Wednesday, August 4, 2010

ನನ್ನ ಅಮೆರಿಕ ಜೀವನ -- ಭಾಗ 7 --ಆಹಾರ ಹೇಗೆ ಏನು ?

ಅಮೇರಿಕಾದಲ್ಲಿ ನೀವು ಪ್ರಪಂಚದ ಎಲ್ಲಾ ತರಹದ ಜನರನ್ನು ಕಾಣಬಹುದು. ಹಾಗಾಗಿ ಜಗತ್ತಿನ ಎಲ್ಲ ಆಹಾರ ಪದಾರ್ಥಗಳು ಇಲ್ಲಿ ಸಿಗುತ್ತವೆ. ಇಲ್ಲಿನ ಜನರು ಹೆಚ್ಚಾಗಿ ಪ್ಯಾಕ್ಡ್ ಅಥವಾ ರೆಡಿ ಮೇಡ್ ಆಹಾರವನ್ನು ಉಪಯೋಗಿಸುತ್ತಾರೆ. ರೆಡಿ ಮೇಡ್ ಆಹಾರವನ್ನು ಕೊಂಡು ಶೀತಲ ಯಂತ್ರದಲ್ಲಿ ಇಡುತ್ತಾರೆ. ಅದನ್ನು ಉಪಯೋಗಿಸಬೇಕಾದಾಗ, ಮೈಕ್ರೋ ಓವೆನ್ ನಲ್ಲಿ ಇಟ್ಟು ಬಿಸಿ ಮಾಡುತ್ತಾರೆ. ಇನ್ನು ಇಲ್ಲಿ ಹೆಚ್ಚು ಉಪಯೋಗಿಸೋ ಪದಾರ್ಥ ಅಂದರೆ ಮೊದಲು ಬ್ರೆಡ್, ಎರಡನೇದು ಜೋಳ. ಎಲ್ಲಾತರಹದ ಮಾಂಸವನ್ನು ಇದರ ಜೊತೆಗೆ ತಿನ್ನುತ್ತಾರೆ. ಇಲ್ಲಿ ತಿಂಡಿ ಅಂದ್ರು ಸ್ಯಾಂಡ್ ವಿಚ್ , ಊಟ ಅಂದ್ರು ಸ್ಯಾಂಡ್ ವಿಚ್. ಇದನ್ನು ಬಿಟ್ರೆ ಪಿಜ್ಜಾ ಇದೆ ನೋಡಿ. ಕೆಲವರು ತಿಂಡಿಗೆ ಅದೇ ಕೆಲ್ಲಾಗ್ಸ್ ಫ್ಲೆಕ್ಸ್(Kellogs Flakes) ತಿನ್ನುತ್ತಾರೆ. ಇದನ್ನು ಬಿಸಿ ಅಥವಾ ತಣ್ಣನೆಯ ಹಾಲಿನ ಜೊತೆ ಮಿಶ್ರಣ ಮಾಡಿ ತಿನುತ್ತಾರೆ. ಇನ್ನು ಕಾಫಿನೆ ಇಲ್ಲಿ ಜಾಸ್ತಿ ಕುಡಿತಾರೆ. ಇವರಿಗೆ ಚಹಾ ಅಂತು ಗೊತ್ತೇ ಇಲ್ಲ. ಅದೂ ದೊಡ್ಡ ಲೋಟದಲ್ಲಿ. ನೋ ಬಯ್-ಟು ಕೂಡ. ಇನ್ನು ಅದಕ್ಕೆ ಹಾಲು ಹಾಕಲ್ಲ. ಅದಕ್ಕೆ ಅಂತಾನೆ ಕ್ರೀಮೆರ್ ಇದೆ ನೋಡಿ. ಅದೇ ನಮ್ಮ ಹಾಲಿನ ಕೆನೆ ನ ಹೀಗೆ ಕರೀತಾರೆ ಇಲ್ಲಿ. ಇದನ್ನೇ ಕಾಫಿ ಗೆ ಮಿಕ್ಸ್ ಮಾಡಿ ಕುಡೀತಾರೆ. ಇನ್ನು ಅದರ ಜೊತೆ ಬ್ರೆಡ್ ಬಿಸ್ಕತ್ ಕೇಳಲೇ ಬೇಡಿ. ಇಲ್ಲಿ ನಿಮಗೆ ನೂರಾರು ತರಹದ ಬ್ರೆಡ್ ಸಿಗುತ್ತೆ. ಇನ್ನು ಬಿಸ್ಕತ್ ಗೆ ಬಂದರೆ, ನಮ್ಮ ಗ್ಲೂಕೋಸ್ ಬಿಸ್ಕತ್ ಇಲ್ಲಿ ಸಿಗಲ್ಲ. ಇಲ್ಲಿ ಬರಿ ಕುಕ್ಕಿಸ್ (Cookies) ಸಿಗುತ್ತೆ ನೋಡಿ. ಅದೇ ನಮ್ಮ ಬಿಸ್ಕತ್ ಗೆ ಎಲ್ಲಾ ಹಣ್ಣು ಗಳು ಸೇರಿಸಿ ಮಾಡಿರುತ್ತಾರೆ. ಇಲ್ಲಿ ಹಣ್ಣಿನ ರಸವನ್ನು ಕೂಡ ಜಾಸ್ತಿ ಉಪಯೋಗಿಸುತ್ತಾರೆ. ಅದೂ Pure ಹಣ್ಣಿನ ರಸ. ನೀರು ಮತ್ತು ಸಕ್ಕರೆ ಯನ್ನು ಕೂಡ ಅದಕ್ಕೆ ಸೇರಿಸಿರೋಲ್ಲ. ಇನ್ನು ಊಟದ ವಿಷಯಕ್ಕೆ ಬಂದರೆ, ಅದೇ ಪಿಜ್ಜಾ, ಬರಿಟ್ತೋ, ಸ್ಯಾಂಡ್ ವಿಚ್ ತಿನ್ನುತ್ತಾರೆ. ಇದರ ಜೊತೆ ನೀರು ಕುಡಿಯೋಲ್ಲ ಅದೇ Pepsi, coca-cola ಕುಡಿತಾರೆ. ಇನ್ನು ಪಿಜ್ಜಾ, ಸ್ಯಾಂಡ್ ವಿಚ್ ನಲ್ಲಿ ಬರೀ ಮಾಂಸ ಇರುತ್ತೆ. ಅದೂ ಹಂದಿ, ಕೋಳಿ, ಎಮ್ಮೆ ದು. ಇದರಲ್ಲಿ ಎಮ್ಮೆದು ಮತ್ತು ಹಂದಿ ದು ಬಾರಿ ಫೇಮಸ್ . ಯಾವುದೇ ಹೋಟೆಲ್ ನೋಡಿ, ಅದರಲ್ಲಿ ಇದು ಇದ್ದೆ ಇರುತ್ತೆ. ಇನ್ನು ಊಟ ನು ಇದೆ ತರಾನೆ. ಆದ್ರೆ ರಾತ್ರಿ ಪಾನೀಯ ದ ಬದಲು ವೈನ್ ಕುಡಿತಾರೆ.
ಇಲ್ಲಿ ಆಹಾರ ಇಲ್ಲಿ ಸಿಗುತ್ತೆ ಅಂದರೆ, ಅದಕ್ಕೆ ಅಂತಾನೆ ವಾಲ್ ಮಾರ್ಟ್, ಕ್ರೋಗೆರ್ ಇದೆ. ಇಲ್ಲಿ ನೋ ಮಾರ್ಕೆಟ್, ಚಿಲ್ಲರೆ ಅಂಗಡಿ ಮುಂತಾದುವುಗಳು. ಏನೇ ಬೇಕು ಅಂದ್ರು Wal Mart ಅಥವಾ Kroger ಇದೆ. ಇದು ನಮ್ಮ ಬಿಗ್ ಬಜಾರ್ ನಂತಹುದ್ದು. ಏನೇ ಬೇಕಾದ್ರೂ ಸಿಗುತ್ತೆ. ಇಲ್ಲಿ ನೀವು ಒಂದೇ ತರಕಾರಿಯ/ ಹಣ್ಣಿನ ದಶವತಾರಗಳನ್ನು ನೋಡಬಹುದು. ಉದಾಹರಣೆಗೆ ಈರುಳ್ಳಿ ನೆ ತಗೊಳ್ಳಿ, ಸರಿ ಸುಮಾರು ಹತ್ತು ತರಹದ್ದು ಸಿಗುತ್ತೆ. ಸ್ಮಾಲ್ ಸೈಜ್, ಮೀಡಿಯಂ ಸೈಜ್, ಬಿಗ್ ಸೈಜ್(ಡೈನೋಸಾರ್ ಮೊಟ್ಟೆ ಗಾತ್ರದ್ದು)., ಬಿಳಿಯದು, ಕೆಂಪು, ಪಿಂಕ್, ಬೇಬಿ ಈರುಳ್ಳಿ ನೋಡಿ ಎಷ್ಟಿದೆ ಅಂಥಾ.ಹೀಗೆ ಟೊಮೇಟೊ ದಲ್ಲಿ ಕೂಡ ಬಹಳಷ್ಟು ವಿಧ ಇದೆ. ಎಲ್ಲಾ ತರಕಾರಿಗಳನ್ನು ಕೊಂಡು ಕೊಳ್ಳೋದು ವೇಸ್ಟ್. ಏಕೆಂದರೆ, ಎಲ್ಲದಕ್ಕೂ ಹಣ ಕೊದಬೇಕಲ್ವಾ. ಅದಕ್ಕೆ ಒಂದು ಹಣಕ್ಕೆ ಎಲ್ಲಾ ತರಕಾರಿ ಸಿಗೋ ಹಾಗಾದ್ರೆ? ಅದೇ ಪ್ಯಾಕ್ಡ್ ತರಕಾರಿ ಗಳು ಇದೆ ನೋಡಿ. ಎಲ್ಲಾ ತರಕಾರಿಗಳನ್ನು ಪ್ಯಾಕ್ ಮಾಡಿ ಶೀತಲ ಯಂತ್ರದಲ್ಲಿ ಇಟ್ಟಿರುತ್ತಾರೆ. ಅದನ್ನೇ ನಾವು ಕೊಂಡು ಅಡಿಗೆ ಮಾಡಿ ಸೇವಿಸಿದರೆ ಆಯಿತು. ಎಷ್ಟು ಸಮಯ ಉಳಿತಾಯ ಅಲ್ಲವೇ. ಎಲ್ಲಾ ಹಣ್ಣು ಗಳಲ್ಲಿ ನಿಮಗೆ ಬೀಜ ಇರುವ & ಇಲ್ಲದೆ ಇರುವ ಹಣ್ಣು ಗಳು ಸಿಗುತ್ತವೆ. ಉದಾಹರಣೆಗೆ. ಮೂಸಂಬಿ, ಕಿತ್ತಳೆ, ನಿಂಬೆ ಹಣ್ಣುಗಳು. ಭಾರತದಲ್ಲಿ ಬೆಳೆಯದ/ಸಿಗದ ಹತ್ತಾರು ತರಹದ ವಿಚಿತ್ರ ಹಣ್ಣುಗಳು ಇಲ್ಲಿ ಸಿಗುತ್ತವೆ. ಇನ್ನು ಪ್ಯಾಕ್ಡ್ ಅಡಿಗೆ ಕೂಡ ಸಿಗುತ್ತೆ. ಚಪಾತಿ, ಪರೋಟ, ಸಮೋಸ ಇವೆಲ್ಲ ರೆಡಿ ಮೇಡ್ ಇಲ್ಲಿ.
ಭಾರತದ ಅಡಿಗೆಗಳನ್ನು / ಅಡಿಗೆ ಪದಾರ್ಥಗಳಿಗೆ ಇಲ್ಲಿ ಬೇರೆ ಸ್ಟೋರ್ಗಳು ಇವೆ. ಅವೆಂದರೆ, ಬಾಂಬೆ ಬಜಾರ್, ಭವಾನಿ ಕ್ಯಾಶ್ ಅಂಡ್ ಕ್ಯಾರಿ, ಪಟೇಲ್ ಬ್ರದರ್ಸ್, ಅಪ್ನ ಬಜಾರ್, ಹೀಗೆ ಬಹಳಷ್ಟು ಇವೆ. ಇವರೆಲ್ಲ ನಮ್ಮ ಭಾರತ ದಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿ ಇಲ್ಲಿ ಮಾರುತ್ತಾರೆ. ಅದಕ್ಕೆ ಇವುಗಳ ಬೆಲೆ ಬಲು ದುಬಾರಿ. ನಮ್ಮ ಕರಿ ಬೇವು, ಕೊತ್ತಂಬರಿ ಅಂತು ಕೇಳಲೇ ಬೇಡಿ.ಕೇವಲ ಒಂದು ಡಾಲರ್ ಗೆ ಒಂದು ಕಟ್ಟು. ಅದಕ್ಕೆ ಇಲ್ಲಿಗೆ ಬರುವ ಮೊದಲೇ ಭಾರತೀಯರು ಎಲ್ಲಾ ಅಲ್ಲಿಂದ ತೆಗೆದುಕೊಂಡು ಬರುತ್ತಾರೆ. ಅಮೇರಿಕಾದಲ್ಲಿ ದಿನನಿತ್ಯದ ವಸ್ತುಗಳ ಉತ್ಫಾದನೆ ಕಡಿಮೆ. ಆದರೆ ಜಗತ್ತಿನ ಎಲ್ಲಾ ದೇಶಗಳಿ೦ದ (ಭಾರತವೂ ಸೇರಿ) ಉತ್ತಮ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಾರೆ.ಇದರಲ್ಲಿ ಸಿ೦ಹ ಪಾಲು ಚೀನಾ ದೇಶದ್ದು. ಗೊ೦ಬೆಗಳು ನೂರಕ್ಕೆ ನೂರು ಭಾಗ ಚೀನಾದ್ದು. ಬಟ್ಟೆ ಗಳಲ್ಲಿ ’ಮೇಡ್ ಇನ್ ಇ೦ಡಿಯ’ ನೋಡಿ ನಾವು ಖುಷಿ ಪಡಬಹುದು. ಮೇಡ್ ಇನ್ ಬಾಂಗ್ಲಾದೇಶ್, ಪಾಕಿಸ್ತಾನ್ ಕೂಡ ನೀವು ಇಲ್ಲಿ ನೋಡಬಹುದು.
ಇನ್ನು ಅಮೆರಿಕಾದ ಹೋಟೆಲ್ ಗಳ ಬಗ್ಗೆ ಹೇಳಬೇಕಂದ್ರೆ, ಅದೇ McDonalds, Pizzahut, KFC, Taco Bell, Hooters, Sub Way, Chipotle ಹೀಗೆ ಕೆಲವು ಆಗಲೇ ಭಾರತದಲ್ಲಿ ಬಂದು ಬಿಟ್ಟಿವೆ.

No comments:

Post a Comment

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು