್ ಇಲ್ಲಿರುವ ಒಂದೇ ದೇವಸ್ತಾನದ ಪೂಜಾರಿ ಹೇಳುವಂತೆ ಪಾಂಡವರು ಪ್ರಾಣಿ ಪಕ್ಷಿಗಳನ್ನು ಸಾಕುತ್ತಿರಲಿಲ್ಲ. ಈ ಹಳ್ಳಿಯಲ್ಲಿರುವ ದೇವಾಲಯವು ಬ್ರಿಟಿಷರ ಆಳ್ವಿಕೆಯಲ್ಲಿ ಕಟ್ಟಲಾಗಿದ್ದು, ಇದಕ್ಕೆ ಪಂಚ ಪಾಂಡವರ ಹೆಸರನ್ನೇ ಇಡಲಾಗಿದೆ ( ಪಂಚ ಪಾಂಡವ ದೇವಾಲಯ) . ಈ ಹಳ್ಳಿಯಲ್ಲಿರುವ ೧೮ ಜನ ಪಧವೀದರರು ಕೂಡ ಇದನ್ನೇ ನಂಬುತ್ತಾರೆ ಮತ್ತು ದವಸ ಧಾನ್ಯ & ಹಣ್ಣುಗಳನ್ನು ತಿಂದೆ ಜೀವನ ನಡೆಸುತ್ತಾರೆ.

ಈ ಹಳ್ಳಿಯಲ್ಲಿರುವ ಲಿಂಗಾಯತ ಜನರ ಮುಖ್ಯ ಜೀವನಾಧಾರ ಬೇಸಾಯ/ ವ್ಯವಸಾಯ. ಇಲ್ಲಿಗೆ ಬೇರೆ ಯಾವುದೇ ಪಂಗಡದ ಜನರೂ ಕೂಡ ಬರುವುದಿಲ್ಲ ಮತ್ತು ಉಳಿದುಕೊಳ್ಳಲು ಸಾದ್ಯವಿಲ್ಲ. ಈ ಹಳ್ಳಿಯಲ್ಲಿ ಕೆಲಸಕ್ಕೆಎಂದು ಬರುವ ಮರ ಕಡಿಯುವವರು, ಮನೆ ಕಟ್ಟುವವರು, ಮುಂತಾದವರು ರಾತ್ರಿ ವಾಪಾಸ್ ತಮ್ಮ ತಮ್ಮ ಊರುಗಳಿಗೆ ಹೊರಟು ಹೋಗುತ್ತಾರೆ. ಇಲ್ಲಿ ರಾತ್ರಿ ಯಾರೂ ಉಳಿದುಕೊಳ್ಳಲು ಅವಕಾಶವಿಲ್ಅ ಮತ್ತು ಉಳಿದುಕೊಳ್ಳುವುದು ಇಲ್ಲ.

ಈ ಹಳ್ಳಿಯಲ್ಲಿರುವ ಇನ್ನೊಂದು ವಿಶೇಷವೆಂದರೆ ಇಲ್ಲಿರುವ ಪ್ರತಿಯೊಬ್ಬ ಕುಟುಂಬದ ಗಂಡಸರ ಹೆಸರೂ ಕೂಡ ಪಂಚ ಪಾಂಡವರ ಹೆಸರಿನಲ್ಲಿ ಒಂದು. ನಕುಲ, ಸಹದೇವ, ಭೀಮಪ್ಪ, ಧರ್ಮಪ್ಪ, ಅರ್ಜುನ ಎಂದೆ ಎಲ್ಲರ ಹೆಸರುಗಳು. ಹೆಂಗಸರ ಹೆಸರುಗಳು ಕೂಡ ಬಸವ್ವ, ಯಲ್ಲವ್ವ & ಮಲ್ಲವ್ವ ಎಂದಿರುತ್ತದೆ.

No comments:

Post a Comment

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು